ಅಂಬಾನಿ ಕುಟುಂಬ ಏಷ್ಯಾದಲ್ಲೇ ಅತ್ಯಂತ ಶ್ರೀಮಂತ ಕುಟುಂಬ. ಈ ಕುಟುಂಬದ ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಮೆಹ್ತಾ ಅವರು ಪೃಥ್ವಿ ಹಾಗೂ ವೇದಾ ಎಂಬ ಇಬ್ಬರು ಮಕ್ಕಳಿಗೆ ಪೋಷಕರಾಗಿದ್ದು, ಮೊದಲು ಜನಿಸಿರುವ ಪ್ರೃಥ್ವಿ ಎಂದರೆ ಮನೆಯಲ್ಲಿ ಆಪಲ್ ರೀತಿ ಆಗಿದ್ದು, ಎಲ್ಲರೂ ಮುದ್ದಾಡುತ್ತಿರುತ್ತಾರೆ
ಮುಕೇಶ್ ಅಂಬಾನಿ ಮೊಮ್ಮಗ ಪೃಥ್ವಿಯ ಅಪರೂಪದ ಫೋಟೋವೊಂದು ವೈರಲ್ ಆಗಿದೆ. ಮುಕೇಶ್ ಅಂಬಾನಿ ಮಗ ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಮೆಹ್ತಾ ಮಗ ಪೃಥ್ವಿ ಬೆಕ್ಕೊಂದನ್ನು ಮುದ್ದಾಡುತ್ತಿರುವ ಫೋಟೋ ಇದಾಗಿದ್ದು ವೈರಲ್ ಆಗಿದೆ. ಅಂಬಾನಿ ಕುಟುಂಬ ಏಷ್ಯಾದಲ್ಲೇ ಅತ್ಯಂತ ಶ್ರೀಮಂತ ಕುಟುಂಬ. ಈ ಕುಟುಂಬದ ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಮೆಹ್ತಾ ಅವರು ಪೃಥ್ವಿ ಹಾಗೂ ವೇದಾ ಎಂಬ ಇಬ್ಬರು ಮಕ್ಕಳಿಗೆ ಪೋಷಕರಾಗಿದ್ದು, ಮೊದಲು ಜನಿಸಿರುವ ಪ್ರೃಥ್ವಿ ಎಂದರೆ ಮನೆಯಲ್ಲಿ ಆಪಲ್ ರೀತಿ ಆಗಿದ್ದು, ಎಲ್ಲರೂ ಮುದ್ದಾಡುತ್ತಿರುತ್ತಾರೆ. ಈ ಬಾಲಕ ತನ್ನ ಅಜ್ಜ ಅಜ್ಜಿಯ ಜೊತೆ ಹಾಗೂ ಪೋಷಕರ ಜೊತೆ ಆಗಾಗ ತನ್ನ ಶಾಲೆಯ ಬಳಿ ಕಾಣಿಸಿಕೊಳ್ಳುತ್ತಾನೆ.
ಅಂಬಾನಿ ಫ್ಯಾನ್ ಪೇಜೊಂದು ಇತ್ತೀಚೆಗೆ ತನ್ನ ಇನ್ಸ್ಟಾ ಪೇಜ್‌ನಲ್ಲಿ ಪೃಥ್ವಿ ಆಕಾಶ್ ಅಂಬಾನಿಯ ಫೋಟೋವೊಂದನ್ನು ಪೋಸ್ಟ್ ಮಾಡಿದ್ದು, ಪೃಥ್ವಿ ತನ್ನ ಶಾಲೆಯ ಬಳಿ ಇರುವ ಫೋಟೋ ಇದಾಗಿತ್ತು. ಇದರಲ್ಲಿ ತನ್ನ ಪ್ರೀತಿಯ ಬೆಕ್ಕಿನ ಮುದ್ದಾಟದಲ್ಲಿ ಬಾಲಕ ಕಳೆದು ಹೋಗಿದ್ದ, ಎಲ್ಲ ಮಕ್ಕಳಂತೆ ಮುಗ್ಧತೆ ತುಂಬಿದ್ದ ಪೃಥ್ವಿ ಫೋಟೋ ಸಖತ್ ವೈರಲ್ ಆಗಿತ್ತು.
