ರೋಡ್ ಟ್ರಿಪ್‌ನಲ್ಲಿ ಎದುರಾಗೋ 5 ಸಮಸ್ಯೆಗಳು ಮತ್ತು ಪರಿಹಾರ!

By Web Desk  |  First Published Jan 4, 2019, 8:49 PM IST

ಲಾಂಗ್ ಟ್ರಿಪ್, ಕಾರು ಡ್ರೈವ್ ಹೆಚ್ಚಿನವರಿಗೆ ಹೊಸ ಥ್ರಿಲ್ ನೀಡುತ್ತೆ. ಆದರೆ ಪ್ರಯಾಣದಲ್ಲಿ ಎದುರಾಗೋ ಕೆಲ ಸಮಸ್ಯೆಗಳು ನಮ್ಮ ಸಂತಸವನ್ನೇ ಕಸಿದುಬಿಡುತ್ತೆ. ರೋಡ್ ಟ್ರಿಪ್‌ನಲ್ಲಿ ಎದುರಾಗೋ ಪ್ರಮುಖ 5 ಸಮಸ್ಯೆಗಳನ್ನ ಇಲ್ಲಿ ಹೇಳಲಾಗಿದೆ. ಅದಕ್ಕೆ ಪರಿಹಾರ ಕೂಡ ನೀಡಲಾಗಿದೆ.
 


ಬೆಂಗಳೂರು(ಜ.04): ಲಾಂಗ್ ಟ್ರಿಪ್, ರೋಡ್ ಟ್ರಿಪ್ ಅಂದರೆ ಸಾಕು ಎಲ್ಲರಿಗೂ ಅದೇನೋ ಉತ್ಸಾಹ. ಒಂದೆರೆಡು ದಿನ ಸುಂದರ ತಾಣಗಲ್ಲಿ ಸಂಚರಿಸುವ ಅನುಭವ ಮಧುರ. ಆದರೆ ಈ ಪ್ರಯಾಣದಲ್ಲಿ ಕೆಲವೊಮ್ಮೆ ದಿಢೀರ್ ಸಮಸ್ಯೆಗಳು ಎದುರಾಗುತ್ತವೆ. ಸಮಸ್ಯೆ ಎದುರಾದಾಗ ವಿಚಲಿತರಾಗಬೇಕಿಲ್ಲ. ಹೀಗಾಗಿ ಎದುರಾಗೋ ಪ್ರಮುಖ 5 ಸಮಸ್ಯೆಗಳನ್ನ ಪಟ್ಟಿ ಮಾಡಲಾಗಿದೆ.  ಇಷ್ಟೇ ಅಲ್ಲ ಪರಿಹಾರ ಕೂಡ ಇದೆ.

ಇದನ್ನೂ ಓದಿ: 6 ಲಕ್ಷ ರೂಪಾಯಿಗೆ ಸೋಲಾರ್ ಬಸ್ - ವಿದ್ಯಾರ್ಥಿಗಳ ಹೊಸ ಆವಿಷ್ಕಾರ!

Tap to resize

Latest Videos

undefined

ಫ್ಲಾಟ್ ಟೈಯರ್
ಅದೆಷ್ಟೆ ಪ್ಲಾನ್ ಮಾಡಿದರೂ ಪ್ರತಿ ವಿಚಾರವನ್ನೂ ಸೂಕ್ಷ್ಮವಾಗಿ ಗಮನಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಕಾರಿನ ಟೈಯರ್ ಫ್ಲಾಟ್ ಆಗಿದ್ದಾಗ ಸಮಸ್ಯೆ ಎದುರಾಗುತ್ತೆ. ಕಳೆದ ವಾರವಷ್ಟೇ 500 ಕಿ.ಮೀ ಪ್ರಯಾಣ ಮಾಡಿದ್ದೇವೆ, ಹೀಗಾಗಿ ಸಮಸ್ಯೆ ಎದುರಾಗಲ್ಲ ಅಂದುಕೊಂಡು ಹೊರಟಾಗಲೇ ಸಮಸ್ಯೆ ಪ್ರತ್ಯಕ್ಷವಾಗೋದು. ಟೈಯರ್ ಪಂಚರ್ ಆಗೋದು ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಜಾಕ್, ನಟ್, ಸ್ಪಾನರ್ ಸೇರಿದಂತೆ ಸಲಕರಣೆಗಳು ಇರಲಿ. ಪ್ರಯಾಣಕ್ಕಿಂತ ಮುಂಚೆ ಟೈಯರ್ ಪರಿಶೀಲಿಸಿದರೆ ಸೂಕ್ತ.

