ತೆರಿಗೆದಾರರಿಗೆ ಪ್ರಧಾನಿ ಮೋದಿ ಗುಡ್ ನ್ಯೂಸ್, ₹12 ಲಕ್ಷವರೆಗೆ ಯಾವುದೇ ಆದಾಯ ತೆರಿಗೆ ಇಲ್ಲ

ಮಧ್ಯಮ ವರ್ಗಕ್ಕೆ  ಮೋದಿ ಸರ್ಕಾರ ಗುಡ್ ನ್ಯೂಸ್ ನೀಡಿದೆ.  ಇದೀಗ ಆದಾಯ ತೆರಿಗೆ ವಿನಾಯಿತಿಯನ್ನು 12 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. 

Union Budget 2025 Good news for Middle class No income tax till Rs 12 lakh

ನವದೆಹಲಿ(ಫೆ.01) ಇಡೀ ಭಾರತ ಈ ಬಾರಿಯ ಕೇಂದ್ರ ಬಜೆಟ್ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿತ್ತು. ಈ ನಿರೀಕ್ಷೆಗೆ ತಕ್ಕಂತೆ ಮೋದಿ ಸರ್ಕಾರ ಸ್ಪಂದಿಸಿದೆ. ಈ ಬಾರಿಯ ಕೇಂದ್ರ ಬಜೆಟ್ ಮಧ್ಯ ವರ್ಗಕ್ಕೆ ಭರ್ಜರಿ ಕೊಡುಗೆ ನೀಡಿದೆ. 7 ಲಕ್ಷ ರೂಪಾಯಿ ವರೆಗೆ ಇದ್ದ ತೆರಿಗೆ ವಿನಾಯಿತಿಯನ್ನು ಇದೀಗ ಬರೋಬ್ಬರಿ 12 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಹೀಗಾಗಿ ಇದೀಗ ಮಧ್ಯ ವರ್ಗ ನಿರಾಳವಾಗಿದೆ. ಕಾರಣ 12 ಲಕ್ಷ ರೂಪಾಯಿ ವರೆಗೆ ಯಾವುದೇ ಆದಾಯ ತೆರಿಗೆ ಇಲ್ಲ. ಪ್ರಮುಖ ಬದಲಾವಣೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. 

2025-26ರ ಹೊಸ ಆದಾಯ ತೆರಿಗೆ ಸ್ಲ್ಯಾಬ್
0-4 ಲಕ್ಷ ರೂಪಾಯಿ ಆದಾಯ:0 %
4 ರಿಂದ 8 ಲಕ್ಷ ರೂಪಾಯಿ : 5%
8 ರಿಂದ 12 ಲಕ್ಷ ರೂಪಾಯಿ: 10 %
12 ರಿಂದ 16 ಲಕ್ಷ ರೂಪಾಯಿ:15 %
16 ರಿಂದ 20 ಲಕ್ಷ ರೂಪಾಯಿ:20 %
20 ರಿಂದ 24 ಲಕ್ಷ ರೂಪಾಯಿ: 25 %
24 ಲಕ್ಷಕ್ಕಿಂತ ಮೇಲ್ಪಟ್ಟ: 30 %

Latest Videos

ಹೊಸ ನೀತಿಯಲ್ಲಿ 12 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಸಂಪೂರ್ಣ ರಿಬೇಟ್ ನೀಡಲಾಗಿದೆ. ಹೀಗಾಗಿ ಹೊಸ ಆದಾಯ ನೀತಿ ಪ್ರಕಾರ 12 ಲಕ್ಷ ರೂಪಾಯಿ ಸಂಬಂಳದಾರರು ಯಾವುದೇ ತೆರಿಗೆ ಪಾವತಿಸುವಂತಿಲ್ಲ.

Union Budget 2025 Live Updates: 12 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ...

