*ರಿಯಲ್ ಎಸ್ಟೇಟ್ ವಲಯಕ್ಕೆ ಉತ್ತೇಜನ ನೀಡುವಂತೆ ಸರ್ಕಾರಕ್ಕೆ FICCI ಮನವಿ
*ಕಿರು ಹಾಗೂ ಸಣ್ಣ ಉದ್ಯಮಿಗಳಿಗೆ ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಅಡಿಯಲ್ಲಿ ಸಾಲದ ಮಿತಿ ಹೆಚ್ಚಳಕ್ಕೆ ಸಲಹೆ
*ವಾರ್ಷಿಕ ಏಳು ಸಿಲಿಂಡರ್ ತನಕದ ಬಳಕೆಗೆ ಸಬ್ಸಿಡಿ ನೀಡಲು ಒತ್ತಾಯ
Business Desk: ಕೇಂದ್ರ ಸರ್ಕಾರದ (Central Government)2022ನೇ ಆರ್ಥಿಕ ಸಾಲಿನ ಬಜೆಟ್ (Budget) ಮಂಡನೆಗೆ ಕೇವಲ ಎರಡು ವಾರಗಳಷ್ಟೇ ಬಾಕಿ ಉಳಿದಿರುವಂತೆ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು (Representative) ತಮ್ಮ ನಿರೀಕ್ಷೆಗಳು, ಸಲಹೆಗಳನ್ನು ಸರ್ಕಾರದ ಮುಂದಿಡುತ್ತಿದ್ದಾರೆ. ಅದೇರೀತಿ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ(FICCI) ಕೂಡ ಕೈಗಾರಿಕಾ ಕ್ಷೇತ್ರಕ್ಕೆ (Industrial Sector) ಸಂಬಂಧಿಸಿ 12 ಸಲಹೆಗಳನ್ನು(suggestions) ಮುಂದಿಟ್ಟಿದ್ದು, ವಿತ್ತ ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಬಜೆಟ್ ಸಿದ್ಧಪಡಿಸೋವಾಗ ಇವುಗಳನ್ನು ಪರಿಗಣಿಸೋ ನಿರೀಕ್ಷೆ ಹೊಂದಿದೆ.
ಇವೇ ಆ 12 ಸಲಹೆಗಳು
1.ಗೃಹ ಸಾಲ (Home Loan) ಪಡೆಯೋರಿಗೆ ಬಡ್ಡಿ (Interest)ಸಬ್ಸಿಡಿ (Subsidy):ಕೇಂದ್ರ ಸರ್ಕಾರ ಗೃಹ (Home) ಹಾಗೂ ರಿಯಲ್ ಎಸ್ಟೇಟ್ (Real Estate)ವಲಯಕ್ಕೆ ಉತ್ತೇಜನ ನೀಡಬೇಕೆಂದು ಎಫ್ಐಸಿಸಿಐ (FICCI)ಬಯಸುತ್ತದೆ. ಈ ವಲಯವು ಪ್ರಗತಿ ಹಾಗೂ ಹೂಡಿಕೆ (Investment) ಪ್ರಾರಂಭಕ್ಕೆ ಹಾಗೂ ಯೋಜನೆಯ ವೆಚ್ಚ ವೃತ್ತಕ್ಕೆ (Capex cycle) ಉತ್ತೇಜನಕಾರಿಯಾಗಿದೆ ಎಂದು FICCI ಹೇಳಿದೆ. ನಾಲ್ಕು ವರ್ಷಗಳ ಅವಧಿಗೆ ಗೃಹ ಸಾಲದ (Home Loan) ಮೇಲೆ ಶೇ.3ರಿಂದ ಶೇ.4ರಷ್ಟು ಬಡ್ಡಿ ಸಬ್ಸಿಡಿಯನ್ನು(Subsidy) ನೀಡಬಹುದು ಎಂದು ಸರ್ಕಾರಕ್ಕೆ FICCI ಸಲಹೆ ನೀಡಿದೆ.
