80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಎಫ್ ಡಿ ಮೇಲೆ ಅಧಿಕ ಬಡ್ಡಿ ನೀಡುವ 4 ಬ್ಯಾಂಕ್ ಗಳು ಇವೇ ನೋಡಿ!

Published : Dec 22, 2022, 05:21 PM ISTUpdated : Dec 22, 2022, 05:23 PM IST
80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಎಫ್ ಡಿ ಮೇಲೆ ಅಧಿಕ ಬಡ್ಡಿ ನೀಡುವ 4 ಬ್ಯಾಂಕ್ ಗಳು ಇವೇ ನೋಡಿ!

ಸಾರಾಂಶ

ಹಿರಿಯ ನಾಗರಿಕರ ಎಫ್ ಡಿ ಮೇಲೆ ಬ್ಯಾಂಕ್ ಗಳು ಸಾಮಾನ್ಯ ಗ್ರಾಹಕರಿಗಿಂತ ಹೆಚ್ಚಿನ ಬಡ್ಡಿ ನೀಡುತ್ತವೆ. ಅದರಲ್ಲೂ 80 ವರ್ಷ ಮೇಲ್ಪಟ್ಟವರಿಗೆ ಕೆಲವು ಬ್ಯಾಂಕ್ ಗಳು ಅಧಿಕ ಬಡ್ಡಿ ನೀಡುತ್ತವೆ. ಹಾಗಾದ್ರೆ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಎಫ್ ಡಿ ಮೇಲೆ ಅಧಿಕ ಬಡ್ಡಿ ನೀಡುವ ಬ್ಯಾಂಕ್ ಗಳು ಯಾವುವು?

Business Desk:ವೃದ್ಧಾಪ್ಯದಲ್ಲಿ ಹಣಕಾಸಿನ ಅಡಚಣೆಗಳು ಉಂಟಾಗೋದು ಸಹಜ. ಜೀವನದುದ್ದಕ್ಕೂ ದುಡಿದ ಹಣವನ್ನು ಮಕ್ಕಳ ವಿದ್ಯಾಭ್ಯಾಸ, ವಿವಾಹ, ವೈದ್ಯಕೀಯ ವೆಚ್ಚ ಹೀಗೆ ನಾನಾ ಉದ್ದೇಶಗಳಿಗೆ ವ್ಯಯಿಸಿ ಬದುಕಿನ ಇಳಿಸಂಜೆಯಲ್ಲಿ ಆರ್ಥಿಕ ಮುಗ್ಗಟ್ಟು ಎದುರಿಸುವ ಅನೆಕ ಹಿರಿಯರನ್ನು ನಾವು ನೋಡುತ್ತಿರುತ್ತೇವೆ. ಇದೇ ಕಾರಣಕ್ಕೆ ವೃದ್ಧಾಪ್ಯದಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರಿಕರಿಗೆ ಹೆಚ್ಚಿನ ಭದ್ರತೆ ಹಾಗೂ ರಿಟರ್ನ್ ನೀಡುವ ಉದ್ದೇಶದಿಂದ ಬ್ಯಾಂಕುಗಳು ಅವರಿಗಾಗಿಯೇ ವಿಶೇಷ ಯೋಜನೆಗಳನ್ನು ರೂಪಿಸಿರುತ್ತವೆ. ಬ್ಯಾಂಕಿಂಗ್ ಸೇವೆಗಳಿಂದ ಹಿಡಿದು ಬಡ್ಡಿದರದ ತನಕ ಪ್ರತಿಯೊಂದರಲ್ಲೂ ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತವೆ. ಸ್ಥಿರ ಠೇವಣಿ (ಎಫ್ ಡಿ) ಮೇಲಿನ ಬಡ್ಡಿದರ ಕೂಡ ಹಿರಿಯ ನಾಗರಿಕರಿಗೆ ಇತರರಿಗಿಂತ ಹೆಚ್ಚಿರುತ್ತದೆ. ಇನ್ನು  ಹಿರಿಯ ನಾಗರಿಕರಿಗಿಂತಲೂ ಇನ್ನೊಂದು ಮೇಲ್ವರ್ಗವಿದೆ. ಅದೇ ಸೂಪರ್ ಸೀನಿಯರ್ ಸಿಟಿಜನ್ಸ್. 60 ವರ್ಷಕ್ಕಿಂತ ಮೇಲ್ಪಟ್ಟವರನ್ನು ಹಿರಿಯ ನಾಗರಿಕರು ಎಂದು  ಪರಿಗಣಿಸಿದರೆ, 80 ವರ್ಷಕ್ಕಿಂತ ಮೇಲ್ಪಟ್ಟವರನ್ನು ಸೂಪರ್ ಸೀನಿಯರ್ ಸಿಟಿಜನ್ಸ್ ಎಂದು ಪರಿಗಣಿಸಲಾಗುತ್ತದೆ. ಅನೇಕ ಬ್ಯಾಂಕ್ ಗಳು ಸೂಪರ್ ಸೀನಿಯರ್ ಸಿಟಿಜನ್ಸ್ ಗೆ ಸ್ಥಿರ ಠೇವಣಿಗಳ (ಎಫ್ ಡಿ) ಮೇಲೆ ಅಧಿಕ ಬಡ್ಡಿದರ ನೀಡುತ್ತಿವೆ. 

