Business Idea: ಅತಿ ಹೆಚ್ಚು ಬೇಡಿಕೆಯಿರೋ ಈ ಬ್ಯುಸಿನೆಸ್ ಶುರು ಮಾಡಿ ಲಾಭ ಗಳಿಸಿ

By Roopa Hegde  |  First Published Jul 2, 2022, 3:11 PM IST

Business Tips: ಕಾರು ಕೊಳಕಾಗಿದೆ, ಕ್ಲೀನ್ ಮಾಡೋಕೆ ಟೈಂ ಇಲ್ಲ. ಕಾರ್ ಸ್ವಚ್ಛ ಮಾಡೋಕೆ ಮನಸ್ಸು ಕೂಡ ಇಲ್ಲ ಎಂದಾಗ ಕಾರು ಹೋಗಿ ನಿಲ್ಲೋದು ವಾಷಿಂಗ್ ಸೆಂಟರ್ ಬಳಿ. ಬಹುತೇಕ ಎಲ್ಲ ಕಾರು ಮಾಲೀಕರು ಮಾಡೋದು ಇದೆ. ನೀವು ಇದನ್ನೆ ಬಂಡವಾಳ ಮಾಡ್ಕೊಂಡು ಒಳ್ಳೆ ಬ್ಯುಸಿನೆಸ್ ಶುರು ಮಾಡ್ಬಹುದು.  
 


ಇಂದಿನ ದಿನಗಳಲ್ಲಿ ಜನರಿಗೆ ಸರಿಯಾಗಿ ಸಮಯ ಸಿಗ್ತಿಲ್ಲ. ಸಮಯ (Time) ದ ಹಿಂದೆ ಓಡುವ ಮಂದಿಗೆ ಎಲ್ಲ ಕೆಲಸ ಮಿಷನ್ (Machine) ನಲ್ಲಿ ಆಗ್ತಿದೆ. ಓಡಾಡಲು ಸಾರ್ವಜನಿಕ ವಾಹನ ಬಳಸುವವರ ಸಂಖ್ಯೆಯೂ ಕಡಿಮೆಯಾಗಿದೆ. ಜನರು ಸ್ವಂತ ವಾಹನ ಖರೀದಿಗೆ ಹೆಚ್ಚು ಆಸಕ್ತಿ ತೋರಿಸ್ತಾರೆ. ಮನೆಯಲ್ಲಿ ಒಂದೋ ಎರಡೂ ಇರ್ತಿದ್ದ ವಾಹನಗಳ ಸಂಖ್ಯೆ ಈಗ ನಾಲ್ಕು – ಐದಕ್ಕೆ ಬಂದು ನಿಂತಿದೆ. ಒಬ್ಬೊಬ್ಬರು ಎರಡು ಕಾರನ್ನು ಖರೀದಿಸ್ತಾರೆ. ಬೈಕ್ ಗಿಂತ ಕಾರು ಸುರಕ್ಷಿತ ಎಂಬ ಕಾರಣಕ್ಕೆ ಅದರ ಖರೀದಿ ಹೆಚ್ಚಾಗಿದೆ. 

