ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವರ್ಷದ ಗಿಫ್ಟ್, ಒಂದೆ ಬಾರಿ ಖಾತೆಗೆ ಜಮೆ ಆಗಲಿದೆ 18 ತಿಂಗಳ ಡಿಎ!

By Chethan Kumar  |  First Published Dec 4, 2024, 7:01 PM IST

ಹೊಸ ವರ್ಷದ ತಯಾರಿಗಳು ಆರಂಭಗೊಂಡಿದೆ. ಹೊಸ ವರ್ಷಕ್ಕೆ ಉಡುಗೊರೆ, ಬೋನಸ್ ನೀಡಲು ಕೆಲ ಕಂಪನಿಗಳು ತಯಾರಿ ಮಾಡುತ್ತಿದೆ. ಇದರ ನಡುವೆ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಹೊಸ ವರ್ಷದ ಬಂಪರ್ ಗಿಫ್ಟ್ ನೀಡಲು ಸಜ್ಜಾಗಿದೆ. 18 ತಿಂಗಳ ಡಿಎ ಒಂದೆ ಬಾರಿಗೆ ಖಾತೆಗೆ ಜಮೆ ಆಗಲಿದೆ. 


ನವದೆಹಲಿ(ಡಿ.04) ಹೊಸ ವರ್ಷದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್ ಸಿಗಲಿದೆ. ಹೊಸ ವರ್ಷ ಬರಮಾಡಿಕೊಳ್ಳುವ ತಯಾರಿಗಳು ಎಲ್ಲೆಡೆ ಆರಂಭಗೊಂಡಿದೆ. ಇತ್ತ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಒಟ್ಟಿಗೆ 18 ತಿಂಗಳ ಡಿಎ ಮೊತ್ತವನ್ನು ಖಾತೆಗೆ ಜಮೆ ಮಾಡಲು ಮುಂದಾಗಿದೆ. ಒಂದೇ ಬಾರಿ ದೊಡ್ಡ  ಮೊತ್ತ ಖಾತೆ ಸೇರಲಿದೆ. ಹೌದು, ಕೇಂದ್ರ ಸರ್ಕಾರ ಹೊಸ ವರ್ಷದಲ್ಲಿ ಬಾಕಿ ಉಳಿಸಿರುವ ಕೇಂದ್ರ ಸರ್ಕಾರಿ ನೌಕರರ 18 ತಿಂಗಳ ದಿನ ಡಿಎ(ಡೈಲಿ ಅಲೋವೆನ್ಸ್) ಹಾಗೂ ಡಿಆರ್(ಡೆರ್‌ನೆಸ್ ರಿಲೀಫ್) ಒಟ್ಟಿಗೆ ಬಿಡುಗಡೆ ಮಾಡಲು ಮುಂದಾಗಿದೆ.

ನ್ಯಾಷನಲ್ ಕೌನ್ಸಿಲ್ ಕಾರ್ಯದರ್ಶಿ ಶಿವಗೋಪಾಲ್ ಮಿಶಅರಾ ಕುರಿತು ಮಹತ್ವದ ಸೂಚನೆಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ಶಿವಗೋಪಾಲ್ ಮಿಶ್ರಾ, ತ್ವರಿತವಾಗಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 2024ರ ಆರಂಭದಲ್ಲೇ ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿರುವ ಡಿಎ ಹಾಗೂ ಡಿಆರ್ ಬಿಡುಗಡೆಗೆ ಕಾರ್ಯಪ್ರವೃತ್ತವಾಗಿತ್ತು. ಆದರೆ ಲೋಕಸಭೆ ಚುನಾವಣೆ, ನೀತಿ ಸಂಹಿತೆ ಸೇರಿದಂತೆ ಹಲವು ಕಾರಣಗಳಿಂದ ಮತ್ತೆ ಬಾಕಿಯಾಗಿ ಉಳಿದಿತ್ತು.

Latest Videos

ಡೆಸ್ಕ್ ಮೇಲೆ ನಿದ್ದಿಗೆ ಜಾರಿದ ಉದ್ಯೋಗಿ ವಜಾ, ಕಾನೂನು ಹೋರಾಟದಲ್ಲಿ ಸಿಕ್ತು 4 ಕೋಟಿ ರೂ ಪರಿಹಾರ!

ಕೇಂದ್ರ ಸರ್ಕಾರಿ ನೌಕಕರಿಗೆ ಸಿಗಬೇಕಿರುವ ಬಾಕಿ ಡಿಎ ಹಾಗೂ ಡಿಆರ್ ಶೀಘ್ರದಲ್ಲೇ ಬಿಡುಗಡೆ ಮಾಡಬೇಕು. ಇದರಿಂದ ನೌಕರರು ಹಲವು ಸಂಕಷ್ಟ ಎದುರಿಸಿದ್ದಾರೆ. ಇನ್ನು ಬಾಕಿ ಉಳಿಸಿಕೊಂಡು ಮುಂದೆ ಸಾಗುವುದರಲ್ಲಿ ಅರ್ಥವಿಲ್ಲ. ನೌಕಕರ ಮತ್ತಷ್ಟು ಸಮಸ್ಯೆಗೆ ಸಿಲುಕುವ ಮೊದಲು ಬಾಕಿ ಉಳಿಸಿಕೊಂಡ 18 ತಿಂಗಳ ಹಣವನ್ನು ಕೂಡಲೇ ಅರ್ಹರ ಖಾತೆಗೆ ಜಮೆ ಮಾಡಲು ಪತ್ರದಲ್ಲಿ ಶಿವಗೋಪಾಲ್ ಮಿಶ್ರಾ ಮನವಿ ಮಾಡಿದ್ದಾರೆ. ಭಾರತದ ಆರ್ಥಿಕತೆಯಲ್ಲಿ 5ನೇ ಅತೀ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ಇತ್ತ ಹಲವು ಸವಾಲುಗಳನ್ನು ಮೆಟ್ಟಿ ನಿಂತಿದೆ. ಹೀಗಾಗಿ ಬಾಕಿ ಇರುವ ಮೊತ್ತವನ್ನು ಬಿಡುಗಡೆ ಮಾಡಿ ನೌಕಕರಿಗೆ ನೆರವಾಗಬೇಕು ಎಂದು ಕೋರಿದ್ದಾರೆ.

