ಈ ಗಿಡ ಮನೆಯಲ್ಲಿದ್ದರೆ ಸಂಕಟ ಗ್ಯಾರಂಟಿ

By Web DeskFirst Published Jul 26, 2018, 2:02 PM IST
Highlights

ಈ ಗಿಡ ಮನೆಯಲ್ಲಿದ್ದರೆ ಸಂಕಟ ಗ್ಯಾರಂಟಿ ತುಳಸಿಯಂಥ ಗಿಡಗಳು ಆರೋಗ್ಯಕ್ಕೂ ಒಳ್ಳೆಯದು. ಒಳ್ಳೆಯ ಗಾಳಿಯನ್ನೂ ಕೊಡುತ್ತದೆ. ಆದರೆ, ಕೆಲವು ಗಿಡಗಳು ಮನೆಯಲ್ಲಿದ್ದರೆ ಸಂಕಷ್ಟ ಗ್ಯಾರಂಟಿ. ವಾಸ್ತು ಶಾಸ್ತ್ರದಲ್ಲಿ ಈ ಗಿಡಗಳು ಮನೆ ಸುತ್ತಿ ಇರಬಾರದು ಎನ್ನಲಾಗುತ್ತದೆ.

ಮನೆಯನ್ನು ಸುಂದರ ಹಾಗು ಆಕರ್ಷಕವಾಗಿ ಕಾಣುವಂತೆ ಮಾಡಲು ವಿಧ ವಿಧವಾದ ಗಿಡಗಳನ್ನು ಮನೆಯಲ್ಲಿ ಬೆಳೆಸುತ್ತಾರೆ. ಇದಕ್ಕಾಗಿ ಉದ್ಯಾವನ, ಬಾಲ್ಕನಿ ಗಾರ್ಡನ್, ಟೆರೇಸ್ ಗಾರ್ಡನ್ ಮಾಡಲಾಗುತ್ತದೆ. ಆದರೆ ಮನೆಯಲ್ಲಿ ಎಲ್ಲಾ ರೀತಿಯ ಗಿಡಗಳನ್ನು ನೆಡುವುದು ಉತ್ತಮ ಅಲ್ಲ. ಕೆಲವೊಂದು ಗಿಡಗಳನ್ನು ಮನೆಯಲ್ಲಿ ನೆಡುವುದರಿಂದ ದೋಷ ಕಾಣಿಸಿಕೊಳ್ಳುತ್ತದೆ. ಯಾವ ಗಿಡ ಮನೆಯಲ್ಲಿರಬಾರದು?

ಕಳ್ಳಿ ಗಿಡ: ವಾಸ್ತುವಿನ ಅನುಸಾರ ಮನೆಯಲ್ಲಿ ಮುಳ್ಳಿನ ಗಿಡಗಳು ಇರಬಾರದು. ಇದಲ್ಲದೆ ಯಾವ ಗಿಡದಲ್ಲಿ ಎಲೆಗಳಿಂದ ಹಾಲು ಬರುತ್ತದೋ, ಅಂಥ ಗಿಡವನ್ನು ನೆಡಬೇಡಿ. ಇದರಿಂದ ನಕಾರಾತ್ಮಕ ಶಕ್ತಿ ತುಂಬುತ್ತದೆ. ಜೊತೆಗೆ ಮನೆಯಲ್ಲಿ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ. 

ಬೋನ್ಸಾಯಿ ಗಿಡ : ಬೋನ್ಸಾಯಿ ಗಿಡಗಳನ್ನು ಮನೆಯಲ್ಲಿಟ್ಟರೆ ಅದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ. ಸಮಸ್ಯೆಗಳು ಉಂಟಾಗುತ್ತವೆ. 

ಹುಳಿ ಮತ್ತು ಮೆಹೆಂದಿ: ಈ ಮರಗಳಲ್ಲಿ ನಕಾರಾತ್ಮಕ ಶಕ್ತಿ ಮನೆ ಮಾಡಿರುತ್ತದೆ. ಆದುದರಿಂದ ಇದು ಮನೆಯಲ್ಲಿದ್ದರೆ ಅಶುಭ.

ಡೆಡ್ ಪ್ಲಾಂಟ್ಸ್: ಇದು ಆಮ್ಲಜನಕ ನೀಡೋ ಬದಲು, ಅದನ್ನು ಹೀರಿ ಕೊಳ್ಳುತ್ತದೆ. ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಮಾಡೋ ಇದು ಮನೆಯಲ್ಲಿರಬಾರದು. 

ಇತರೆ ವಾಸ್ತು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇಂಥ ಮೂರ್ತಿಗಳನ್ನು ಪೂಜಿಸಬೇಡಿ
ಸ್ವಸ್ತಿಕ ಚಿಹ್ನೆ ಇದ್ದರೆ ಶುಭ
ಮನೆಯಲ್ಲಿ ಎಲ್ಲಿರಬೇಕು ಅಕ್ವೇರಿಯಂ?

click me!