ನಿರ್ಮಾಲಾ ಸೀತಾರಾಮನ್ ಘೋಷಿಸಿದ ಈ ಬಾರಿಯ ಟ್ಯಾಕ್ಸ್ ನೀತಿ ಹಲವು ಸಂಬಳದಾರರ ಮುಖದಲ್ಲಿ ನಗು ತರಿಸಿದೆ. ಹಲವು ಮಧ್ಯಮ ವರ್ಗ ಕುಟುಂಬ ದುಬಾರಿ ತೆರಿಗೆ ಪಾವತಿ ಮಾಡಿ ಹೈರಾಣಾಗುತ್ತಿತ್ತು. ಆದರೆ ಈ ಬಾರಿ 12 ಲಕ್ಷ ರೂ ವರೆಗೆ ತೆರಿಗೆ ವಿನಾಯಿತಿ ನೀಡಲಾಗಿದೆ. 

ಹೊಸ ಆದಾಯ ತೆರಿಗೆ ನೀತಿಯಿಂದ ತೆರೆಗೆದಾರರಿಗೆ ಉಳಿತಾಯವಾಗುವ ಮೊತ್ತ
12 ಲಕ್ಷ ರೂಪಾಯಿವರಿಗೆ ಆದಾಯ ಪಡೆಯುವ ತೆರಿಗೆದಾರರಿಗೆ 80,000 ರೂಪಾಯಿ ತೆರಿಗೆ ಉಳಿತಾಯವಾಗಲಿದೆ. ಸದ್ಯ ಇರುವ 12 ಲಕ್ಷ ರೂಪಾಯಿ ವರೆಗೆ ಆದಾಯ ತೆರಿಗೆದಾರರು ಯಾವುದೇ ತೆರಿಗೆ ನೀಡಬೇಕಿಲ್ಲ. 
16 ಲಕ್ಷ ರೂಪಾಯಿ ವರೆಗಿನ ಆದಾಯ ತೆರಿಗೆದಾರರಿಗೆ 50,000 ರೂಪಾಯಿ ತೆರಿಗೆ ಉಳಿತಾಯವಾಗಲಿದೆ
18 ಲಕ್ಷ ರೂಪಾಯಿವರೆಗಿನ ಆದಾಯ ತೆರಿಗೆದಾರರಿಗೆ 70,000 ರೂಪಾಯಿ ತೆರಿಗೆ ಉಳಿತಾಯವಾಗಲಿದೆ.
20 ಲಕ್ಷ ರೂಪಾಯಿ ವರೆಗಿನ ಆದಾಯ ತೆರಿಗೆದಾರಿಗೆ 90,000 ರೂಪಾಯಿ ತೆರಿಗೆ ಉಳಿತಾಯವಾಗಲಿದೆ
25 ಲಕ್ಷ ರೂಪಾಯಿ ವರೆಗಿನ ಆದಾಯ ತೆರಿಗೆದಾರರಿಗೆ 1,10,000 ರೂಪಾಯಿ ತೆರಿಗೆ ಉಳಿತಾಯವಾಗಲಿದೆ
50 ಲಕ್ಷ ರೂಪಾಯಿ ವರೆಗಿನ ಆದಾಯ ತೆರಿಗೆದಾರರಿಗೆ 1,10,000 ರೂಪಾಯಿ ತೆರಿಗೆ ಉಳಿತಾಯವಾಗಲಿದೆ

ಭಾರತದ ಆದಾಯ ತೆರಿಗೆ ವಿನಾಯಿತಿ(2005 ರಿಂದ 2025ರ ವರೆಗೆ)
2005: 1 ಲಕ್ಷ ರೂಪಾಯಿ ವರೆಗೆ
2012: 2 ಲಕ್ಷ ರೂಪಾಯಿ ವರೆಗೆ
2014: 2.5 ಲಕ್ಷ ರೂಪಾಯಿ ವರೆಗೆ
2019: 5 ಲಕ್ಷ ರೂಪಾಯಿ ವರೆಗೆ
2023: 7 ಲಕ್ಷ ರೂಪಾಯಿ ವರೆಗೆ
2025: 12 ಲಕ್ಷ ರೂಪಾಯಿ ವರೆಗೆ
 

 

click me!