ತಮಿಳುನಾಡು ಉದ್ಯಮಿಗೆ ದುಬಾರಿ BMW iX1 ಕಾರು ಗಿಫ್ಟ್ ನೀಡಿದ ಚೀನಾದ ಗೆಳತಿ

Published : Apr 20, 2025, 05:14 PM ISTUpdated : Apr 21, 2025, 10:01 AM IST
ತಮಿಳುನಾಡು ಉದ್ಯಮಿಗೆ ದುಬಾರಿ BMW iX1 ಕಾರು ಗಿಫ್ಟ್ ನೀಡಿದ ಚೀನಾದ ಗೆಳತಿ

ಸಾರಾಂಶ

ತಮಿಳುನಾಡಿನ ಉದ್ಯಮಿ ಪ್ರವೀಣ್ ಗಣೇಶನ್ ಅವರಿಗೆ ಚೀನಾ ಮೂಲದ ಸ್ನೇಹಿತೆಯಿಂದ 30 ಲಕ್ಷ ರೂ. ಬೆಲೆ ಬಾಳುವ BMW ಕಾರು ಉಡುಗೊರೆಯಾಗಿ ಬಂದಿದೆ. ಹುಟ್ಟುಹಬ್ಬದಂದು ಕೇಳಿದ್ದ ಕನಸನ್ನು ನನಸಾಗಿಸಿದ ಸ್ನೇಹಿತೆ ಈ ಕಾರು ಉಡುಗೊರೆ ನೀಡಿದ್ದಾರೆ.

