Banking Ombudsman Report:ಈ ಬಾರಿಯೂ ಗ್ರಾಹಕರ ಅಳಲು ಡೆಬಿಟ್, ಕ್ರೆಡಿಟ್ ಕಾರ್ಡ್, ಡಿಜಿಟಲ್ ಬ್ಯಾಂಕಿಂಗ್‌ ಕುರಿತೇ!

Suvarna News   | Asianet News
Published : Jan 13, 2022, 04:52 PM IST
Banking Ombudsman Report:ಈ ಬಾರಿಯೂ ಗ್ರಾಹಕರ ಅಳಲು ಡೆಬಿಟ್, ಕ್ರೆಡಿಟ್ ಕಾರ್ಡ್, ಡಿಜಿಟಲ್ ಬ್ಯಾಂಕಿಂಗ್‌ ಕುರಿತೇ!

ಸಾರಾಂಶ

*2020 ಜುಲೈ ನಿಂದ 2021ರ ಮಾರ್ಚ್ ತನಕದ ಅವಧಿಯಲ್ಲಿ ಬ್ಯಾಂಕಿಂಗ್ ಒಂಬುಡ್ಸ್ ಮನ್ ಕಚೇರಿಗೆ ಬಂದ ದೂರುಗಳನ್ನು ಆಧರಿಸಿ ವರದಿ *ಡೆಬಿಟ್ ಕಾರ್ಡ್ ವಿರುದ್ಧದ ದೂರಿನ ಪ್ರಮಾಣದಲ್ಲಿ ಈ ಬಾರಿ ಇಳಿಕೆ  * ಡಿಜಿಟಲೀಕರಣದಿಂದ ತಗ್ಗಿದೆ ದೂರು ನಿರ್ವಹಣೆ ಪ್ರಕ್ರಿಯೆಯ ಸಮಯ ಹಾಗೂ ವೆಚ್ಚ   

ಮುಂಬೈ (ಜ.13): ಬ್ಯಾಂಕುಗಳ (Banks)ವಿರುದ್ಧದ ಗ್ರಾಹಕರ (Customers) ದೂರಿನಲ್ಲಿ (complaints) ಎಟಿಎಂ/ ಡೆಬಿಟ್ ಕಾರ್ಡ್ಸ್(ATM/Debit cards) , ಮೊಬೈಲ್/ಡಿಜಿಟಲ್ ಬ್ಯಾಂಕಿಂಗ್ (Mobile/Digotal banking)ಹಾಗೂ ಕ್ರೆಡಿಟ್ ಕಾರ್ಡ್ಸ್ ಗೆ (Credit cards) ಸಂಬಂಧಿಸಿದ ಸಮಸ್ಯೆಗಳೇ ಈ  ಬಾರಿಯೂ ಟಾಪ್ 3  ಸ್ಥಾನದಲ್ಲಿವೆ ಎಂದು ಬ್ಯಾಂಕಿಂಗ್ (Banking) ಒಂಬುಡ್ಸ್ ಮನ್ (ombudsman) ವಾರ್ಷಿಕ ವರದಿ (annual report) ಹೇಳಿದೆ.  2020 ಜುಲೈ ನಿಂದ 2021ರ ಮಾರ್ಚ್ ತನಕದ ಅವಧಿಯಲ್ಲಿ ಬ್ಯಾಂಕಿಂಗ್ ಒಂಬುಡ್ಸ್ ಮನ್ ಕಚೇರಿಗೆ  (OBO)ಬಂದ ದೂರುಗಳನ್ನು ಆಧರಿಸಿ ಒಂಬುಡ್ಸ್ ಮನ್ ಯೋಜನೆಯ 2020-21ನೇ ಸಾಲಿನ ವಾರ್ಷಿಕ ವರದಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆಗೊಳಿಸಿದೆ.

 2020 ಜುಲೈ 1ರಿಂದ 2021 ಮಾರ್ಚ್ 31ರ ತನಕ ಅಂದ್ರೆ 9 ತಿಂಗಳ ಅವಧಿಗೆ ಸಂಬಂಧಿಸಿ ಒಂಬುಡ್ಸ್ ಮನ್ ಯೋಜನೆಯ ವಾರ್ಷಿಕ ವರದಿಯನ್ನು ಆರ್ ಬಿಐ ಸಿದ್ಧಪಡಿಸಿದೆ. ಈ ವರದಿ ಬ್ಯಾಂಕಿಂಗ್ ಒಂಬುಡ್ಸ್ ಮನ್ ಯೋಜನೆ (BOS) 2006 ,ಬ್ಯಾಂಕಿಂಗೇತರ ಹಣಕಾಸು ಕಂಪನಿಗಳ ಒಂಬುಡ್ಸ್ ಮನ್ ಯೋಜನೆ (OSNBFC) 2018 ಹಾಗೂ ಡಿಜಿಟಲ್ ವಹಿವಾಟುಗಳ ( Digital Transactions) ಒಂಬುಡ್ಸ್ ಮನ್ ಯೋಜನೆ  2019ರ  ಚಟುವಟಿಕೆಗಳನ್ನು ಒಳಗೊಂಡಿದೆ.

ಹೂಡಿಕೆದಾರರಿಗೆ ಭರ್ಜರಿ ಲಾಭ ಮಾಡಿಸಿದ ಸಿಗರೇಟ್ ಕಂಪನಿ, 2 ವಾರದಲ್ಲಿ ಹಣ ಡಬಲ್!

ಡೆಬಿಟ್ ಕಾರ್ಡ್ ವಿರುದ್ಧದ ದೂರಿನ ಪ್ರಮಾಣದಲ್ಲಿ ಈ ಬಾರಿ ಇಳಿಕೆ ಕಂಡುಬಂದಿದ್ದರೆ, ಕ್ರೆಡಿಟ್ ಕಾರ್ಡ್ ವಿರುದ್ಧದ ದೂರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಬ್ಯಾಂಕ್ ಗಳು ಬದ್ಧತೆ (Commitments)ಪ್ರದರ್ಶಿಸಲು ವಿಫಲವಾಗಿರೋದು ಹಾಗೂ ನ್ಯಾಯಯುತ (Fair)ಕಾರ್ಯನಿರ್ವಹಣೆ ಸಂಹಿತೆ (Code) ಅನುಸರಿಸದಿರೋ ಅತೀಹೆಚ್ಚು ದೂರುಗಳು (Complaints) ದಾಖಲಾಗಿರೋ ವಿಭಾಗಗಳಲ್ಲಿ 4ನೇ ಹಾಗೂ 5ನೇ ಸ್ಥಾನಗಳಲ್ಲಿವೆ. 

2020 ಜುಲೈ 1ರಿಂದ 2021 ಮಾರ್ಚ್  31ರ ತನಕ ಎಟಿಎಂ/ಡೆಬಿಟ್ ಕಾರ್ಡ್ (ATM/Debit card) ದೂರುಗಳು, ಮೊಬೈಲ್/ಎಲೆಕ್ಟ್ರಾನಿಕ್  (Mobile/Electronic) ಬ್ಯಾಂಕಿಂಗ್ ಹಾಗೂ ಕ್ರೆಡಿಟ್ ಕಾರ್ಡ್ಗೆ (Credit card) ಸಂಬಂಧಿಸಿದ ದೂರುಗಳ ಪ್ರಮಾಣ ಕ್ರಮವಾಗಿ ಶೇ.17.4, ಶೇ.13 ಹಾಗೂ ಶೇ.12.4ರಷ್ಟಿದೆ. ಇದೇ ವಿಭಾಗಗಳಿಗೆ ಸಂಬಂಧಿಸಿ 2019 ಜುಲೈ 1ರಿಂದ 2020 ಜೂನ್ 30ರ ತನಕದ ದೂರುಗಳ ಪ್ರಮಾಣ ಕ್ರಮವಾಗಿ ಶೇ. 22, ಶೇ. 13.4 ಹಾಗೂ ಶೇ. 9.3 ಆಗಿದೆ. 

