Traits and Zodiac signs: ಶ್, ಮಾತಾಡುವಾಗ ಜಾಗ್ರತೆ! ಈ ರಾಶಿಗಳ ಬಾಯಲ್ಲಿ ಗುಟ್ಟು ನಿಲ್ಲೋಲ್ಲ

By Suvarna News  |  First Published Dec 14, 2021, 11:38 AM IST

ಗುಟ್ಟನ್ನು ಸುಮ್ಮನೆ ಬಾಯಿಚಟಕ್ಕೆ ರಟ್ಟಾಗಿಸುವವರು ಕೆಲವರಾದರೆ, ಅವಮಾನಿಸಬೇಕೆಂದೋ, ಗಾಸಿಪ್ ಹಬ್ಬಿಸಲೋ ಅದನ್ನು ಜಗಜ್ಜಾಹೀರು ಮಾಡುವ ಸ್ವಭಾವ ಕೆಲವರದು. 


ಕೆಲವ್ರಿಗೆ ಒಂದ್ ಅಭ್ಯಾಸ ಇರತ್ತೆ. ನಿಂಗ್ ಮಾತ್ರ ಒಂದ್ ಗುಟ್(secret) ಹೇಳ್ತೀನಿ, ನೀ ಯಾರ್ಗೂ ಹೇಳ್ಬೇಡ ಅಂತ ಹೇಳೋದು. ಹಾಗೆ ಕೇಳಿಸಿಕೊಂಡವ್ರಿಗೂ ಅದೇ ಅಭ್ಯಾಸ- ಮತ್ತೊಬ್ರಿಗೆ ಆ ಗುಟ್ಟನ್ನ ದಾಟ್ಸಿ ಯಾರ್ಗೂ ಹೇಳ್ಬೇಡ ಅನ್ನೋದು. ಹಾಗ್ ಹೇಳ್ದಾಗಷ್ಟೇ ಅವ್ರಿಗೆ ಸಮಾಧಾನ ಸಿಗದು. ಹೀಗೆ ಗುಟ್ಟನ್ನು ರಟ್ಟು ಮಾಡೋ ಸ್ವಭಾವ(character) ಕೆಲವರಿಗೆ ಜನ್ಮಜಾತಸ್ಯವಾಗೇ ಬಂದಿರುತ್ತದೆ. ಅವರ ರಾಶಿಯೇ ಅಂಥದ್ದಾಗಿರುತ್ತದೆ. ಅವರಿಗೆ ಕೆಟ್ಟ ಉದ್ದೇಶ ಇಲ್ಲದಿರಬಹುದು. ಆದರೆ, ಅವರಿಂದ  ಆ ಗುಟ್ಟು ಕೇಳಿದವರು ಅದನ್ನು ಸ್ವಾರ್ಥ ಸಾಧನೆಗೆ ಬಳಸಬಹುದು. ಒಟ್ನಲ್ಲಿ ಕೆಲ ಗುಟ್ಟುಗಳು ಗುಟ್ಟಾಗಿರ್ಬೇಕು ಅಂದ್ರೆ ಅವನ್ನು ಯಾರ್ಗೂ ಹೇಳ್ದೇ ಇರೋದೇ ಸೇಫ್. 

ಯಾವೆಲ್ಲ ರಾಶಿಗಳು ಬಾಯಿಬಡುಕರು, ಗುಟ್ಟು ನಿಲ್ಲಿಸಿಕೊಳ್ಳಲಾಗದವರು ನೋಡೋಣ.