2. ಪ್ರಧಾನಮಂತ್ರಿ ಉಜ್ವಲ್ ಯೋಜನೆ (PMUY) ಫಲಾನುಭವಿಗಳಿಗೆ ನಿಯಮಿತ ಸಬ್ಸಿಡಿ: PMUY ಅಡಿಯಲ್ಲಿ ಗ್ಯಾಸ್ ಸಿಲಿಂಡರ್ ಪ್ರತಿಬಾರಿ ರಿಫಿಲ್ ಮಾಡೋದಕ್ಕೆ ನಿಯಮಿತ ಸಬ್ಸಿಡಿ ನೀಡೋ ಬದಲು ಹೊಸ ಗ್ಯಾಸ್ ಕನೆಕ್ಷನ್ ನೀಡಲು ಹಾಗೂ ಮೊದಲ ರಿಫಿಲ್ಲಿಂಗ್ ಉಚಿತವಾಗಿ ಮಾಡಲು ಹೆಚ್ಚಿನ ಗಮನ ಕೇಂದ್ರೀಕರಿಸಬೇಕಾದ ಅಗತ್ಯವಿದೆ. ಕೊರೋನಾದ ಮೊದಲ ಅಲೆ ಬಳಿಕ PMUY ಫಲಾನುಭವಿಗಳಿಗೆ ಮೂರು ರಿಫಿಲ್ಲಿಂಗ್ ಉಚಿತವಾಗಿ ನೀಡಲಾಗಿದೆ. ಆದ್ರೆ ಅಡುಗೆ ಅನಿಲದ ಬೆಲೆಯೇರಿಕೆಯಿಂದ ಬಡವರ್ಗದ ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್ ರಿಫಿಲ್ಲಿಂಗ್ ಮಾಡೋದೇ ದೊಡ್ಡ ಸವಾಲಾಗಿದೆ. ಹೀಗಾಗಿ ಸರ್ಕಾರ ವಾರ್ಷಿಕ ಏಳು ಸಿಲಿಂಡರ್ ತನಕದ ಬಳಕೆಗೆ ಸಬ್ಸಿಡಿ ನೀಡಬೇಕೆಂದು FICCI ಸಲಹೆ ನೀಡಿದೆ.
3.ಕಿರು ಹಾಗೂ ಸಣ್ಣ ಉದ್ಯಮಿಗಳಿಗೆ ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಅಡಿಯಲ್ಲಿ ಯಾವುದೇ ಮೇಲಾಧರವಿಲ್ಲದೆ ನೀಡೋ ಸಾಲದ ಮಿತಿಯನ್ನು 2ಕೋಟಿ ರೂ.ನಿಂದ 5ಕೋಟಿ ರೂ.ಗೆ ಏರಿಕೆ ಮಾಡುವಂತೆ FICCI ಸರ್ಕಾರಕ್ಕೆ ಮನವಿ ಮಾಡಿದೆ.
4.ಹೊಸದಾಗಿ ಉತ್ಪಾದನೆ ಪ್ರಾರಂಭಿಸಿರೋ ಕೈಗಾರಿಕೆಗಳಿಗೆ ತೆರಿಗೆ ವಿನಾಯ್ತಿ ಅವಧಿಯನ್ನು 2023 ಮಾರ್ಚ್ 31 ರಿಂದ 2025ರ ಮಾರ್ಚ್ 31ರ ತನಕ ವಿಸ್ತರಿಸುವಂತೆ FICCI ಸಲಹೆ ನೀಡಿದೆ.
undefined
5.ಮೂಲಸೌಕರ್ಯ(Infrastructure) ವಲಯಕ್ಕೆ ಸಂಬಂಧಿಸಿ ನಾನ್ ಫಂಡ್ ಕ್ರೆಡಿಟ್ (Non Fund Credit)ಸಮಸ್ಯೆಯನ್ನು ಸರ್ಕಾರ ಪರಿಹರಿಸುವಂತೆ FICCI ಮನವಿ ಮಾಡಿದೆ.
