Good News: ಶೀಘ್ರದಲ್ಲೇ ಟೊಮ್ಯಾಟೋ ದರ ಇಳಿಕೆ; ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ

By BK Ashwin  |  First Published Jul 12, 2023, 3:17 PM IST

ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಟೊಮ್ಯಾಟೋಗಳನ್ನು ಖರೀದಿಸಿ ಮತ್ತು ಟೊಮ್ಯಾಟೋ ದರದಲ್ಲಿ ಅತಿದೊಡ್ಡ ಜಿಗಿತವನ್ನು ದಾಖಲಿಸಿರುವ ಪ್ರದೇಶಗಳಲ್ಲಿ ವಿತರಿಸಲು ರಾಷ್ಟ್ರೀಯ ಕೃಷಿ ಸಹಕಾರಿ ಮಾರಾಟ ಒಕ್ಕೂಟ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟವನ್ನು ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು ಕೇಳಿದೆ.


ನವದೆಹಲಿ (ಜುಲೈ 12, 2023): ದೇಶದಲ್ಲಿ ಕೆಲ ದಿನಗಳಿಂದ ಹೆಚ್ಚು ಕೇಳಿಬರುತ್ತಿರುವುದು ಟೊಮ್ಯಾಟೋ ದರ ಏರಿಕೆ. ಟೊಮ್ಯಾಟೋ ದರಗಳು ಪ್ರತಿದಿನ ಹೊಸ ಮೈಲಿಗಲ್ಲುಗಳನ್ನು ದಾಟುತ್ತಿದ್ದು, ವಾರಗಳಿಂದ 100 ರೂಪಾಯಿಗಳ ಗಡಿಯಲ್ಲಿ ಸುಳಿದಾಡುತ್ತಿದೆ. ದೆಹಲಿಯಲ್ಲಿ 200 ರೂ. ಆಗಿದ್ದರೆ, ಉತ್ತರಾಖಂಡದ ಕೆಲವೆಡೆ 250 ರೂ. ಸಹ ಆಗಿತ್ತು. ಇದಕ್ಕೆ ಜನಸಾಮಾನ್ಯರಿಂದ ತೀವ್ರ ಟೀಕೆಯೂ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು ಟೊಮ್ಯಾಟೋ ಸೇರಿ ಅಡುಗೆಮನೆಯ ಮುಖ್ಯ ಉತ್ಪನ್ನಗಳ ಬೆಲೆಯನ್ನು ಪರಿಶೀಲಿಸಲು ಕ್ರಮಗಳನ್ನು ಪ್ರಕಟಿಸಿದೆ.

ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಟೊಮ್ಯಾಟೋಗಳನ್ನು ಖರೀದಿಸಿ ಮತ್ತು ಟೊಮ್ಯಾಟೋ ದರದಲ್ಲಿ ಅತಿದೊಡ್ಡ ಜಿಗಿತವನ್ನು ದಾಖಲಿಸಿರುವ ಪ್ರದೇಶಗಳಲ್ಲಿ ವಿತರಿಸಲು ರಾಷ್ಟ್ರೀಯ ಕೃಷಿ ಸಹಕಾರಿ ಮಾರಾಟ ಒಕ್ಕೂಟ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟವನ್ನು ಕೇಳಿದೆ. ಅಲ್ಲದೆ, ಶುಕ್ರವಾರದ ವೇಳೆಗೆ ದೆಹಲಿ - ಎನ್‌ಸಿಆರ್‌ನಲ್ಲಿ ಹೊಸ ಸ್ಟಾಕ್‌ಗಳು ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಲಭ್ಯವಿರುತ್ತವೆ ಎಂದೂ ಸರ್ಕಾರದ ಹೇಳಿಕೆ ತಿಳಿಸಿದೆ.

Tap to resize

Latest Videos

ಇದನ್ನು ಓದಿ: ಕೆಜಿಗೆ 150 ರೂ. ದಾಟಿದ ಟೊಮ್ಯಾಟೋ: ಈ ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ 60 ರೂ. ಗೆ ಮಾರಾಟ!

ಕಳೆದ ಒಂದು ತಿಂಗಳಿನಿಂದ ಚಿಲ್ಲರೆ ಬೆಲೆಯಲ್ಲಿನ ಸಂಪೂರ್ಣ ಏರಿಕೆಯ ಆಧಾರದ ಮೇಲೆ ಈ ತಾಜಾ ಸ್ಟಾಕ್‌ಗಳನ್ನು ಬಿಡುಗಡೆ ಮಾಡುವ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದೂ ಮೋದಿ ಸರ್ಕಾರ ಹೇಳಿದೆ. ಈ ಪ್ರಕ್ರಿಯೆಯಲ್ಲಿ ಬಳಕೆಯ ಪ್ರಮಾಣವನ್ನು ಸಹ ಪರಿಗಣಿಸಲಾಗಿದೆ ಎಂದೂ ತಿಳಿದುಬಂದಿದೆ.

ಟೊಮ್ಯಾಟೋವನ್ನು ಭಾರತದ ಪ್ರತಿಯೊಂದು ರಾಜ್ಯದಲ್ಲಿಯೂ ಉತ್ಪಾದಿಸಲಾಗುತ್ತದೆ. ಅದರೂ, ಈ ಪೈಕಿ ದಕ್ಷಿಣ ಮತ್ತು ಪಶ್ಚಿಮ ಪ್ರದೇಶಗಳು ದೇಶದ ಒಟ್ಟು ಉತ್ಪಾದನೆಯ ಸುಮಾರು 60 ಪ್ರತಿಶತವನ್ನು ಹೊಂದಿವೆ. ಈ ರಾಜ್ಯಗಳ ಹೆಚ್ಚುವರಿ ಉತ್ಪನ್ನವನ್ನು ನಂತರ ಭಾರತದ ಇತರ ಭಾಗಗಳಿಗೆ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸಾಮಾನ್ಯವಾಗಿ ಬಳಸಲಾಗುತ್ತದೆ.