Tap to resize

Latest Videos

undefined

ಮೇಷ(Aries)
ಮೇಷ ರಾಶಿಯವರದು ಬಾಯಿಬಡುಕ ಸ್ವಭಾವ. ಅವರ ಕಿವಿಗೆ ಗುಟ್ಟು ಬಿದ್ದರೆ ಅದನ್ನು ಎಷ್ಟು ಬೇಗ ಯಾರಿಗೆ ಹೇಳುವೇನೋ ಎಂದು ಕಾಯುತ್ತಿರುತ್ತಾರೆ. ಮೇಷ ರಾಶಿಯವರಿಗೆ ಮತ್ತೊಂದು ರಾಶಿಯವರ ಅಗತ್ಯಗಳು, ಭಾವನಾತ್ಮಕ ಸಮಸ್ಯೆಗಳು ಅಷ್ಟಾಗಿ ಅರ್ಥವಾಗುವುದಿಲ್ಲ. ಕೆಲವೊಮ್ಮೆ ಅರ್ಥವಾದರೂ ಅವರದಕ್ಕೆ ಕೇರ್ ಮಾಡುವುದಿಲ್ಲ. ಇವರ ಬಳಿ ಗುಟ್ಟುಗಳಿರುವುದಿಲ್ಲ. ಹಾಗಾಗಿ, ಉಳಿದವರ್ಯಾಕೆ ಯಾವುದನ್ನಾದರೂ ಗುಟ್ಟು ಮಾಡುತ್ತಾರೆಂಬುದು ಕೂಡಾ ಇವರಿಗೆ ಅರ್ಥವಾಗುವುದಿಲ್ಲ. ಅಷ್ಟೇ ಅಲ್ಲದೆ, ಎಲ್ಲವನ್ನೂ ಸ್ಪರ್ಧೆ(compitition)ಯಂತೆಯೇ ನೋಡುವವರಿವರು. ಅದರಲ್ಲಿ ತಾವು ಗೆಲ್ಲಬೇಕೆಂಬ ಹಟದ ಮುಂದೆ ಯಾರ ರಹಸ್ಯಗಳೂ ಇವರಿಗೆ ಅಂಥ ದೊಡ್ಡದೇನಾಗಿ ಕಾಣುವುದಿಲ್ಲ. ತಮಗೆ ಬೇಕಾಗಿದ್ದು ಸಿಗುತ್ತದೆ ಎಂದರೆ ಮತ್ತೊಬ್ಬರ ಖಾಸಗಿ(personal) ವಿಷಯ ಮಾತಾಡಲು ಹಿಂಜರಿಯುವವರಲ್ಲ. ಆ ಗುಟ್ಟನ್ನೇ ಇಟ್ಟುಕೊಂಡು ಬೆದರಿಕೆ ಹಾಕಲೂ ಹೆದರುವವರಲ್ಲ. 

Vastu Tips for Depression: ಖಿನ್ನತೆಯಿಂದ ಬಳಲುತ್ತಿದ್ದೀರಾ? ವಾಸ್ತುವಿನಲ್ಲಿದೆ ಪರಿಹಾರ

ಮಿಥುನ(Gemini)
ಇವರೊಂದಿಗೆ ಮಾತಾಡಲು ಎಲ್ಲರೂ ಇಷ್ಟ ಪಡುತ್ತಾರೆ. ಮಿಥುನ ರಾಶಿಯವರು ಮಾತಿನ ಮಲ್ಲರು. ಮತ್ತೊಬ್ಬರನ್ನು ಚೆನ್ನಾಗಿ ಕೇಳಿಸಿಕೊಳ್ಳುವವರು ಕೂಡಾ. ಹಾಗಾಗಿ, ಇವರ ಉಪಸ್ಥಿತಿಯಲ್ಲಿ ಮತ್ತೊಬ್ಬರು ಕಂಫರ್ಟೇಬಲ್ ಆಗಿರಬಲ್ಲರು. ಇವರಿಗೆ ನೀವೇನೇ ಹೇಳಿದರೂ ಅದನ್ನವರು ತಕ್ಷಣ ಅರ್ಥ ಮಾಡಿಕೊಳ್ಳಬಲ್ಲರು. ಆದರೆ, ಮತ್ತೊಬ್ಬರನ್ನು ಖುಷಿ(please) ಪಡಿಸುವ, ತಮ್ಮ ಮಾತಿನ ಮೇಲೆ ಗಮನ ವಹಿಸುವಂತೆ ಮಾಡುವ ಆಸೆಯಿಂದ ಅವರು ನಿಮ್ಮ ಗುಟ್ಟುಗಳನ್ನು ರಟ್ಟು ಮಾಡಬಲ್ಲರು. ಮತ್ತೊಂದು ಗುಂಪು ತನ್ನನ್ನು ಒಪ್ಪಿಕೊಳ್ಳಬೇಕೆಂಬ ಆಸೆಯಿಂದ ಅವರ ನಂಬಿಕೆ ವಿಶ್ವಾಸ ಗಳಿಸಲು ಕೂಡಾ ಇವರು ಗುಟ್ಟುಗಳನ್ನು ಬಿಟ್ಟುಕೊಡುತ್ತಾರೆ. ಇವರ ಉದ್ದೇಶ ಕೆಟ್ಟದಾಗಿರದಿದ್ದರೂ, ಗುಟ್ಟುಗಳನ್ನು ಗುಟ್ಟು ಮಾಡಲಾರರು ಎಂಬುದಷ್ಟೇ ಸತ್ಯ.

