ಕೈ ಕುಣಿಸ್ತಾ ಮಾತನಾಡ್ತಿದ್ದರೆ ಕಣ್ಣು ಕೈ ಸೌಂದರ್ಯದ ಮೇಲೆ ನಾಟುತ್ತೆ. ಕೈಗೆ ಯಾವ ನೇಲ್ ಪಾಲಿಶ್ ಹಚ್ಚಿದ್ದಾಳೆ ಅಂತಾ ಹುಡುಗಿಯರು ನೋಡಿದ್ರೆ,ಆಕೆ ಉಗುರು ಚೆಂದ ಇದೆ ಅಂತಾ ಹುಡುಗ್ರು ಮನಸ್ಸಿನಲ್ಲಿ ಹೇಳಿಕೊಳ್ತಾರೆ. ಇನ್ಮುಂದೆ ಬರಿ ನೇಲ್ ಪಾಲಿಶ್,ಚೆಂದ ನೋಡಿ ಸುಮ್ನಾಗ್ಬೇಡಿ. ಉಗುರಿನ ಮೂಲಕವೇ ಆಕೆ ಸ್ವಭಾವ ತಿಳಿದುಕೊಳ್ಳಿ.
ಉಗುರು (nails) ಸೌಂದರ್ಯ (Beauty )ದ ಪ್ರತೀಕ. ಸಾಮಾನ್ಯವಾಗಿ ಯುವತಿಯರು ಉಗುರಿನ ಸೌಂದರ್ಯವನ್ನು ಹೆಚ್ಚಿಸಲು ನೇಲ್ ಪಾಲಿಶ್ ಸೇರಿದಂತೆ ನೇಲ್ ಆರ್ಟ್ ಮೊರೆ ಹೋಗ್ತಾರೆ. ಪ್ರತಿಯೊಬ್ಬರ ಉಗುರು ಭಿನ್ನವಾಗಿರುತ್ತದೆ. ಕೈ ಸೌಂದರ್ಯ ಹೆಚ್ಚಾಗುವುದು ಅವರ ಉಗುರಿನಿಂದ ಎಂದ್ರೆ ತಪ್ಪಾಗಲಾರದು. ಒಬ್ಬರ ಉಗುರು ಉದ್ದವಾಗಿದ್ದರೆ ಮತ್ತೊಬ್ಬರ ಉಗುರು ದುಂಡಗಿರುತ್ತದೆ. ಇನ್ನೊಬ್ಬರ ಉಗುರು ಬಾದಾಮಿ ಆಕಾರ (shapes)ದಲ್ಲಿದ್ದರೆ ಮತ್ತೊಬ್ಬರ ಉಗುರು ಮೊನಚಾಗಿರುತ್ತದೆ. ವ್ಯಕ್ತಿಯ ಪ್ರತಿಯೊಂದು ಅಂಗಕ್ಕೂ ಅವರ ಸ್ವಭಾವಕ್ಕೂ ಸಂಬಂಧವಿದೆ. ದೇಹದಲ್ಲಿರುವ ಮಚ್ಚೆ,ಕೈ ಆಕಾರ,ಮೂಗಿನ ಆಕಾರ, ಕಣ್ಣು,ಕಿವಿ ಹೀಗೆ ಬೇರೆ ಬೇರೆ ಅಂಗಗಳನ್ನು ನೋಡಿ ಅವರ ಸ್ವಭಾವವನ್ನು ಹೇಳಬಹುದು. ಹಾಗೆಯೇ ಸೌಂದರ್ಯದ ಪ್ರತೀಕವಾಗಿರುವ ಉಗುರು ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆಯೂ ಹೇಳುತ್ತದೆ. ಒಂದೊಂದು ಆಕಾರದ ಉಗುರು ಒಂದೊಂದು ವ್ಯಕ್ತಿತ್ವವನ್ನು ಬಿಂಬಿಸುತ್ತದೆ.
