ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫೇರ್‌ಫಾಕ್ಸ್ ಇಂಡಿಯಾ ತನ್ನ ಪಾಲನ್ನು ಶೇ.10ರಷ್ಟು ಹೆಚ್ಚಿಸಿಕೊಂಡಿದೆ. ಸೀಮನ್ಸ್‌ನಿಂದ ಷೇರುಗಳನ್ನು ಖರೀದಿಸುವ ಮೂಲಕ ಫೇರ್‌ಫಾಕ್ಸ್‌ನ ಒಟ್ಟು ಪಾಲು ಶೇ.74ಕ್ಕೆ ಏರಿಕೆಯಾಗಿದೆ.
ಬೆಂಗಳೂರು (ಡಿ.4): ಭಾರತದ ಅತ್ಯಂತ ಬ್ಯುಸಿಯೆಸ್ಟ್ ಏರ್‌ಪೋರ್ಟ್‌ಗಳಲ್ಲಿ ಒಂದಾಗಿರುವ ಬೆಂಗಳೂರಿನ ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ (BIAL) ಫೇರ್‌ಫಾಕ್ಸ್ ಇಂಡಿಯಾ ಹೋಲ್ಡಿಂಗ್ ಕಾರ್ಪೋರೇಷನ್ ತನ್ನ ಪಾಲನ್ನು ಶೇ.10ರಷ್ಟು ಏರಿಸಿಕೊಂಡಿದೆ. ಇಲ್ಲಿಯವರೆಗೂ ಬಿಐಎಎಲ್‌ನಲ್ಲಿ ಶೇ. 64ರಷ್ಟು ಪಾಲು ಹೊಂದಿದ್ದ ಫೇರ್‌ಫಾಕ್ಸ್ ಇಂಡಿಯಾ, ಸೀಮನ್ಸ್ ಕಂಪನಿಯಿಂದ ಶೇ.10ರಷ್ಟು ಪಾಲನ್ನು ಖರೀದಿ ಮಾಡಲಿದೆ. ಅದರೊಂದಿಗೆ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಫೇರ್‌ಫಾಕ್ಸ್ ಇಂಡಿಯಾದ ಪಾಲು ಶೇ. 74 ಆಗಲಿದೆ. ಒಟ್ಟಾರೆ 2.55 ಬಿಲಿಯನ್ ಯುಎಸ್ ಡಾಲರ್ ಅಂದರೆಸ 2160 ಕೋಟಿ ರೂಪಾಯಿ ಮೌಲ್ಯದ ವ್ಯವಹಾರ ಇದಾಗಿದೆ. ಮುಂದಿನ ಮಾರ್ಚ್ ತ್ರೈಮಾಸಿಕದ ವೇಳೆ ಈ ವ್ಯವಹಾರ ಸಂಪೂರ್ಣವಾಗಿ ಮುಗಿಯಲಿದ್ದು, ಇದರೊಂದಿಗೆ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕೆನಡಾದ ಟೊರೊಂಟೂ ಮೂಲದ ಕಂಪನಿಯ ಹಿಡಿತ ಇನ್ನಷ್ಟು ಹಚ್ಚಾಗಲಿದೆ. ಫೇರ್‌ಫ್ಯಾಕ್ಸ್ ಇಂಡಿಯಾವು ಜರ್ಮನಿ ಮೂಲದ ಸೀಮೆನ್ಸ್ ಫೈನಾನ್ಶಿಯಲ್ ಸರ್ವೀಸಸ್‌ನ ಭಾಗವಾದ ಸೀಮೆನ್ಸ್ ಪ್ರಾಜೆಕ್ಟ್ ವೆಂಚರ್ಸ್ ಜಿಎಂಬಿಹೆಚ್‌ನಿಂದ ಹೆಚ್ಚುವರಿ ಇಕ್ವಿಟಿಯನ್ನು ಪಡೆದುಕೊಳ್ಳಲಿದೆ ಎಂದು ಕಂಪನಿಯು ಡಿಸೆಂಬರ್ 3 ರಂದು ತಿಳಿಸಿದೆ.
