ಮಾರುತಿ ಜಿಪ್ಸಿ ಉತ್ಪಾದನೆ ಅಂತ್ಯ- ಇನ್ಮುಂದೆ ಸಿಗಲ್ಲ ಫೇವರಿಟ್ ಕಾರು!

Published : Mar 05, 2019, 02:17 PM ISTUpdated : Mar 05, 2019, 09:44 PM IST
ಮಾರುತಿ ಜಿಪ್ಸಿ ಉತ್ಪಾದನೆ ಅಂತ್ಯ-  ಇನ್ಮುಂದೆ ಸಿಗಲ್ಲ ಫೇವರಿಟ್ ಕಾರು!

ಸಾರಾಂಶ

ಮಾರುತಿ ಸುಜುಕಿ ಸಂಸ್ಥೆಯ ಜಿಪ್ಸಿ ಕಾರು ಗುಡ್ ಬೈ ಹೇಳಿದೆ. 1985ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಜಿಪ್ಸ್, ಭಾರತೀಯ ಸೇನೆ, ಪೊಲೀಸ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಜಿಪ್ಸಿ ಈಗಲೂ ನೆಚ್ಚಿನ ವಾಹನವಾಗಿ ಗುರುತಿಸಿಕೊಂಡಿದೆ. ಆದರೆ ಇದೀಗ ನಿರ್ಮಾಣ ಸ್ಥಗಿತಗೊಳಿಸಿದೆ.  

ನವದೆಹಲಿ(ಮಾ.05): ಬರೋಬ್ಬರಿ 34 ವರ್ಷಗಳ ಕಾಲ ಹೆಚ್ಚಿನ ಯಾವುದೇ ಬದಲಾವಣೆ ಇಲ್ಲದೆ ಭಾರತದಲ್ಲಿ ಮಿಂಚಿದ ಮಾರುತಿ ಜಿಪ್ಸಿ ಇದೀಗ ನಿರ್ಮಾಣ ಅಂತ್ಯಗೊಳಿಸಿದೆ. ಇನ್ಮುಂದೆ ಭಾರತದಲ್ಲಿ ಜಿಪ್ಸಿ ವಾಹನ ಬುಕಿಂಗ್ ಇಲ್ಲ, ನಿರ್ಮಾಣವೂ ಇಲ್ಲ. ಮಾರುತಿ ಸುಜುಕಿ ಅಧಿಕೃತವಾಗಿ ಜಿಪ್ಸಿ ನಿರ್ಮಾಣ ಸ್ಥಗಿತಗೊಳಿಸಿರುವುದಾಗಿ ಹೇಳಿದೆ.

ಇದನ್ನೂ ಓದಿ: ಅಮಿತಾಬ್ ಬಚ್ಚನ್ ರೋಲ್ಸ್ ರಾಯ್ಸ್ ಮಾರಾಟ- ಬೆಂಗಳೂರಿಗೆ ಬಂತು ದುಬಾರಿ ಕಾರು!

1985ರಲ್ಲಿ ಮಾರುತಿ ಜಿಪ್ಸಿ ಭಾರತದ ರಸ್ತೆಗಿಳಿದಿತ್ತು. 1. 0 ಲೀಟರ್ ಎಂಜಿನ್‌ನಿಂದ 1.3 ಲೀಟರ್ ಎಂಜಿನ್‌ಗೆ ಅಪ್‌ಗ್ರೇಡ್ ಹೊಂದಿದ್ದ ಜಿಪ್ಸಿ ವಿನ್ಯಾಸದಲ್ಲಾಗಲಿ ಇತರ ಯಾವುದೇ ಬಿಡಿ ಭಾಗಗಳಲ್ಲಿ ಬದಲಾವಣೆಯಾಗಿಲ್ಲ. ಆದರೆ ಹೊಸ ನಿಯಮಗಳು ಜಿಪ್ಸಿ ಮುಂದುವರಿಗೆ ಅವಕಾಶ ನೀಡುತ್ತಿಲ್ಲ.

ಇದನ್ನೂ ಓದಿ: ಸ್ಕೋಡಾ ಒಕ್ಟಾವಿಯಾ VS ಮಾರುತಿ ಇಗ್ನಿಸ್ ರೇಸ್- ಅಚ್ಚರಿ ನೀಡಿದ ರಿಸಲ್ಟ್!

ನೂತನ ಜಿಪ್ಸಿ BS4 ಎಂಜಿನ್ ಹೊಂದಿದೆ. ಆದರೆ ಎಬಿಎಸ್ ಹಾಗೂ ಏರ್‌ಬ್ಯಾಗ್ ಹೊಂದಿಲ್ಲ. ಕನಿಷ್ಠ ಸುರಕ್ಷತೆ ಇಲ್ಲದೆ ವಾಹನಗಳನ್ನ ಭಾರತದಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ. ಇದೀಗ ಜಿಪ್ಸಿ ಸುರಕ್ಷತೆ ಹಾಗೂ ಎಮಿಶನ್‌ ಟೆಸ್ಟ್‌ಲ್ಲೂ ವೈಫಲ್ಯ ಅನುಭವಿಸಿದೆ. ಹೀಗಾಗಿ ಜಿಪ್ಸಿ ವಿದಾಯ ಹೇಳಿದೆ.

ಇದನ್ನೂ ಓದಿ: ಸಾಬೀತಾಯ್ತು ಟಾಟಾ ನೆಕ್ಸಾನ್ ಕಾರು ಸುರಕ್ಷತೆ- ಪಿಲ್ಲರ್ ಬಿದ್ದರೂ ಪ್ರಯಾಣಿಕರು ಸೇಫ್!

ಜಿಪ್ಸಿ ಬೆಲೆ 7.5 ಲಕ್ಷ ರೂಪಾಯಿ. ಭಾರತೀಯ ಸೇನೆ, ಪೊಲೀಸ್, ಆಫ್ ರೋಡ್ ಡ್ರೈವ್ ಹಾಗೂ ಹಿಲ್ ಸ್ಟೇಶನ್‌ ಪ್ರದೇಶಗಳಲ್ಲಿ ಮಾರುತಿ ಜಿಪ್ಸಿ ಹೆಚ್ಚಾಗಿ ಬಳಕೆಯಾಗುತ್ತಿದೆ. 80bhp ಪೀಕ್ ಪವರ್ ಹಾಗೂ 103 nm ಪೀಕ್ ಟಾರ್ಕ್ ಉತ್ಪಾದಿಸ ಬಲ್ಲ ಜಿಪ್ಸಿ, ಭಾರತದ ರಸ್ತೆಗಳಿಗೆ ಹೇಳಿ ಮಾಡಿಸಿದ ವಾಹನ. 34 ವರ್ಷಗಳ ಕಾಲ ಭಾರತೀಯ ಕಾರು ಪ್ರಿಯರಲ್ಲಿ ಕ್ರೇಜ್ ಹುಟ್ಟಿಸಿದ ಜಿಪ್ಸಿ ಇದೀಗ ಓಟ ನಿಲ್ಲಿದೆ.
 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