ಉಗುರಿನಲ್ಲಿದೆ ವ್ಯಕ್ತಿಯ ಗುಟ್ಟು
ಅಂಡಾಕಾರದ ಉಗುರು (Square Oval nails):
ಅಂಡಾಕಾರದ ಉಗುರನ್ನು ಹೊಂದಿರುವವರು ಬಹಳ ಮಹತ್ವಾಕಾಂಕ್ಷೆ ಮತ್ತು ದೃಢ ಮನಸ್ಸಿನವರಾಗಿರುತ್ತಾರೆ. ಪ್ರತಿ ಬಾರಿಯೂ ಪ್ರಯೋಗ ಮಾಡಲು ಅಂಡಾಕಾರದ ಉಗುರಿರುವವರು ಬಯಸುವುದಿಲ್ಲ. ಆದರೆ ಜೀವನವನ್ನು ಸುಂದರವಾಗಿಡಲು ಬಯಸುತ್ತಾರೆ.
ಹರಿತವಾದ ಉಗುರು (Edgy Nail) :
ಹರಿತವಾದ ಉಗುರುಳ್ಳವರು ವಿಶಿಷ್ಠ ಮತ್ತು ಸೃಜನಶೀಲ ವ್ಯಕ್ತಿತ್ವದವರಾಗಿರುತ್ತಾರೆ. ಸದಾ ಹೊಸತನಕ್ಕೆ ಇವರ ಮನಸ್ಸು ಹಂಬಲಿಸುತ್ತಿರುತ್ತದೆ.
Lizard Falling Meaning: ಹಲ್ಲಿ ಮೈ ಮೇಲೆ ಎಲ್ಲಿ ಬಿದ್ದರೆ ಏನರ್ಥ ತಿಳ್ಕೊಳಿ..
ಮೊನಚಾದ (ಕಠಾರಿ) ಉಗುರು (Stiletto) :
ಈ ಆಕಾರದ ಉಗುರನ್ನು ಹೊಂದಿರುವವರು ಧೈರ್ಯ ಮತ್ತು ದಿಟ್ಟತನದ ಸ್ವಭಾವವನ್ನು ಹೊಂದಿರುತ್ತಾರೆ. ಇಂತವರು ಹೆಚ್ಚು ಹೆಚ್ಚು ಸವಾಲುಗಳನ್ನು ಸ್ವೀಕರಿಸುತ್ತಾರೆ. ಸವಾಲುಗಳನ್ನು ಮೈ ಮೇಲೆ ಎಳೆದುಕೊಳ್ಳುವುದು ಅವರ ನಡವಳಿಕೆಯ ಅವಿಭಾಜ್ಯ ಅಂಗವಾಗಿರುತ್ತದೆ.
ಬಾದಾಮಿ ಆಕಾರದ ಉಗುರು (Almond) :
ಬಾದಾಮಿ ಆಕಾರದ ಉಗುರು ಇರುವವರನ್ನು ಸುಲಭವಾಗಿ ನಂಬಬಹುದು. ಅವರು ಜನರೊಂದಿಗೆ ಪ್ರಾಮಾಣಿಕವಾಗಿ ಇರುತ್ತಾರೆ ಮತ್ತು ಇಂತಹ ವ್ಯಕ್ತಿಗಳು ಸದಾ ಕಲ್ಪನೆಯಲ್ಲಿ ಮುಳುಗಿರುತ್ತಾರೆ. ಬಾದಾಮಿ ಆಕಾರದ ಉಗುರನ್ನು ಹೊಂದಿರುವವರು ಬಹಳ ಶಾರ್ಟ್ ಟೆಂಪರ್ಡ್ ಆಗಿರುತ್ತಾರೆ. ಸಣ್ಣ ಸಣ್ಣ ವಿಚಾರಗಳಿಗೂ ಅವರ ಕೋಪ ನೆತ್ತಿಗೇರಿರುತ್ತದೆ. ಯಾವುದಾದರೂ ಕೆಲಸ ತಾವು ಅಂದುಕೊಂಡಂತೆ ಆಗದಿದ್ದರೆ ಬಹುಳ ಬೇಗ ಕೋಪ ಮಾಡಿಕೊಳ್ಳುತ್ತಾರೆ. ಅಷ್ಟೇ ವೇಗದಲ್ಲಿ ಅವರ ಕೋಪ ಇಳಿದು ಹೋಗುತ್ತದೆ.
