ನ್ಯೂಯಾರ್ಕ್‌ ವರ್ಲ್ಡ್‌ ಸ್ಪಿರಿಟ್ಸ್‌ ಸ್ಪರ್ಧೆಯಲ್ಲಿ ವಿಶ್ವದ ಬೆಸ್ಟ್‌ ಸಿಂಗಲ್‌ ಮಾಲ್ಟ್‌ ಸ್ಕಾಚ್‌ ವಿಸ್ಕಿ ಎನಿಸಿದ Ardbeg!

By Santosh Naik  |  First Published Dec 4, 2024, 7:05 PM IST

ಸ್ಕಾಟ್ಲೆಂಡ್‌ನ ಆರ್ಡ್‌ಬೆರ್ಗ್ 17YO ಸಿಂಗಲ್ ಮಾಲ್ಟ್ ಸ್ಕಾಚ್ ವಿಸ್ಕಿ, ನ್ಯೂಯಾರ್ಕ್ ವರ್ಲ್ಡ್ ಸ್ಪಿರಿಟ್ಸ್ ಕಾಂಪಿಟೇಷನ್‌ನಲ್ಲಿ 'ಬೆಸ್ಟ್ ಡಿಸ್ಟಿಲ್ಲರ್ ಸಿಂಗಲ್ ಮಾಲ್ಟ್ ಸ್ಕಾಚ್ ವಿಸ್ಕಿ' ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ವಿಸ್ಕಿಯು ತನ್ನ ಸ್ಮೋಕಿ ಪರಿಮಳ, ಸಿಹಿ ಮತ್ತು ಕಡಲ ಸಾರದ ಮಿಶ್ರಣಕ್ಕೆ ಹೆಸರುವಾಸಿಯಾಗಿದೆ.


ನ್ಯೂಯಾರ್ಕ್‌ (ಡಿ.4): ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ನ್ಯೂಯಾರ್ಕ್‌ ವರ್ಲ್ಡ್‌ ಸ್ಪಿರಿಟ್ಸ್‌ ಕಾಂಪಿಟೇಷನ್‌ (ಎನ್‌ವೈಡ್ಲ್ಯುಎಸ್‌ಸಿ) ಫೈನಲ್‌ನಲ್ಲಿ ಮೂರು ಸಿಂಗಲ್‌ ಮಾಲ್ಟ್‌ ಸ್ಕಾಚ್‌ ವಿಸ್ಕಿಗಳು ಎಂಟ್ರಿ ಪಡೆದಿದ್ದವು. ಇನ್ನೂ ವಿಶೇಷವೇನೆಂದರೆ, ಫೈನಲ್‌ಗೆ ಲಗ್ಗೆ ಇಟ್ಟ ಮೂಸೂ ಸಿಂಗಲ್‌ ಮಾಲ್ಟ್‌ ಸ್ಕಾಚ್‌ ವಿಸ್ಕಿಗಳು ಸ್ಕಾಟ್ಕೆಂಡ್‌ ಮೂಲದ್ದವೇ ಆಗಿದ್ದವು. ಜಗತ್ತಿನಲ್ಲಿ ಐಕಾನಿಕ್‌ ಸ್ಕಾಚ್‌ ವಿಸ್ಕಿ ಉತ್ಪಾದಕ ದೇಶಗಳಲ್ಲಿ ಸದ್ಯಕ್ಕೆ ಸ್ಕಾಟ್ಲೆಂಡ್‌ಅನ್ನು ಮೀರಿಸೋ ದೇಶವಿಲ್ಲ. ಫೈನಲ್‌ಗೆ ಲಗ್ಗೆ ಇಟ್ಟ ಮೂರು ಡಿಸ್ಟಲ್ಲರಿಗಳ ಸಿಂಗಲ್‌ ಮಾಲ್ಟ್‌ ಸ್ಕಾಚ್‌ ವಿಸ್ಕಿಗಳ ಪೈಕಿ ಆರ್ಡ್‌ಬೆರ್ಗ್‌ 17ಯೋ, ಸಿಂಗಲ್‌ ಮಾಲ್ಟ್‌, ಬೆಸ್ಟ್‌ ಡಿಸ್ಟಿಲ್ಲರ್‌ ಸಿಂಗಲ್‌ ಮಾಲ್ಟ್‌ ಸ್ಕಾಚ್‌ ವಿಸ್ಕಿ ಅನ್ನೋ ಪ್ರಶಸ್ತಿ ಗೆದ್ದಿದೆ. ಆರ್ಡ್‌ಬೆರ್ಗ್‌ 17ಯೋ; ದ ಲಜೆಂಡ್‌ ರಿಟರ್ನ್ಸ್‌ ಸಿಂಗಲ್‌ ಮಾಲ್ಟ್‌ ಸ್ಕಾಚ್‌ 750 ಎಂಎಲ್‌ ಬಾಟಲ್‌ ಆಗಿದ್ದು, ಶೇ. 40ರಷ್ಟು ಆಲ್ಕೋಹಾಲ್‌  (ಎಬಿವಿ-ಆಲ್ಕೋಹಾಲ್‌ ಬೈ ವಾಲ್ಯುಮ್‌) ಕಂಟೆಂಟ್‌ಅನ್ನು ಹೊಂದಿದೆ.

