ಭಾರತದ ಡಿಜಿಟಲ್ ಸ್ಟ್ರೈಕ್, ಶೋಯೆಬ್ ಅಕ್ತರ್ ಸೇರಿ ಪಾಕಿಸ್ತಾನ 16 ಯೂಟ್ಯೂಬ್ ಚಾನೆಲ್ ಬ್ಯಾನ್

Synopsis
ಪೆಹಲ್ಗಾಮ್ ಉಗ್ರರ ದಾಳಿ ಬಳಿಕ ಕೇಂದ್ರ ಸರ್ಕಾರ ಎಲ್ಲಾ ರೀತಿಯಲ್ಲೂ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಿದೆ. ಇದೀಗ ಭಾರತದಲ್ಲಿ ದ್ವೇಷ ಹರಡುತ್ತಿರುವ 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ನ್ನು ಭಾರತ ಬ್ಯಾನ್ ಮಾಡಿದೆ. ಈ 16 ಯೂಟ್ಯೂಬ್ ಚಾನೆಲ್ ಯಾವುದು?
ನವದೆಹಲಿ(ಏ.28) ಕಳೆದ 10 ವರ್ಷಗಳಲ್ಲಿ ಕಂಡ ಅತೀ ದೊಡ್ಡ ಉಗ್ರ ದಾಳಿಯಲ್ಲಿ ಪೆಹಲ್ಗಾಮ್ ಕೂಡ ಒಂದು. ಅಮಾಯಕ ನಾಗರೀಕರು, ಪ್ರವಾಸಿಗರ ಮೇಲೆ ನಡೆದ ಈ ಭೀಕರ ದಾಳಿ, ಸಾವು ನೋವು ಭಾರತೀಯರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪ್ರತೀಕಾರ ತೀರಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಹಂತ ಹಂತವಾಗಿ ಪಾಕಿಸ್ತಾನಕ್ಕೆ ತಿರುಗೇಟು ನೀಡುತ್ತಿದೆ. ಸಿಂಧೂ ನದಿ ಒಪ್ಪಂದ ರದ್ದು, ವಾಘ ಗಡಿ ಬಂದ್ ಸೇರಿದಂತೆ ಹಲವು ಕ್ರಮಗಳನ್ನು ಭಾರತ ತೆಗೆದುಕೊಂಡಿದೆ. ಇದೀಗ ಕೇಂದ್ರ ಸರ್ಕಾರ ಮತ್ತೊಂದು ಕ್ರಮ ಕೈಗೊಂಡಿದೆ. ಭಾರತದಲ್ಲಿ ದ್ವೇಷ ಹರಡುತ್ತಿರುವ ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್‌ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ.
ಪೆಹಲ್ಗಾಮ್ ದಾಳಿ ಬಳಿಕ ಈ ಯೂಟ್ಯೂಬ್ ಚಾನೆಲ್‌ಗಳು ತಪ್ಪು ಮಾಹಿತಿಯನ್ನು ಜನರಿಗೆ ನೀಡುತ್ತಿದೆ ಪಾಕಿಸ್ತಾನದ ಪರವಾಗಿ ಹಾಗೂ ಭಾರತದ ವಿರುದ್ಧವಾಗಿ ಈ ಚಾನೆಲ್‌ಗಳು ಸುದ್ದಿ ನೀಡುತ್ತಿದೆ. ನಕಲಿ ಸುದ್ದಿಗಳನ್ನು ನೀಡುತ್ತಿದೆ. ಭಾರತದಲ್ಲಿ ಪಾಕಿಸ್ತಾನದ ಪ್ರಚಾರ, ಭಾರತೀಯರನ್ನು ಎತ್ತಿಕಟ್ಟಲು ಪ್ರಯತ್ನಿಸುತ್ತಿರುವ ಪಾಕಿಸ್ತಾನದ ಯೂಟ್ಯೂಬ್ ಚಾನೆಲ್‌ಗೆ ಭಾರತ ನಿಷೇಧ ಹೇರಿದೆ. ಮೊದಲ ಹಂತದಲ್ಲಿ 16 ಪಾಕಿಸ್ತಾನದ ಯೂಟ್ಯೂಬ್ ಚಾನೆಲ್ ಬ್ಯಾನ್ ಆಗಿದೆ.