6.ಖಾಸಗಿ ವಲಯದ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ರಾಷ್ಟ್ರೀಯ ನಗದೀಕರಣ ಪೈಪ್ ಲೈನ್ ( National Monetisation Pipeline) ಹಾಗೂ ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ ಗೆ (National Infrastructure Pipeline) ಸಂಬಂಧಿಸಿ ತ್ರೈಮಾಸಿಕ ಹರಾಜು ಕ್ಯಾಲೆಂಡರ್ ಬಿಡುಗಡೆ ಮಾಡುವಂತೆ FICCI ಸರ್ಕಾರಕ್ಕೆ ಮನವಿ ಮಾಡಿದೆ.
7.ಹಣಕಾಸು ಹಾಗೂ ಮೂಲಸೌಕರ್ಯ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ ಶೀಘ್ರವಾಗಿ ಕಾರ್ಯಾರಂಭ ಮಾಡಬೇಕು.
8. ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ವಿಚಾರಣೆಗಳನ್ನು ಮುಖಾಮುಖಿಯಾಗದೆ ನಡೆಸೋ ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಸರ್ಕಾರ ಮುಂದೂಡಬೇಕೆಂದು ಒತ್ತಾಯಿಸಿದೆ.
9. ವಿವಾದಾತ್ಮಕ ಪ್ರಕರಣಗಳನ್ನು ಸಮಯದ ಪರಿಮಿತಿಯೊಳಗೆ ಇತ್ಯರ್ಥಗೊಳಿಸಲು ವಿವಾದ ಇತ್ಯರ್ಥ ಸಮಿತಿಯನ್ನು ರಚಿಸುವಂತೆ FICCI ಸರ್ಕಾರಕ್ಕೆ ಸಲಹೆ ನೀಡಿದೆ.
10.ಭಾರತದಲ್ಲಿ ಹಸಿರು ತಂತ್ರಜ್ಞಾನ ಅಳವಡಿಕೆ ಹಾಗೂ ಉತ್ತೇಜನಕ್ಕೆ ತೆರಿಗೆ ವಿನಾಯ್ತಿ ನೀಡುವಂತೆ FICCI ಸಲಹೆ ನೀಡಿದೆ. ಹಸಿರು ತಂತ್ರಜ್ಞಾನದಲ್ಲಿ ಹೂಡಿಕೆ ಮಾಡೋ ಸಂಸ್ಥೆಗಳಿಗೆ ಶೇ.15ರಷ್ಟು ತೆರಿಗೆ ವಿನಾಯ್ತಿ ನೀಡಬೇಕು. ಹಸಿರು ತಂತ್ರಜ್ಞಾನಕ್ಕೆ ಸಂಬಂಧಿಸಿದ ಆಸ್ತಿಗಳ ಮೇಲಿನ ಹೂಡಿಕೆ/ ಖರೀದಿ ಮೇಲೆ ಪೂರ್ಣ ಪ್ರಮಾಣದ ತೆರಿಗೆ ಕಡಿತ ನೀಡಬೇಕೆಂದು FICCI ಸಲಹೆ ನೀಡಿದೆ.
11.ವಸತಿ ಪ್ರದೇಶಗಳಲ್ಲಿ ಕಟ್ಟಡಗಳ ಮೇಲೆ ಸೌರವಿದ್ಯುತ್ ಉತ್ಪಾದನೆಗೆ ಹಣಕಾಸು ಖಚಿತ ಯೋಜನೆ ರೂಪಿಸಬೇಕು. ಕನಿಷ್ಠ ಶೇ.15ರಷ್ಟಾದ್ರೂ ಕೊಡುಗೆ ನೀಡಬೇಕು.
12.ಮೌಲ್ಯಮಾಪನದ ಕಾರಣದಿಂದ ಕಂಪನಿಗಳಿಗೆ ಹೊಸದಾಗಿ ಬಂಡವಾಳ ಸಂಗ್ರಹಿಸಲು ಹಾಗೂ ಮರುರೂಪಿಸಲು ಇರೋ ಅಡಚಣೆಗಳನ್ನು ನಿವಾರಿಸುವಂತೆ FICCI ಸರ್ಕಾರಕ್ಕೆ ಮನವಿ ಮಾಡಿದೆ.