ಪಂಜಾಬ್ ನ್ಯಾಷನಲ್ ಬ್ಯಾಂಕ್ 
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ವೆಬ್ ಸೈಟ್ ನಲ್ಲಿ ಉಲ್ಲೇಖಿಸಿರುವಂತೆ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 80 ಬೇಸಿಸ್ ಪಾಯಿಂಟ್ಸ್ ಹೆಚ್ಚುವರಿ ಬಡ್ಡಿದರವನ್ನು ನೀಡುತ್ತಿದೆ. ಪಿಎನ್ ಬಿ ಸೂಪರ್ ಸೀನಿಯರ್ ಗ್ರಾಹಕರು 666 ದಿನಗಳ ಅವಧಿಯ ಎಫ್ ಡಿ ಮೇಲೆ ಗರಿಷ್ಠ ಶೇ.8.10 ಬಡ್ಡಿದರ ಗಳಿಸುತ್ತಿದ್ದಾರೆ. ಈ ಬಡ್ಡಿದರವು 2022ರ ಡಿಸೆಂಬರ್ 12ರಿಂದ ಜಾರಿಗೆ ಬಂದಿದೆ. ಇನ್ನು 60 ಹಾಗೂ 80 ವರ್ಷಗಳ ನಡುವಿನ ಹಿರಿಯ ನಾಗರಿಕರು ಎಫ್ ಡಿ ಮೇಲೆ ಇತರರಿಗಿಂತ 50 ಬೇಸಿಸ್ ಪಾಯಿಂಟ್ಸ್ ಹೆಚ್ಚುವರಿ ಬಡ್ಡಿ ಗಳಿಸುತ್ತಾರೆ. 2 ಕೋಟಿ ರೂ.ಗಿಂತಲೂ ಕಡಿಮೆ ಮೊತ್ತದ ಐದು ವರ್ಷಗಳಿಗಿಂತ ದೀರ್ಘ ಅವಧಿ ಠೇವಣಿಗಳ ಮೇಲೆ ಹಿರಿಯ ನಾಗರಿಕರಿಗೆ   80 ಬೇಸಿಸ್ ಪಾಯಿಂಟ್ಸ್ ಬಡ್ಡಿ ನೀಡಲಾಗುತ್ತಿದೆ.

ಆಯ್ದ ಬ್ಯಾಂಕಿಂಗ್ ಸೇವೆಗಳ ಮೇಲೆ ಶೂನ್ಯ ಶುಲ್ಕ ಘೋಷಿಸಿದ ಐಡಿಎಫ್ ಸಿ ಫಸ್ಟ್ ಬ್ಯಾಂಕ್; ಯಾವೆಲ್ಲ ಸೇವೆಗಳಿಗೆ ಅನ್ವಯ?

