ಐಟಿಆರ್ ಸಲ್ಲಿಕೆ ಮಾಡಿದ್ದೀರಾ? ರೀಫಂಡ್ ಬಂದಿದೆಯೋ, ಇಲ್ಲವೋ ಪರಿಶೀಲಿಸಲು ಹೀಗೆ ಮಾಡಿ..

Published : Jul 12, 2023, 02:03 PM IST
ಐಟಿಆರ್ ಸಲ್ಲಿಕೆ ಮಾಡಿದ್ದೀರಾ? ರೀಫಂಡ್ ಬಂದಿದೆಯೋ, ಇಲ್ಲವೋ ಪರಿಶೀಲಿಸಲು ಹೀಗೆ ಮಾಡಿ..

ಸಾರಾಂಶ

2023-24ನೇ ಸಾಲಿನ ಮೌಲ್ಯಮಾಪನ ವರ್ಷಕ್ಕೆ ಐಟಿಆರ್ ಸಲ್ಲಿಕೆ ಮಾಡಿರೋರು ತೆರಿಗೆ ರೀಫಂಡ್ ಗಾಗಿ ಕಾಯುತ್ತಿದ್ದಾರೆ. ಈಗ ಆದಾಯ ತೆರಿಗೆ ಪೋರ್ಟಲ್ ನಲ್ಲೇ ಸುಲಭವಾಗಿ ತೆರಿಗೆ ರೀಫಂಡ್ ಸ್ಟೇಟಸ್ ಚೆಕ್ ಮಾಡಬಹುದು. ಹಾಗಾದ್ರೆ ತೆರಿಗೆ ರೀಫಂಡ್ ಬಂದಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡೋದು ಹೇಗೆ?   

Business Desk:ನೀವು 2023-24ನೇ ಸಾಲಿನ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ ಮಾಡಿದ್ದು, ತೆರಿಗೆ ರೀಫಂಡ್ ಗಾಗಿ ಕಾಯುತ್ತಿದ್ದರೆ ನಿಮಗೊಂದು ಶುಭಸುದ್ದಿ ಇದೆ. ಆದಾಯ ತೆರಿಗೆ ಪೋರ್ಟಲ್ ನಲ್ಲಿ (ಐ-ಟಿ ಪೋರ್ಟಲ್) ಹೊಸ ಆಯ್ಕೆಯೊಂದನ್ನು ಪರಿಚಯಿಸಲಾಗಿದೆ. ಅದರ ಮೂಲಕ ನೀವು ನೇರವಾಗಿ ತೆರಿಗೆ ರೀಫಂಡ್ ಸ್ಟೇಟಸ್ ಚೆಕ್ ಮಾಡಬಹುದು. ಈ ಹಿಂದೆ ತೆರಿಗೆದಾರರು ರೀಫಂಡ್ ಸ್ಟೇಟಸ್ ಅನ್ನು ಟಿಐಎನ್-ಎನ್ ಎಸ್ ಡಿಎಲ್ ವೆಬ್ ಸೈಟ್ ನಲ್ಲಿ ಚೆಕ್ ಮಾಡಬೇಕಿತ್ತು. ಈಗಲೂ ಕೂಡ ನೀವು ಈ ವೆಬ್ ಸೈಟ್ ನಲ್ಲಿ ಚೆಕ್ ಮಾಡಲು ಅವಕಾಶವಿದೆ. ಇದರ ಜೊತೆಗೆ ಆದಾಯ ತೆರಿಗೆ ಪೋರ್ಟಲ್ ನಲ್ಲಿ (ಐ-ಟಿ ಪೋರ್ಟಲ್ ) ಹೊಸ ಆಯ್ಕೆ ನೀಡಲಾಗಿದೆ. ಇದು ಬಳಕೆದಾರರಿಗೆ ಐ-ಟಿ ಪೋರ್ಟಲ್ ನಲ್ಲೇ ನೇರವಾಗಿ ತೆರಿಗೆ ರೀಫಂಡ್ ಸ್ಟೇಟಸ್ ಚೆಕ್ ಮಾಡಲು ಅವಕಾಶ ಕಲ್ಪಿಸಿದೆ.  ನೀವು ನಿಮ್ಮ ಆದಾಯಕ್ಕೆ ವಿಧಿಸಲ್ಪಡುವ ತೆರಿಗೆಗಿಂತ ಹೆಚ್ಚಿನ ಮೊತ್ತವನ್ನು ಪಾವತಿಸಿದ್ರೆ ಮಾತ್ರ ಆದಾಯ ತೆರಿಗೆ ಇಲಾಖೆಯಿಂದ ತೆರಿಗೆ ರೀಫಂಡ್ ಪಡೆಯಬಹುದು. ಹಾಗಾದ್ರೆ ತೆರಿಗೆ ರೀಫಂಡ್ ಬಂದಿದೆಯೋ ಇಲ್ಲವೋ ಎಂದು ಚೆಕ್ ಮಾಡೋದು ಹೇಗೆ?

