ಹಿರೋ Xtreme 200R ಬೈಕ್ ಆ್ಯಡ್ - ನಿಯಮ ಉಲ್ಲಂಘಿಸಿದ ಕೊಹ್ಲಿ!

By Web Desk  |  First Published Mar 4, 2019, 9:12 PM IST

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೀರೋ Xtreme 200R ಬೈಕ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ಬಿಡುಗಡೆಯದ ಈ ಬೈಕ್ ಜಾಹೀರಾತು ಇದೀದ ವಿವಾದಕ್ಕೆ ಕಾರಣವಾಗಿದೆ. ಇಲ್ಲಿದೆ ಹೆಚ್ಚಿನ ವಿವರ.
 


ನವದೆಹಲಿ(ಮಾ.04): ಕಳೆದ ವರ್ಷ ಹಿರೋ ಮೋಟಾರ್ ಕಾರ್ಪ್ ನೂತನ ಹಿರೋ Xtreme 200R ಬೈಕ್ ಬಿಡುಗಡೆ ಮಾಡಿತ್ತು. ಈ ಬೈಕ್ ಜಾಹೀರಾತಿನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಜಾಹೀರಾತಿನಲ್ಲಿ ವಿರಾಟ್ ಕೊಹ್ಲಿ ASCI(Advertising Standards Council of India) ನಿಮಯ ಉಲ್ಲಂಘಿಸಿದ್ದಾರೆ.

ಇದನ್ನೂ ಓದಿ: ಮಾರುತಿ ವ್ಯಾಗನ್ಆರ್ CNG ಕಾರಿನ ಬೆಲೆ ಬಹಿರಂಗ!

Tap to resize

Latest Videos

undefined

ಭಾರತದಲ್ಲಿ ಟಿವಿ ಜಾಹೀರಾತುಗಳ ಪ್ರಸಾರ ಸ್ವಯಂ ನಿಯಂತ್ರಣ ಸಂಸ್ಥೆ  ASCI ಪ್ರಕಾರ ವಿರಾಟ್ ಕೊಹ್ಲಿ ಹಲವು ನಿಯಮ ಉಲ್ಲಂಘಿಸಿದ್ದಾರೆ. ಈ ಜಾಹೀರಾತಿನಲ್ಲಿ ಕೊಹ್ಲಿ RASH ರೈಡ್ ಮಾಡಿದ್ದಾರೆ. ಜೊತೆ ಅಪಾಯಕಾರಿ ಸ್ಟಂಟ್‌ಗಳನ್ನೂ ಮಾಡಿದ್ದಾರೆ. ರಸ್ತೆಯಲ್ಲಿ ಇತರ ಬೈಕ್‌ಗಳ ಜೊತೆ ರೇಸ್ ಮಾಡಿದ್ದಾರೆ. ಪಾದಾಚಾರಿ ಸುರಕ್ಷೆತೆಯನ್ನ ಕಡೆಗಣಿಸಿದ್ದಾರೆ. ಇಷ್ಟೇ ಅಲ್ಲ ಎರಡು ಟ್ರಕ್‌ಗಳ ಮಧ್ಯೆ ಬೈಕ್ ಓಡಿಸಿದ್ದಾರೆ. ಈ ಮೂಲಕ ಹಲವು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು  ASCI ಹೇಳಿದೆ.

ಇದನ್ನೂ ಓದಿ: ಹೆಲ್ಮೆಟ್ ಹಾಕದ ವೋಕ್ಸ್‌‌ವ್ಯಾಗನ್ ಕಾರು ಚಾಲಕನಿಗೆ ದಂಡ!

ವಿರಾಟ್ ಕೊಹ್ಲಿ ಜಾಹೀರಾತಿನಲ್ಲಿ ಸೆಲೆಬ್ರೆಟಿ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ASCI ಹೀರೋ ಮೋಟಾರ್ ಕಾರ್ಪ್‌ಗೆ ನೊಟೀಸ್ ನೀಡಿದೆ. ಇಷ್ಟೇ ಅಲ್ಲ ಈ ಜಾಹೀರಾತು ಬದಲಿಸಲು ಸೂಚಿಸಿದೆ. ಈ ಜಾಹೀರಾತಿನಲ್ಲಿ ಈ ಎಲ್ಲಾ ಸ್ಟಂಟ್ ಕೊಹ್ಲಿ ಮಾಡಿಲ್ಲ. ಆದರೆ ಸಂಪೂರ್ಣ ಜಾಹೀರಾತಿನಲ್ಲಿ ಕೊಹ್ಲಿ ಬೈಕ್ ರೈಡ್, ಸ್ಟಂಟ್ ಮಾಡಿರುವ ರೀತಿ ಬಂಬಿಸಲಾಗಿದೆ. ಸೆಲೆಬ್ರೆಟಿಗಳು ಈ ನಡೆ ಇತರ ಬೈಕ್ ರೈಡರ್‌ಗಳಿಗೆ ಉತ್ತೇಜನ ನೀಡುವಂತಿದೆ ಎಂದು  ASCI ಹೇಳಿದೆ. ಇದು ರಸ್ತೆ ನಿಯಮ ಉಲ್ಲಂಘನೆಗೆ ಕಾರಣವಾಗುತ್ತೆ ಎಂದಿದೆ. 

click me!