Income Tax Return: ಡಿಸೆಂಬರ್ 31ರ ತನಕ ಇ-ಫೈಲಿಂಗ್ ಪೋರ್ಟಲ್ ನಲ್ಲಿ 5.8 ಕೋಟಿ ಐಟಿಆರ್ ಸಲ್ಲಿಕೆ: ಇನ್ಫಿ ಸಿಇಒ

ದೂರುಗಳ ಪರಿಹಾರಕ್ಕೆ ಡಿಜಿಟಲ್ ವೇದಿಕೆಯ (Digital platform) ಬಳಕೆಯಿಂದ ಎರಡು ಪ್ರಮುಖ ಪ್ರಯೋಜನಗಳಾಗಿವೆ. ಒಂದು ದೂರುಗಳ ಪರಿಹಾರಕ್ಕೆ (grievance redressal) ತಗಲುವ ವೆಚ್ಚದಲ್ಲಿ ಗಮನಾರ್ಹ ಇಳಿಕೆಯಾಗಿದೆ. ಎರಡನೆಯದು, ದೂರುಗಳ ಪರಿಹಾರ ಅವಧಿಯಲ್ಲಿ(TAT)ಕೂಡ ಪ್ರಗತಿ ಕಂಡುಬಂದಿದೆ.  ಬ್ಯಾಂಕಿಂಗ್ ಒಂಬುಡ್ಸ್ ಮನ್ ಯೋಜನೆಯಡಿಯಲ್ಲಿ ದೂರುಗಳ ನಿರ್ವಹಣೆಯ ಸರಾಸರಿ ವೆಚ್ಚದಲ್ಲಿ (average cost) ಶೇ.  33.5 ಇಳಿಕೆಯಾಗಿದೆ.  2019ರ ಜುಲೈ 1ರಿಂದ 2020ರ ಜೂನ್ 30ರ  ಅವಧಿಯಲ್ಲಿ 2,412ರೂ.ವಿದ್ದ ದೂರು ನಿರ್ವಹಣಾ ವೆಚ್ಚ 2020 ಜುಲೈ 1ರಿಂದ 2021ರ ಮಾರ್ಚ್ 31ರ ಅವಧಿಯಲ್ಲಿ 1,605ರೂ.ಗೆ ಇಳಿಕೆಯಾಗಿದೆ. ದೂರುಗಳ ನಿರ್ವಹಣಾ ವ್ಯವಸ್ಥೆಯಲ್ಲಿ (CMS) ಡಿಜಿಟಲೈಸೇಷನ್ ಪ್ರಕ್ರಿಯೆ ಬಳಸಿಕೊಂಡ ಕಾರಣ ಹೆಚ್ಚುವರಿ ಸಿಬ್ಬಂದಿ ಅಗತ್ಯವಿಲ್ಲದೆ ಈಗಾಗಲೇ ಇರೋ ಸಿಬ್ಬಂದಿಯೇ ಹಿಂದಿನ ಸಾಲಿಗಿಂತ ಹೆಚ್ಚಿನ ಪ್ರಮಾಣದ ದೂರುಗಳನ್ನು ಸರ್ಮಪಕವಾಗಿ ಇತ್ಯರ್ಥಪಡಿಸಲು ಸಾಧ್ಯವಾಗಿದೆ ಎಂದು ವರದಿ ತಿಳಿಸಿದೆ.

2019ರ ಜುಲೈ 1ರಿಂದ 2020ರ ಜೂನ್ 30ರ  ಅವಧಿಯಲ್ಲಿಒಂದು ದೂರನ್ನು ಇತ್ಯರ್ಥಪಡಿಸಲು ಬ್ಯಾಂಕಿಂಗ್ ಒಂಬುಡ್ಸ್ ಮನ್ 95 ದಿನಗಳನ್ನು ತೆಗೆದುಕೊಳ್ಳುತ್ತಿತ್ತು. ಆದ್ರೆ ಈ ಕಾಲಮಿತಿ 2020 ಜುಲೈ 1ರಿಂದ 2021ರ ಮಾರ್ಚ್ 31ರ ಅವಧಿಯಲ್ಲಿ 55 ದಿನಗಳಿಗೆ ತಗ್ಗಿದೆ.  

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