Belated ITR: ನೀವು ಡಿಸೆಂಬರ್ 31ರೊಳಗೆ ಐಟಿಆರ್ ಸಲ್ಲಿಕೆ ಮಾಡಿಲ್ವ? ಹಾಗಾದ್ರೆ ಈಗ ನಿಮ್ಮ ಮುಂದಿರೋ ಆಯ್ಕೆ ಏನು?

Suvarna News   | Asianet News
Published : Jan 03, 2022, 05:25 PM IST
Belated ITR: ನೀವು ಡಿಸೆಂಬರ್ 31ರೊಳಗೆ ಐಟಿಆರ್ ಸಲ್ಲಿಕೆ ಮಾಡಿಲ್ವ? ಹಾಗಾದ್ರೆ ಈಗ ನಿಮ್ಮ ಮುಂದಿರೋ ಆಯ್ಕೆ ಏನು?

ಸಾರಾಂಶ

*ಡಿಸೆಂಬರ್ 31ರೊಳಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡದವರಿಗಿದೆ ಇನ್ನೊಂದು ಅವಕಾಶ *ವಿಳಂಬ ಆದಾಯ ತೆರಿಗೆ  ರಿಟರ್ನ್ ಸಲ್ಲಿಕೆಗೆ ಮಾರ್ಚ್ 31ರ ತನಕ ಅವಕಾಶ *ವಿಳಂಬ ಆದಾಯ ತೆರಿಗೆ  ರಿಟರ್ನ್ ಸಲ್ಲಿಕೆ ಸಮಯದಲ್ಲಿ ದಂಡ ಪಾವತಿಸೋದು ಅಗತ್ಯ  

Business Desk: 2020-21 ನೇ ಆರ್ಥಿಕ ಸಾಲಿನ (ಅಂದಾಜು ವರ್ಷ 2021-22) ಆದಾಯ ತೆರಿಗೆ ರಿಟರ್ನ್ (Income Tax Return)ಸಲ್ಲಿಕೆಗೆ  2021ರ ಡಿಸೆಂಬರ್ 31 ಅಂತಿಮ ದಿನಾಂಕವಾಗಿತ್ತು. ಆದಾಯ ತೆರಿಗೆ ಇಲಾಖೆ (Income Tax Department) ನೀಡಿರೋ ಮಾಹಿತಿ ಪ್ರಕಾರ ಡಿಸೆಂಬರ್ 31ರವೆಗೆ ಇ-ಫೈಲಿಂಗ್ ಫೋರ್ಟಲ್ ಮೂಲಕ 5.89 ಕೋಟಿ ಮಂದಿ ಐಟಿ ರಿಟರ್ನ್ಸ್(IT returns)ಸಲ್ಲಿಕೆ ಮಾಡಿದ್ದಾರೆ. ಆದ್ರೆ ಕೆಲವರಿಗೆ ಈ ಗಡುವಿನೊಳಗೆ ಐಟಿಆರ್ (ITR)ಸಲ್ಲಿಕೆ ಮಾಡಲು ಸಾಧ್ಯವಾಗಿಲ್ಲ. ಹಾಗಾದ್ರೆ ಅಂಥವರು ಈಗ ಏನ್ ಮಾಡ್ಬಹುದು? ಅವರ ಮುಂದಿರೋ ಆಯ್ಕೆಗಳೇನು? 

