ಯೂಟ್ಯೂಬ್ ಮೂಲಕವೇ ಕೋಟ್ಯಧೀಶೆಯಾದ ಪ್ರಾಜಕ್ತಾ ಕೋಲಿ; ಈಕೆ ತಿಂಗಳ ಆದಾಯ ಕೇಳಿದ್ರೆ ಶಾಕ್ ಆಗ್ತೀರಾ!

By Suvarna News  |  First Published Mar 15, 2023, 6:05 PM IST

ಇತ್ತೀಚಿನ ದಿನಗಳಲ್ಲಿ ಬಹುತೇಕರು ಯೂಟ್ಯೂಬ್ ಚಾನೆಲ್ ಮೂಲಕ ಆದಾಯ ಗಳಿಕೆಗೆ ಮುಂದಾಗುತ್ತಿದ್ದಾರೆ. ಯೂಟ್ಯೂಬ್ ಮೂಲಕ ಎಷ್ಟು ಗಳಿಕೆ ಮಾಡಬಹುದು ಎಂಬ ಅಂದಾಜು ಕೆಲವರಿಗಿಲ್ಲ.ಆದರೆ, ಪ್ರಜಕ್ತ ಕೋಲಿ ಎಂಬ ದೇಶದ ಜನಪ್ರಿಯ ಯೂಟ್ಯೂಬರ್ ಆದಾಯ ಕೇಳಿದ್ರೆ ಮಾತ್ರ ನಿಜಕ್ಕೂ ಅಚ್ಚರಿಯಾಗುತ್ತದೆ. ಈಕೆ 68.5ಲಕ್ಷ ಫಾಲೋವರ್ಸ್ ಹೊಂದಿದ್ದು, ತಿಂಗಳಿಗೆ 40ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. 


Business Desk: ಇಂಟರ್ನೆಟ್ ಬಳಕೆ ಹೆಚ್ಚಿದ ಬಳಿಕ ವಿವಿಧ ವಿನೂತನ ಉದ್ಯೋಗಾವಕಾಶಗಳು ಕೂಡ ಸೃಷ್ಟಿಯಾಗಿವೆ. ಅದರಲ್ಲೂ ಯೂಟ್ಯೂಬ್ ಅನೇಕ ಮಂದಿಗೆ ಆದಾಯದ ಜೊತೆಗೆ ಜನಪ್ರಿಯತೆಯನ್ನು ಕೂಡ ತಂದುಕೊಟ್ಟಿದೆ. ಅನೇಕರು ತಮ್ಮದೇ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿ ಕೈತುಂಬಾ ಸಂಪಾದನೆ ಮಾಡುತ್ತಿದ್ದಾರೆ. ಅಡುಗೆ, ಆರೋಗ್ಯ ಸಲಹೆಗಳು, ಬ್ಯೂಟಿ ಟಿಪ್ಸ್ ಸೇರಿದಂತೆ ಯೂಟ್ಯೂಬ್ ನಲ್ಲಿ ಇಂದು ಸಿಗದ ಮಾಹಿತಿಯಿಲ್ಲ. ಈ ರೀತಿ ಯೂಟ್ಯೂಬ್ ಮೂಲಕ ಜನಪ್ರಿಯತೆ ಗಳಿಸಿರೋರಲ್ಲಿ ಪ್ರಜಕ್ತ ಕೋಲಿ ಕೂಡ ಒಬ್ಬರು. ತಮ್ಮದೇ ಶೈಲಿಯಲ್ಲಿ ಹಾಸ್ಯಭರಿತ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ದೊಡ್ಡ ಪ್ರಮಾಣದಲ್ಲಿ ಜನರನ್ನು ತಮ್ಮತ್ತ ಸೆಳೆಯುವಲ್ಲಿ ಸಫಲರಾಗಿದ್ದಾರೆ.'ಮೋಸ್ಟಲಿಸನೆ' ಎಂಬ ಯೂಟ್ಯೂಬ್ ಚಾನೆಲ್ ಅನ್ನು 2015 ರಲ್ಲಿ ಪ್ರಾರಂಭಿಸಿದ ಕೋಲಿ, ಅದರಲ್ಲಿ ಭಾರೀ ಯಶಸ್ಸು ಗಳಿಸಿದ್ದಾರೆ ಕೂಡ. ಇಂದು ಆಕೆ ದೇಶದ ಅತ್ಯಂತ ಜನಪ್ರಿಯ ಯೂಟ್ಯೂಬರ್ ಗಳಲ್ಲಿ ಒಬ್ಬರಾಗಿದ್ದು, 68.5ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಅಷ್ಟೇ ಅಲ್ಲ, ಯೂಟ್ಯೂಬ್ ಚಾನೆಲ್ ನಿಂದ ಅವರಿಗೆ ತಿಂಗಳಿಗೆ ಸುಮಾರು 40ಲಕ್ಷ ರೂ. ಆದಾಯ ಬರುತ್ತಿದೆ ಎಂದು ಹೇಳಲಾಗಿದೆ.  ಇನ್ನು ಪ್ರಜಕ್ತ ಕೋಲಿ ಅವರ ವಾರ್ಷಿಕ ಆದಾಯ ಅಂದಾಜು 4 ಕೋಟಿ ರೂ. 

