Education Loan: ಉನ್ನತ ವಿದ್ಯಾಭ್ಯಾಸಕ್ಕೆ ಶೈಕ್ಷಣಿಕ ಸಾಲ ಪಡೆಯುತ್ತಿದ್ದೀರಾ? ಹಾಗಾದ್ರೆ ಈ 5 ವಿಷಯ ತಿಳಿದಿರಲಿ

By Suvarna NewsFirst Published Jan 3, 2022, 10:35 PM IST
Highlights

ಉನ್ನತ ವಿದ್ಯಾಭ್ಯಾಸದ ಕನಸಿಗೆ ಇಂದು ಆರ್ಥಿಕ ಅಡಚಣೆ ಅಡ್ಡಿಯಾಗಿಲ್ಲ. ಏಕೆಂದ್ರೆ ಇಂದು ಬ್ಯಾಂಕುಗಳು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಸೌಲಭ್ಯವನ್ನು ನೀಡುತ್ತಿವೆ. ಆದ್ರೆ ಶೈಕ್ಷಣಿಕ ಸಾಲ ಪಡೆಯೋ ಮುನ್ನ ಕೆಲವೊಂದು ವಿಷಯಗಳನ್ನು ಗಮನಿಸೋದು ಅಗತ್ಯ.

Business Desk: ಇಂದು ಆರ್ಥಿಕ ಆಡಚಣೆಯಿಂದ ಉನ್ನತ ಶಿಕ್ಷಣವನ್ನು(Higher Education) ಕೈ ಬಿಡುವಂತಹ ಪರಿಸ್ಥಿತಿ ವಿದ್ಯಾರ್ಥಿಗಳಿಗಿಲ್ಲ. ಏಕೆಂದ್ರೆ ಹೆತ್ತವರ ಕೈಯಲ್ಲಿ ದುಡ್ಡಿಲ್ಲದಿದ್ರೂ ಬ್ಯಾಂಕಿನಿಂದ(Bank) ಸಾಲ (Loan) ಪಡೆದು ಶಿಕ್ಷಣ (Education) ಮುಂದುವರಿಸೋ ಅವಕಾಶವಿದೆ. ಹೌದು, ಬ್ಯಾಂಕುಗಳು (Banks) ನೀಡುತ್ತಿರೋ ಶೈಕ್ಷಣಿಕ ಸಾಲ (Education Loan) ಇಂದು ಅಸಂಖ್ಯಾತ ವಿದ್ಯಾರ್ಥಿಗಳ (Students) ಪಾಲಿಗೆ ವರದಾನವಾಗಿದೆ. ಭಾರತದಲ್ಲಿ(India) ಮಾತ್ರವಲ್ಲ, ವಿದೇಶದ (Foreign)ವಿಶ್ವವಿದ್ಯಾಲಯಗಳಲ್ಲಿ(Universities) ಅಧ್ಯಯನ ನಡೆಸಲು ಕೂಡ ಸಾಲ ಸೌಲಭ್ಯ ಸಿಗುತ್ತದೆ. 

ವಿದೇಶಿ ವಿಶ್ವವಿದ್ಯಾಲಯಕ್ಕೆ ತೆರಳುತ್ತಿರೋರ ಸಂಖ್ಯೆಯಲ್ಲಿ ಹೆಚ್ಚಳ
2022ರಲ್ಲಿ ವಿದೇಶಿ (Foreign) ವಿಶ್ವವಿದ್ಯಾಲಯಗಳಲ್ಲಿ (Universities) ಅಧ್ಯಯನ ನಡೆಸಲು ಅರ್ಜಿ ಸಲ್ಲಿಸುತ್ತಿರೋ ಭಾರತೀಯ (Indian) ವಿದ್ಯಾರ್ಥಿಗಳ (Students)ಸಂಖ್ಯೆ ಕಳೆದ ವರ್ಷಗಳಿಗಿಂತ ದುಪ್ಪಟ್ಟು ಹೆಚ್ಚಿದೆ. ಪರಿಣಾಮ ಶೈಕ್ಷಣಿಕ ಸಾಲಕ್ಕೂ ಬೇಡಿಕೆ ಹೆಚ್ಚಿದೆ. ಈ ಮಧ್ಯೆ ಒಮಿಕ್ರಾನ್ (Omicron)ಭೀತಿ ಕೂಡ ಜಾಗತಿಕ ಮಟ್ಟದಲ್ಲಿ ಮತ್ತೆ ಅನೇಕ ನಿರ್ಬಂಧಗಳ ಜಾರಿಗೆ ಕಾರಣವಾಗಿದೆ. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಇಚ್ಛಿಸೋ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದೆ. 2019ರಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆ 7.70ಲಕ್ಷ ತಲುಪಿದೆ. ಕಳೆದ ಮೂರು ವರ್ಷಗಳಲ್ಲಿ ಇದು ದೇಶೀಯ ವಿದ್ಯಾರ್ಥಿಗಳ ಪ್ರಗತಿ ಪ್ರಮಾಣಕ್ಕಿಂತ ಆರು ಪಟ್ಟು ಹೆಚ್ಚು. 2024ರಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳೋ ನಿರೀಕ್ಷೆಯಿದ್ದು,  18 ಲಕ್ಷ ತಲುಪೋ ಸಾಧ್ಯತೆಯಿದೆ. ಇನ್ನು ವಿದೇಶಿ ವಿಶ್ವವಿದ್ಯಾಲಯಗಳು ಕೂಡ ವಿದ್ಯಾರ್ಥಿವೇತನ (Scholarship) ನೀಡಿಕೆ ನಿಯಮಗಳಲ್ಲಿ ಸಡಿಲಿಕೆ ಮಾಡಿವೆ.   