ಆರ್ ಬಿಎಲ್ ಬ್ಯಾಂಕ್ 
ಈ ಬ್ಯಾಂಕ್ ನಲ್ಲಿ 80  ವರ್ಷ ಹಾಗೂ ಅದಕ್ಕಿಂತ ಮೆಲ್ಪಟ್ಟ ಹಿರಿಯ ನಾಗರಿಕರಿಗೆ ಎಲ್ಲ ಅವಧಿಯ ಠೇವಣಿಗಳ ಮೇಲೆ ವಾರ್ಷಿಕ ಶೇ.0.75 ಬಡ್ಡಿ ನೀಡಲಾಗುತ್ತಿದೆ. ಸೂಪರ್ ಸೀನಿಯರ್ ಸಿಟಿಜನ್ಸ್ ಗೆ ಆರ್ ಬಿಎಲ್ ಬ್ಯಾಂಕ್ ಪ್ರಸ್ತುತ ಶೇ.8.3 ಬಡ್ಡಿದರ ನೀಡುತ್ತಿದೆ. ಈ ದರವು  2022ರ ನವೆಂಬರ್  25ರಿಂದ ಜಾರಿಗೆ ಬರಲಿದೆ. ಇನ್ನು 60 ಹಾಗೂ 80 ವರ್ಷಗಳ ನಡುವಿನ ಹಿರಿಯ ನಾಗರಿಕರಿಗೆ ವಾರ್ಷಿಕ ಶೇ.0.50 ಹೆಚ್ಚುವರಿ ಬಡ್ಡಿದರದ ಪ್ರಯೋಜನ ಸಿಗುತ್ತದೆ.

ಇಂಡಿಯನ್ ಬ್ಯಾಂಕ್
ಇಂಡಿಯನ್ ಬ್ಯಾಂಕ್ ಸೂಪರ್ ಸೀನಿಯರ್ ಸಿಟಿಜನ್ಸ್ ಗೆ 'ಗೋಲ್ಡನ್ ಏಜರ್' ಎಂಬ ವಿಶೇಷ ಟರ್ಮ್ ಡೆಫಾಸಿಟ್ ಖಾತೆಯನ್ನು ಹೊಂದಿದ್ದು, ಇದರಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚುವರಿ ಶೇ.0.25 ಬಡ್ಡಿ ನೀಡಲಾಗುತ್ತಿದೆ.

ಸುಸ್ತಿದಾರರಿಂದ ಬ್ಯಾಂಕ್‌ಗಳಿಗೆ 92 ಸಾವಿರ ಕೋಟಿ ರು. ಬಾಕಿ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಎಲ್ಲ ಅವಧಿಯ ಎಫ್ ಡಿಗಳ ಮೇಲೆ ಸೂಪರ್ ಸೀನಿಯರ್ ಸಿಟಿಜನ್ಸ್ ಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವಾರ್ಷಿಕ ಶೇ.0.75 ಹೆಚ್ಚುವರಿ ಬಡ್ಡಿಯನ್ನು ನೀಡುತ್ತಿದೆ. 800 ದಿನಗಳಿಂದ 3 ವರ್ಷಗಳ ಅವಧಿಯ ಠೇವಣಿಗಳ ಮೇಲೆ ಸೂಪರ್ ಸೀನಿಯರ್ ಸಿಟಿಜನ್ಸ್ ಗೆ ಈ ಬ್ಯಾಂಕ್ ಶೇ.8.05 ಗರಿಷ್ಠ ಬಡ್ಡಿದರ ನೀಡುತ್ತಿದೆ. ಈ ದರವು 2022ರ ನವೆಂಬರ್ 25ರಿಂದ ಅನ್ವಯಿಸುತ್ತಿದೆ.  60 ಹಾಗೂ 80 ವರ್ಷಗಳ ನಡುವಿನ ಹಿರಿಯ ನಾಗರಿಕರಿಗೆ ಈ ಬ್ಯಾಂಕಿನಲ್ಲಿ ವಾರ್ಷಿಕ ಶೇ.0.50 ಬಡ್ಡಿದರ ಹೆಚ್ಚಳದ ಪ್ರಯೋಜನ ಸಿಗುತ್ತದೆ. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