ಬಾಲಿವುಡ್ ನಟಿ ಸೋನಂ ಕಪೂರ್ ಅವರ ಮಾವ (ಗಂಡನ ತಂದೆ) ಲಂಡನ್‌ನಲ್ಲಿ ಮಗ ಸೊಸೆಗಾಗಿ 8 ಅಂತಸ್ಥಿನ ಬೃಹತ್ ಮನೆಯೊಂದನ್ನು ಖರೀದಿಸಿದ್ದು, ಸದ್ಯದಲ್ಲಿಯೇ ಸೋನಂ ಕಪೂರ್ ಹಾಗೂ ಕುಟುಂಬ ಆ ಮನೆಗೆ ಶಿಫ್ಟ್ ಆಗಲಿದ್ದಾರೆ ಎಂದು ವರದಿ ಆಗಿದೆ.
ಬಾಲಿವುಡ್ ನಟಿ ಸೋನಂ ಕಪೂರ್ ಅವರ ಮಾವ (ಗಂಡನ ತಂದೆ) ಲಂಡನ್‌ನಲ್ಲಿ ಮಗ ಸೊಸೆಗಾಗಿ 8 ಅಂತಸ್ಥಿನ ಬೃಹತ್ ಮನೆಯೊಂದನ್ನು ಖರೀದಿಸಿದ್ದು, ಸದ್ಯದಲ್ಲಿಯೇ ಸೋನಂ ಕಪೂರ್ ಹಾಗೂ ಕುಟುಂಬ ಆ ಮನೆಗೆ ಶಿಫ್ಟ್ ಆಗಲಿದ್ದಾರೆ ಎಂದು ವರದಿ ಆಗಿದೆ. ಸೋನಂ ಕಪೂರ್ ಅವರ ಪತಿ ಉದ್ಯಮಿ ಆನಂದ್ ಅಹುಜಾ ಅವರ ತಂದೆ ಹರೀಶ್ ಅಹುಜಾ ಅವರು ಲಂಡನ್ ನಾಟಿಂಗ್ ಹಿಲ್‌ನಲ್ಲಿ 21 ಮಿಲಿಯನ್ ಯುರೋ ಬೆಲೆಯ ದುಬಾರಿ ಮನೆಯೊಂದನ್ನು ಖರೀದಿಸಿದ್ದಾರೆ. 21 ಮಿಲಿಯನ್ ಯುರೋ ಅಂದರೆ ಅಂದಾಜು 231.47 ಕೋಟಿ ಭಾರತೀಯ ರೂಪಾಯಿ ಮೌಲ್ಯದ್ದಾಗಿದೆ ಎಂದು ಅಮೆರಿಕಾದ ವಾಣಿಜ್ಯ ನಿಯತಕಾಲಿಕೆ ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಈ ಕಟ್ಟಡದ ನವೀಕರಣ ಮಾಡಿದ ನಂತರ ಉದ್ಯಮಿ ಆನಂದ್ ಆಹುಜಾ ಹಾಗೂ ನಟಿ ಸೋನಂ ಕಪೂರ್ ಅವರು ಆ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ವರದಿಯ ಪ್ರಕಾರ ಈ ಆಸ್ತಿಯೂ 20 ಸಾವಿರ ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಕೆನ್ಸಿಂಗ್ಟನ್ ಗಾರ್ಡನ್‌ನಿಂದ ಸ್ವಲ್ಪ ದೂರ ನಡೆದರೆ ಈ ಮನೆ ಸಿಗಲಿದೆ. ಈ ಆಸ್ತಿಯೂ ಈ ಹಿಂದೆ ಯುಕೆಯ ನೋಂದಾಯಿತ ಚಾರಿಟಿ ಹಾಗೂ ಧಾರ್ಮಿಕ ಸಮಿತಿಯ (registered charity and religious order) ಸುಪರ್ದಿಯಲ್ಲಿ ಇತ್ತು.