Belated ITR: ನೀವು ಡಿಸೆಂಬರ್ 31ರೊಳಗೆ ಐಟಿಆರ್ ಸಲ್ಲಿಕೆ ಮಾಡಿಲ್ವ? ಹಾಗಾದ್ರೆ ಈಗ ನಿಮ್ಮ ಮುಂದಿರೋ ಆಯ್ಕೆ ಏನು?

ಶೈಕ್ಷಣಿಕ ಸಾಲ ಪಡೆಯೋ ಮುನ್ನ ಈ ವಿಷಯ ತಿಳಿದಿರಲಿ
1.ಅರ್ಹತೆ (qualification): ಸಾಲ ನೀಡಿಕೆಗೆ ಸಂಬಂಧಿಸಿ ಬ್ಯಾಂಕುಗಳಿಗೆ ಅವರದ್ದೇ ಆದ ನಿಯಮಗಳಿರುತ್ತವೆ. ಹೀಗಾಗಿ ಯಾವುದೇ ಬ್ಯಾಂಕಿನಲ್ಲಿ ಶೈಕ್ಷಣಿಕ ಸಾಲಕ್ಕೆ ಅರ್ಜಿ ಸಲ್ಲಿಸೋ ಮುನ್ನ ಅರ್ಹತೆಗಳು ಸೇರಿದಂತೆ ವಿವಿಧ ನಿಯಮ, ಷರತ್ತುಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಶೈಕ್ಷಣಿಕ ಸಾಲ ಪಡೆಯಲು ನೀವು ಭಾರತೀಯ ಪ್ರಜೆಯಾಗಿದ್ದು, ಅಂಗೀಕೃತ ಕಾಲೇಜಿನಲ್ಲಿ ಪ್ರವೇಶ ಪಡೆದಿರಬೇಕು. ವಿದ್ಯಾರ್ಥಿಗಳಿಗೆ ಆದಾಯವಿಲ್ಲದಿರೋ ಕಾರಣ ಅವರ ಹೆತ್ತವರು ಅಥವಾ ಒಡಹುಟ್ಟಿದವರು ಸಹ ಅರ್ಜಿದಾರರಾಗಿರೋದು ಅಗತ್ಯ. 4ಲಕ್ಷದ ತನಕದ ಸಾಲಕ್ಕೆ ಯಾವುದೇ ಮೇಲಾಧರ ನೀಡಬೇಕಾಗಿಲ್ಲ. ಆದ್ರೆ ಅದಕ್ಕಿಂತ ಹೆಚ್ಚಿನ ಸಾಲಕ್ಕೆ ಸಹ ಅರ್ಜಿದಾರರ ಆದಾಯ ಕಡಿಮೆ ಎಂದೆನಿಸಿದ್ರೆ ಬ್ಯಾಂಕು ಮೇಲಾಧರಕೇಳುತ್ತದೆ.