ರೇಡಿಯೋ ಜಾಕಿಯಾಗಿದ್ದ ಕೋಲಿ
ಶಾಲಾ ದಿನಗಳಿಂದಲೂ ರೇಡಿಯೋ ಜಾಕಿಯಾಗಬೇಕೆಂಬುದು ಪ್ರಜಕ್ತ ಕೋಲಿ ಕನಸಾಗಿತ್ತು. ಈ ಕನಸನ್ನು ನನಸು ಮಾಡಿಕೊಳ್ಳಲು ಆಕೆ ಮುಂಬೈ ವಿಶ್ವವಿದ್ಯಾಲಯದ ಮುಲುಂಡ್ ವಿಜಿ ವೇಝ್ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಹಾಗೂ ಕಾಮರ್ಸ್ ನಲ್ಲಿ ಸಮೂಹ ಮಾಧ್ಯಮದಲ್ಲಿ ಪದವಿ ಪೂರ್ಣಗೊಳಿಸಿದರು. ಪದವಿ ಪೂರ್ಣಗೊಂಡ ತಕ್ಷಣ ಫೀವರ್ 104 ಎಫ್ ಎಂ ಮುಂಬೈ ಕೇಂದ್ರದಲ್ಲಿ ಇಂಟರ್ನಿಯಾಗಿ ಸೇರಿದರು. ಒಂದು ವರ್ಷಗಳ ಬಳಿಕ 'ಕಾಲ್ ಸೆಂಟರ್ ' ಎಂಬ ಶೋ ನಡೆಸುವ ಅವಕಾಶ ಸಿಕ್ಕಿತು. ಆದರೆ, ಈ ಶೋ ಅಷ್ಟು ಚೆನ್ನಾಗಿ ನಡೆಯಲಿಲ್ಲ. ಹೀಗಾಗಿ ಕೋಲಿ ಈ ಕೆಲಸವನ್ನು ತ್ಯಜಿಸಿ ತನ್ನ ಸ್ವಂತ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದರು. 

