Business Ideas : ಹಳ್ಳಿಯಲ್ಲಿರುವ ಮಹಿಳೆಯರಿಗೆ ಕೈ ತುಂಬಾ ಹಣ ಬರೋ ಬ್ಯುಸಿನೆಸ್ ಟಿಪ್ಸ್

By Roopa Hegde  |  First Published Jan 3, 2022, 4:23 PM IST

* ಹಳ್ಳಿಯಲ್ಲಿಯೇ ಇದ್ದು ನಿಮ್ಮ ವ್ಯವಹಾರವನ್ನು ದೆಹಲಿಯವರೆಗೆ ಕೊಂಡೊಯ್ಯಬಹುದು

* ನಾವು ಹಳ್ಳಿಲ್ಲಿದ್ದೇವೆ. ಇಲ್ಲೇನು ಮಾಡೋಕೆ ಆಗಲ್ಲ ಎನ್ನುವ ಮನಸ್ಥಿತಿ ಬೇಡ

* ಮಹಿಳೆಯರು ಮನಸ್ಸು ಬದಲಿಸಿ,ಛಲತೊಟ್ಟರೆ ಎಲ್ಲವೂ ಸಾಧ್ಯ.


ಮಹಿಳೆ (Woman)ಯರು ಆರ್ಥಿಕವಾಗಿ ಸದೃಢವಾಗಿರುವುದು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿದ್ದಾರೆ ನಿಜ,ಆದ್ರೂ ಪುರುಷ (Male)ರಿಗೆ ಹೋಲಿಸಿದ್ರೆ ಮನೆಯಿಂದ ಹೊರಗೆ ಹೋಗಿ ದುಡಿಯುವ ಮಹಿಳೆಯರ ಸಂಖ್ಯೆ ತುಂಬಾ ಕಡಿಮೆ. ಮದುವೆಯಾದ್ಮೇಲೆ ಕೆಲಸ ಬಿಟ್ಟು ಬಹುತೇಕ ಮಹಿಳೆಯರು ಮನೆ ಕೆಲಸದಲ್ಲಿ ಬ್ಯುಸಿಯಾಗ್ತಾರೆ. ಮನೆ,ಮಕ್ಕಳ ಜವಾಬ್ದಾರಿ ಹೊರುವ ಬಹುತೇಕ ಮಹಿಳೆಯರು ಆರ್ಥಿಕವಾಗಿ ಪತಿ ಅಥವಾ ಕುಟುಂಬಸ್ಥರನ್ನು ಅವಲಂಬಿಸುತ್ತಾರೆ. ಆದ್ರೆ ಮಹಿಳೆಯರು ಕೂಡ ಮನೆಯಲ್ಲಿಯೇ ಇದ್ದು ಅನೇಕ ವ್ಯವಹಾರ (Business),ಕೆಲಸವನ್ನು ಮಾಡಬಹುದು. ಈಗ ಬಹುತೇಕ ಕೆಲಸಗಳು ಆನ್ಲೈನ್ (Online )ಮೂಲಕ ನಡೆಯುತ್ತವೆ. ಎಲ್ಲ ಸೌಲಭ್ಯಗಳಿರುವ ನಗರ ಪ್ರದೇಶಗಳಲ್ಲಿ ಮಹಿಳೆಯರು ಮನೆಯಲ್ಲಿಯೇ ಆರಾಮವಾಗಿ ಸ್ವಂತ ವ್ಯವಹಾರ ಶುರು ಮಾಡಬಹುದು. ಗ್ರಾಮೀಣ ಪ್ರದೇಶ (Rural area)ಗಳಲ್ಲಿ ಅವಕಾಶ ಕಡಿಮೆ. ಇದೇ ಕಾರಣಕ್ಕೆ ಹಳ್ಳಿಗಳನ್ನು ತೊರೆದು ಜನರು ಪಟ್ಟಣ ಸೇರುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿಯೇ ಮಹಿಳೆಯರು ವ್ಯಾಪಾರ ಶುರು ಮಾಡಬಹುದು. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಯಾವೆಲ್ಲ ಸ್ವಂತ ಉದ್ಯೋಗ ಮಾಡಬಹುದು ಎಂಬ ವಿವರ ಇಲ್ಲಿದೆ.

