ರಿಲಯನ್ಸ್ ತೆಕ್ಕೆಗೆ ಮೆಟ್ರೋ ಕ್ಯಾಶ್ & ಕ್ಯಾರಿ; 2,850 ಕೋಟಿ ರೂ. ಒಪ್ಪಂದಕ್ಕೆ ಸಹಿ

By Suvarna NewsFirst Published Dec 22, 2022, 12:33 PM IST
Highlights

* ಮೆಟ್ರೋ ಕ್ಯಾಶ್ &  ಕ್ಯಾರಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಶೇ.100ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಂಡ ರಿಲಯನ್ಸ್
*ರಿಟೇಲ್ ಕ್ಷೇತ್ರದಲ್ಲಿ ತನ್ನ ಸ್ಥಾನ ಬಲಪಡಿಸಿಕೊಂಡ ರಿಲಯನ್ಸ್ ಸಂಸ್ಥೆ
*ಇತ್ತೀಚೆಗಷ್ಟೇ 'ಇಂಡಿಪೆಂಡೆನ್ಸ್ ' ಎಂಬ ಎಫ್ ಎಂಸಿಜಿ ಬ್ರ್ಯಾಂಡ್ ಪರಿಚಯಿಸಿದ್ದ ರಿಲಯನ್ಸ್ 
 

ಮುಂಬೈ (ಡಿ.22): ಮೆಟ್ರೋ ಕ್ಯಾಶ್ &  ಕ್ಯಾರಿ  ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ಶೇ.100ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳುವ ಅಂತಿಮ ಒಪ್ಪಂದಕ್ಕೆ ರಿಲಯನ್ಸ್  ಇಂಡ್ ಸ್ಟ್ರೀಸ್ ಲಿಮಿಟೆಡ್ ಅಂಗಸಂಸ್ಥೆಯಾದ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (ಆರ್ ಆರ್ ವಿ ಎಲ್) ಗುರುವಾರ ಸಹಿ ಹಾಕಿದೆ. 2,850 ಕೋಟಿ ರೂ. ಮೌಲ್ಯದ ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ 'ಮೆಟ್ರೋ ಇಂಡಿಯಾ' ಬ್ರ್ಯಾಂಡ್ ಒಡೆತನವನ್ನು ಪಡೆದುಕೊಂಡಿದೆ. ಭಾರತದ ಪ್ರಮುಖ ನಗರಗಳಲ್ಲಿರುವ ಮೆಟ್ರೋ ಇಂಡಿಯಾ ಸ್ಟೋರ್ಸ್ ಗಳು ಇನ್ನು ರಿಲಯನ್ಸ್ ರಿಟೇಲ್ ಸುಪರ್ದಿಗೆ ಬರಲಿವೆ. ಮೆಟ್ರೋ ಇಂಡಿಯಾ ಸ್ಟೋರ್ಸ್ ಗಳು ದೊಡ್ಡ ಸಂಖ್ಯೆಯಲ್ಲಿ ತನ್ನದೇ ಆದ ಗ್ರಾಹಕ ವರ್ಗವನ್ನು ಹೊಂದಿದೆ. ಕಿರಾಣಿ ಅಂಗಡಿಗಳು ಹಾಗೂ ಕೆಲವು ರಿಟೇಲ್ ಶಾಪ್ ಗಳು ಮೆಟ್ರೋ ಮೆಟ್ರೋ ಕ್ಯಾಶ್ &  ಕ್ಯಾರಿಯ ಗ್ರಾಹಕರಾಗಿವೆ. ಮೆಟ್ರೋ ಕ್ಯಾಶ್ ಆಂಡ್ ಕ್ಯಾರಿ ಇಂಡಿಯಾ ಪ್ರೈವೇಟ್ ಲಿ. ಖರೀದಿ ಮೂಲಕ ಭಾರತದ ರಿಟೇಲ್ ವಲಯದಲ್ಲಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಸಂಸ್ಥೆ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಂಡಿದೆ. ಕೆಲವೇ ದಿನಗಳ ಹಿಂದೆ ರಿಲಯನ್ಸ್ ರಿಟೇಲ್ 'ಇಂಡಿಪೆಂಡೆನ್ಸ್ ' ಎಂಬ ಎಫ್ ಎಂಸಿಜಿ ಬ್ರ್ಯಾಂಡ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. 

ಈ ಸ್ವಾಧೀನ ರಿಲಯನ್ಸ್ ರಿಟೇಲ್ ಭೌತಿಕ ಸ್ಟೋರ್ ಗಳನ್ನು ಇನ್ನಷ್ಟು ಬಲಪಡಿಸಲಿದೆ ಹಾಗೂ ಪೂರೈಕೆ ಸರಪಳಿ ಜಾಲ, ತಂತ್ರಜ್ಞಾನದ ಪ್ಲ್ಯಾಟ್ ಫಾರ್ಮ್ ಗಳ ಸಾಮರ್ಥ್ಯ ಹಾಗೂ ದಕ್ಷತೆಯನ್ನು ಹೆಚ್ಚಿಸುವ ಮೂಲಕ ಗ್ರಾಹಕರು ಹಾಗೂ ಸಣ್ಣ ವ್ಯಾಪಾರಿಗಳಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡುವ ಸಾಮರ್ಥ್ಯವನ್ನು ಹೆಚ್ಚಿಸಲಿದೆ' ಎಂದು ರಿಲಯನ್ಸ್ ಇಂಡಸ್ಟ್ರೀಸ್ ಹೇಳಿದೆ. 