Tap to resize

Latest Videos

Alia Bhatt : ನಟನೆ ಮಾತ್ರವಲ್ಲ ಬ್ಯುಸಿನೆಸ್ ವಿಷ್ಯದಲ್ಲೂ ನಟಿ ಸೂಪರ್ ಹಿಟ್

ಯಶಸ್ವಿಯಾದ ಯೂಟ್ಯೂಬ್ ಚಾನೆಲ್
ಹಾಸ್ಯಭರಿತ ವಿಡಿಯೋಗಳನ್ನು ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಕೋಲಿ ಪೋಸ್ಟ್ ಮಾಡುತ್ತಾರೆ. ಪ್ರಸಕ್ತ ವಿದ್ಯಮಾನಗಳಿಗೆ ಸಂಬಂಧಿಸಿದ ಕೆಲವು ವಿಡಿಯೋಗಳು ಕೂಡ ಇವರ ಯೂಟ್ಯೂಬ್ ಚಾನೆಲ್ ನಲ್ಲಿ ಕಾಣಸಿಗುತ್ತವೆ. ಬಾಲಿವುಡ್ ನ ಅನೇಕ ದೊಡ್ಡ ಸೆಲೆಬ್ರಿಟಿಗಳೊಂದಿಗೆ ಕೂಡ ರೀಲ್ಸ್ ಮಾಡಿ ಅಪ್ಲೋಡ್ ಮಾಡಿದ್ದಾರೆ. ಜನಪ್ರಿಯ ನಟರ ಸಂದರ್ಶನದ ವಿಡಿಯೋಗಳನ್ನು ಕೂಡ ಪೋಸ್ಟ್ ಮಾಡಿದ್ದಾರೆ. 2019ರಲ್ಲಿ ಫೋರ್ಬ್ಸ್ '30 ಅಂಡರ್ 30' ಪಟ್ಟಿಯಲ್ಲಿ ಪ್ರಜಕ್ತ ಕೋಲಿ ಸ್ಥಾ ಪಡೆದಿದ್ದರು. ಪ್ರಸಕ್ತ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ ನಲ್ಲಿ ಕೋಲಿ ಅವರಿಗೆ 75ಲಕ್ಷ ಫಾಲೋವರ್ಸ್ ಇದ್ದಾರೆ. 

Bengaluru: ಸಮೋಸಾ ಮಾರಿ ದಿನಕ್ಕೆ 12ಲಕ್ಷ ರೂ. ಗಳಿಸುತ್ತಿದ್ದಾರೆ ಈ ಮಹಿಳಾ ಉದ್ಯಮಿ!

ಸಿನಿಮಾಗಳಲ್ಲೂ ನಟನೆ
ಪ್ರಜಕ್ತ ಕೋಲಿ ಜನಪ್ರಿಯತೆ ಅವರನ್ನು ಬಾಲಿವುಡ ಅಂಗಳಕ್ಕೂ ಕರೆದುಕೊಂಡು ಹೋಗಿದೆ. ರಾಜ್ ಮೆಹ್ತಾ ನಿರ್ದೇಶನದ 'ಜುಗ್ ಜುಗ್ ಜಿಯೋ' ಎಂಬ ಸಿನಿಮಾದಲ್ಲಿ ಅವರು ವರುಣ್ ಧವನ್, ಅನಿಲ್ ಕಪೂರ್, ಕಿಯಾರ ಅಡ್ವಾಣಿ ಹಾಗೂ ನೀತು ಕಪೂರ್ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ನೆಟ್ ಫ್ಲಿಕ್ಸ್ ವೆಬ್ ಸೀರೀಸ್ 'ಮಿಸ್ ಮ್ಯಾಚ್ಡ್ ' ನಲ್ಲಿ ಕೂಡ ಕೋಲಿ ನಟಿಸಿದ್ದಾರೆ. 

ಕೋಲಿ ಆದಾಯವೆಷ್ಟು?
2023ನೇ ಸಾಲಿಗೆ ಅನ್ವಯಿಸುವಂತೆ ಪ್ರಜಕ್ತ ಕೋಲಿ ಅವರ ನಿವ್ವಳ ಸಂಪತ್ತು 16 ಕೋಟಿ ರೂ. ಯೂಟ್ಯೂಬ್ ನಿಂದ ಆಕೆ ಪ್ರತಿ ತಿಂಗಳು ಅಂದಾಜು 40ಲಕ್ಷ ರೂ. ಗಳಿಸುತ್ತಿದ್ದಾರೆ. ಅವರ ವಾರ್ಷಿಕ ಆದಾಯ 4 ಕೋಟಿ ರೂ. ಗಿಂತಲೂ ಹೆಚ್ಚಿದೆ. 
 

click me!