ಗೋಲಾಕಾರದ ಉಗುರು (Round fingernails) :
ಗೋಲಾಕಾರದ ಉಗುರಿರುವವರು ಬಿಚ್ಚು ಮನಸ್ಸಿನ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಜೀವನದ ಬಗ್ಗೆ ಸಕಾರಾತ್ಮಕ ಭಾವನೆಯನ್ನು ಇಟ್ಟುಕೊಂಡಿರುತ್ತಾರೆ. ಇವರು ಸ್ವತಂತ್ರವಾಗಿರಲು ಬಯಸುತ್ತಾರೆ ಮತ್ತು ಎಲ್ಲವನ್ನೂ ಬಹಳ ಬೇಗನೆ ಕಲಿಯುತ್ತಾರೆ.
ಕೆಳಗೆ ಬಾಗಿದ 'ಸಿ' ಆಕಾರದ ಉಗುರು (C shape) :
ಕೆಳಗೆ ಬಾಗಿದ 'ಸಿ' ಆಕಾರದ ಉಗುರು ಇರುವವರು ಶ್ರಮಜೀವಿಗಳು. ಸದಾ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದವರಾಗಿರುತ್ತಾರೆ. ಇವರು ತುಂಬಾ ಧೈರ್ಯಶಾಲಿಗಳು ಮತ್ತು ನಿಷ್ಠೆಯಿಂದ ಕೆಲಸ ಮಾಡುವವರು ಎಂದು ನಿಸ್ಸಂದೇಹವಾಗಿ ಹೇಳಬಹುದು.
ಚೌಕಾಕಾರದ ಉಗುರು (Square) :
ದೊಡ್ಡ ಮತ್ತು ಚೌಕ ಆಕಾರದ ಉಗುರಿನವರು ಗಂಭೀರ ಸ್ವಭಾವ ಉಳ್ಳವರಾಗಿರುತ್ತಾರೆ. ಇವರದು ಯಾರೊಂದಿಗೂ ಹೊಂದಿಕೊಳ್ಳದ ಹಠಮಾರಿ ವ್ಯಕ್ತಿತ್ವವಾದರೂ ಅವರ ಎಲ್ಲ ಕೆಲಸಗಳೂ ಸುಗಮವಾಗಿ ನಡೆಯುತ್ತವೆ. ಹಠದಿಂದಲೇ ಕೆಲಸ ಸಾಧಿಸುವ ಕಲೆ ಇವರಿಗೆ ತಿಳಿದಿರುತ್ತದೆ.
Traits and Zodiac signs: ಶ್, ಮಾತಾಡುವಾಗದ ಜಾಗ್ರತೆ! ಈ ರಾಶಿಗಳ ಬಾಯಲ್ಲಿ ಗುಟ್ಟು ನಿಲ್ಲೋಲ್ಲ
ಕತ್ತಿಯಾಕಾರದ ಉಗುರು (Sword shape) :
ಕತ್ತಿಯಾಕಾರದ ಉಗುರನ್ನು ಹೊಂದಿದವರು ಬಹಳ ಮಹತ್ವಾಕಾಂಕ್ಷೆಯನ್ನು ಹೊಂದಿದವರಾಗಿರುತ್ತಾರೆ. ಇವರಿಗೆ ತಮ್ಮ ಗುರಿ ಮುಖ್ಯವಾಗಿರುತ್ತದೆ. ಗುರಿ ಸಾಧನೆಗಾಗಿ ಇವರು ತಮಗೆ ಇಷ್ಟವಿಲ್ಲದ ಕೆಲಸವನ್ನು ಬೇಕಾದರೂ ಮಾಡಬಲ್ಲವರಾಗಿರುತ್ತಾರೆ. ಹಾಗೆಯೇ ಕತ್ತಿಯಾಕಾರದ ಉಗುರಿರುವವರು ಸ್ವಲ್ಪ ವಿಶ್ರಾಂತಿಗೆ ಮಹತ್ವ ನೀಡುತ್ತಾರೆ. ಹಾಗಾಗಿ ಇವರನ್ನು ಸುಲಭವಾಗಿ ನಿಮ್ಮ ದಾರಿಗೆ ಕರೆದುಕೊಂಡು ಬರಬಹುದು.