Asianet Suvarna News Asianet Suvarna News

India vs Australia: ಡಾ. ಬ್ರೋ ಫ್ಯಾನ್ಸ್​ಗೆ ಬಿಗ್​ ಸರ್​ಪ್ರೈಸ್​ ನೀಡಿದ ಸ್ಟಾರ್​ ಸ್ಪೋರ್ಟ್​ನಿಂದ ಕುತೂಹಲದ ಮಾಹಿತಿ

ಕನ್ನಡಿಗರ ಕಣ್ಮಣಿ ಡಾ.ಬ್ರೋ ಸ್ಟಾರ್​ ಸ್ಪೋರ್ಟ್ಸ್​ ಚಾನೆಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮ್ಯಾಚ್​ ಅಪ್​ಡೇಟ್​ ನೀಡಲಿದ್ದಾರೆ. 
 

Dr Bro on Star Sports Channel give Match update between India Australia suc
Author
First Published Oct 7, 2023, 12:42 PM IST

 ಅರ್ಚಕರ ಮಗನಾಗಿ   ಕುಟುಂಬದಲ್ಲಿ ಹುಟ್ಟಿ, ಪೌರೋಹಿತ್ಯ ಕಲಿತು, ಪೂಜಾ ಪುನಸ್ಕಾರ ಮಾಡುತ್ತ ಜೀವನ ಸಾಗಿಸುತ್ತಿದ್ದ ಸಾಮಾನ್ಯ ಹುಡುಗನೊಬ್ಬ ಇಂದು ಯೂಟ್ಯೂಬ್​ ಮೂಲಕ ಕೋಟ್ಯಂತರ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾನೆ ಎಂದರೆ ಸುಲಭದ ಮಾತಲ್ಲ. ದೇಶ-ವಿದೇಶಗಳಲ್ಲಿ ಸುತ್ತಾಡುತ್ತಾ, ಹಲವು ಸಮಯದಲ್ಲಿ ಸಾವಿನ ಭಯವನ್ನೂ ಬಿಟ್ಟು ಸಾವಿನ ಬಾಯೊಳಗೇ ಹೋಗುವ ಧೈರ್ಯ ತೋರಿಸುತ್ತಾ ಹೋದ ಕಡೆಗಳಲ್ಲೆಲ್ಲಾ ಕನ್ನಡದಲ್ಲಿಯೇ ಮಾತನಾಡುತ್ತಾ ಕನ್ನಡಿಗರ ಕಣ್ಮಣಿಯಾದವರೇ ಡಾ. ಬ್ರೋ. ಸಾಧಿಸುವ ಛಲ ಇದ್ದರೆ ಸಾಕು, ಜೀವನವನ್ನು ಹೇಗೆ ಬೇಕಾದರೂ ಸಾಗಿಸಬಹುದು ಎನ್ನುವುದಕ್ಕೆ ಈ 22ರ ಹರೆಯದ  ನಮಸ್ಕಾರ​ ದೇವ್ರು... ಖ್ಯಾತಿಯ ಡಾ. ಬ್ರೋನೇ ಸಾಕ್ಷಿ. ನಮಸ್ಕಾರ​ ದೇವ್ರು... ಎಂದರೆ ಸಾಕು. ಮೊದಲು ನೆನಪಾಗೋದೇ ಡಾ.ಬ್ರೋ (Dr. Bro). ಕನ್ನಡದ ಯುವಕನೊಬ್ಬ ಬಹುತೇಕ ಎಲ್ಲಾ ದೇಶಗಳನ್ನೂ ಸುತ್ತಿ ಅಲ್ಲಿನ ಪರಿಚಯ ಮಾಡುವ ಪರಿ ಅಂತೂ ಅತ್ಯದ್ಭುತವಾದದ್ದೆ. ಕನ್ನಡಿಗರಿಗೇ ಅಂಗೈನಲ್ಲೆ ಇಡೀ  ಜಗತ್ತನ್ನೇ (World) ತೋರಿಸ್ತಿದ್ದಾರೆ ಡಾ.ಬ್ರೋ. ಯೂಟ್ಯೂಬ್​ನಲ್ಲಿ ಅಲ್ಪ ಕಾಲದಲ್ಲಿಯೇ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದಿರುವ ಡಾ.ಬ್ರೋ ವಿಶೇಷತೆ ಎಂದರೆ ಯಾವ ದೇಶಕ್ಕೆ ಹೋದರೂ ಅಲ್ಲಿ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ. 