ಭಾರತದಲ್ಲಿ ಆಟೋಮೊಬೈಲ್ ಉದ್ಯಮ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ವಾಹನ ತಯಾರಕರ ಸಂಘಟನೆಯಾದ ಎಸ್ ಐಎಂ (SIAM) ಪ್ರಕಾರ, 2021-22ನೇ ಹಣಕಾಸು ವರ್ಷದಲ್ಲಿ ದೇಶದಲ್ಲಿ ವಿವಿಧ ವಿಭಾಗಗಳಲ್ಲಿ 1,75,13,596 ವಾಹನಗಳು ಮಾರಾಟವಾಗಿವೆ. ಹೆಚ್ಚುತ್ತಿರುವ ಬೇಡಿಕೆ ಮತ್ತು ವಾಹನಗಳ ಸಂಖ್ಯೆಯಿಂದಾಗಿ ಅನೇಕ ವ್ಯವಹಾರಕ್ಕೆ ಬೇಡಿಕೆ ಹೆಚ್ಚಾಗಿದೆ. ಅಂತಹ ಒಂದು ವ್ಯವಹಾರವೆಂದರೆ ಕಾರ್ ವಾಷಿಂಗ್ ಬ್ಯುಸಿನೆಸ್ (Car washing business). 
ಹೌದು, ಕಾರ್ ವಾಷಿಂಗ್ ಬ್ಯುಸಿನೆಸ್ ಶುರು ಮಾಡುವ ಮೂಲಕ ಉತ್ತಮ ಗಳಿಕೆಯನ್ನು ಕಾಣಬಹುದು. ಕಾರ್ ವಾಷಿಂಗ್ ಬ್ಯುಸಿನೆಸ್ ನಲ್ಲಿ ಶೇಕಡಾ 70 ರಷ್ಟು ಲಾಭ ಪಡೆಯಬಹುದು. ಕಡಿಮೆ ವೆಚ್ಚದಲ್ಲಿ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಕಾರ್ ವಾಷಿಂಗ್ ಸೆಂಟರ್ ಬೆಸ್ಟ್.

Tap to resize

Latest Videos

ಕಾರ್ ವಾಷಿಂಗ್ ಸೆಂಟರ್ ತೆರೆಯಲು ಏನೇನು ಬೇಕು? : ಕಾರು ತೊಳೆಯುವ ವ್ಯವಹಾರವನ್ನು ಪ್ರಾರಂಭಿಸಲು ಕನಿಷ್ಠ 1500 ಚದರ ಅಡಿ ಜಾಗದ ಅವಶ್ಯಕತೆಯಿರುತ್ತದೆ. ಕನಿಷ್ಠ ಇಬ್ಬರು ಕೆಲಸಗಾರರನ್ನು ನೀವು ಇಟ್ಟುಕೊಳ್ಳಬೇಕು. ನೀರು ಹಾಗೂ ವಿದ್ಯುತ್ ಸಂಪರ್ಕವನ್ನು ನೀವು ಹೊಂದಿರಬೇಕು. ಕಾರ್ ವಾಷಿಂಗ್ ಸ್ಟ್ಯಾಂಡ್ ನಿರ್ಮಿಸಲು, ಕಾರನ್ನು ನಿಲ್ಲಿಸಲು ಮತ್ತು ಗ್ರಾಹಕರ ಜೊತೆ ಮಾತನಾಡಲು ಮತ್ತು ನೀರಿನ ಪಂಪ್‌ಗಳನ್ನು ಸ್ಥಾಪಿಸಲು ಸ್ಥಳ ಬೇಕಾಗುತ್ತದೆ. 

ಇದನ್ನೂ ಓದಿ: Parents Tips: ಮಕ್ಕಳಿಗೆ ಹಣದ ಮೌಲ್ಯ ಕಲಿಸೋದು ಹೇಗೆ? ಯಾವಾಗ?

ಕಾರ್ ವಾಷಿಂಗ್ ಸೆಂಟರ್ ಶುರು ಮಾಡಲು ಎಷ್ಟು ವೆಚ್ಚವಾಗುತ್ತೆ?: ಕಾರು ಅಥವಾ ಇತರ ವಾಹನವನ್ನು ತೊಳೆಯಲು  ಕೆಲವು ಯಂತ್ರಗಳು ಬೇಕಾಗುತ್ತವೆ. ಏರ್ ಕಂಪ್ರೆಸರ್, ಫೋಮ್ ಜೆಟ್ ಸಿಲಿಂಡರ್, ಹೆಚ್ಚಿನ ಒತ್ತಡದ ನೀರಿನ ಪಂಪ್ ಮತ್ತು ವ್ಯಾಕ್ಯೂಮ್ ಕ್ಲೀನರ್ ಅಗತ್ಯವಿರುತ್ತದೆ. ಈ ಯಂತ್ರಗಳು ತುಂಬಾ ದುಬಾರಿಯಲ್ಲ. ಈ ಎಲ್ಲಾ ಯಂತ್ರಗಳು ಎರಡು ಲಕ್ಷ ರೂಪಾಯಿಗೆ ಖರೀದಿ ಮಾಡ್ಬಹುದು. ಕಾರನ್ನು ತೊಳೆಯಲು ನೀವು ಸ್ಟ್ಯಾಂಡ್ ಮಾಡಬೇಕು. ನೀವು ಇಟ್ಟಿಗೆಯ ಸ್ಟ್ಯಾಂಡ್ ಮಾಡಿದರೆ ಐವತ್ತು ಸಾವಿರ ರೂಪಾಯಿಗಳನ್ನು ಖರ್ಚು ಮಾಡಬೇಕಾಗಬಹುದು. ಇತ್ತೀಚಿನ ದಿನಗಳಲ್ಲಿ ಕಬ್ಬಿಣದಿಂದ ಮಾಡಿದ ಸ್ಟ್ಯಾಂಡ್‌ಗಳು ಸಹ ಲಭ್ಯವಿದೆ. ಜಾಗ ನಿಮ್ದೆ ಆಗಿದ್ದರೆ ನೀವು 6 ಲಕ್ಷ ರೂಪಾಯಿ ಖರ್ಚು ಮಾಡಿ ಕಾರ್ ವಾಷಿಂಗ್ ಸೆಂಟರ್ ಶುರು ಮಾಡಬಹುದು.  