Love Horoscope 2022: ಹೊಸ ವರ್ಷದಲ್ಲಿ ಹಸನಾಗಲಿರುವ ಲವ್ ಲೈಫ್, ನಿಮ್ಮ ರಾಶಿಗೇನಿದೆ ನೋಡಿ

ಧನು(Sagittarius)
ಇವರು ಕೂಡಾ ಹಠಾತ್ತಾಗಿ ಗುಟ್ಟು ರಟ್ಟು ಮಾಡಬಲ್ಲರು. ಆಮೇಲೆ ಅಯ್ಯೋ ಹೇಳಬಾರದಾಗಿತ್ತು, ಹೇಳಲ್ಲ ಎಂದು ಪ್ರಾಮಿಸ್ ಮಾಡಿದ್ದೆ ಎಂದೆಣಿಸುವವರು. ಇವರೊಂಥರಾ ತೆರೆದ ಪುಸ್ತಕದ ಹಾಗೆ. ತಮ್ಮ ಬದುಕನ್ನೂ ಮುಜುಗರವಿಲ್ಲದೆ ತೆರೆದಿಡುವವರು. ಹಾಗೇ ಮತ್ತೊಬ್ಬರ ಬದುಕಿನ ವಿಷಯಗಳನ್ನೂ ಕೇಡು ಬಗೆವ ಯೋಚನೆಯಿಲ್ಲದೆ ಹೇಳುವವರು. ಸತ್ಯ(truth) ಹೇಳುವ ಜಾಯಮಾನವಾದ್ದರಿಂದ ಗುಟ್ಟುಗಳೂ ಹೊರಬರುತ್ತವೆ. 

ಕನ್ಯಾ(Virgo)
ತಮಗೆ ಹತ್ತಿರದವರ ಬದುಕಿನಲ್ಲಿ ಅತಿಯಾಗಿ ಮೂಗು ತೂರಿಸುವ ಸ್ವಭಾವ ಇವರದು. ತಮ್ಮ ಇಷ್ಟದವರಿಗೆ ಯಾವುದು ಸರಿ, ಯಾವುದು ಸರಿಯಲ್ಲ ಎಂಬ ಬಗ್ಗೆ ತಮಗೆ ತೆನ್ನಾಗಿ ಗೊತ್ತಿದೆ ಎಂಬ ನಡೆ. ಹಾಗಾಗಿ, ನಿಮ್ಮ ಸಮಸ್ಯೆಗಳನ್ನು ಪರಿಹರಿಸಬೇಕೆಂದರೆ ಮೊದಲು ರಹಸ್ಯವನ್ನು ಬಾಯಿ ಬಿಡಬೇಕು ಎಂದು ನಂಬಿ ಹೇಳುವವರಿವರು. ರಿಸರ್ವ್ಡ್ ಹಾಗೆ ಕಾಣಿಸುವುದರಿಂದ ಗುಟ್ಟು ರಟ್ಟು ಮಾಡುವವರಲ್ಲ ಎಂದು ಮೇಲ್ನೋಟಕ್ಕೆ ಕಾಣುತ್ತಾರೆ. ನಿಮ್ಮ ಮಾತನ್ನು ಗಮನವಿಟ್ಟು ಕೇಳುತ್ತಾರೆ. ನಂತರ ಅದಕ್ಕೆ ಪರಿಹಾರ(solution) ಕಂಡು ಹಿಡಿಯಲು ವಿಷಯ ಬಾಯಿ ಬಿಡುತ್ತಾರೆ. 

ವೃಶ್ಚಿಕ(Scorpio)
ಇವರದು ಒಂಥರಾ ನಿಗೂಢ ವ್ಯಕ್ತಿತ್ವ. ಇವರಿಗೆ ರಹಸ್ಯಗಳ ಬೆಲೆ ಗೊತ್ತು. ಆದರೆ, ಸ್ವಲ್ಪ ಸೇಡಿನ ಸ್ವಭಾವದವರಾದ ಕಾರಣ ಮತ್ತೊಬ್ಬರ ಗುಟ್ಟುಗಳನ್ನು ಹರಿ ಬಿಡುವವರಿವರು. ಯಾರಾದರೂ ಇವರಿಗೆ ನೋವುಂಟು ಮಾಡಿದರೆ, ಅವರ ಬಗ್ಗೆ ಎಲ್ಲ ವಿಚಾರಗಳನ್ನೂ ಬಾಯಿ ಬಿಟ್ಟು ಬಿಡುತ್ತಾರೆ. ಅಲ್ಲದೆ, ತಾವು ಮಾಡಿದ ಕೆಲಸಕ್ಕೆ ಇವರಲ್ಲಿ ಪಶ್ಚಾತ್ತಾಪವೂ ಇರುವುದಿಲ್ಲ. 

click me!