ಬ್ಯುಸಿನೆಸ್ ಮಾಡುವವರಿಗೆ ಅನೇಕ ಆಯ್ಕೆಗಳಿವೆ. ಯಾವ ಆಯ್ಕೆ ಬೆಸ್ಟ್ ಎಂಬುದನ್ನು ಮೊದಲು ನೋಡಬೇಕು. ಕಡಿಮೆ ಹೂಡಿಕೆ(Investment)ಯಲ್ಲಿ ಸದಾ ಬೇಡಿಕೆಯಿರುವ ಬ್ಯುಸಿನೆಸ್ ಶುರು ಮಾಡಬೇಕು. 

Tap to resize

Latest Videos

ಹತ್ತಿ ಬತ್ತಿ : ಪೂಜೆಗಳಿಗೆ ಅತ್ಯಂತ  ಅವಶ್ಯಕ ಇದು. ಮನೆಯಲ್ಲಿ ಹತ್ತಿ ಬತ್ತಿ ತಯಾರಿಸಿಕೊಳ್ಳಲು ಅನೇಕರಿಗೆ ಸಮಯವಿರುವುದಿಲ್ಲ. ಅಂತವರು ಮಾರುಕಟ್ಟೆಯಲ್ಲಿ ಸಿಗುವ ಬತ್ತಿ ಖರೀದಿ ಮಾಡುತ್ತಾರೆ. ಮನೆಯಲ್ಲಿ ಬಿಡುವಿನ ಸಮಯದಲ್ಲಿ ಹಳ್ಳಿಯ ಮಹಿಳೆಯರು ಹತ್ತಿ ಬತ್ತಿ ತಯಾರಿಸಬಹುದು. ಅದನ್ನು ನಿಮ್ಮ ಹತ್ತಿರದ ಪಟ್ಟಣದ ಅಂಗಡಿಗೆ ನೀಡಬಹುದು. ನೆಟ್ ಸಂಪರ್ಕ ಎಲ್ಲ ಕಡೆ ಬಂದಿದೆ. ಹಾಗಾಗಿ ಆನ್ಲೈನ್ ಮೂಲಕವೂ ನೀವು ಮಾರಾಟ ಮಾಡಬಹುದು. 

ಫ್ಲಾಂಟ್ ನರ್ಸರಿ : ಗಿಡಗಳ ನರ್ಸರಿಯನ್ನು ನೀವು ಶುರು ಮಾಡಬಹುದು. ಮನೆಯಲ್ಲಿ ಜಮೀನಿದ್ದರೆ ಅದರಲ್ಲಿ ಗಿಡಗಳನ್ನು ಬೆಳೆಸಿ ನೀವು ಮಾರಾಟ ಮಾಡಬಹುದು. ತರಕಾರಿ,ಹಣ್ಣು,ನಿಂಬೆ ಸೇರಿದಂತೆ ಸಣ್ಣ ಸಣ್ಣ ಗಿಡಗಳನ್ನು ಬೆಳೆಸಿ ಅದನ್ನು ಹತ್ತಿರದ ಮಾರುಕಟ್ಟೆಯಲ್ಲಿ ನೀವು ಮಾರಾಟ ಮಾಡಿ. ಹೆಚ್ಚಿನ ಜಾಗವಿದ್ದರೆ ನೀವು ದೊಡ್ಡದಾಗಿಯೇ ಈ ವ್ಯವಹಾರ ಶುರು ಮಾಡಬಹುದು. ಫ್ಲಾಂಟ್ ನರ್ಸರಿಗೆ ಬಹಳ ಬೇಡಿಕೆಯಿದೆ. 

ಉಪ್ಪಿನಕಾಯಿ,ಹಪ್ಪಳ : ಸ್ವಂತ ಉದ್ಯೋಗ ಮಾಡ್ತೇನೆ ಎಂಬ ಮಹಿಳೆಯರಿಗೆ ಇದು ಕೂಡ ಉತ್ತಮ ಆಯ್ಕೆ. ಉಪ್ಪಿನ ಕಾಯಿ ಅಥವಾ ಹಪ್ಪಳ ಮಾಡುವಲ್ಲಿ ಆಸಕ್ತಿಯಿದ್ದರೆ ನೀವು ಇದನ್ನು ಶುರು ಮಾಡಬಹುದು. ಉಪ್ಪಿನಕಾಯಿಗೆ ಹೆಚ್ಚಿನ ಬೇಡಿಕೆಯಿದೆ. ಮೊದಲು ಆರ್ಡರ್ ಪಡೆದು ಸಮಯಕ್ಕೆ ಸರಿಯಾಗಿ ನೀವು ಇದನ್ನು ತಯಾರಿಸಿ ಕೊಡಬಹುದು. ಇಲ್ಲವೆ ದೊಡ್ಡ ಮಟ್ಟದಲ್ಲಿ ಉಪ್ಪಿನಕಾಯಿ ತಯಾರಿಸಿ ಗ್ರಾಮೀಣ ಪ್ರದೇಶದ ಸಣ್ಣ ನಗರಗಳ ಅಂಗಡಿಗೆ ಮಾರಾಟ ಮಾಡಬಹುದು. ದೊಡ್ಡ ದೊಡ್ಡ ನಗರಗಳಿಗೂ ಇದನ್ನು ಪಾರ್ಸಲ್ ಮಾಡಬಹುದು. 