ಇದನ್ನೂ ಓದಿ: ವಿದೇಶದಲ್ಲಿ ಓದುವ ಮೊದಲು Education Loan ಬಗ್ಗೆ ತಿಳಿದ್ಕೊಳ್ಳಿ

ಈ ವ್ಯವಹಾರದಿಂದ ಗಳಿಕೆ ಎಷ್ಟು ? : ಕಾರ್ ವಾಷಿಂಗ್ ಸೆಂಟರ್ ವ್ಯವಹಾರದಲ್ಲಿ ಉತ್ತಮ ಲಾಭವಿದೆ. ಇದಕ್ಕೆ ಕಾರಣ, ಕಾರು ಅಥವಾ ಯಾವುದೇ ವಾಹನವನ್ನು ತೊಳೆಯಲು ಬಳಸುವ ವಸ್ತು, ಅವುಗಳ ಬೆಲೆ ತುಂಬಾ ಕಡಿಮೆ. ಇದರಲ್ಲಿ ಕಾರ್ಮಿಕರಿಗೆ ಕೊಡುವ ಕೂಲಿ, ವಿದ್ಯುತ್, ನೀರಿನ ಬಿಲ್ ಗೆ ಮಾತ್ರ ಖರ್ಚು ಬರುತ್ತದೆ. ಕಾರ್ ವಾಶಿಂಗ್ ಸೆಂಟರ್ ಮೂಲಕ ನೀವು ಶೇಕಡಾ 70ರಷ್ಟು ಲಾಭ ಮಾಡ್ಬಹುದು. ಆದ್ರೆ ನೀವು ಹೇಗೆ ಕೆಲಸ ಮಾಡ್ತೀರಿ ಮತ್ತೆ ಎಷ್ಟು ಗ್ರಾಹಕರನ್ನು ಹೊಂದಿದ್ದೀರಿ ಎಂಬುದನ್ನು ಇದು ಅವಲಂಭಿಸಿರುತ್ತದೆ.  

ಪ್ರತಿದಿನ ಸುಮಾರು 20 ವಾಹನಗಳು ನಿಮ್ಮ ಕೇಂದ್ರಕ್ಕೆ ಬಂದ್ರೆ  ಆರಾಮವಾಗಿ 3000 ರೂಪಾಯಿ ಗಳಿಸಬಹುದು. ಎಲ್ಲ ಖರ್ಚು ತೆಗೆದು  ಎರಡು ಸಾವಿರ ರೂಪಾಯಿ ಉಳಿಸಬಹುದು. ಒಂದು ದಿನಕ್ಕೆ 2 ಸಾವಿರವೆಂದ್ರೆ ಒಂದು ತಿಂಗಳಲ್ಲಿ 60 ಸಾವಿರ ರೂಪಾಯಿಗಳನ್ನು ಸುಲಭವಾಗಿ ಗಳಿಸಬಹುದು. 

click me!