undefined
ಉದ್ಯಮದಲ್ಲಿ ಅಪ್ಪನನ್ನೇ ಮೀರಿಸ್ತಾಳ ಮಗಳು! ಜರ್ಮನ್ ಬ್ಯೂಟಿ ಬ್ರಾಂಡ್ ಜೊತೆ ಒಪ್ಪಂದ ಮಾಡ್ಕೊಂಡ ಇಶಾ ಅಂಬಾನಿ
ಅಂಬಾನಿ ಅವರ ಬಹುಕೋಟಿ ಉದ್ಯಮದ ಭವಿಷ್ಯ ಎನಿಸಿರುವ ಪೃಥ್ವಿಯ ಭದ್ರತೆಯನ್ನು ಅಂಬಾನಿ ಕುಟುಂಬ ಯಾವತ್ತೂ ಹಗುರವಾಗಿ ತೆಗೆದುಕೊಂಡಿಲ್ಲ, 2022ರ ಮಾರ್ಚ್ 15 ರಂದು ಪೃಥ್ವಿ ತನ್ನ ನರ್ಸರಿ ತರಗತಿಗೆ ಸೇರಲು ಬಂದಾಗ ಅಲ್ಲಿ ಕುಟುಂಬದ ಸುತ್ತ ಭಾರಿ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಅಲ್ಲದೇ ಕೆಲ ಮೂಲಗಳ ಪ್ರಕಾರ, ಪೃಥ್ವಿ ಓದುವ ಶಾಲೆಯ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಆತನಿಗೆ ಭದ್ರತೆ ಏರ್ಪಡಿಸಲಾಗಿದೆ ಜೊತೆಗೆ ಆತನಿಗಾಗಿ ಸಮೀಪದಲ್ಲೇ ವೈದ್ಯರು ಕೂಡ ಇರುತ್ತಾರಂತೆ.
ಕಳೆದ ಡಿಸೆಂಬರ್‌ನಲ್ಲಷ್ಟೇ ಪೃಥ್ವಿಗೆ ಮೂರು ವರ್ಷ ತುಂಬಿದ್ದು, ಅಂಬಾನಿ ಕುಟುಂಬ ತಮ್ಮ ಕುಟುಂಬದ ಮೊದಲ ಕುಡಿಯ ಮೂರನೇ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಿದ್ದರು. ಪೃಥ್ವಿಗಾಗಿ ವಿಶೇಷವಾಗಿ ಕ್ಯಾಂಡಿಲ್ಯಾಂಡ್ ಥೀಮ್ ಆಧಾರದಲ್ಲಿ ತಯಾರಿಸಿದ್ದ ಕೇಕ್‌ನ ಫೋಟೋಗಳೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದವು.
ಖ್ಯಾತ ಕೇಕ್ ತಯಾರಕರಾದ ರುಶಿನಾ ಮೆಹ್ರೋತ್ರಾ ಅವರ ಡ್ಯಾಫೋಡಿಲ್ಸ್ ಪ್ಯಾಟಿಸ್ಸೆರಿಯಿಂದ ಈ ಕೇಕ್‌ನ್ನು ಸೂಕ್ಷ್ಮವಾಗಿ ನಿರ್ಮಿಸಲಾಗಿತ್ತು. ಇದು ಪಾರದರ್ಶಕ ಸ್ಟ್ಯಾಂಡ್‌ಗಳ ಮೇಲೆ ಇರಿಸಲಾದ ಕೆಲವು ಇತರ ಭಕ್ಷ್ಯಗಳೊಂದಿಗೆ ಮೂರು ಕೇಕ್‌ಗಳ ಸಂಪೂರ್ಣ ಸೆಟ್ ಅಪ್ ಆಗಿತ್ತು. ಮಧ್ಯದ ಕೇಕ್ ಐಸ್ ಕ್ರೀಮ್, ಆನೆ ಮತ್ತು ವಿಶಿಷ್ಟವಾದ ಕಾಲ್ಪನಿಕ ದೀಪಗಳಿಂದ ಅಲಂಕರಿಸಲ್ಪಟ್ಟ ಪದರವನ್ನು ಒಳಗೊಂಡಿರುವುದರ ಜೊತೆ ಬಹುಹಂತಗಳನ್ನು ಒಳಗೊಂಡಿತ್ತು. ಇದನ್ನು ಮತ್ತಷ್ಟು ಬಣ್ಣಬಣ್ಣದ ಲಾಲಿಪಾಪ್‌ಗಳಿಂದ ಅಲಂಕರಿಸಲಾಗಿತ್ತು.
4 ಕೋಟಿ ಮೌಲ್ಯದ ಕಾರ್‌ನಲ್ಲಿ ಆಕಾಶ್ ಅಂಬಾನಿ ರಣಬೀರ್ ಕಪೂರ್ ಸುತ್ತಾಟ; ಇವರ ಗೆಳೆತನ ಎಂಥದ್ದು ಗೊತ್ತಾ?