ಪೊಲೀಸ್ ಇಲಾಖೆಗೆ 242 ಮಹೀಂದ್ರ TUV300 SUV ಕಾರು!

By Web Desk  |  First Published Jan 5, 2019, 11:15 AM IST

ಪೊಲೀಸ್ ಇಲಾಕೆ ಮತ್ತಷ್ಟು ಬಲಪಡಿಸಲು ಇದೀಗ ನೂತನ ಮಹೀಂದ್ರ TUV300 SUV ಕಾರು ನೀಡಲಾಗಿದೆ. ಬಲಿಷ್ಠ ಎಂಜಿನ್ ಹಾಗೂ ಪವರ್ ಹೊಂದಿರುವ ಕಾರು ಕಳ್ಳರನ್ನ ಹಿಡಿಯಲು, ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಲು ನೆರವಾಗಲಿದೆ. 


ವಿಜಯವಾಡ(ಜ.05): ಪೊಲೀಸ್ ಇಲಾಖೆ ಬಲಪಡಿಸಲು ಅತ್ಯಾಧುನಿಕ ತಂತ್ರಜ್ಞಾನ, ಬಲಿಷ್ಠ ವಾಹನಗಳನ್ನ ಇಲಾಖೆಗೆ ಸೇರ್ಪಡೆಗೊಳಿಸುತ್ತಿದೆ. ಈ ಮೂಲಕ ಕಳ್ಳರನ್ನ ಹೆಡೆಮುರಿ ಕಟ್ಟಲು, ಅತ್ಯುತ್ತಮ ಸಾರ್ವಜನಿಕೆ ಸೇವೆ ಒದಗಿಸಲು ಇಲಾಖೆ ಸದಾ ಸನ್ನದ್ಧವಾಗಿದೆ.

ಇದನ್ನೂ ಓದಿ: ಬಜಾಜ್ ಪಲ್ಸಾರ್‌ಗೆ ಗುಡ್ ಬೈ- TVS ಅಪಾಚೆ ಮೊರೆ ಹೋದ ಬೆಂಗಳೂರು ಪೊಲೀಸ್!

Latest Videos

undefined

ಬೆಂಗಳೂರು ಪೊಲೀಸರಿಗೆ ಸರ್ಕಾರ ಇತ್ತೀಚೆಗೆ ನೂತನ 911 ಟಿವಿಎಸ್ ಅಪಾಚೆ ಬೈಕ್ ನೀಡಿತ್ತು. ಇದರ ಬೆನ್ನಲ್ಲೇ ಆಂಧ್ರಪ್ರದೇಶ ಸರ್ಕಾರ ಇದೀಗ ಪೊಲೀಸರಿಗೆ ಮಹೀಂದ್ರ TUV300 ಕಾರು ನೀಡಿದೆ. 242 SUV ಕಾರುಗಳನ್ನ ಸರ್ಕಾರ ನೀಡಿದೆ.

ಇದನ್ನೂ ಓದಿ:ಹೊಸ ವರ್ಷಕ್ಕೆ ಬಂಪರ್ ಆಫರ್- ಮಹೀಂದ್ರ ಕಾರುಗಳ ಮೇಲೆ ಭಾರಿ ಡಿಸ್ಕೌಂಟ್!

ವಿಜಯವಾಡದ IGM ಕ್ರೀಡಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ 242 ಮಹೀಂದ್ರ TUV300 ಕಾರುಗಳನ್ನ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಈ ಮೂಲಕ ಮುಂಬೈ, ರಾಜಸ್ಥಾನ, ಕೇರಳ ಹಾಗೂ ಅರುಣಾಚಲ ಪ್ರದೇಶ ಪೊಲೀಸರ ಬಳಿಕ ಇದೀಗ ಆಂಧ್ರಪ್ರದೇಶ ಪೊಲೀಸರು ಕೂಡ ಮಹೀಂದ್ರ TUV300 ಕಾರು ಬಳಸುತ್ತಿದ್ದಾರೆ.

ಇದನ್ನೂ ಓದಿ: ರೋಲ್ಸ್ ರಾಯ್ಸ್ ದುಬಾರಿ ಕಾರು ಖರೀದಿಸಿದ ಭಾರತದ ಮೊದಲ ಮಹಿಳೆ!

ಮಹೀಂದ್ರ TUV300 ಕಾರು 7 ಸೀಟರ್ ಸಾಮರ್ಥ್ಯ ಹೊಂದಿದೆ. mHAWK100 ಪವರ್ ಎಂಜಿನ್ ಹೊಂದಿರುವ ಈ SUV ಕಾರು,  100 PS ಪವರ್ ಹಾಗೂ 240 Nm ಟಾರ್ಕ್ ಉತ್ಪಾದಿಸಲಿದೆ. 5 ಸ್ಪೀಡ್ ಟ್ರಾನ್ಸಮಿಶನ್ ಹೊಂದಿರುವ ಮಹೀಂದ್ರ TUV300 ಸಿಟಿಯಲ್ಲಿ 11.4 ಕಿ.ಮೀ ಮೈಲೇಜ್ ಹಾಗೂ ಹೈವೇಯಲ್ಲಿ 15.5 ಕಿ.ಮೀ ಮೈಲೇಜ್ ನೀಡಲಿದೆ. 
 

click me!