undefined

ಕೇಂದ್ರ ಸರ್ಕಾರಿ ನೌಕರರ ಡಿಎ ಹಾಗೂ ಡಿಆರ್ ಬಾಕಿ ಉಳಿದುಕೊಳ್ಳಲು ಕಾರಣ ಕೋರನಾ. ಕೊರೋನಾ ವಕ್ಕರಿಸಿದ ವೇಳೆ ಇಡೀ ದೇಶವೇ ತತ್ತರಿಸಿತ್ತು. ಆರ್ಥಿಕ ಸಂಕಷ್ಟ ಎದುರಿಸಿತ್ತು. ಈ ವೇಳೆ ಕೇಂದ್ರ ಸರ್ಕಾರ ನೌಕರರ ಡಿಎ, ಡಿಆರ್ ಮೊತ್ತವನ್ನು ಕಲ್ಯಾಣ ಯೋಜನೆಗೆ ಬಳಸಿಕೊಂಡಿತ್ತು. ಬರೋಬ್ಬರಿ 18 ತಿಂಗಳ ಮೊತ್ತ ಕಲ್ಯಾಣ ಯೋಜನೆಗಳಿಗೆ ಬಳಕೆ ಮಾಡಲಾಗಿತ್ತು. ಇದೀಗ ಈ ಮೊತ್ತವನ್ನು 2025ರ ಬಜೆಟ್‌ನಲ್ಲಿ ಬಾಕಿ ಉಳಿದ 18 ತಿಂಗಳ ಡಿಎ ಹಾಗೂ ಆರ್ ಪ್ರಕಟಣೆಯಾಗುವ ಸಾಧ್ಯತೆ ಇದೆ. 

2025ರ ಬಜೆಟ್‌ನಲ್ಲಿ ಈ ಮೊತ್ತ ಪ್ರಕಟಣೆಯಾದರೆ ಜೂನ್ ಅಥವಾ ಜುಲೈ ವೇಳೆಗೆ ನೌಕರರ ಖಾತೆಗೆ ಮೊತ್ತ ಜಮೆ ಆಗಲಿದೆ. 18 ತಿಂಗಳ ಮೊತ್ತ ಬಾಕಿ ಇರುವ ಕಾರಣ ಒಂದೇ ಬಾರಿ ದೊಡ್ಡ ಪ್ರಮಾಣದಲ್ಲಿ ಮೊತ್ತ ಜಮೆ ಮಾಡವು ಬದಲು 3 ಹಂತದಲ್ಲಿ  ಹಣ ಬಿಡುಗಡೆ ಮಾಡಲು ಸರ್ಕಾರ ಮುಂದಾಗಿದೆ. ಇದರಿಂದ ಕೇಂದ್ರ ಸರ್ಕಾರಕ್ಕೂ ಹೆಚ್ಚಿನ ಹೊರೆ ತಪ್ಪಲಿದೆ ಅನ್ನೋದು ಲೆಕ್ಕಾಚಾರ. ಈ ಕುರಿತು ಕೇಂದ್ರ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ. 

ಕೇಂದ್ರ ಸರ್ಕಾರಿ ನೌಕರರು ಇದೀಗ ಬಾಕಿ ಮೊತ್ತ ಹೊಸ ವರ್ಷಕ್ಕೆ ಸಿಗುವಂತಾಗಲಿ ಎಂದು ಆಗ್ರಹಿಸಿದ್ದಾರೆ. ಬಾಕಿ ಉಳಿಸಿಕೊಂಡಿರುವ  ಮೊತ್ತವನ್ನು ಡಿಸೆಂಬರ್ 2024ರ ಒಳಗೆ ಪಾವತಿ ಮಾಡಿದರೆ ಉತ್ತಮ. ಈಗಾಗಲೇ ಹಲವು ಸಮಸ್ಯೆಗಳು ಎದುರಾಗಿದೆ. ಹೀಗಾಗಿ ಮತ್ತೆ ಮುಂದೂಡಿದರೂ ಸಮಸ್ಯೆಗಳು ಹೆಚ್ಚಾಗಲಿದೆ ಎಂಬುದು ಸರ್ಕಾರಿ ನೌಕಕರ ಅಭಿಪ್ರಾಯವಾಗಿದೆ. 

ಮುಂದೇನು ಮಾಡಲಿ? ಬೆಳಗ್ಗೆ 5 ಗಂಟೆಗೆ ಬಂದ ಇಮೇಲ್‌ಗೆ ಕಾರು ಕಂಪನಿ ನಿರ್ದೇಶಕ ಕಂಗಾಲು!
 

click me!