ಇದನ್ನೂ ಓದಿ: 15 ದಿನದಲ್ಲಿ ಟೊಮೆಟೋ ಬೆಲೆ ಇಳಿಕೆ; ತೊಗರಿ ಬೇಳೆ ಬೆಲೆ ಕಡಿಮೆ ಮಾಡಲು ಹೆಚ್ಚು ಆಮದು: ಕೇಂದ್ರ ಸರ್ಕಾರ

"ಉತ್ಪಾದನಾ ಋತುಗಳು ಪ್ರದೇಶಗಳಾದ್ಯಂತ ವಿಭಿನ್ನವಾಗಿವೆ. ಗರಿಷ್ಠ ಕೊಯ್ಲು ಅವಧಿಯು ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಸಂಭವಿಸುತ್ತದೆ. ಜುಲೈ-ಆಗಸ್ಟ್ ಮತ್ತು ಅಕ್ಟೋಬರ್-ನವೆಂಬರ್ ಅವಧಿಗಳು ಸಾಮಾನ್ಯವಾಗಿ ಟೊಮ್ಯಾಟೊ ಉತ್ಪಾದನೆಯ ತಿಂಗಳುಗಳು" ಎಂದೂ ಕೇಂದ್ರ ಸರ್ಕಾರದ ಈ ಹೇಳಿಕೆ ತಿಳಿಸಿದೆ.

ಹಾಗೂ, ಈ ಅವಧಿಯಲ್ಲಿನ ಬೆಲೆ ಏರಿಕೆಯನ್ನು ವಿವರಿಸಿದ ಅವರು, "ಜುಲೈ ಮುಂಗಾರು ಋತುವಿನೊಂದಿಗೆ ಸೇರಿಕೊಳ್ಳುತ್ತದೆ. ಈ ಹಿನ್ನೆಲೆ ವಿತರಣೆಗೆ ಸಂಬಂಧಿಸಿದ ಮತ್ತಷ್ಟು ಸವಾಲುಗಳನ್ನು ಮತ್ತು ಹೆಚ್ಚಿದ ಸಾರಿಗೆ ನಷ್ಟಗಳು ಬೆಲೆ ಏರಿಕೆಗೆ ಕಾರಣವಾಗುತ್ತದೆ. ನಾಟಿ ಮತ್ತು ಕೊಯ್ಲು ಋತುಗಳ ಚಕ್ರ ಹಾಗೂ ಪ್ರದೇಶಗಳಾದ್ಯಂತ ವ್ಯತ್ಯಾಸವು ಪ್ರಾಥಮಿಕವಾಗಿ ಟೊಮ್ಯಾಟೋ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಸಾಮಾನ್ಯ ಬೆಲೆಯ ಋತುಮಾನದ ಹೊರತಾಗಿ, ತಾತ್ಕಾಲಿಕ ಪೂರೈಕೆ ಸರಪಳಿಯ ಅಡಚಣೆಗಳು ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ಬೆಳೆ ಹಾನಿ ಇತ್ಯಾದಿಗಳು ಟೊಮ್ಯಾಟೋ ಬೆಲೆಗಳಲ್ಲಿ ಹಠಾತ್ ಏರಿಕೆಗೆ ಕಾರಣವಾಗುತ್ತವೆ’’ ಎಂದೂ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ದೇಶದ ಬಹುತೇಕ ರಾಜ್ಯಗಳಲ್ಲಿ ಟೊಮೆಟೋ 100 ರೂ.ಗೆ ಜಂಪ್‌: ಬೆಲೆ ಏರಿಕೆ ತಡೆಯಲು ಸರ್ಕಾರದಿಂದ ‘ಟೊಮೆಟೋ ಗ್ರಾಂಡ್‌ ಚಾಲೆಂಜ್‌’

ಪ್ರಸ್ತುತ ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದಿಂದ ಟೊಮ್ಯಾಟೋ ಪೂರೈಕೆಯಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಹಾಗೂ, ದೆಹಲಿ ಮತ್ತು ಹತ್ತಿರದ ನಗರಗಳು ಹಿಮಾಚಲ ಪ್ರದೇಶದಿಂದ ಮತ್ತು ಕರ್ನಾಟಕದಿಂದ ದಾಸ್ತಾನುಗಳನ್ನು ಸ್ವೀಕರಿಸುತ್ತಿವೆ ಎಂದೂ ವರದಿಯಾಗಿದೆ. ಅಲ್ಲದೆ, ಮಹಾರಾಷ್ಟ್ರದಿಂದ ಶೀಘ್ರದಲ್ಲೇ ಹೊಸ ಬೆಳೆ ಬರುವ ನಿರೀಕ್ಷೆಯಿದೆ ಮತ್ತು ಮಧ್ಯಪ್ರದೇಶದ ಆಗಮನವೂ ಪ್ರಾರಂಭವಾಗುವ ನಿರೀಕ್ಷೆಯಿದೆ. "ಅದರಂತೆ ಮುಂದಿನ ದಿನಗಳಲ್ಲಿ ಬೆಲೆಗಳು ಇಳಿಕೆಯಾಗುವ ನಿರೀಕ್ಷೆಯಿದೆ’’ ಎಂದೂ ಕೇಂದ್ರ ಸರ್ಕಾರ ಹೇಳಿದೆ.

click me!