2. ಬಡ್ಡಿದರ (Interest rate) ಹಾಗೂ ಪಾವತಿ ಅವಧಿ: ಶೈಕ್ಷಣಿಕ ಸಾಲ (Education Loan) ಪಡೆಯೋ ಮುನ್ನ ವಿವಿಧ ಬ್ಯಾಂಕುಗಳಲ್ಲಿ ಲಭ್ಯವಿರೋ ಸಾಲದ ಅವಕಾಶಗಳು, ಬಡ್ಡಿದರ (Interest rate), ಸಾಲ ಮರುಪಾವತಿ ಅವಧಿಗಳ ಮಾಹಿತಿ ಸಂಗ್ರಹಿಸಿ ಹೋಲಿಕೆ ಮಾಡಿ ನೋಡಿ. ಬಹುತೇಕ ಬ್ಯಾಂಕುಗಳು 4ಲಕ್ಷ ರೂ. ತನಕದ ಸಾಲಕ್ಕೆ ವಿದ್ಯಾಭ್ಯಾಸ ಮುಗಿದ ಬಳಿಕ ಉದ್ಯೋಗ ಸಿಕ್ಕಿ ಮೂರು ವರ್ಷಗಳ ತನಕ ಅವಕಾಶ ನೀಡುತ್ತವೆ. ಇದಕ್ಕೆ ಶೇ. 10-15 ಬಡ್ಡಿದರ ವಿಧಿಸಲಾಗುತ್ತದೆ. ಜಾಸ್ತಿ ಮೊತ್ತದ ಶೈಕ್ಷಣಿಕ ಸಾಲ ಹೊಂದಿರೋರಿಗೆ ಬ್ಯಾಂಕುಗಳು ಸುದೀರ್ಘ ಮರುಪಾವತಿ ಅವಧಿಗೆ (5-7ವರ್ಷಗಳು) ಕಡಿಮೆ ಬಡ್ಡಿ ವಿಧಿಸುತ್ತವೆ.

Atal Pension Yojana: ಪತಿ, ಪತ್ನಿ ಪ್ರತ್ಯೇಕ ಖಾತೆ ತೆರೆದ್ರೆ ಸಿಗುತ್ತೆ ಮಾಸಿಕ 10 ಸಾವಿರ ರೂ. ಪಿಂಚಣಿ

3.ಸಾಲದ ಪರಿಶೀಲನೆ: ಇನ್ನು ವಿದ್ಯಾರ್ಥಿಗೆ ಸಾಲ ನೀಡೋ ಮುನ್ನ ಸಹ ಅರ್ಜಿದಾರರ ಹೆಸರಿನಲ್ಲಿ ಈಗಾಗಲೇ ಬೇರೆ ಸಾಲ ಇದೆಯಾ ಎಂಬುದನ್ನು ಬ್ಯಾಂಕ್ ಪರಿಶೀಲಿಸುತ್ತದೆ. 

4.ಇಎಂಐ ಹೊರೆ: ಆರ್ಥಿಕ ತಜ್ಞರು ವಿದ್ಯಾರ್ಥಿಗಳಿಗೆ ದೀರ್ಘಾವಧಿ ಸಾಲ ಪಡೆಯುವಂತೆ ಸಲಹೆ ನೀಡುತ್ತಾರೆ. ಇದ್ರಿಂದ ಮುಂದೆ ಇಎಂಐ (EMI) ಮೊತ್ತ ಕಡಿಮೆಯಾಗುತ್ತದೆ. ಉದ್ಯೋಗ ಸಿಕ್ಕ ಪ್ರಾರಂಭದಲ್ಲಿ ವೇತನ ಕಡಿಮೆಯಿರೋ ಕಾರಣ ಇಎಂಐ (EMI) ಮೊತ್ತ ಜಾಸ್ತಿಯಿದ್ರೆ ಕಷ್ಟವಾಗುತ್ತದೆ,

5.ವಿಶೇಷ ಯೋಜನೆಗಳು: ಸಾರ್ವಜನಿಕ ವಲಯದ ಬ್ಯಾಂಕುಗಳು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ವಿಶೇಷ ಯೋಜನೆಗಳನ್ನು ಹೊಂದಿವೆ. ಈ ಯೋಜನೆಗಳಡಿಯಲ್ಲಿ ಕಡಿಮೆ ಬಡ್ಡಿ ದರಕ್ಕೆ ಅಥವಾ ಸಬ್ಸಿಡಿ ದರದಲ್ಲಿ ಸಾಲ ನೀಡಲಾಗುತ್ತದೆ. 

click me!