ವಿಳಂಬ ಐಟಿಆರ್ (belated ITR) ಸಲ್ಲಿಕೆ
ಡಿಸೆಂಬರ್ 31ರೊಳಗೆ ಐಟಿಆರ್ ಸಲ್ಲಿಕೆ ಮಾಡಲು ಸಾಧ್ಯವಾಗದ ತೆರಿಗೆದಾರರು ವಿಳಂಬ ಐಟಿಆರ್ ಸಲ್ಲಿಕೆ ಮಾಡಬಹುದೆಂದು ಆದಾಯ ತೆರಿಗೆ ಇಲಾಖೆ ಟ್ವಿಟ್ಟರ್ ಮೂಲಕ ತಿಳಿಸಿದೆ. ಆದ್ರೆ ವಿಳಂಬ ಐಟಿಆರ್ ಸಲ್ಲಿಕೆ ಮಾಡೋ ತೆರಿಗೆದಾರರು ತಡವಾಗಿರೋದಕ್ಕೆ ದಂಡ ಶುಲ್ಕ ಕಟ್ಟಬೇಕು. ಹಣಕಾಸು ಕಾಯ್ದೆ ಅನ್ವಯ ಈ ದಂಡವನ್ನು ನಿಗದಿಪಡಿಸಲಾಗಿದ್ದು, 1,000ರೂ.ನಿಂದ  5,000ರೂ. ತನಕ ಇರುತ್ತದೆ. ವಿವಿಧ ವರದಿಗಳ ಆಧಾರದಲ್ಲಿ ಹೇಳೋದಾದ್ರೆ ತೆರಿಗೆ ಪಾವತಿಸಬೇಕಾದ ಒಟ್ಟು ಆದಾಯ 5ಲಕ್ಷ ರೂ. ಒಳಗಿದ್ರೆ 1000ರೂ. ದಂಡ ವಿಧಿಸಲಾಗುತ್ತದೆ. ತೆರಿಗೆ ವ್ಯಾಪ್ತಿಗೊಳಪಡೋ ವಾರ್ಷಿಕ ಆದಾಯ  2.5ಲಕ್ಷ ರೂ.ಗಿಂತ ಕಡಿಮೆಯಿದ್ರೆ ದಂಡ ಶುಲ್ಕ ಪಾವತಿಯಿಂದ ವಿನಾಯ್ತಿ ಇದೆ.  2022ರ ಮಾರ್ಚ್ 31ರೊಳಗೆ ವಿಳಂಬ ಐಟಿಆರ್ ಸಲ್ಲಿಕೆ ಮಾಡಬಹುದು. 

ITR e-Verification: 2019-20ನೇ ಆರ್ಥಿಕ ಸಾಲಿನ ITR ಇ-ದೃಢೀಕರಣ ಅಂತಿಮ ಗಡುವು ಫೆ.28ಕ್ಕೆ ವಿಸ್ತರಣೆ

ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ಮಾರ್ಚ್ 31 ಗಡುವು
ಒಂದು ವೇಳೆ ನೀವು ಡಿ.31ರೊಳಗೆ ಐಟಿಆರ್ ಸಲ್ಲಿಕೆ ಮಾಡಿದ್ದು, ಕೆಲವೊಂದು ತಿದ್ದುಪಡಿಗಳೊಂದಿಗೆ ಮತ್ತೆ ಸಲ್ಲಿಕೆ ಮಾಡಲು ಬಯಸಿದ್ರೆ ಮಾರ್ಚ್‌ 31ರೊಳಗೆ ಸಲ್ಲಿಕೆ ಮಾಡಬಹುದು. ಪರಿಷ್ಕೃತ ಐಟಿಆರ್ (revised return)ಸಲ್ಲಿಕೆಗೆ ಯಾವುದೇ ದಂಡ ಕಟ್ಟಬೇಕಾಗಿಲ್ಲ.  ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 139(5) ಅಡಿಯಲ್ಲಿ ಐಟಿಆರ್ ನಲ್ಲಿನ ತಪ್ಪುಗಳನ್ನು ಸರಿಪಡಿಸಲು ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ತೆರಿಗೆದಾರರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ಡಿಸೆಂಬರ್ 31ಕೊನೆಯ ದಿನಾಂಕವಾಗಿತ್ತು. ಆದ್ರೆ 2020-21ನೇ ಆರ್ಥಿಕ ಸಾಲಿನಲ್ಲಿ ಕೊರೋನಾ ವೈರಸ್ ಕಾರಣಕ್ಕೆ ಸರ್ಕಾರ ಐಟಿಆರ್ ಸಲ್ಲಿಕೆ ಗಡುವನ್ನು ಡಿಸೆಂಬರ್ 31ಕ್ಕೆ ವಿಸ್ತರಿಸಿದ ಕಾರಣ ಈ ವರ್ಷ ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ಮಾರ್ಚ್ 31 ಅಂತಿಮ ದಿನಾಂಕವಾಗಿದೆ.  ಪರಿಷ್ಕೃತ ಐಟಿಆರ್ ಸಲ್ಲಿಕೆಗೆ  ನಿರ್ದಿಷ್ಟ ಮಿತಿಯಿಲ್ಲ. ನೀವು ಎಷ್ಟು ಬಾರಿಯಾದ್ರೂ ಸಲ್ಲಿಕೆ ಮಾಡಬಹುದು. ಆದ್ರೆ ಪ್ರತಿ ಬಾರಿಯೂ ಪರಿಷ್ಕೃತ ಐಟಿಆರ್ ಸಲ್ಲಿಕೆ ಮಾಡೋವಾಗ ನಿಮ್ಮ ಮೂಲ ಐಟಿಆರ್ ಸಲ್ಲಿಕೆಯ ಮಾಹಿತಿಗಳನ್ನು ತಪ್ಪದೇ ಒದಗಿಸಬೇಕು. ಇನ್ನು ಪರಿಷ್ಕೃತ ಐಟಿಆರ್ ಸಲ್ಲಿಕೆ ಮಾಡಿದ ಬಳಿಕ ಅದನ್ನು ದೃಢೀಕರಿಸೋದು ಅಗತ್ಯ. ದೃಢೀಕರಿಸದಿದ್ರೆ ಆದಾಯ ತೆರಿಗೆ ಇಲಾಖೆ ನಿಮ್ಮ ಪರಿಷ್ಕೃತ ಐಟಿಆರ್ ಅನ್ನು ಸ್ವೀಕರಿಸೋದಿಲ್ಲ.