ತಾಲಿಬಾನ್, ಪಾಕಿಸ್ತಾನ​ದಂಥ ರಾಷ್ಟ್ರಗಳಿಗೂ ಮುನ್ನುಗ್ಗಿ ಅಲ್ಲಿನವರನ್ನು ಮಾತನಾಡಿಸಿ ಅದರ ವಿಡಿಯೋ ಮಾಡುವ ಸಾಹಸ ಬಹುಶಃ ಸಾಮಾನ್ಯ ಜನರಿಗೆ ಕನಸಿನ ಮಾತೇ. ಇಂಥ ದುಸ್ಸಾಹಸಕ್ಕೂ ಕೈ ಹಾಕಿದವರು ಡಾ.ಬ್ರೋ. ಇವರ ಹೆಸರು ಗಗನ್​. ಅತ್ಯಂತ ಕಾಡು ಮನುಷ್ಯರಿಂದಲೇ ತುಂಬಿ ಹೋಗಿರುವ ದೇಶಗಳಿಗೂ ನುಗ್ಗಿದ್ದಿದೆ. ಉಗಾಂಡಾಕ್ಕೆ ಹೋಗಿ ಅಭಿಮಾನಿಗಳಿಗೆ ಆತಂಕವನ್ನೂ ಮೂಡಿಸಿದ್ದಾರೆ. ತಾಲೀಬಾನಿಗಳನ್ನೂ ಮಾತನಾಡಿಸಿ ಫ್ಯಾನ್ಸ್​ಗೆ ಶಾಕ್​ ನೀಡಿದ್ದಾರೆ.  ದಯವಿಟ್ಟು ನಿಮ್ಮ ಪ್ರಾಣ ಪಣಕ್ಕಿಡಬೇಡಿ ಎಂದು ಅಭಿಮಾನಿಗಳು ಹೇಳುತ್ತಲೇ ಇರುತ್ತಾರೆ . ಆದರೂ ಧೈರ್ಯದಿಂದ ಗಗನ್​ ಎಲ್ಲಾ ದೇಶಗಳಿಗೂ ಲಗ್ಗೆ ಇಡುತ್ತಿದ್ದಾರೆ. ಮೊನ್ನೆಯಷ್ಟೇ ಸೋಮಾಲಿಯಾಕ್ಕೂ ಹೋಗಿ ಅಲ್ಲಿ ಕಡಲ್ಗಳ್ಳರನ್ನೂ ಮಾತನಾಡಿಸಿ ಬಂದಿದ್ದಾರೆ.

ಸೋಮಾಲಿಯಾ ಕಡಲ್ಗಳ್ಳರ ಮನೆಯಲ್ಲಿ ಡಾ.ಬ್ರೋ! ಇರೋದ್ ಒಂದೇ ಹೃದಯ, ಎಷ್ಟ್​ ಅಂತ ಗೆಲ್ತಿಯಾ ದೇವ್ರು ಎಂದ ಫ್ಯಾನ್ಸ್​

ಇದೀಗ ಇವರು ಬಿಗ್​ಬಾಸ್​ ಮನೆಗೆ ಬರಲಿದ್ದಾರೆ ಎನ್ನುವ ಸುದ್ದಿಯಾಗಿತ್ತು. ಆದರೆ ಇವರು ಮಾಡುತ್ತಿದ್ದ ಯುಟ್ಯೂಬ್​ಗಳಲ್ಲಿನ ಕಮೆಂಟ್​ಗಳಲ್ಲಿ ದಯವಿಟ್ಟು ಬಿಗ್​ಬಾಸ್​ ಮನೆಗೆ ಹೋಗಬೇಡಿ ಎನ್ನುವ ಕಮೆಂಟ್​ಗಳೇ ತುಂಬಿ ಹೋಗಿದ್ದುದು ಅಚ್ಚರಿಯ ವಿಷಯ.  ಆದರೂ ಇವರ ಫ್ಯಾನ್ಸ್​ ಬಿಗ್​ಬಾಸ್​ ಮನೆಯೊಳಕ್ಕೆ ಹೋಗಿಬಿಟ್ಟರೆ ಎನ್ನುವ ಆತಂಕ ಹೊರಹಾಕುತ್ತಲೇ ಇದ್ದರು. ಇವರ ಕೋಟ್ಯಂತರ ಅಭಿಮಾನಿಗಳಿಗೆ ಈಗ ಸಂತಸದ ಸುದ್ದಿಯೊಂದು ಸಿಕ್ಕಿದೆ. ಅದೇನೆಂದರೆ ಡಾ.ಬ್ರೋ ಬಿಗ್​ಬಾಸ್​ಗೆ ಹೋಗುತ್ತಿಲ್ಲ, ಬದಲಿಗೆ ಅವರು ಟಿ.ವಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದು ಸ್ಟಾರ್ಟ್​ಸ್ಪೋರ್ಟ್ಸ್​ ಕನ್ನಡ ಚಾನೆಲ್​ನಲ್ಲಿ!