ಉಗ್ರರಿಂದ ತಪ್ಪಿಸಿಕೊಂಡು ಮರವೇರಿ ಪೆಹಲ್ಗಾಮ್ ದಾಳಿ ಸಂಪೂರ್ಣ ದೃಶ್ಯ ಸೆರೆ ಹಿಡಿದ ಫೋಟೋಗ್ರಾಫರ್
63.08 ಮಿಲಿಯನ್ ಸಬ್‌ಸ್ಕ್ರೈಬರ್ಸ್
ಪಾಕಿಸ್ತಾನದ ಪರ ಕೆಲಸ ಮಾಡುತ್ತಿರುವ ಈ 16 ಯೂಟ್ಯೂಬ್ ಚಾನೆಲ್ ಭಾರತದಲ್ಲಿ ಭಾರಿ ಜನಪ್ರಿಯವಾಗಿದೆ. ವಿಶೇಷ ಅಂದರೆ ಭಾರತದಲ್ಲೂ ಕೂಡ ಹಲವರು ಚಂದಾದಾರರಾಗಿದ್ದಾರೆ. ಈ 16 ಪಾಕಿಸ್ತಾನ ಯೂಟ್ಯೂಬ್ ಚಾನೆಲ್‌ಗಳ ಒಟ್ಟು ಸಬ್‌ಸ್ಕ್ರೈಬರ್ ಸಂಖ್ಯೆ ಬರೋಬ್ಬರಿ 63.08 ಮಿಲಿಯನ್. ಪಾಕಿಸ್ತಾನದ ಖ್ಯಾತ ಡಾನ್ ನ್ಯೂಸ್ ಯೂಟ್ಯೂಬ್ ಚಾನೆಲ್, Geo ನ್ಯೂಸ್, ಇರ್ಶಾದ್ ಭಟ್ಟಿ ಸೇರಿದಂತೆ 16 ಖ್ಯಾತ ಯೂಟ್ಯೂಬ್ ಚಾನೆಲ್ ಬ್ಯಾನ್ ಮಾಡಲಾಗಿದೆ.
ಕೇಂದ್ರ ಗೃಹ ಸಚಿವಾಲದ ಸೂಚನೆ ಮೇರೆಗೆ ಬ್ಯಾನ್
ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್‌ಗಳನ್ನು ಬ್ಯಾನ್ ಮಾಡಲಾಗಿದೆ. ಸಾಮಾಜಿಕ ಜಾಲತಾಣ, ವೆಬ್‌ಸೈಟ್ ಸೇರಿದಂತೆ ಡಿಜಿಟಲ್ ಜಗತ್ತಿನ ಮೇಲೆ ಹದ್ದಿನ ಕಣ್ಣಿಟ್ಟಿರುವ ಭಾರತದ ಇದೀಗ ಮೊದಲ ಹಂತದಲ್ಲಿ ಯೂಟ್ಯೂಬ್ ಚಾನೆಲ್ ಬ್ಯಾನ್ ಮಾಡಿದೆ. ಇದೀಗ ಮತ್ತಷ್ಟು ಯೂಟ್ಯೂಬ್ ಚಾನೆಲ್ ಹಾಗೂ ಸೋಶಿಯಲ್ ಮೀಡಿಯಾ ಖಾತೆಗಳನ್ನು ಗುರುತಿಸಲಾಗಿದೆ. ಶೀಘ್ರದಲ್ಲೇ ಮತ್ತಷ್ಟು ಪಾಕಿಸ್ತಾನ ಪ್ರೋಪಗಾಂಡ ಚಾನೆಲ್‌ಗಳು, ಖಾತೆಗಳು ಬ್ಯಾನ್ ಆಗಲಿದೆ.
ಪೆಹಲ್ಗಾಂ ದಾಳಿಗೆ ತಿರುಗೇಟು
ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣ ಪೆಹಲ್ಗಾಂನಲ್ಲಿ ಎಪ್ರಿಲ್ 22ರಂದು ನಡೆದ ಉಗ್ರ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದಾರೆ. ಏಕಾಏಕಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದರು. ಹಿಂದೂಗಳ ಗುರಿಯಾಗಿಸಿ ಈ ದಾಳಿ ನಡೆದಿತ್ತು. ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಬದಲಾಗಿದ್ದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಲು ಆರಂಭಿಸಿದ್ದರು. ಈ ವೇಳೆ ಪೆಹಲ್ಗಾಂಗ ಆಗಮಿಸಿದ್ದ ಹಿಂದೂ ಪ್ರವಾಸಿಗರನ್ನು ಗುರಿಯಾಸಿ ದಾಳಿ ಮಾಡಲಾಗಿದೆ. ಪ್ರತಿಯೊಬ್ಬರ ಹೆಸರು, ಧರ್ಮ ಕೇಳಿ ಗುಂಡು ಹಾರಿಸಲಾಗಿದೆ.
Entertainment News Live: ಪೆಹಲ್ಗಾಮ್ ದಾಳಿಯಿಂದ ಬಾಲಿವುಡ್‌ಗೆ ಮತ್ತೊಂದು ಹೊಡೆತ