"ಬಿಐಎಎಲ್‌ನಲ್ಲಿನ ಈ ಹೆಚ್ಚುವರಿ ಹೂಡಿಕೆಯು ಅದರ ಮುಂದುವರಿದ ಬೆಳವಣಿಗೆಯಲ್ಲಿ ನಮ್ಮ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಮತ್ತು ವಿಮಾನ ನಿಲ್ದಾಣದ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಹರಿ ಮಾರಾರ್ ಮತ್ತು ಅವರ ನಿರ್ವಹಣಾ ತಂಡದ ಅತ್ಯುತ್ತಮ ದಾಖಲೆಯನ್ನು ಪ್ರತಿಬಿಂಬಿಸುತ್ತದೆ" ಎಂದು BIAL ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಉಲ್ಲೇಖಿಸಿ ಫೇರ್‌ಫ್ಯಾಕ್ಸ್ ಇಂಡಿಯಾ ಸಂಸ್ಥಾಪಕ ಕೆನಡಾದ ಕೋಟ್ಯಧಿಪತಿ ಪ್ರೇಮ್ ವಾತ್ಸಾ ತಿಳಿಸಿದ್ದಾರೆ. ಫೇರ್‌ಫ್ಯಾಕ್ಸ್ ಇಂಡಿಯಾ ಜನವರಿ 2025 ರಲ್ಲಿ ನಡೆಯಲಿರುವ ವಿಶೇಷ ಸಭೆಯಲ್ಲಿ ವಹಿವಾಟಿಗೆ ಷೇರುದಾರರ ಅನುಮೋದನೆಯನ್ನು ಪಡೆಯಲು ಯೋಜಿಸಿದೆ.
ಈ ವ್ಯವಹಾರ ಅಂತ್ಯಗೊಂಡ ಬಳಿಕ, ಬಿಐಎಎಲ್‌ನಲ್ಲಿ ಫೇರ್‌ಫಾಕ್ಸ್ ಇಂಡಿಯಾ ಶೇ.74 ಪಾಲು ಹೊಂದಿದೆ. ಇದರಲ್ಲಿ ಫೇರ್‌ಫಾಕ್ಸ್ ಇಂಡಿಯಾ ಶೇ. 30.4ರಷ್ಟು ಪಾಲು ಹೊಂದಿದ್ದರೆ, ಇದರ ಅಂಗಸಂಸ್ಥೆಯಾಗಿರುವ ಆಂಕಾರೇಜ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್ ಬರೋಬ್ಬರಿ 43.6್ಟು ಪಾಲು ಹೊಂದಲಿದೆ.
ತಿನ್ನೋಕೆ ಆಹಾರವಿಲ್ಲದೆ ಉಪವಾಸದ ದಿನ ಕಳೆದ ವ್ಯಕ್ತಿ, ಇಂದು ಒಂದು ಸಿನಿಮಾಗೆ ಪಡೆಯೋ ಸಂಭಾವನೆ ಕೋಟಿ-ಕೋಟಿ!
ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಹಾಗೂ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಐಐಡಿಸಿ) ತಲಾ ಶೇ. 13ಷ್ಟು ಪಾಲು ಹೊಂದಿದ್ದು, ಇದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಬೆಂಗಳೂರಿಗೆ NHAI ನಿರ್ಮಾಣ ಮಾಡಲಿದೆ ಹೊಸ ಫ್ಲೈ ಓವರ್!
ಬೆಂಗಳೂರಿನಲ್ಲಿರುವ ಖಾಸಗಿ ಕಂಪನಿಯಾದ ಬಿಐಎಎಲ್, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು (ಕೆಐಎಬಿ) ಅನ್ನು ಕೇಂದ್ರದೊಂದಿಗೆ ರಿಯಾಯಿತಿ ಒಪ್ಪಂದದ ಅಡಿಯಲ್ಲಿ ನಿರ್ವಹಿಸುತ್ತದೆ. ಕೆಂಪೇಗೌಡ ವಿಮಾನ ನಿಲ್ದಾಣ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಅಭಿವೃದ್ಧಿಪಡಿಸಿದ ಭಾರತದ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವಾಗಿದೆ. ಒಪ್ಪಂದವು BIAL ಗೆ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು, ವಿನ್ಯಾಸಗೊಳಿಸಲು, ಹಣಕಾಸು ಮಾಡಲು, ನಿರ್ಮಿಸಲು, ನಿರ್ವಹಿಸಲು, ನಿರ್ವಹಿಸಲು ಮತ್ತು ನಿರ್ವಹಿಸಲು ವಿಶೇಷ ಹಕ್ಕುಗಳನ್ನು ನೀಡುತ್ತದೆ.