ಆರ್ಡ್‌ಬೆಗ್ ಸ್ಕಾಟ್‌ಲ್ಯಾಂಡ್‌ನ ಇಸ್ಲೇ ದ್ವೀಪದಲ್ಲಿರುವ ಅತ್ಯಂತ ಪ್ರಸಿದ್ಧ ಡಿಸ್ಟಿಲರಿಗಳಲ್ಲಿ ಒಂದಾಗಿದೆ. ಇದರ ಸಿಗ್ನೇಚರ್‌ ಸ್ಮೋಕಿ ವೈಶಿಷ್ಠ್ಯ, ಸ್ವೀಟ್‌ನೆಸ್‌ ಹಾಗೂ ಕಡಲಸಾರದ ಹದವಾದ ಮಿಶ್ರಣವನ್ನು ಈ ಸ್ಕಾಚ್‌ ವಿಸ್ಕಿ ಸೆರೆಹಿಡಿದಿದೆ.

Tap to resize

Latest Videos

1815ರಲ್ಲಿ ಪ್ರಾರಂಭವಾದ ಡಿಸ್ಟಿಲ್ಲರಿ, ಸಾಕಷ್ಟು ಬಾರಿ ಮುಚ್ಚಿದರೂ ಜನರ ಮೆಚ್ಚುಗೆಯ ಕಾರಣದಿಂದ ಮರಳಿ ಓಪನ್‌ ಆಗಿದೆ. 20ನೇ ಶತಮಾನದ ಬಹುತೇಕ ಕಾಲ ಆರ್ಡ್‌ಬರ್ಗ್‌ ಡಿಸ್ಟಿಲ್ಲರಿ ಆರ್ಥಿಕ ಸಂಕಷ್ಟವನ್ನೇ ಎದುರಿಸಿತ್ತು. ಇದೇ ಕಾರಣಕ್ಕಾಗಿ ಹಲವು ಬಾರಿ ಈ ಡಿಸ್ಟಿಲ್ಲರಿ ಕ್ಲೋಸ್‌ ಆಗಿತ್ತು. 1997ರಲ್ಲಿ ಗ್ಲೆನ್ಮೊರಂಗಿ ಡಿಸ್ಟಿಲ್ಲರಿ ಆರ್ಡ್‌ಬಗ್‌ಅನ್ನು ಖರೀದಿ ಮಾಡಿ ಇದನ್ನು ಪುನರುಜ್ಜೀವನಗೊಳಿಸಿತ್ತು. ಮೋಟ್‌ ಹನೆಸ್ಸೆ ಲೂಯಿಸ್‌ ವಿಟಾff (ಎಲ್‌ವಿಎಂಎಚ್‌) ಈಗ ಈ ಎರಡೂ ಕಂಪನಿಗಳ ಮಾಲೀಕತ್ವ ಹೊಂದಿದ್ದಾರೆ.

ಹೆಸರು ಹೇಳೋಕೆ ಕಷ್ಟಪಡಬೇಕಾದ ಜಗತ್ತಿನ 5 ಅಪರೂಪದ ಸ್ಕಾಚ್ಸ್‌!

ಅಂದಿನಿಂದ ಆರ್ಡಬರ್ಗ್‌ ತನ್ನ ಕಲ್ಟ್‌ ವಿಸ್ಕಿಗಳನ್ನು ಉತ್ಸಾಹಿತರಿಗೆ ಮರಳಿ ಪರಿಚಯ ಮಾಡಿತ್ತು. ಈಗಾಗಲೇ ಹಲವು ಲಿಮಿಟೆಡ್‌ ಎಡಿಷನ್‌ಗಳ ವಿಸ್ಕಿಯನ್ನು ರಿಲೀಸ್‌ ಮಾಡಿದೆ. ಇವುಗಳಲ್ಲಿ ಹೆಚ್ಚಿನವು ಇಸ್ಲೇ ವಿಸ್ಕಿಯ ಬೋಲ್ಡ್‌, ಸ್ಮೋಕಿ ಮತ್ತು ಔಷಧೀಯ/ಫೀನಾಲಿಕ್ ಪಾತ್ರವನ್ನು ಒತ್ತಿಹೇಳುತ್ತವೆ. ಡಿಸ್ಟಿಲರಿಯು ನಾನ್-ಚಿಲ್-ಫಿಲ್ಟರ್ಡ್ ವಿಸ್ಕಿಗಳನ್ನು ತಯಾರಿಸುವಲ್ಲಿ ಸ್ವತಃ ಹೆಮ್ಮೆಪಡುತ್ತದೆ, ಇದು ಸಂಪೂರ್ಣ ಶ್ರೇಣಿಯ ನೈಸರ್ಗಿಕ ಪರಿಮಳವನ್ನು ಸಂರಕ್ಷಿಸುತ್ತದೆ.

ಮೇಡ್‌ ಇನ್‌ ಇಂಡಿಯಾ ವಿಸ್ಕಿಗೆ 'ಜಗತ್ತಿನ ಸರ್ವಶ್ರೇಷ್ಠ ವಿಸ್ಕಿ' ಎನ್ನುವ ಮನ್ನಣೆ!

ಬೆಂಗಳೂರಿನಲ್ಲಿ ಆರ್ಡ್‌ಬೆರ್ಗ್‌ 17ಯೋ; ದ ಲಜೆಂಡ್‌ ರಿಟರ್ನ್ಸ್‌ ಸಿಂಗಲ್‌ ಮಾಲ್ಟ್‌ ಸ್ಕಾಚ್‌ 750 ಎಂಎಲ್‌ ಬಾಟಲ್‌ ಬೆಲೆ 17, 811 ರೂಪಾಯಿ ಆಗಿದೆ. 


disclaimer: ಮದ್ಯಪಾನ ಆರೋಗ್ಯಕ್ಕೆ ಹಾನಿಕರ. 

click me!