
ಮುಂಬೈ (ಅ. 27): ದೀಪಾವಳಿ ಹಬ್ಬದ ಧನ್‌ತೇರಸ್ ಪ್ರಯುಕ್ತ ನಿರೀಕ್ಷೆಗೂ ಮೀರಿ 30 ಟನ್ ಚಿನ್ನಾಭರಣ ಮಾರಾಟವಾಗಿದೆ ಎಂದು ಭಾರತೀಯ ಚಿನ್ನದ ಪೇಟೆ ಹಾಗೂ ಚಿನ್ನಾಭರಣ ಅಸೋಸಿಯೇಷನ್ ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಮೆಹ್ತಾ ತಿಳಿಸಿದ್ದಾರೆ.
ಖಜಾನೆಯಲ್ಲಿದ್ದ ಚಿನ್ನ ಮಾರಾಟಕ್ಕಿಟ್ಟ ಆರ್ ಬಿಐ!
ಈ ಹಿಂದಿನ ವರ್ಷದ ಧನ್‌ತೇರಸ್ ಪ್ರಯುಕ್ತ 40 ಟನ್‌ಗಳ ಚಿನ್ನಾಭರಣ ಮಾರಾಟವಾಗಿತ್ತು. ಆದರೆ, ಈ ಬಾರಿ ಚಿನ್ನದ ದರದಲ್ಲಿ ಏರಿಕೆ ಹಾಗೂ ಹಣದ ಕೊರತೆಯಿಂದಾಗಿ 20 ಟನ್ ಚಿನ್ನವಷ್ಟೇ ಮಾರಾಟವಾಗುವ ನಿರೀಕ್ಷೆಯಿತ್ತು. ಈ ಹಿನ್ನೆಲೆಯಲ್ಲಿ ಇದು ನಿರೀಕ್ಷೆಗೂ ಮೀರಿದ ಚಿನ್ನದ ಮಾರಾಟವಾಗಿದೆ.
ದೀಪಾವಳಿಗೆ ಚಿನ್ನ ಖರೀದಿ: ಟ್ಯಾಕ್ಸ್ ರೂಲ್ಸ್ ಗೊತ್ತಿರದಿದ್ರೆ ಮನೆಗೆ ಬರಲು ಐಟಿ ರೆಡಿ!
ಚಿನ್ನದ ಮೇಲಿನ ಆಮದು ಸುಂಕದ ಏರಿಕೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯೇರಿಕೆ ಕಾರಣದಿಂದ ಭಾರತದ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರಿತ್ತು ಎಂದು ಮೆಹ್ತಾ ಅವರು ಹೇಳಿದ್ದಾರೆ.
ಅಕ್ಟೋಬರ್ 27ರ ಟಾಪ್ 10 ಸುದ್ದಿಗಾಗಿ ಕ್ಲಿಕ್ ಮಾಡಿ:
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.