undefined
ಆಗರ್ಭ ಶ್ರೀಮಂತ ಉದ್ಯಮಿಗಳನ್ನ ಮದ್ವೆಯಾದ ಬಾಲಿವುಡ್ ಸ್ಟಾರ್ ನಟಿಯರಿವರು…
ಆದರೆ ಈ 8 ಅಂತಸ್ತುಗಳ ಬೃಹತ್ ಕಟ್ಟಡವನ್ನು ಹರೀಶ್ ಅಹುಜಾ ಅವರು ಕಳೆದ ವರ್ಷ ಜುಲೈನಲ್ಲೇ ಖರೀದಿಸಿದ್ದರು. ಈ ಆಸ್ತಿಯ ಒಂದು ಭಾಗವನ್ನು ಫ್ಲಾಟ್ ಆಗಿ ಬದಲಿಸಲಾಗಿದ್ದು, ಈ ಕಟ್ಟಡವನ್ನು ಮರು ಅಭಿವೃದ್ಧಿ ಮಾಡಿದ ನಂತರ ಸೋನಂ ಹಾಗೂ ಆನಂದ್ ಆಹುಜಾ ಆ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಸೋನಂ ಕಪೂರ್ 2018ರಲ್ಲಿ ಆನಂದ್ ಆಹುಜಾ ಅವರನ್ನು ಮದುವೆಯಾಗಿದ್ದು, 2022ರಲ್ಲಿ ಜೋಡಿ ಗಂಡು ಮಗು ವಾಯುವನ್ನು ಬರ ಮಾಡಿಕೊಂಡರು. ಮದುವೆಯಾದಾಗಿನಿಂದಲೂ ಸೋನಂ ಕಪೂರ್ ಕೆಲ ಕಾಲ ಲಂಡನ್‌ನಲ್ಲಿ ಮತ್ತೆ ಕೆಲ ಸಮಯ ಭಾರತದಲ್ಲಿ ಕಳೆಯುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಲಂಡನ್ ಬದುಕಿನ ಕೆಲ ತುಣುಕುಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡ್ತಿರ್ತಾರೆ.
ಅರ್ಕಿಟೆಕ್ಚರಲ್ ಡೈಜಿಸ್ಟ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸೋನಂ ಕಪೂರ್ ಮಾತನಾಡುತ್ತಾ ನಾಟಿಂಗ್ ಹಿಲ್‌ನಿಂದ ತನ್ನ ಮುಂಬೈ ಮನೆಗೆ ಮರಳುವ ಬಗ್ಗೆ ಅನುಮಾನವಿತ್ತು ಎಂದಿದ್ದರು. ಆದರೆ ಅವರು ಬಾಲಿವುಡ್‌ನಲ್ಲಿ ಮತ್ತೆ ನಟಿಸಲು ಸಜ್ಜಾಗುತ್ತಿರುವ ಕಾರಣ ಅವರು ಹೆಚ್ಚಿನ ಸಮಯ ಮುಂಬೈನಲ್ಲೇ ಕಳೆಯುವಂತಾಗಿದೆ.
ಸೋನಂ ಕಪೂರ್ ಕೊನೆಯದಾಗಿ 'ಬ್ಲೈಂಡ್'ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಒಂದು ಬ್ರೇಕ್‌ನ ನಂತರ ಸಿನಿಮಾಗೆ ಮರಳಲು ಬಯಸುವುದಾಗಿ ಹೇಳಿದ್ದ ಸೋನಂ ಮುಂದಿನ ವರ್ಷ ಶೂಟಿಂಗ್ ನಡೆಯಲಿದೆ ಎಂದಿದ್ದರು. ಆದರೆ ಇದರ ಹೊರತಾಗಿ ಅವರು ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ. ಕ್ಯಾಮರಾ ಎದುರಿಸಲು ನಾನು ತುಂಬಾ ಉತ್ಸುಕಳಾಗಿದ್ದೇನೆ. ಒಬ್ಬ ಕಲಾವಿದೆಯಾಗಿರುವುದನ್ನು ನಾನು ಇಷ್ಟಪಡುತ್ತೇನೆ. ಅಲ್ಲದೇ ನನ್ನ ವೃತ್ತಿಯಲ್ಲಿ ಹಲವು ಆಸಕ್ತಿಕರವಾದ ಪಾತ್ರಗಳಲ್ಲಿ ನಟಿಸಲು ಬಯಸುತ್ತೇನೆ ಎಂದು ಹೇಳಿದ್ದರು.
ನಾನು ಮುಂದಿನ ವರ್ಷ ಸೆಟ್‌ಗೆ ಮರಳುತ್ತೇನೆ. ಈ ಪ್ರಾಜೆಕ್ಟ್‌ನ ಬಗ್ಗೆ ನಾನು ಈಗ ಮಾತನಾಡಲು ಸಾಧ್ಯವಿಲ್ಲ. ಅದು ಇನ್ನಷ್ಟೇ ಘೋಷಣೆಯಾಗಬೇಕಿದೆ ಇದೊಂದು ದೊಡ್ಡ ಸಿನಿಮಾ ಈಗ ಇಷ್ಟೇ ನಾ ಹೇಳಬಲ್ಲೆ ಎಂದು ಹಳಿದ್ದಾರೆ. ಸೋನಂ ಕೊನೆಯದಾಗಿ ನಟಿಸಿದ್ದ ಬ್ಲೈಂಡ್ ಸಿನಿಮಾವೂ 2011ರ ಕೊರಿಯನ್ ಸಿನಿಮಾದ ರಿಮೇಕ್ ಆಗಿದ್ದು, ಸೋಮಿ ಮಖಿಜಾ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರೆ ಸುಜೊಯ್ ಘೋಶ್ ನಿರ್ಮಾಣ ಮಾಡಿದ್ದರು.