ಹೌದು. ಈ ಕುರಿತು ಖುದ್ದು  ಚಾನೆಲ್​ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಷಯ ತಿಳಿಸಿದೆ. ನಾಳೆ ಅಂದರೆ ಭಾನುವಾರ ಭಾರತ vs ಆಸ್ಟ್ರೇಲಿಯಾ ಮ್ಯಾಚ್ ನಡೆಯಲಿದೆ. ವಿಶ್ವಕಪ್​ನ ಮೊದಲ ಭಾರತದ ಮ್ಯಾಚ್ ಇದು. ಚೆನ್ನೈನಲ್ಲಿ ಈ ಪಂದ್ಯ ನಡೆಯುತ್ತಿದೆ. ಸ್ಟಾರ್​ ಸ್ಪೋರ್ಟ್ಸ್ ಈ ಮ್ಯಾಚ್​ನ ಪ್ರಸಾರದ ಹಕ್ಕನ್ನು ಹೊಂದಿದೆ. ಕನ್ನಡದಲ್ಲೂ ಕಾಮೆಂಟರಿ ಪ್ರಸಾರ ಕಾಣಲಿದೆ. ಇದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಡಾ.ಬ್ರೋ. ಈ ಕುರಿತು ಸ್ಟಾರ್​ ಸ್ಪೋರ್ಟ್ಸ್ ಮಾಹಿತಿ ನೀಡಿದೆ. ‘ಸರ್ಪ್ರೈಸ್ ಹೇಗಿತ್ತು ಫ್ರೆಂಡ್ಸ್. ಡಾಕ್ಟರ್ ಬ್ರೋ ಇನ್ಮೇಲೆ ಎಲ್ಲಾ ಅಪ್ಡೇಟ್ಸ್ ಕೊಡ್ತಾರೆ, ಸ್ಟಾರ್ ಸ್ಪೋರ್ಟ್ಸ್ ಕನ್ನಡ ನೋಡೋದು ಮರಿಬೇಡಿ’ ಎಂದು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಕ್ಯಾಪ್ಶನ್ ನೀಡಿದೆ.

ಇದರಲ್ಲಿ ಗಗನ್​ ಅವರು, ‘ನಾನು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​ಪೋರ್ಟ್​​ಗೆ ಬಂದಿದ್ದೇನೆ. ಹೊಸ ಮಿಷನ್​ಗೆ ಹೋಗ್ತಾ ಇದೀನಿ’ ಎಂದು ಹೇಳುವ ಮೂಲಕ, ಚೆನ್ನೈಗೆ ಭೇಟಿ ಕೊಟ್ಟಿದ್ದಾರೆ. ಸ್ಟೇಡಿಯಂ ಹೊರಗಡೆಯಿಂದ ಕೆಲವೊಂದು ವಿಡಿಯೋ ಮಾಡಿ ಅದನ್ನು ಶೇರ್​ ಮಾಡಿದ್ದಾರೆ.  ‘ನಾನು ಗಂಟುಮೂಟೆ ಹೊತ್ತುಕೊಂಡು ಎಲ್ಲೆಲ್ಲಿ ಮ್ಯಾಚ್ ನಡೆಯುತ್ತದೆಯೋ ಅಲ್ಲಿಗೆ ಹೋಗ್ತೀನಿ’ ಎಂದಿದ್ದಾರೆ ಗಗನ್​.

ಉಗಾಂಡಾ ಕಾಡಲ್ಲಿ ಡಾ. ಬ್ರೋಗೆ ಅವ್ರ ಅಜ್ಜಿ ಸಿಕ್ರಂತೆ! ವಿಡಿಯೋ ನೋಡಿ ಫ್ಯಾನ್ಸ್​ ಫುಲ್​ ಖುಷ್​
 

Follow Us:
Download App:
  • android
  • ios