Asianet Suvarna News Asianet Suvarna News

ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಗೂಗಲ್ ಎಚ್ಚರಿಕೆ, ಮೊಬೈಲ್ ಹ್ಯಾಕ್ ಅಪಾಯ!

ಆ್ಯಂಡ್ರಾಯ್ಡ್ ಫೋನ್ ಬಳಕೆ ಅತೀ ಹೆಚ್ಚು. ಭಾರತದಲ್ಲಿ ಆ್ಯಂಡ್ರಾಯ್ಡ್ ಫೋನ್‌ಗಳ ಕಾರುಬಾರು. ಆದರೆ ಗೂಗಲ್ ಇದೀಗ ಎಚ್ಚರಿಕೆಯೊಂದನ್ನು ನೀಡಿದೆ. ಫೋನ್‌ನಲ್ಲಿರುವ ಕೆಲ ಚಿಪ್‌ನಿಂದ ಹ್ಯಾಕರ್ಸ್ ನಿಮ್ಮ ಫೋನ್ ನಿಮಗೆ ತಿಳಿಯದಂತೆ ಹ್ಯಾಕ್ ಮಾಡುವ ಅಪಾಯವನ್ನು ಗೂಗಲ್ ಎಚ್ಚರಿಸಿದೆ.
 

Google Security researches warns attacker can remotely hack android phone alarm for Users ckm
Author
First Published Mar 17, 2023, 8:56 PM IST

ನವದೆಹಲಿ(ಮಾ.17): ಆ್ಯಂಡ್ರಾಯ್ಡ್ ಫೋನ್‌ಗಳು ಕಡಿಮೆ ಬೆಲೆ, ಗರಿಷ್ಠ ಫೀಚರ್ಸ್ ಒಳಗೊಂಡಿದೆ. ಹೀಗಾಗಿ ಬಹುತೇಕರು ಆ್ಯಂಡ್ರಾಯ್ಡ್ ಫೋನ್ ಬಳಕೆ ಮಾಡುತ್ತಿದ್ದಾರೆ. ಆದರೆ ಆ್ಯಂಡ್ರಾಯ್ಡ್ ಫೋನ್‌ನಲ್ಲಿ ರಿಸ್ಕ್ ಕೂಡ ಹೆಚ್ಚಾಗಿದೆ. ಇಷ್ಟು ದಿನ ಮಾಲ್‌ವೇರ್, ಅನಗತ್ಯ ಆ್ಯಪ್, ಅಪಾಯಕಾರಿ ಆ್ಯಪ್‌ಗಳಿಂದ ಬಳಕೆದಾರರ ವೈಯುಕ್ತಿ ಮಾಹಿತಿ ಸೋರಿಕೆ ಸೇರಿದಂತೆ ಹಲವು ಆಪಾಯಗಳ ಕುರಿತು ಗೂಗಲ್ ಎಚ್ಚರಿಸಿದೆ. ಇದೀಗ ಹೊಸ ಅಪಾಯ ಎದುರಾಗಿದೆ. ಆ್ಯಂಡ್ರಾಯ್ಡ್ ಫೋನ್ ಬಳಕೆದಾರರ ಫೋನ್ ಗೊತ್ತಿಲ್ಲದಂತೆ ಹ್ಯಾಕ್ ಮಾಡುವ ಅಪಾಯವಿದೆ. ಚಾಣಾಕ್ಷ ಹ್ಯಾಕರ್ಸ್ ಇದನ್ನು ಸುಲಭವಾಗಿ ಮಾಡಿ, ಮಾಹಿತಿ, ಡೇಟಾ ಕದಿಯಲಿದ್ದಾರೆ. ಬಳಕೆಗಾರರ ಸೆಕ್ಯೂರಿಟಿ ಅಪಾಯದಲ್ಲಿದೆ ಎಂದು ಗೂಗಲ್ ಎಚ್ಚರಿಸಿದೆ.

ಗೂಗಲ್ ಸೆಕ್ಯೂರಿಟಿ ರಿಸಚರ್ಸ್ ಇದೀಗ ಮಹತ್ವದ ಎಚ್ಚರಿಕೆ ನೀಡಿದೆ. ಆ್ಯಂಡ್ರಾಯ್ಡ್ ಫೋನ್‌ನಲ್ಲಿರುವ ಸ್ಯಾಮ್ಸಂಗ್ ಎಕ್ಸ್‌ನೋಸ್ ಚಿಪ್‌ನಲ್ಲಿ 18 ವಿವಿಧ ರೀತಿಯ ಬಗ್‌ಗಳಿವೆ. ಸ್ಯಾಮ್ಸಂಗ್ ಎಕ್ಸ್‌ನೋಸ್ ಚಿಪ್‌(Samsung's Exynos chip) ಬಹುತೇಕ ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಬಳಕೆ ಮಾಡಿರುವ ಚಿಪ್. ಈ ಚಿಪ್‌ನಲ್ಲಿ ಸೇರಿಕೊಂಡಿರುವ ಬಗ್‌ ಸಹಾಯದಿಂದ ಹ್ಯಾಕರ್ಸ್ ಫೋನ್ ಹ್ಯಾಕ್ ಮಾಡಲಿದ್ದಾರೆ ಎಂದು ಗೂಗಲ್ ಪ್ರಾಜೆಕ್ಟ್ ಜೀರೋ ಮುಖ್ಯಸ್ಥ ಟಿಮ್ ವಿಲ್ಸ್ ಹೇಳಿದ್ದಾರೆ.