Murty Foundation By Sudha Murty: ಇನ್ಫಿ ಫೌಂಡೇಷನ್ ನಿಂದ ಮೂರ್ತಿ ಫೌಂಡೇಷನ್; ಇದು ಸುಧಾಮೂರ್ತಿ ಹೊಸ ಹೆಜ್ಜೆ

ಮೇಣದಬತ್ತಿ ಹಾಗೂ ಅಗರಬತ್ತಿ : ಈ ವ್ಯವಹಾರವನ್ನು ಹಳ್ಳಿ ಹಾಗೂ ಪಟ್ಟಣ ಎರಡೂ ಪ್ರದೇಶದಲ್ಲಿ ಆರಾಮವಾಗಿ ಶುರು ಮಾಡಬಹುದು. ಆನ್ಲೈನ್ ನಲ್ಲಿ ಕೆಲಸ ಮಾಡಲು ಬಯಸದವರಿಗೆ ಇದು ಒಳ್ಳೆಯ ಕೆಲಸ. ಇವೆರಡನ್ನೂ ಕೈನಲ್ಲಿಯೇ ತಯಾರಿಸಬಹುದು. ಮಶಿನ್ ಮೂಲಕವೂ ಇದನ್ನು ತಯಾರಿಸಬಹುದು. ಇದಕ್ಕೆ ಕೆಲವು ವಸ್ತುಗಳು ಅವಶ್ಯಕ. ಗ್ರಾಮೀಣ ಪ್ರದೇಶಗಳಲ್ಲಿ ಮೇಣದಬತ್ತಿ ಮತ್ತು ಅಗರಬತ್ತಿ ತಯಾರಿಸುವ ತರಬೇತಿಗಳನ್ನು ಕೂಡ ಆಗಾಗ ನಡೆಸಲಾಗುತ್ತದೆ. ತರಬೇತಿ ಪಡೆದು ವ್ಯವಹಾರ ಶುರು ಮಾಡಿದ್ರೆ ಒಳ್ಳೆಯ ಲಾಭ ಪಡೆಯಬಹುದು.

ಟ್ಯೂಷನ್ : ಗ್ರಾಮೀಣ ಪ್ರದೇಶಗಳಲ್ಲಿಯೂ ಟ್ಯೂಷನ್ ಗೆ ಹೆಚ್ಚು ಬೇಡಿಕೆಯಿದೆ. ದೊಡ್ಡ ದೊಡ್ಡ ಹಳ್ಳಿಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿರುತ್ತದೆ. ಹಳ್ಳಿಯ ಮಕ್ಕಳೂ ಟ್ಯೂಷನ್ ಪಡೆಯುತ್ತಿದ್ದಾರೆ. ನೀವು ಓದಿದ್ದು,ಮಕ್ಕಳಿಗೆ ಶಿಕ್ಷಣ ನೀಡಲು ಆಸಕ್ತಿ ಹೊಂದಿದ್ದರೆ ಟ್ಯೂಷನ್ ಶುರು ಮಾಡಬಹುದು.

Periods Problem: ತಿಂಗಳಿಗೆ ಸರಿಯಾಗಿ ಮುಟ್ಟಾಗುತ್ತಿಲ್ಲವೇ? ಈ ಆಹಾರ ಸೇವಿಸಿ

ಇದಲ್ಲದೆ,ಸ್ವೆಟರ್,ಬ್ಯಾಗ್,ಹೊಲಿಗೆ,ಬ್ಯೂಟಿ ಪಾರ್ಲರ್,ಚಿಪ್ಸ್ ತಯಾರಿ,ಮಸಾಲೆ ಪದಾರ್ಥ ಈ ಎಲ್ಲ ವ್ಯವಹಾರವನ್ನು ನೀವು ಶುರು ಮಾಡಬಹುದು.    

click me!