ಚೆನ್ನೈ: ಸಾಮಾನ್ಯವಾಗಿ ಸ್ನೇಹಿತರು ನಿಮ್ಮ ಹುಟ್ಟುಹಬ್ಬ, ನಿಮ್ಮ ಆತ್ಮೀಯರು ಆಚರಿಸಿದ ನಂತರ ಏನ್ ಗಿಫ್ಟ್ ಬೇಕು, ನಿಮ್ಮ ಇಷ್ಟ ಏನು ಎಂದು ಕೇಳುತ್ತಾರೆ. ಅದೇ ರೀತಿ ಇಲ್ಲೊಬ್ಬರು ಉದ್ಯಮಿಗೆ ಅವರ ಪ್ರೀತಿಯ ಸ್ನೇಹಿತೆಯೊಬ್ಬರು ಗಿಫ್ಟ್‌ ಏನ್‌ ಬೇಕು ಎಂದು ಕೇಳಿದ್ದಲ್ಲದೇ ವರ್ಷದೊಳಗೆ ಅದನ್ನು ತಲುಪಿಸಿದ್ದಾರೆ. ಹಾಗಂತ ಅದೇನ್‌ ಸಣ್ಣಪುಟ್ಟ ಗಿಫ್ಟ್ ಅಲ್ಲ, 30 ಲಕ್ಷ ರೂಪಾಯಿ ಬೆಲೆ ಬಾಳುವ ದುಬಾರಿ ಬಿಎಂಡ್ಬ್ಯು ಕಾರು. ಅಂದಹಾಗೆ ಈ ಗಿಫ್ಟ್ ಪಡೆದವರು ತಮಿಳುನಾಡು ಮೂಲದ ಉದ್ಯಮಿ ಪ್ರವೀಣ್ ಗಣೇಶನ್ ಅವರು ಲೈಂಗಿಕ ಸ್ವಾಸ್ಥ್ಯ ಇ-ವಾಣಿಜ್ಯ ವೇದಿಕೆ ಕಾಮಕರ್ಟ್(Kamakart.com,) ಎಂಬ ಲೈಂಗಿಕ ಆಟಿಕೆಗಳ ಉತ್ಪಾದಿಸುವ ಸಂಸ್ಥೆಯ ಸಿಇವ ಆಗಿರುವ ಇವರಿಗೆ ಹಿಂದೂ ಹೊಸವರ್ಷದಂದು ಚೀನಾ ಮೂಲದ ಇವರ ಸ್ನೇಹಿತೆ ನಿಮ್ಮ ಪ್ರೀತಿಯ ಕಾರು ಸಿದ್ಧಗೊಂಡಿದೆ ಬಂದು ತೆಗೆದುಕೊಂಡು ಹೋಗಿ ಎಂದು ಮೆಸೇಜ್ ಬಂದಿದೆ ಇದನ್ನು ನೋಡಿ ಅವರು ಅಚ್ಚರಿ ಆಘಾತಗೊಂಡು ಈ ವಿಚಾರದ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದು, ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಕಳೆದ ವರ್ಷ ನನ್ನ ಹುಟ್ಟುಹಬ್ಬದಂದು, ನಾನು ಚೀನಾದಲ್ಲಿ ನನ್ನ ಆಪ್ತ ಸ್ನೇಹಿತೆಯ ಮದುವೆಗೆ ಹೋಗಿದ್ದೆ, ಅವಳು ಮಧ್ಯರಾತ್ರಿಯೇ ನನಗಾಗಿ ತನ್ನ ಊರಿನಲ್ಲಿ ಅದ್ಧೂರಿ ಆಚರಣೆಯೊಂದಿಗೆ ಕೇಕ್ ಅನ್ನು ನನ್ನ ಹುಟ್ಟುಹಬ್ಬಕ್ಕಾಗಿ ವ್ಯವಸ್ಥೆ ಮಾಡಿದ್ದಳು. ಇದೇ ವೇಳೆ ಆಕೆ ನನ್ನ ಬಹುದಿನಗಳ ಕನಸು ಏನು ಎಂದು ಕೇಳಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿದ ನಾನು ನಾನು BMW ಖರೀದಿಸಲು ಬಯಸುತ್ತೇನೆ ಎಂದು ಹೇಳಿದ್ದೆ. ಇದೇ ವೇಳೆ ಆಕೆ ಮುಂದಿನ ಹುಟ್ಟುಹಬ್ಬಕ್ಕೂ ಮೊದಲು ನೀನು ನಿನ್ನ ನನ್ನ ಸ್ವಂತ BMW ಅನ್ನು ಓಡಿಸುವೆ ಎಂದು ಹೇಳಿದ್ದಳು. ಆದರೆ ಅವಳು ನನಗೆ ಅದನ್ನು ಉಡುಗೊರೆಯಾಗಿ ನೀಡುತ್ತಾಳೆಂದು ನಾನು ಎಂದಿಗೂ ಭಾವಿಸಿರಲಿಲ್ಲ. ಆದರೆ ತಮಿಳು ಹೊಸ ವರ್ಷದ ದಿನ ಬೆಳಗ್ಗೆ ಇದ್ದಕ್ಕಿದ್ದಂತೆ ಅವಳು ವೆಚಾಟ್‌ನಲ್ಲಿ(ಚೀನಾ ಸಾಮಾಜಿಕ ಮಾಧ್ಯಮ)ನನಗೆ ಸಂದೇಶ ಕಳುಹಿಸಿದಳು, ನಿಮ್ಮ ಕನಸಿನ ಕಾರು ಸಿದ್ಧವಾಗಿದೆ ಬಂದು ಅದನ್ನು ತೆಗೆದುಕೊಳ್ಳಿ  ಎಂದು. ಅನೇಕ ನನ್ನ ಸಂಬಂಧಿಕರು, ಸ್ನೇಹಿತರು ನನ್ನನ್ನು ಅಪಹಾಸ್ಯ ಮಾಡಿದರು, ಸೆ*ಕ್ಸ್ ಆಟಿಕೆ ಮಾರಾಟಗಾರ ನಿಜವಾಗಿಯೂ ಏನು ಸಾಧಿಸಬಹುದು ಎಂದು. ಆದರೆ  ನಾನು ಯಾವುದೇ ವ್ಯವಹಾರ ಮಾಡಿದರೂ ಯಶಸ್ಸು ಒಂದೇ ಎಲ್ಲದಕ್ಕೂ ಉತ್ತರ. ಎಂದು ಅವರು ಬರೆದುಕೊಂಡಿದ್ದಾರೆ.