Whatsapp ಬಳಕೆದಾರರಿಗೆ ಮತ್ತೊಂದು ಬಂಪರ್ ಫೀಚರ್, ಕಾಲ್ ಶೆಡ್ಯೂಲ್ ಆಯ್ಕೆ ಲಭ್ಯ!

ಕೆಲ ದುರ್ಬಲತೆಗಳು ಇಂಟರ್‌ನೆಟ್‌ನಿಂದ ಬೇಸ್‌ಬ್ಯಾಂಡ್ ರಿಮೂಟ್ ಕೋಡ್ ಎಕ್ಸಿಕ್ಯೂಶನ್‌ಗೆ ಅನುಮತಿ ನೀಡುತ್ತದೆ. ಇದು ಆ್ಯಂಡ್ರಾಯ್ಡ್ ಸಿಸ್ಟಮ್ ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸುತ್ತದೆ. ಹ್ಯಾಕರ್ಸ್‌ಗಳು ಯಾವುದೇ ಪ್ರದೇಶದಲ್ಲಿ ಕುಳಿತು ಆ್ಯಂಡ್ರಾಯ್ಡ್ ಮೊಬೈಲ್ ಹ್ಯಾಕ್ ಮಾಡಲು ಸಾಧ್ಯವಿದೆ. ಬೇಸ್‌ಬ್ಯಾಂಡ್ ಲೆವಲ್ ಮೂಲಕ ಬಳಕೆದಾರನಿಗೆ ಅರಿವಿಲ್ಲದಂತೆ ಹ್ಯಾಕ್ ಮಾಡಿ ಮಾಹಿತಿ ಸೋರಿಕೆ ಮಾಡಲಾಗುತ್ತದೆ. 

ಸುಲಭವಾಗಿ ಹೇಳುವುದಾದಾರೆ ಸ್ಮಾರ್ಟ್‌ಫೋನ್ ಮೂಲಕವೇ ಇದೀಗ ಹಣ ಪಾವತಿಗಳು, ವರ್ಗಾವಣೆ ನಡೆಯುತ್ತಿದೆ. ಇದು ಹೆಚ್ಚಿನ ಅಪಾಯ ತಂದೊಡ್ಡಲಿದೆ. ಇದರ ಜೊತೆ ಯಾವುದೇ ವೈಯುಕ್ತಿ ಮಾಹಿತಿಗಳನ್ನು ಹ್ಯಾಕರ್ಸ್ ಸುಲಭವಾಗಿ ಕದಿಯಲು ಸಾಧ್ಯವಿದೆ. ಯಾರ ಫೋನ್‌ಗಳಲ್ಲಿ Samsung's Exynos chip ಇದೆ ಅವರು ಎಚ್ಚರಿಕೆ ವಹಿಸಬೇಕು. Samsung's Exynos chip ಭದ್ರತಾ ನವೀಕರಣ ಆಗುವ ವರೆಗೆ ಬಳಕೆದಾರರು ತಮ್ಮ ಫೋನ್‌ಗಳಲ್ಲಿ ವೈಫೈ ಕರೆ, ವಾಯ್ತ್ ಓವರ್ ಎಲ್‌ಟಿಇ ಆಫ್ ಮಾಡಿ ಕಾರ್ಯನಿರ್ವಹಿಸುವುದು ಸೂಕ್ತ ಎಂದು ಗೂಗಲ್ ಹೇಳಿದೆ.

Google Play store ನಿಂದ 12 ಜನಪ್ರಿಯ Apps Deleteಗೆ ಸೂಚನೆ  

ಇತ್ತೀಚೆಗೆ ಸೋವಾ ವೈರಸ್ ಕುರಿತು ಆ್ಯಂಡ್ರಾಯ್ಡ್ ಬಳಕೆದಾರರಿಗೆ ಎಚ್ಚರಿಕೆ ನೀಡಲಾಗಿತ್ತು. ಸೋವಾ’ ಎಂಬ ಟ್ರೋಜನ್‌ ವೈರಸ್‌ ಬ್ಯಾಂಕಿಂಗ್‌ ಆ್ಯಪ್‌ಗಳಿಗೆ ದಾಳಿ ಮಾಡುತ್ತಿದೆ. ಆ್ಯಂಡ್ರಾಯ್ಡ್‌ ಫೋನ್‌ ಬಳಸುವವರಿಂದ ಮಾಹಿತಿ ಕದಿಯುತ್ತಿದ್ದು, ಇದನ್ನು ಡಿಲೀಟ್‌ ಮಾಡಲು ಆಗುವುದೇ ಇಲ್ಲ. ಹೀಗಾಗಿ ಹುಷಾರಾಗಿರಿ ಎಂದು ಬ್ಯಾಂಕುಗಳು ಎಚ್ಚರಿಕೆಯ ಗಂಟೆ ಮೊಳಗಿಸಿವೆ. ಭಾರತೀಯ ಸ್ಟೇಟ್‌ ಬ್ಯಾಂಕ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌ ಹಾಗೂ ಬ್ಯಾಂಕ್‌ ಆಫ್‌ ಬರೋಡಾ ಈ ಕುರಿತಂತೆ ಜಾಗೃತಿ ಆರಂಭಿಸಿವೆ.
 

Follow Us:
Download App:
  • android
  • ios