e-filling Portal:ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ

ವಿಳಂಬವಾದ್ರೆ ಏನೆಲ್ಲ ಸಮಸ್ಯೆಯಾಗುತ್ತೆ?
ನಿಗದಿತ ದಿನಾಂಕದೊಳಗೆ ಐಟಿಆರ್ ಸಲ್ಲಿಕೆ ಮಾಡದಿದ್ರೂ ವಿಳಂಬ ಐಟಿಆರ್ ಸಲ್ಲಿಕೆಗೆ ಅವಕಾಶವಿದ್ದರೂ ತೆರಿಗೆದಾರರು ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಈ ವರ್ಷ ತೆರಿಗೆದಾರರು ಅನುಭವಿಸಿದ ನಷ್ಟವನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ಅವರು ಗಳಿಸೋ ಲಾಭಕ್ಕೆ ಸರಿಹೊಂದಿಸೋ (Setoff)ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಇನ್ನು ತೆರಿಗೆದಾರರ ಆದಾಯದಿಂದ ಈಗಾಗಲೇ ಹೆಚ್ಚುವರಿಯಾಗಿ ಕಡಿತಗೊಂಡ ತೆರಿಗೆಗೆ ಸೂಕ್ತ ದಾಖಲೆಗಳನ್ನು ಒದಗಿಸಿದ್ರೆ ಅದನ್ನು ಆದಾಯ ತೆರಿಗೆ ಇಲಾಖೆ ಮರುಪಾವತಿ (Refund) ಮಾಡುತ್ತದೆ. ಆದ್ರೆ ನೀವು ಡಿ.31ರೊಳಗೆ ಐಟಿಆರ್ ಫೈಲ್ ಮಾಡದ ತೆರಿಗೆದಾರರಿಗೆ ಮರುಪಾವತಿ ಮಾಡೋದಿಲ್ಲ. ಅಷ್ಟೇ ಅಲ್ಲ, ಒಂದು ವೇಳೆ ತೆರಿಗೆದಾರ ಈ ತನಕ ಪಾವತಿ ಮಾಡಿದ ತೆರಿಗೆ ಆದಾಯ ತೆರಿಗೆ ಇಲಾಖೆ ಲೆಕ್ಕ ಹಾಕಿದ ತೆರಿಗೆಗಿಂತ ಕಡಿಮೆ ಇದ್ರೆ ಬಾಕಿ ತೆರಿಗೆ ಪಾವತಿಸೋ ಜೊತೆಗೆ ಅದಕ್ಕೆ ಬಡ್ಡಿ (Interest) ಕೂಡ ಕಟ್ಟಬೇಕಾಗುತ್ತದೆ. 


 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!