ಹುಡುಗಿ ಜೊತೆ ಲವ್​, ಹುಡುಗನ ಜೊತೆ ಮದ್ವೆ! ಮಂಟಪದಿಂದ ಸ್ನೇಹಿತೆಯ ಎಳೆದೊಯ್ದ ಯುವತಿ

ಜೊತೆಗೆ ಬಿಎಂಡಬ್ಲ್ಯು ಕಾರು ಗಿಫ್ಟ್ ಪಡೆಯುತ್ತಿರುವ ಫೋಟೋಗಳನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅಂದಹಾಗೆ ಇವರಿಗೆ ಸಿಕ್ಕ ಬಿಎಂಡ್ಬ್ಯು ಕಾರಿನ ಮೌಲ್ಯ 30 ಲಕ್ಷ ರುಪಾಯಿಯದ್ದಾಗಿದೆ. BMW iX1 ಮಾಡೆಲ್‌ನ ಎಲೆಕ್ಟ್ರಿಕ್ ಕಾರು ಇದಾಗಿದೆ. 

ಸುಮಾರು 2.5 ಲಕ್ಷ ಚೀನೀ ಯುವಾನ್ ಬೆಲೆಯ ಎಂದರೆ ಸುಮಾರು ₹30 ಲಕ್ಷ ಭಾರತೀಯ ರೂಪಾಯಿಯ ಮೌಲ್ಯದ ಈ ಐಷಾರಾಮಿ ಎಲೆಕ್ಟ್ರಿಕ್ SUV ವ್ಯಾಪಾರ ಪಾಲುದಾರಿಕೆ ಅಥವಾ ವೃತ್ತಿಪರ ಒಪ್ಪಂದ ಮಾಡಿಕೊಳ್ಳುವಿಕೆಯ ಸಂಕೇತವಾಗಿರಲಿಲ್ಲ. ಅವಳು ವ್ಯಾಪಾರ ಪಾಲುದಾರಳಲ್ಲ ಎಂದು ಪ್ರವೀಣ್ ಕಾಮೆಂಟ್‌ಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಇದು ಸ್ನೇಹ, ಶುದ್ಧ ಮತ್ತು ಅಪರೂಪದ ಕನಸುಗಳ ನಿಜವಾಗಿಸಿದ ಒಂದು ಕ್ಷಣ ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಚೀನಾದಲ್ಲಿರುವ BMW ಅನ್ನು ಭಾರತಕ್ಕೆ ತರುವುದಿಲ್ಲ ಬದಲಾಗಿ, ಪ್ರವೀಣ್ ಗಣೇಶನ್ ಅಲ್ಲಿ ತನ್ನ ವಿಸ್ತರಿಸುತ್ತಿರುವ ಕಾರ್ಯಾಚರಣೆಗಳನ್ನು ನಿರ್ವಹಿಸುವಾಗ ಅದನ್ನು ಬಳಸಲು ನಿರ್ಧರಿಸಿದ್ದಾರೆ. ಉದ್ಯಮಿಯಾಗಿ ಗಣೇಶನ್ ಅವರ ಈ ಬೆಳವಣಿಗೆ ನಿಜಕ್ಕೂ ಕುತೂಹಲ ಮೂಡಿಸಿದೆ. ಈ ಪೋಸ್ಟ್ ನೋಡಿದ ಅನೇಕರು ಆಕೆ ಇವರ ಉದ್ಯಮ ಪಾಲುದಾರಳಾಗಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಆಕೆ ನನ್ನ ಉದ್ಯಮ ಪಾಲುದಾರಳಲ್ಲ, ನಾನು ಸ್ವಂತ ಉದ್ಯಮವನ್ನು ಹೊಂದಿದ್ದೇನೆ ಆಕೆ ಕೇವಲ ನನ್ನ ಸ್ನೇಹಿತೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

ಛತ್ತೀಸ್​ಗಢದ ಯುವಕನ ಜೊತೆ ಲವ್​ನಲ್ಲಿ ಬಿದ್ದದ್ದು ಹೇಗೆ? ಕೊನೆಗೂ ಮೌನ ಮುರಿದ ವೈಷ್ಣವಿ

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!