ಅಯೋಧ್ಯೆ ರಾಮ ಮಂದಿರ ಪ್ರಸಾದ ಎಂದು ಸಿಹಿತಿಂಡಿ ಮಾರಾಟ ಮಾಡ್ತಿರೋ ಅಮೆಜಾನ್: ಕೇಂದ್ರ ಸರ್ಕಾರ ನೋಟಿಸ್‌

By BK Ashwin  |  First Published Jan 20, 2024, 6:17 PM IST

ಅಯೋಧ್ಯೆಯಲ್ಲಿ ಇನ್ನೂ ಉದ್ಘಾಟನೆಗೊಳ್ಳದ ರಾಮ ಮಂದಿರ ಪ್ರಸಾರವೆಂದು ಸಿಹಿತಿಂಡಿಗಳನ್ನು ಮಾರಾಟ ಮಾಡುವ ಮೂಲಕ ಗ್ರಾಹಕರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಅಮೆಜಾನ್‌ ವಿರುದ್ಧ ದೂರು ನೀಡಿದೆ. 


ನವದೆಹಲಿ (ಜನವರಿ 20, 2024): ಇ-ಕಾಮರ್ಸ್ ದೈತ್ಯ ಅಮೆಜಾನ್ ಶ್ರೀರಾಮ ಮಂದಿರ ಅಯೋಧ್ಯಾ ಪ್ರಸಾದ ಹೆಸರಿನಲ್ಲಿ ಸಿಹಿತಿಂಡಿಗಳ ಮಾರಾಟ ಮಾಡ್ತಿರೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೋಟಿಸ್‌ ಜಾರಿ ಮಾಡಿದೆ. ಅಮೆಜಾನ್‌ "ವಂಚಕ ವ್ಯಾಪಾರ ಅಭ್ಯಾಸ"ದಲ್ಲಿ ತೊಡಗಿದೆ ಎಂದು ಆರೋಪಿಸಿ ನೋಟಿಸ್‌ ನೀಡಿದೆ. 

ಅಯೋಧ್ಯೆಯಲ್ಲಿ ಇನ್ನೂ ಉದ್ಘಾಟನೆಗೊಳ್ಳದ ರಾಮ ಮಂದಿರ ಪ್ರಸಾರವೆಂದು ಸಿಹಿತಿಂಡಿಗಳನ್ನು ಮಾರಾಟ ಮಾಡುವ ಮೂಲಕ ಗ್ರಾಹಕರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಸಲ್ಲಿಸಿದ ದೂರಿಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಜಾರಿಯಾಗಿದೆ ಎಂದು ತಿಳಿದುಬಂದಿದೆ.

Tap to resize

Latest Videos

ಇದನ್ನು ಓದಿ: ಮಲ್ಟಿಪ್ಲೆಕ್ಸ್‌ನಲ್ಲೂ ರಾಮಮಂದಿರ ಲೋಕಾರ್ಪಣೆ ಲೈವ್‌ಸ್ಟ್ರೀಮ್‌ಗೆ ಅವಕಾಶ: PVR INOXನಲ್ಲಿ ನೇರ ಪ್ರಸಾರ

ಇಂತಹ ಅಭ್ಯಾಸಗಳು ಉತ್ಪನ್ನಗಳ ನಿಜವಾದ ಗುಣಲಕ್ಷಣಗಳ ಬಗ್ಗೆ ಗ್ರಾಹಕರನ್ನು ತಪ್ಪುದಾರಿಗೆಳೆಯುತ್ತವೆ, ತಪ್ಪಾದ ಪ್ರಾತಿನಿಧ್ಯಗಳ ಆಧಾರದ ಮೇಲೆ ಅವರ ಖರೀದಿ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತವೆ ಎಂದೂ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಆರೋಪಿಸಿದೆ.

ಅಲ್ಲದೆ, ಉತ್ಪನ್ನದ ನಿಜವಾದ ಗುಣಲಕ್ಷಣಗಳ ಬಗ್ಗೆ ಗ್ರಾಹಕರನ್ನು ತಪ್ಪುದಾರಿಗೆಳೆಯುವುದರಿಂದ ಆನ್‌ಲೈನ್‌ನಲ್ಲಿ ಆಹಾರ ಉತ್ಪನ್ನಗಳ ಮಾರಾಟ ಮಾಡಿದಂತಾಗುತ್ತದೆ. ಉತ್ಪನ್ನದ ನಿಖರವಾದ ಗುಣಲಕ್ಷಣಗಳನ್ನು ಉಲ್ಲೇಖಿಸಿದ್ದರೆ ಗ್ರಾಹಕ ಖರೀದಿಸಲು ಬೇಡ ಎನ್ನುತ್ತಿದ್ದ ವಸ್ತುಗಳನ್ನು ಗ್ರಾಹಕರನ್ನು ತಪ್ಪಾಗಿ ಪ್ರಭಾವಿಸುವ ಮೂಲಕ ಖರೀದಿ ನಿರ್ಧಾರ ಮಾಡುತ್ತಾರೆ ಎಂದೂ ಸಿಸಿಪಿಎ ಪ್ರಕಟಣೆಯಲ್ಲಿ ತಿಳಿಸಿದೆ.

ಅಯೋಧ್ಯೆಯಲ್ಲಿ ಕನ್ನಡದ ಕಲರವ: ರಾಮನೂರಿನಲ್ಲಿ ಹಲವು ಕನ್ನಡಿಗರ ಸೇವೆ

ಅಮೆಜಾನ್‌ನ ಪ್ಲಾಟ್‌ಫಾರ್ಮ್‌ನಲ್ಲಿ ಪಟ್ಟಿ ಮಾಡಲಾದ ನಿರ್ದಿಷ್ಟ ಉತ್ಪನ್ನಗಳಲ್ಲಿ 'ಶ್ರೀ ರಾಮಮಂದಿರ ಅಯೋಧ್ಯಾ ಪ್ರಸಾದ್ - ರಘುಪತಿ ತುಪ್ಪದ ಲಾಡೂ, ಅಯೋಧ್ಯಾ ರಾಮಮಂದಿರ ಅಯೋಧ್ಯಾ ಪ್ರಸಾದ್, ಖೋಯಾ ಖೋಬಿ ಲಾಡೂ, ರಾಮಮಂದಿರ ಅಯೋಧ್ಯಾ ಪ್ರಸಾದ್ - ದೇಸಿ ಹಸುವಿನ ಹಾಲಿನ ಪೇಡಾ’ ಸಹ ಸೇರಿದೆ ಎಂದು ತಿಳಿದುಬಂದಿದೆ.

CCPA ನೀಡಿದ ನೋಟಿಸ್‌ಗೆ ಪ್ರತಿಕ್ರಿಯಿಸಲು ಅಮೆಜಾನ್‌ಗೆ 7 ದಿನಗಳ ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ ಪ್ರತಿಕ್ರಿಯೆ ನೀಡಲು ವಿಫಲವಾದರೆ ಗ್ರಾಹಕ ಸಂರಕ್ಷಣಾ ಕಾಯ್ದೆ, 2019 ರ ನಿಬಂಧನೆಗಳ ಅಡಿಯಲ್ಲಿ ಕಂಪನಿಯ ವಿರುದ್ಧ ಅಗತ್ಯ ಕ್ರಮಗಳನ್ನು ಪ್ರಾರಂಭಿಸಲಾಗುತ್ತದೆ ಎಂದೂ ಎಚ್ಚರಿಸಲಾಗಿದೆ.

ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾನಕ್ಕೂ ಮುನ್ನ ಕಟ್ಟುನಿಟ್ಟಾದ ಆಚರಣೆ; ಹಲವು ದೇಗುಲಗಳಿಗೆ ಭೇಟಿ ನೀಡ್ತಿರೋ ಮೋದಿ..

ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರ ಲೋಕಾರ್ಪಣೆಯಾಗುತ್ತಿದ್ದು, ಪ್ರದಾನಿ ಮೋದಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ಮಾಡಲಿದ್ದಾರೆ. 

click me!