ಈ ವಹಿವಾಟುಗಳಿಗೆ ಕ್ಯಾಷ್​ ಕೊಟ್ರೆ ಬೀಳಲಿದೆ ಭಾರಿ ದಂಡ! ಕೊಟ್ಟಷ್ಟೇ ಹಣ ದಂಡ ಕಟ್ಬೇಕು ಎಚ್ಚರ: ಇಲ್ಲಿದೆ ಡಿಟೇಲ್ಸ್​

By Suchethana D  |  First Published Jan 9, 2025, 6:51 PM IST

ಈ ವಹಿವಾಟುಗಳಿಗೆ ಕ್ಯಾಷ್​ ಕೊಟ್ರೆ ಬೀಳಲಿದೆ ಭಾರಿ ದಂಡ! ಎಲ್ಲೆಲ್ಲೆ ನಗದು ಹಣ ಕೊಡಬಾರದು? ಕೊಟ್ಟರೆ ಎಷ್ಟು ದಂಡ ಕಟ್ಟಬೇಕು? ಇಲ್ಲಿದೆ ಡಿಟೇಲ್ಸ್​
 


ಡಿಜಿಟಲ್​ ಪೇಮೆಂಟ್​ ಎನ್ನುವುದು ಇದೀಗ ಎಲ್ಲೆಡೆ ವಿಸ್ತಾರವಾಗಿದೆ. ಚಿಕ್ಕಪುಟ್ಟ ವ್ಯವಹಾರಗಳಿಂದ ಹಿಡಿದು ದೊಡ್ಡ ದೊಡ್ಡ ವ್ಯವಹಾರಗಳಿಗೂ ಆನ್​ಲೈನ್​, ಡಿಜಿಟಲ್​ ವ್ಯವಹಾರಗಳೇ ನಡೆಯುತ್ತಿವೆ. ಇದರ ಮುಖ್ಯ ಉದ್ದೇಶಗಳಲ್ಲಿ ಒಂದು ಕಪ್ಪು ಹಣವನ್ನು ಹಿಡಿಯುವುದು ಕೂಡ ಆಗಿದೆ. ಅಕ್ರಮವಾಗಿ ಸಂಪಾದಿಸಿರುವ ಹಣವನ್ನು ಕ್ಯಾಷ್​ ರೂಪದಲ್ಲಿಯೇ ನೀಡುವುದು ಹಿಂದಿನಿಂದಲೂ ನಡೆದು ಬಂದಿದೆ. ಅಂಥವರು ಈಗಲೂ ಕಳ್ಳಮಾರ್ಗ ಹಿಡಿಯುವ ಪ್ರಯತ್ನದಲ್ಲಿ ಇದ್ದೇ ಇರುತ್ತಾರೆ. ಇಂಥ ಅಕ್ರಮಕ್ಕೆ ಕಡಿವಾಣ ಹಾಕಲು ಡಿಜಿಟಲ್​ ಪೇಮೆಂಟ್ ದೊಡ್ಡ ಕೊಡುಗೆಯಾಗಿದೆ. ಇದೇ ಕಾರಣಕ್ಕೆ ಕೆಲವೊಂದು ವ್ಯವಹಾರಗಳನ್ನು ಕ್ಯಾಷ್​ ರೂಪದಲ್ಲಿ ಅಂದರೆ ನಗದು ಹಣವನ್ನು ನೀಡಲು ಕಾನೂನು ನಿರ್ಬಂಧಿಸಿದೆ. ನೀವು ಒಂದು ವೇಳೆ ಆ ರೀತಿ ನಗದು ಹಣವನ್ನು ನೀಡಿದರೆ, ಎಷ್ಟು ಹಣವನ್ನು ಹೀಗೆ ವಹಿವಾಟು ಮಾಡಿದ್ದೀರೋ ಅಷ್ಟೇ ಪ್ರಮಾಣದ ದಂಡವನ್ನೂ ಕಟ್ಟಬೇಕಾಗುತ್ತದೆ, ಎಚ್ಚರ!

