ವ್ಯವಹಾರದಲ್ಲಿ 17 ಸಾರಿ ಸೋತರೂ ಎದ್ದು ನಿಂತ ವ್ಯಕ್ತಿ, ಈಗ ಕಂಪನಿ ಮೌಲ್ಯ 40 ಸಾವಿರ ಕೋಟಿ!

By Suvarna NewsFirst Published Jan 20, 2024, 4:41 PM IST
Highlights

ಬ್ಯುಸಿನೆಸ್ ನಲ್ಲಿ ಲಾಭ – ನಷ್ಟಗಳು ಸಾಮಾನ್ಯ. ಕೆಲವೊಮ್ಮೆ ಎದ್ದು ನಿಲ್ಲಲಾರದಷ್ಟು ನಿರಾಸೆಯಾಗುತ್ತದೆ. ಇದಕ್ಕೆ ಸೋತು ಅನೇಕರು ತಮ್ಮ ಆಲೋಚನೆ ಬದಲಿಸ್ತಾರೆ. ಆದ್ರೆ ಇವರೆಲ್ಲರಿಗಿಂತ ಭಿನ್ನವಾಗಿ ನಿಲ್ತಾರೆ ಈ ಅಂಕುಶ್. 
 

ಸತತ ಸೋಲಿನ ಹಿಂದೆ ಯಶಸ್ಸು ಇದ್ದೇ ಇರುತ್ತೆ ಎನ್ನುವ ಮಾತಿದೆ. ಎಷ್ಟು ಬಾರಿ ಸೋತರೂ ಮತ್ತೆ ಎದ್ದು ನಿಂತು ಹೋರಾಟ ಮಾಡುವ ಶಕ್ತಿ ಅನೇಕರಿಗೆ ಇರೋದಿಲ್ಲ. ಒಂದು ಬಾರಿ ಸೋತಾಗಲೇ ನಿರಾಶೆಗೊಳ್ಳವ ಜನರು ಮತ್ತೆ ಅದಕ್ಕೆ ಕೈ ಹಾಕಲು ಹೋಗೋದಿಲ್ಲ. ಕೈನಲ್ಲೊಂದು ಕೆಲಸವಿದೆ ಎಂದಾಗ ಅದನ್ನು ಬಿಟ್ಟು ಸೋಲಿನ ಕೆಲಸಕ್ಕೆ ಯಾರು ಇಳಿತಾರೆ. ಅದೂ ಒಂದಲ್ಲ ಎರಡಲ್ಲ ಅನೇಕ ಸೋಲುಗಳು ಎದುರಾದ್ರೂ ಮತ್ತೆ ಕೆಲಸಕ್ಕೆ ಹೋಗದೆ ವ್ಯವಾಹರ ಶುರು ಮಾಡುವ ಛಲ ಬಿಡದೆ ಹೋರಾಡುವವರು ಬಹಳ ವಿರಳ. ಅದರಲ್ಲಿ ಅಂಕುಶ್ ಸಚ್ ದೇವ್ ಸೇರಿದ್ದಾರೆ. ಒಳ್ಳೆ ಕೆಲಸವಿದ್ರೂ ಅದ್ರಲ್ಲಿ ತೃಪ್ತಿಕಾಣದ ಅಂಕುಶ್ ಬರೋಬ್ಬರಿ ಹದಿನೇಳು ಸ್ಟಾರ್ಟ್ ಅಪ್ ನಲ್ಲಿ ಸೋಲು ಕಂಡಿದ್ದಾರೆ. ಆದ್ರೂ ಪ್ರಯತ್ನ ಬಿಡಲಿಲ್ಲ. ಅವರ ಹದಿನೆಂಟನೇ ಸ್ಟಾರ್ಟ್ ಅಪ್ ಅವರನ್ನು ಎತ್ತು ನಿಲ್ಲಿಸಿದೆ. 40 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ ಅಂಕುಶ್ ಸಚ್ ದೇವ್.

ಅಂಕುಶ್ ಐಐಟಿಯಿಂದ ಪದವಿ ಪಡೆದ ಮೇಲೆ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರು. ಅಂಕುಶ್ ಸಚ್‌ದೇವ 2015 ರಲ್ಲಿ ಐಐಟಿ ಕಾನ್ಪುರದಿಂದ (IIT Kanpur) ಪದವಿ ಪಡೆದರು.  ಅವರು ಸೋಮರ್‌ವಿಲ್ಲೆ ಶಾಲೆಯಲ್ಲಿ 12 ನೇ ತರಗತಿ ಮುಗಿಸಿದ್ದರು. ಅಂಕುಶ್ 2014 ರ ಮೇ ನಿಂದ ಜುಲೈ ವರೆಗೆ ಮೈಕ್ರೋಸಾಫ್ಟ್‌ನಲ್ಲಿ ಇಂಟರ್ನ್ ಆಗಿ ಕೆಲಸ ಮಾಡಿದ್ದರು. ದೊಡ್ಡ ದೊಡ್ಡ ಕಂಪನಿಗಳಿಂದ ಅವರಿಗೆ ಆಫರ್ ಬಂದಿತ್ತು.  ಆದ್ರೆ ಈ ಆಫರನ್ನು ಸ್ವೀಕರಿಸಿ ಕೆಲಸ ಮಾಡುವ ಆಸಕ್ತಿ ಅವರಿಗೆ ಇರಲಿಲ್ಲ. ತಮ್ಮದೇ ಕೆಲಸ ಮಾಡುವ ಕನಸು ಕಂಡಿದ್ದ ಅವರು ಕೆಲಸ ಬಿಟ್ಟು ಸ್ಟಾರ್ಟ್ ಅಪ್ ಶುರು ಮಾಡಿದ್ರು. ಒಂದಾದ್ಮೇಲೆ ಒಂದರಂತೆ ಅವರ ಸ್ಟಾರ್ಟ್ ಅಪ್ ಗಳು ನಷ್ಟ ಅನುಭವಿಸಿದ್ವು. ಸತತ ಹದಿನೇಳು ಸ್ಟಾರ್ಟ್ ಅಪ್ ನಿಂದಲೂ ಗೆಲುವು ಸಾಧ್ಯವಾಗಲಿಲ್ಲ. ಇದರಿಂದ ಅಂಕುಶ್ ಹಿಂದೆ ಸರಿಯಲಿಲ್ಲ. ಕನಸನ್ನು ಕೈಚೆಲ್ಲಿ ಕೂರಲಿಲ್ಲ. ತಮ್ಮ ಇಬ್ಬರು ಗೆಳೆಯರ ಜೊತೆ ಸೇರಿ ಸಾಧಿಸಿ ತೋರಿಸಿದ್ದಾರೆ. ಈಗ ಅವರ ವ್ಯವಹಾರ ಅಮೆರಿಕ ಮತ್ತು ಯುರೋಪ್ ಸೇರಿದಂತೆ ಪ್ರಪಂಚದ ಎಲ್ಲಾ ದೇಶಗಳಿಗೆ ಹರಡಿದೆ.

