ಕರ್ಣಾಟಕ ಬ್ಯಾಂಕಿಗೆ 114 ಕೋಟಿ ಲಾಭ

By Kannadaprabha News  |  First Published Jul 24, 2022, 1:30 AM IST

ನಿವ್ವಳ ಲಾಭ ಶೇ.7.69ರ ದರದಲ್ಲಿ ವೃದ್ಧಿಗೊಂಡಿದೆ. ಬ್ಯಾಂಕಿನ ನಿವ್ವಳ ಬಡ್ಡಿ ಮಾರ್ಜಿನ್‌ ಶೇ.3.33ಕ್ಕೆ ತಲುಪಿ ಉತ್ತಮಗೊಂಡಿದೆ: ಮಹಾಬಲೇಶ್ವರ 


ಮಂಗಳೂರು(ಜು.24):  ಕರ್ಣಾಟಕ ಬ್ಯಾಂಕ್‌ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದ ಅಂತ್ಯಕ್ಕೆ (30.06.2022) .114.05 ಕೋಟಿ ನಿವ್ವಳ ಲಾಭ ಘೋಷಿಸಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕ ಅಂತ್ಯಕ್ಕೆ ಅಂದರೆ 30.06.2021ರಲ್ಲಿ .105.91 ಕೋಟಿ ಲಾಭ ದಾಖಲಿಸಿತ್ತು. ಇದರಿಂದ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕ್‌ ಶೇ.7.69ರ ಬೆಳವಣಿಗೆಯನ್ನು ಸಾಧಿಸಿದಂತಾಗಿದೆ. ಮಂಗಳೂರಿನ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ವಿತ್ತೀಯ ವರ್ಷ 2022-23ರ ಮೊದಲ ತ್ರೈಮಾಸಿಕದ ಹಣಕಾಸು ವರದಿಯನ್ನುಅಂಗೀಕರಿಸಲಾಯಿತು.

ಬ್ಯಾಂಕಿನ ನಿರ್ವಹಣಾ ಲಾಭ 30.06.2022ರ ಅಂತ್ಯಕ್ಕೆ .412.65 ಕೋಟಿ ತಲುಪಿದೆ. ಅಂತೆಯೇ ನಿವ್ವಳ ಬಡ್ಡಿ ಆದಾಯ ಶೇ.19.62ರ ಬೆಳವಣಿಗೆಯೊಂದಿಗೆ .687.56 ಕೋಟಿಗಳಿಗೆ ಏರಿದ್ದು, ಇದು 30.06.2021ರಲ್ಲಿ .574.79 ಕೋಟಿಗಳಾಗಿತ್ತು.

Tap to resize

Latest Videos

ಮಲೆನಾಡಿನ ಹಳ್ಳಿಗಳಿಗೂ ಬಂತು ಕರ್ಣಾಟಕ ಬ್ಯಾಂಕ್‌, ಬಶ್ರೀಕಟ್ಟೆಯಲ್ಲಿ 886 ನೇ ಶಾಖೆ ಆರಂಭ

ಬ್ಯಾಂಕಿನ ಒಟ್ಟು ವ್ಯವಹಾರ 30.06.2022ರ ಅಂತ್ಯಕ್ಕೆ ಶೇ.8.67ರ ವೃದ್ಧಿಯೊಂದಿಗೆ .1,38,935.71 ಕೋಟಿ ತಲುಪಿದ್ದು, ಇದು 30.06.2021ರಲ್ಲಿ .1,27,846.08 ಕೋಟಿ ಆಗಿತ್ತು. 30.06.2022ರ ಅಂತ್ಯಕ್ಕೆ ಠೇವಣಿಗಳ ಮೊತ್ತ ಶೇ.5.72ರ ವೃದ್ಧಿಯೊಂದಿಗೆ .80,576.38 ಕೋಟಿ ಹಾಗೂ ಮುಂಗಡಗಳು ಶೇ.13.03ರ ವೃದ್ಧಿಯೊಂದಿಗೆ .58,359.33 ಕೋಟಿಗೆ ಏರಿವೆ. ಇವು 30.06.2021ರಲ್ಲಿ ಕ್ರಮವಾಗಿ .76,214.60 ಕೋಟಿ ಮತ್ತು 51,631.48 ಕೋಟಿ ರು. ಆಗಿತ್ತು.

ಬ್ಯಾಂಕಿನ ಅನುತ್ಪಾದಕ ಆಸ್ತಿಗಳಲ್ಲಿ ಸಾಕಷ್ಟು ಚೇತರಿಕೆ ಕಂಡಿದೆ. ಮೊದಲ ತ್ರೈಮಾಸಿಕ ಅಂತ್ಯಕ್ಕೆ ಬ್ಯಾಂಕಿನ ಸ್ಥೂಲ ಅನುತ್ಪಾದಕ ಆಸ್ತಿಗಳು (ಜಿಎನ್‌ಪಿಎ) ಶೇ.4.03ಕ್ಕೆ ಇಳಿಕೆ ಕಂಡಿದ್ದು, .2,401.39 ಕೋಟಿ ಆಗಿದೆ. 30.06.2021ರಲ್ಲಿ ಶೇ.14.58ರಷ್ಟಿದ್ದ ಬಂಡವಾಳ ಪರ್ಯಾಪ್ತತಾ ಅನುಪಾತ(ಕ್ಯಾಪಿಟಲ್‌ ಅಡೆಕ್ವೆಸಿ ರೇಶ್ಯೂ) ಈ ತ್ರೈಮಾಸಿಕದ ಅಂತ್ಯಕ್ಕೆ ಇನ್ನೂ ಉತ್ತಮಗೊಂಡು ಶೇ.15.41ರಷ್ಟಾಗಿದೆ.

ಸಿಇಒ ಸಂತಸ

ನಮ್ಮ ಮುಂಗಡಗಳು ಶೇ.13.03ರ ದರದಲ್ಲಿ ವೃದ್ಧಿಗೊಂಡಿದ್ದು, ಉಳಿತಾಯ ಹಾಗೂ ಚಾಲ್ತಿ ಖಾತೆಯ (ಕಾಸಾ) ಠೇವಣಿಗಳು ಶೇ.12.51ರಷ್ಟು ಹೆಚ್ಚಳಗೊಂಡಿವೆ. ನಿವ್ವಳ ಲಾಭ ಶೇ.7.69ರ ದರದಲ್ಲಿ ವೃದ್ಧಿಗೊಂಡಿದೆ. ಬ್ಯಾಂಕಿನ ನಿವ್ವಳ ಬಡ್ಡಿ ಮಾರ್ಜಿನ್‌ ಶೇ.3.33ಕ್ಕೆ ತಲುಪಿ ಉತ್ತಮಗೊಂಡಿದೆ ಅಂತ ಕರ್ಣಾಟಕ ಬ್ಯಾಂಕ್‌ ಎಂಡಿ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್‌. ತಿಳಿಸಿದ್ದಾರೆ.  
 

click me!