ನಗದು ವ್ಯವಹಾರಗಳು ಆದಾಯ ತೆರಿಗೆ ಕಾಯ್ದೆ, 1961 ರ ಅಡಿಯಲ್ಲಿ ಭಾರಿ ದಂಡಗಳಿಗೆ ಕಾರಣವಾಗುವ ಸಾಧ್ಯತೆ ಇದೆ.  ನಗದು ವಹಿವಾಟುಗಳು ನಿರ್ದಿಷ್ಟ ಮಿತಿಗಳನ್ನು ಮೀರಿದರೆ ಈ ದಂಡವನ್ನು ಪಾವತಿಸಬೇಕಾಗುತ್ತದೆ.  ಅದರೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಸಾಲಗಳು, ಠೇವಣಿಗಳು ಮತ್ತು ಮುಂಗಡ ಹಣವು 269SS ಸೆಕ್ಷನ್​ ವ್ಯಾಪ್ತಿಗೆ ಬರುತ್ತದೆ. ಒಂದು ವೇಳೆ ಯಾವುದೇ ವ್ಯಕ್ತಿಯು 20 ಸಾವಿರ  ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಒಳಗೊಂಡಿರುವ ಯಾವುದೇ ಸಾಲ, ಠೇವಣಿ ಅಥವಾ ಇತರ ನಿರ್ದಿಷ್ಟ ಮೊತ್ತವನ್ನು ನಗದು ರೂಪದಲ್ಲಿ ಸ್ವೀಕರಿಸಬಾರದು. ನಿರ್ದಿಷ್ಟ ಮೊತ್ತ ಎಂದರೆ ವರ್ಗಾವಣೆ ನಡೆದರೂ ಅಥವಾ ನಡೆಯದಿದ್ದರೂ ಸ್ಥಿರ ಆಸ್ತಿಯ ವರ್ಗಾವಣೆಗೆ ಸಂಬಂಧಿಸಿದಂತೆ ಮುಂಗಡವಾಗಿ ಅಥವಾ ಬೇರೆ ರೀತಿಯಲ್ಲಿ ಸ್ವೀಕರಿಸಬಹುದಾದ ಯಾವುದೇ ಹಣವೂ ಇದರ ವ್ಯಾಪ್ತಿಗೆ ಒಳಪಡುತ್ತದೆ.  ಆದ್ದರಿಂದ ಈ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ಕ್ಯಾಷ್​ ರೂಪದಲ್ಲಿ ಪಡೆಯುವಂತಿಲ್ಲ.

Tap to resize

Latest Videos

ಡಿಎಲ್​, ಆಧಾರ್​, ಪ್ಯಾನ್, ಮಾರ್ಕ್ಸ್​ ​​ ಕಾರ್ಡ್​... ವಾಟ್ಸ್​ಆ್ಯಪ್​ನಿಂದ್ಲೇ ಡೌನ್​ಲೋಡ್​ ಮಾಡೋದು ಹೇಗೆ? ಇಲ್ಲಿದೆ ಡಿಟೇಲ್ಸ್​
 
ಆದರೆ ಈ ನಿಯಮಕ್ಕೆ ಕೆಲವೊಂದು ವಿನಾಯಿತಿ ನೀಡಲಾಗಿದೆ. ಅದೇನೆಂದರೆ, ಸರ್ಕಾರದಿಂದ ಅಥವಾ ಅದರಿಂದ ಸ್ವೀಕರಿಸಲ್ಪಟ್ಟ ನಿಗದಿಪಡಿಸಿದ ಮೊತ್ತಗಳಿಗೆ ಈ ದಂಡದ ಆದೇಶ ಅನ್ವಯಿಸುವುದಿಲ್ಲ; ಬ್ಯಾಂಕಿಂಗ್ ಕಂಪನಿ, ಅಂಚೆ ಕಚೇರಿ ಉಳಿತಾಯ ಬ್ಯಾಂಕ್ ಅಥವಾ ಕೆಲವು ಸಹಕಾರಿ ಬ್ಯಾಂಕ್, ಕೇಂದ್ರ, ರಾಜ್ಯ ಅಥವಾ ಪ್ರಾಂತೀಯ ಕಾಯ್ದೆಯಿಂದ ಸ್ಥಾಪಿಸಲಾದ ನಿಗಮ, ಕಂಪೆನಿ ಕಾಯ್ದೆ, 2013 ರ ವಿಭಾಗ 2(45) ರಲ್ಲಿ ವ್ಯಾಖ್ಯಾನಿಸಲಾದ ಸರ್ಕಾರಿ ಕಂಪೆನಿ, ಅಧಿಸೂಚಿತ ಸಂಸ್ಥೆ, ಸಂಘ, ಪಾವತಿದಾರ ಮತ್ತು ಪಾವತಿ ಮಾಡುವವ ಇಬ್ಬರೂ ಕೃಷಿ ಆದಾಯವನ್ನು ಗಳಿಸುತ್ತಿದ್ದರೆ ಮತ್ತು ಅವರಿಬ್ಬರೂ ಆದಾಯ ತೆರಿಗೆ ಕಾಯ್ದೆ, 1961 ರ ಅಡಿಯಲ್ಲಿ ತೆರಿಗೆ ವಿಧಿಸಬಹುದಾದ ಯಾವುದೇ ಆದಾಯವನ್ನು ಹೊಂದಿಲ್ಲದಿದ್ದರೆ ಮೇಲಿನ ಆದೇಶವು ಅನ್ವಯಿಸುವುದಿಲ್ಲ.