ಸುಸ್ತಿದಾರರಿಂದ ಬ್ಯಾಂಕ್‌ಗಳಿಗೆ 92 ಸಾವಿರ ಕೋಟಿ ರು. ಬಾಕಿ

'ಸಣ್ಣ ವ್ಯಾಪಾರಿಗಳು ಹಾಗೂ ಉದ್ಯಮಗಳ ಸಹಯೋಗದೊಂದಿಗೆ ಸಂಪತ್ತಿನ ಹಂಚಿಕೆಯ ವಿಭಿನ್ನ ಮಾದರಿ ನಿರ್ಮಿಸುವ ನಮ್ಮ ಹೊಸ ವಾಣಿಜ್ಯ ತಂತ್ರದೊಂದಿಗೆ ಮೆಟ್ರೋ ಇಂಡಿಯಾದ ಸ್ವಾಧೀನ ಕೂಡ ಹೊಂದಾಣಿಕೆಯಾಗುತ್ತದೆ' ಎಂದು ಆರ್ ಆರ್ ವಿಎಲ್ ನಿರ್ದೇಶಕಿ ಇಶಾ ಅಂಬಾನಿ ಹೇಳಿದ್ದಾರೆ.

ಮೆಟ್ರೋ ಒಟ್ಟು 34 ರಾಷ್ಟ್ರಗಳಲ್ಲಿ ವಹಿವಾಟು ಹೊಂದಿದ್ದು, 2003ರಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಿತ್ತು. ಕಿರಣಿ ಅಂಗಡಿಗಳು, ಹೋಟೆಲ್ ಗಳು, ರೆಸ್ಟೋರೆಂಟ್ ಗಳು ಹಾಗೂ ಕೇಟರರ್ಸ್, ಖಾಸಗಿ ಕಂಪನಿಗಳು ಹಾಗೂ ಕೆಲವು ಸಂಸ್ಥೆಗಳು ಮೆಟ್ರೋ ಕ್ಯಾಶ್ ಹಾಗೂ ಕ್ಯಾರಿಯ ಗ್ರಾಹಕರಾಗಿದ್ದಾರೆ.

ಮೆಟ್ರೋ ಕ್ಯಾಶ್ &  ಕ್ಯಾರಿ ಬೆಂಗಳೂರಿನಲ್ಲಿ 6, ಹೈದರಾಬಾದ್ ನಲ್ಲಿ 4, ಮುಂಬೈ ಮತ್ತು ನವದೆಹಲಿಯಲ್ಲಿ ತಲಾ 2 ಮಳಿಗೆಗಳನ್ನು ಹೊಂದಿದೆ. ಇನ್ನು ಕೋಲ್ಕತ್ತ, ಜೈಪುರ, ಜಲಂಧರ, ಅಮೃತಸರ, ಅಹಮದಾಬಾದ್, ಸೂರತ್, ಇಂದೋರ್, ಲಖನೌ, ಮೀರತ್, ನಾಸಿಕ್, ಗಾಜಿಯಾಬಾದ್, ತುಮಕೂರು, ವಿಜಯವಾಡ, ವಿಶಾಖಪಟ್ಟಣಂ, ಗುಂಟೂರು, ಹುಬ್ಬಳ್ಳಿಯಲ್ಲಿ ತಲಾ ಒಂದು ಕೇಂದ್ರ ಹೊಂದಿದೆ.  ಮೆಟ್ರೋ ಕ್ಯಾಶ್ &  ಕ್ಯಾರಿ 3,500 ಉದ್ಯೋಗಿಗಳನ್ನು ಹೊಂದಿದೆ. 

ಹೊಸ ವರ್ಷದಲ್ಲಿ ಹೂಡಿಕೆ ಮಾಡಲು ಹೊರಟಿರೋರಿಗೆ ಇಲ್ಲಿದೆ 8 ಟಿಪ್ಸ್

ಭಾರತದ ರಿಟೇಲ್ ಮಾರುಕಟ್ಟೆ 60 ಲಕ್ಷ ಕೋಟಿ ರೂ. ಮೌಲ್ಯದಾಗಿದೆ. ಇದರಲ್ಲಿ ಶೇ.60ರಷ್ಟು ಆಹಾರ ಹಾಗೂ ದಿನಸಿ ಸಾಮಗ್ರಿಗಳ ಪಾಲಿದೆ. ರಿಲಯನ್ಸ್ ರಿಟೇಲ್ ಭಾರತದಲ್ಲಿ  7,000 ನಗರಗಳಲ್ಲಿ ತನ್ನ ಕಾರ್ಯಕ್ಷೇತ್ರವನ್ನು ಹೊಂದಿದೆ. 217 ಬಿಲಿಯನ್ ಡಾಲರ್‌ ಮೌಲ್ಯದ ರಿಲಯನ್ಸ್‌ ಇಂಡಸ್ಟ್ರೀಸ್‌ (Reliance Industries) ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ರಿಲಯನ್ಸ್‌ ರೀಟೇಲ್‌ (Reliance Retail) ಕಂಪನಿಯ ಮುಖ್ಯಸ್ಥೆಯನ್ನಾಗಿ (Chairperson) ಇಶಾ ಅಂಬಾನಿಯನ್ನು ತಂದೆ ಮುಖೇಶ್‌ ಅಂಬಾನಿ ಆಗಸ್ಟ್ ನಲ್ಲಿ ನೇಮಕ ಮಾಡಿದ್ದರು. 
 

click me!