Latest Videos

500 ರೂಪಾಯಿ ನೋಟಿನಲ್ಲಿ ರಾಮನ ಭಾವಚಿತ್ರ? ವದಂತಿಗೆ ಬ್ರೇಕ್‌, ಇಲ್ಲಿದೆ ಸತ್ಯಾಸತ್ಯತೆ!

ಅಂಕುಶ್ ಸಚ್ ದೇವ್ ಶುರು ಮಾಡಿದ ಕಂಪನಿ ಯಾವುದು? : ಫರೀದ್ ಅಹ್ಸಾನ್ ಮತ್ತು ಭಾನು ಸಿಂಗ್ ಜೊತೆಗೂಡಿ ಅಂಕುಶ್ , ಶೇರ್ಚಾಟ್ ಅಪ್ಲಿಕೇಶನ್  ರಚಿಸಿದ್ದಾರೆ. ಹೊಸದನ್ನು ಮಾಡಲು ಆಸಕ್ತಿ ಇರುವ ಜನರನ್ನು ಇವರು ಫೇಸ್ಬುಕ್ ಹಾಗೂ ವಾಟ್ಸ್ ಅಪ್ ಮೂಲಕ ಸಂಪರ್ಕಿಸಿ ಕೆಲಸ ಶುರು ಮಾಡಿದರು. ಜನವರಿ 2015 ರಲ್ಲಿ  ಶೇರ್‌ಚಾಟ್‌ನ ಮೂಲ ಕಂಪನಿ ಮೊಹಲ್ಲಾ ಟೆಕ್ ಪ್ರೈವೇಟ್ ಲಿಮಿಟೆಡ್ ಶುರುವಾಯ್ತು. ಶೇರ್‌ಚಾಟ್ ಅಕ್ಟೋಬರ್ 2015 ರಲ್ಲಿ ಅಧಿಕೃತವಾಗಿ ಪ್ರಾರಂಭಿಸಲಾಯಿತು. ಅಂಕುಶ್ ಶೇರ್ ಚಾಟ್ ನ ಸಿಇಒ ಆಗಿದ್ದಾರೆ. ಶೇರ್ ಚಾಟ್ ಆರಂಭದಲ್ಲಿ  ಹಿಂದಿ, ಮರಾಠಿ, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಪ್ರಾರಂಭಿಸಲಾಯಿತು. ಈಗ ಭಾರತದ ಬಹುತೇಕ ಭಾಷೆಯಲ್ಲಿ ಶೇರ್ ಚಾಟ್ ಲಭ್ಯವಿದೆ. ಶೇರ್‌ಚಾಟ್‌ನ ಪ್ರಧಾನ ಕಚೇರಿ ಬೆಂಗಳೂರಿನಲ್ಲಿದೆ.

ಬಿಲಿಯನೇರ್ ಅಂಬಾನಿ ನಷ್ಟದಲ್ಲಿದ್ದಾರಾ, ಕೋಟಿ ಕೋಟಿ ಬೆಲೆಬಾಳೋ ಕಂಪೆನೀನ ಮಾರ್ತಿರೋದ್ಯಾಕೆ?

ಇಷ್ಟು ಜನರಿಗೆ ಕೆಲಸ ಕೊಟ್ಟಿದೆ ಶೇರ್ ಚಾಟ್ : ಭಾರತದ ಪ್ರಸಿದ್ಧ ಅಪ್ಲಿಕೇಷನ್ ಗಳಲ್ಲಿ ಶೇರ್ ಚಾಟ್ ಕೂಡ ಸೇರಿದೆ. ಈ ಅಪ್ಲಿಕೇಶನ್‌ ಕೋಟಿಗಟ್ಟಲೆ ಬಳಕೆದಾರರನ್ನು ಹೊಂದಿದೆ. ಕಂಪನಿಯು ಸುಮಾರು 1,000 ಜನರಿಗೆ ನೇರವಾಗಿ ಉದ್ಯೋಗವನ್ನು ನೀಡಿದ್ದು, ಕಂಪನಿ ಮೌಲ್ಯವೂ ಹೆಚ್ಚಾಗ್ತಿದೆ. 

click me!