ಆದಾಯ ತೆರಿಗೆ ರೀಫಂಡ್ ಚೆಕ್ ಹೀಗೆ ಮಾಡಿ:
ಹಂತ 1: ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಗೆ ಭೇಟಿ ನೀಡಿ.
ಹಂತ 2: ‘Quick Links’ವಿಭಾಗದಲ್ಲಿ ಕೆಳಗಡೆ ಹೋಗಿ ಅಲ್ಲಿ ನಿಮಗೆ ‘Know Your Refund Status’ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
ಹಂತ 3: ನಿಮ್ಮ ಪ್ಯಾನ್ ಸಂಖ್ಯೆ, ಮೌಲ್ಯಮಾಪನ ವರ್ಷ (2023-24) ಹಾಗೂ ಮೊಬೈಲ್ ಸಂಖ್ಯೆ ಭರ್ತಿ ಮಾಡಿ.
ಹಂತ 4: ಈಗ ನಿಮಗೆ ಒಟಿಪಿ ಲಭಿಸುತ್ತದೆ. ಅದನ್ನು ನಿಗದಿತ ಸ್ಥಳದಲ್ಲಿ ನಮೂದಿಸಿ.

ಆಧಾರ್-ಪ್ಯಾನ್ ಲಿಂಕ್ ಆಗದ ತೆರಿಗೆದಾರರ ಜೇಬಿನ ಮೇಲೆ ಹೆಚ್ಚಲಿದೆ ಹೊರೆ; ITR ಸಲ್ಲಿಕೆಗೆ 6,000ರೂ. ವೆಚ್ಚ!

ಈಗ ನಿಮ್ಮ ಆದಾಯ ತೆರಿಗೆ ರೀಫಂಡ್ ಸ್ಟೇಟಸ್ ಕಾಣಿಸುತ್ತದೆ. ಒಂದು ವೇಳೆ ನಿಮ್ಮ ಐಟಿಆರ್ ನಲ್ಲಿ ನಮೂದಿಸಿರುವ ಬ್ಯಾಂಕ್ ಮಾಹಿತಿಗಳಲ್ಲಿ ಯಾವುದೇ ಸಮಸ್ಯೆ ಕಾಣಿಸಿದರೆ, ಆಗ ನಿಮಗೆ 'ಯಾವುದೇ ದಾಖಲೆಗಳು ಕಾಣಿಸುತ್ತಿಲ್ಲ. ದಯವಿಟ್ಟು ನಿಮ್ಮ ಇ-ಫೈಲಿಂಗ್ ಪ್ರಕ್ರಿಯೆ ಸ್ಟೇಟಸ್ ಚೆಕ್ ಮಾಡಿ. ಇ-ಫೈಲ್-ಇನ್ ಕಮ್ ಟ್ಯಾಕ್ಸ್ ರಿಟರ್ನ್ಸ್ -ವಿವ್ಯೂ ಫೈಲ್ಡ್ ರಿಟರ್ನ್ಸ್' ಮೂಲಕ ಚೆಕ್ ಮಾಡಬಹುದು.

