ಷೇರುಪೇಟೆಯಲ್ಲಿ ಇತಿಹಾಸ ಸೃಷ್ಟಿ! ಸೆನ್ಸೆಕ್ಸ್‌ 83000 ಅಂಕಗಳ ಗಡಿದಾಟಿದ್ದು ಇದೇ ಮೊದಲು!

By Suvarna NewsFirst Published Sep 13, 2024, 11:59 AM IST
Highlights

ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಗುರುವಾರ 1449 ಅಂಕಗಳ ಭಾರೀ ಏರಿಕೆ ಕಂಡು 83116 ಅಂಕಗಳಲ್ಲಿ ಮುಕ್ತಾಯವಾಗಿದೆ. 

ಮುಂಬೈ (ಸೆ.13): ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಗುರುವಾರ 1449 ಅಂಕಗಳ ಭಾರೀ ಏರಿಕೆ ಕಂಡು 83116 ಅಂಕಗಳಲ್ಲಿ ಮುಕ್ತಾಯವಾಗಿದೆ. 

ಸೆನ್ಸೆಕ್ಸ್‌ 83000 ಅಂಕಗಳ ಗಡಿದಾಟಿದ್ದು ಇದೇ ಮೊದಲು. ಇನ್ನೊಂದೆಡೆ ನಿಫ್ಟಿ ಕೂಡಾ 470 ಅಂಕ ಏರಿಕೆ ಕಂಡು 25433 ಅಂಕಗಳನ್ನು ತಲುಪಿತು. ಗುರುವಾರದ ಷೇರುಪೇಟೆ ಪರಿಣಾಮ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 6.59 ಲಕ್ಷ ಕೋಟಿ ರು.ನಷ್ಟು ಏರಿಕೆಯಾಗಿದೆ. ಅಮೆರಿಕದಲ್ಲಿ ಹಣದುಬ್ಬರ ಭೀತಿ ದೂರವಾಗಿದ್ದು, ಅಮೆರಿಕದ ಕೇಂದ್ರೀಯ ಬ್ಯಾಂಕ್ ಬಡ್ಡಿದರ ಕಡಿತ ಮಾಡುವ ಸುಳಿವು ಸಿಕ್ಕಿದ್ದು, ಭಾರತೀಯ ಷೇರುಪೇಟೆಯಲ್ಲಿ ವಿದೇಶಿ ಸಾಂಸ್ಥಿಕೆ ಹೂಡಿಕೆದಾರರ ಹೂಡಿಕೆ ಹೆಚ್ಚಿದ್ದು ಸೂಚ್ಯಂಕ ಹೆಚ್ಚಳಕ್ಕೆ ಕಾರಣವಾಯ್ತು ಎನ್ನಲಾಗಿದೆ. ಐಟಿ, ಬ್ಯಾಂಕಿಂಗ್‌, ಆಟೋಮೊಬೈಲ್‌, ಫಾರ್ಮಾ ವಲಯದ ಕಂಪನಿಗಳು ಉತ್ತಮ ಏರಿಕೆ ಕಂಡವು.

Latest Videos

ಹೂಡಿಕೆದಾರರ ಭಾರೀ ಖರೀದಿಯ ಹಿನ್ನಲೆಯಲ್ಲಿ ಬಿಎಸ್‌ಇ ಸೆನ್ಸೆಕ್ಸ್ 1600 ಪಾಯಿಂಟ್‌ಗಳ ಜಿಗಿದಿದ್ದು, ಮೊದಲ ಬಾರಿಗೆ 83000 ಅಂಕಗಳನ್ನು ದಾಟಿದೆ. ಎನ್‌ಎಸ್‌ಇ ನಿಫ್ಟಿ ಕೂಡ 500 ಅಂಕಗಳ ಜಿಗಿದು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 25,433 ಅಂಕಗಳನ್ನು ತಲುಪಿದೆ. ಎರಡೂ ಪ್ರಮುಖ ಸೂಚ್ಯಂಕಗಳು 1% ಕ್ಕಿಂತ ಹೆಚ್ಚಿನ ಲಾಭದೊಂದಿಗೆ ದಿನವನ್ನು ಮುಚ್ಚಿದವು.

Gold Silver Price Today: ನೀವೂ ಇನ್ನೂ ಚಿನ್ನ ಖರೀದಿಸಿಲ್ಲವಾ? ತಡಮಾಡಿ ಅವಕಾಶದಿಂದ ವಂಚಿತರಾಗಬೇಡಿ!

ನೆಸ್ಲೆ ಇಂಡಿಯಾವನ್ನು ಹೊರತುಪಡಿಸಿ, ನಿಫ್ಟಿ 50 ರಲ್ಲಿನ ಎಲ್ಲಾ ಷೇರುಗಳು ಹಸಿರು ಬಣ್ಣದಲ್ಲಿ ಕೊನೆಗೊಂಡವು. ಹಿಂಡಾಲ್ಕೊ ಇಂಡಸ್ಟ್ರೀಸ್, ಭಾರ್ತಿ ಏರ್‌ಟೆಲ್, ಎನ್‌ಟಿಪಿಸಿ, ಶ್ರೀರಾಮ್ ಫೈನಾನ್ಸ್, ಮಹೀಂದ್ರಾ ಮತ್ತು ಮಹೀಂದ್ರಾ ಶೇ.4.15 ರಷ್ಟು ಲಾಭ ಗಳಿಸಿ ಟಾಪ್ ಆಗಿವೆ.

ಸೆನ್ಸೆಕ್ಸ್ 30 ಪ್ಯಾಕ್‌ನಲ್ಲಿ, ನೆಸ್ಲೆ ಇಂಡಿಯಾ ಹೊರತುಪಡಿಸಿ ಎಲ್ಲಾ ಷೇರುಗಳು ಮುನ್ನಡೆದವು. ಇಲ್ಲಿ ಭಾರ್ತಿ ಏರ್‌ಟೆಲ್, ಎನ್‌ಟಿಪಿಸಿ, ಜೆಎಸ್‌ಡಬ್ಲ್ಯೂ ಸ್ಟೀಲ್, ಮಹೀಂದ್ರಾ ಮತ್ತು ಮಹೀಂದ್ರಾ ಮುನ್ನಡೆ ಸಾಧಿಸಿದ್ದು, ಶೇ.3.68ರಷ್ಟು ಧನಾತ್ಮಕವಾಗಿ ಕೊನೆಗೊಂಡಿತು. ಎಲ್ಲಾ ವಲಯದ ಸೂಚ್ಯಂಕಗಳು ಗುರುವಾರ ಸಕಾರಾತ್ಮಕ ಏರಿಕೆ ಕಂಡುಬಂತು.  ಬಿಎಸ್‌ಇ ಸೆನ್ಸೆಕ್ಸ್ 82,962 ಪಾಯಿಂಟ್‌ಗಳಲ್ಲಿ 1440 ಪಾಯಿಂಟ್‌ಗಳು ಅಥವಾ 1.77% ರಷ್ಟು ಏರಿಕೆ ಕಂಡರೆ, ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ನಿಫ್ಟಿ 470 ಪಾಯಿಂಟ್‌ಗಳು ಅಥವಾ 1.89% ಜಿಗಿತದಲ್ಲಿ 25,389 ಪಾಯಿಂಟ್‌ಗಳಲ್ಲಿ ಕೊನೆಗೊಂಡಿತು.

click me!