 ಎರಡನೆಯದ್ದಾಗಿ,  2 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಕ್ಯಾಷ್​ ರೂಪದಲ್ಲಿ ಸ್ವೀಕರಿಸುವುದು ಕೂಡ ಅಪರಾಧ.  ಯಾವುದೇ ವ್ಯಕ್ತಿಯು ಒಂದು ದಿನದಲ್ಲಿ ಒಬ್ಬ ವ್ಯಕ್ತಿಯಿಂದ  2 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಒಂದೇ ವಹಿವಾಟಿನಲ್ಲಿ ಅಥವಾ ಒಂದು ಕಾರ್ಯಕ್ರಮಕ್ಕೆ ಲಿಂಕ್ ಮಾಡಲಾದ ಬಹು ವಹಿವಾಟುಗಳಿಗೆ ಸ್ವೀಕರಿಸಲು ಸಾಧ್ಯವಿಲ್ಲ. ಈ ನಿಯಮವು ಶುಲ್ಕಗಳು, ದೇಣಿಗೆಗಳು ಅಥವಾ ಸಂಬಂಧಿತ ಪಕ್ಷದ ವಹಿವಾಟುಗಳಿಗೂ ಅನ್ವಯಿಸುತ್ತದೆ. ಈ ಮಿತಿಯನ್ನು ಉಲ್ಲಂಘಿಸಿದರೆ ಸೆಕ್ಷನ್ 271DA ಅಡಿಯಲ್ಲಿ ಪಡೆದ ಮೊತ್ತಕ್ಕೆ ಸಮಾನವಾದ ದಂಡ ವಿಧಿಸಲಾಗುತ್ತದೆ. ಒಂದು ವೇಳೆ, ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಂದ ಶುಲ್ಕ ಸ್ವೀಕೃತಿ; ಧಾರ್ಮಿಕ ಸಂಸ್ಥೆಗಳಿಂದ ದೇಣಿಗೆಗಳ ನಡುವೆ ವಹಿವಾಟುಗಳು ಅಥವಾ ಪಾವತಿದಾರ ಮತ್ತು ಪಾವತಿ ಮಾಡುವವರ ಇಬ್ಬರೂ ತೆರಿಗೆ ಪಾವತಿಯಿಂದ ವಿನಾಯಿತಿ ಪಡೆದಿದ್ದರೆ ಈ ಆದೇಶವು ಈ ಕೆಳಗಿನವುಗಳಿಗೆ ಅನ್ವಯಿಸುವುದಿಲ್ಲ. 

ಇನ್ಮುಂದೆ ಮಕ್ಕಳ ಇನ್​ಸ್ಟಾ, ಎಫ್​ಬಿ... ಎಲ್ಲಾ ಖಾತೆಗಳಿಗೆ ಬ್ರೇಕ್​! ಏನಿದು ಹೊಸ ರೂಲ್ಸ್​? ಡಿಟೇಲ್ಸ್​ ಇಲ್ಲಿದೆ

click me!