ದಾರಿಗೊತ್ತಿಲ್ಲ,ಕೇಳಲು ಯಾರೂ ಇಲ್ಲ
ಮ್ಯಾಪ್ ಹಾಕಿದರೆ ಸಾಕು, ಯಾರನ್ನೂ ದಾರಿ ಕೇಳಬೇಕಿಲ್ಲ ಸ್ಪಷ್ಟವಾಗಿ ಸ್ಥಳ ತಲುಪಬಹುದು. ಆದೆರೆ ಕಾಡು ಪ್ರದೇಶ, ಹಳ್ಳಿಗಳಲ್ಲಿ ಇಂಟರ್ ನೆಟ್  ಸರಿಯಾಗಿ ಬಳಕೆಯಾಗದೇ ಇರಬಹುದು. ಇಷ್ಟೇ ಅಲ್ಲ ಕೇಳಲು ಯಾರೂ ಸಿಗದೇ ಇರಬಹುದು.  ಹೀಗಾಗಿ ಪ್ರಯಾಣದ ಆರಂಭದಲ್ಲೇ ಮ್ಯಾಪ್ ಹಾಕಿಕೊಂಡಿರಿ. ಮೊಬೈಲ್ ಚಾರ್ಜರ್ ಇಟ್ಟಕೊಂಡಿರಿ.  ಪ್ರಯಾಣದ ಮೊದಲೇ ನಿಮ್ಮ ದಾರಿ ಕುರಿತು ಪರಿಶೀಲಿಸಿ, ಪ್ರಮುಖ ಲ್ಯಾಂಡ್ ಮಾರ್ಕ್ ಗಮನಿಸಿ.

ಇದನ್ನೂ ಓದಿ: ಬೀಚ್‌ಗೆ ಹೋದ ಸಚಿವರ ಕಾರಿಗೆ ಬಂತು ಸಂಕಟ-ವಿಡಿಯೋ ವೈರಲ್

ಕಳಪೆ ಗುಣಮಟ್ಟದ ಇಂಧನ
ಕಾರಿನ ಪೆಟ್ರೋಲ್ ಅಥಾವ ಡೀಸೆಲ್ ಅಲರಾಮ್ ಹೊಡೆಯುವುದಕ್ಕಿಂತ ಮುಂಚೆಯೇ ಟ್ಯಾಂಕ್ ತುಂಬಿಸಿ. ಆದೆರೆ ಕೆಲವೊಮ್ಮೆ ಕಡಿಮೆ ಗುಣಮಟ್ಟದ ಇಂಧನದಿಂದ ಕಾರಿನ ಮೈಲೇಜ್, ಎಂಜಿನ್‌ಗೂ ಹೊಡೆತ ಬೀಳಲಿದೆ. ಹೀಗಾಗಿ ಗುಣಮಟ್ಟದ ಇಂಧನ ಬಳಸಿ

ಪ್ರಯಾಣದಲ್ಲಿ ಅಸ್ವಸ್ಥ
ದೂರ ಪ್ರಯಾಣ, ಹೆಚ್ಚು ತಾಸು ಪ್ರಯಾಣ, ದುಸ್ತರ ದಾರಿ,  ವಾತಾವರಣ ಬದಲಾವಣೆ, ದೇಹದಲ್ಲಿ ಕಡಿಮೆ ನೀರಿನ ಪ್ರಮಾಣ, ರಸ್ತೆ ಬದಿ ತಿಂಡಿ ತಿನಿಸು ಸೇರಿದಂತೆ ಹಲವು ಕಾರಣಗಳಿಂದ ಪ್ರಯಾಣದಲ್ಲಿ ಅನಾರೋಗ್ಯದಿಂದ ಅಸ್ವಸ್ಥರಾಗುವು ಸಾಧ್ಯತೆ ಇದೆ. ಹೀಗಾಗಿ ಪ್ರಥಮ ಚಿಕಿತ್ಸೆ ಕಿಟ್ ಸೇರಿದಂತೆ ಅಗತ್ಯ ವಸ್ತುಗಳನ್ನ ಮರೆಯದೇ ಕೊಂಡೊಯ್ಯಿರಿ.

ಇದನ್ನೂ ಓದಿ: ವರ್ಷದ ಅತ್ಯುತ್ತಮ ಕಾರು-ಬೈಕ್ ಪ್ರಶಸ್ತಿ ಪ್ರಕಟ-ಇಲ್ಲಿದೆ ಲಿಸ್ಟ್!

ಬ್ರೇಕ್ ಡೌನ್
ದಿಢೀರ್ ಟ್ರಿಪ್ ಪ್ಲಾನ್‌ನಿಂದ ಕಾರು ಪರಿಶೀಲಿಸಲು ಸಮಯ ಸಿಗದೇ ಇರುವ ಸಾಧ್ಯತೆ ಇದೆ. ಪ್ರಯಾಣದ  ವೇಳೆ ಕಾರಿನ ಬ್ರೇಕ್ ಫೇಲ್ ಆಗುವ ಸಂಭವ ಇದೆ.  ಅಥವಾ ಬ್ರೇಕ್ ವೀಕ್ ಆಗಿರುವ ಸಾಧ್ಯತೆ ಇದೆ. ಹೀಗಾಗಿ ಮೊದಲೇ ಮೆಕಾನಿಕ್ ಬಳಿ ಪರಿಶೀಲಿಸಿಕೊಳ್ಳಿ.
ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!