2023-24ನೇ ಮೌಲ್ಯಮಾಪನ ವರ್ಷಕ್ಕೆ 2023ರ ಜುಲೈ 2ರ ತನಕ ಸುಮಾರು 1.32 ಕೋಟಿ ಐಟಿಆರ್ ಗಳು ಫೈಲ್ ಆಗಿವೆ. ಇವುಗಳಲ್ಲಿ ಇಲ್ಲಿಯ ತನಕ ಸುಮಾರು 1.25 ಕೋಟಿ ಆದಾಯ ತೆರಿಗೆ ರಿಟರ್ನ್ ಗಳನ್ನು ಪರಿಶೀಲಿಸಲಾಗಿದೆ. ಇನ್ನು ಈ ತನಕ 3,973 ಪರಿಶೀಲಿಸಿರುವ ಐಟಿಆರ್ ಗಳನ್ನು ಮುಂದಿನ ಪ್ರಕ್ರಿಯೆಗೊಳಪಡಿಸಲಾಗಿದೆ.

ಐಟಿಆರ್ ಸಲ್ಲಿಕೆ ಮಾಡಲು ಪ್ಯಾನ್ ಕಾರ್ಡ್ ಇಲ್ಲವೆ? ಇ-ಪ್ಯಾನ್ ಡೌನ್​ಲೋಡ್ ಮಾಡಲು ಈ ಸರಳ ವಿಧಾನ ಅನುಸರಿಸಿ

2023-24ನೇ ಸಾಲಿನ ಐಟಿಆರ್ ಸಲ್ಲಿಕೆ ಮಾಡಲು ಜುಲೈ 31 ಅಂತಿಮ ದಿನಾಂಕವಾಗಿದೆ. ಹೀಗಾಗಿ ನೀವು ಇನ್ನೂ ಐಟಿಆರ್ ಸಲ್ಲಿಕೆ ಮಾಡದಿದ್ರೆ ತಕ್ಷಣ ಮಾಡಿ. ಇಲ್ಲವಾದರೆ ಕೊನೆಯ ಕ್ಷಣದಲ್ಲಿ ಹೆಚ್ಚಿನ ಜನರು ಐಟಿಆರ್ ಫೈಲ್ ಮಾಡುವ ಕಾರಣ ಸಮಸ್ಯೆ ಎದುರಾಗುವ ಸಾಧ್ಯತೆಯಿರುತ್ತದೆ. ಸುಮಾರು ಏಳು ವಿಧದ ಐಟಿಆರ್ ಅರ್ಜಿಗಳಿವೆ. ಪ್ರತಿ ಅರ್ಜಿ ನಮೂನೆಯು ಭಿನ್ನವಾಗಿದ್ದು, ನಿರ್ದಿಷ್ಟ ವರ್ಗದ ತೆರಿಗೆದಾರರಿಗೆ ಅನ್ವಯಿಸುತ್ತದೆ. ಹೀಗಾಗಿ ಐಟಿಆರ್ ಫೈಲ್ ಮಾಡುವ ಮುನ್ನ ನಿಮ್ಮ ಆದಾಯಕ್ಕೆ ಸೂಕ್ತವಾದ ಅರ್ಜಿ ನಮೂನೆ ಆಯ್ಕೆ ಮಾಡೋದು ಅಗತ್ಯ. ನೀವು ಸೂಕ್ತ ಐಟಿಆರ್ ಅರ್ಜಿ ನಮೂನೆ ಆಯ್ಕೆ ಮಾಡದಿದ್ರೆ ನಿಮ್ಮ ಅರ್ಜಿಯನ್ನುಆದಾಯ ತೆರಿಗೆ ಇಲಾಖೆ ತಿರಸ್ಕರಿಸುತ್ತದೆ ಕೂಡ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