ಚಾಮರಾಜನಗರ: ಸಫಾರಿ, ಗೋಪಾಲಸ್ವಾಮಿ ಬೆಟ್ಟದಲ್ಲಿ ಪ್ರವಾಸಿಗರ ದಂಡು..!
ಶನಿವಾರ ಹಾಗೂ ಭಾನುವಾರ ವಾರದ ರಜೆಯ ಜೊತೆಗೆ ಆ.14 ಸೋಮವಾರ ಒಂದು ರಜೆ ಹಾಕಿದರೆ, ಆ.15ರಂದು ಸ್ವಾತಂತ್ರ್ಯ ದಿನಾಚರಣೆಯಂದು ಸರ್ಕಾರಿ ರಜೆ ಇದೆ. ಹಾಗಾಗಿ ಸತತ ನಾಲ್ಕು ದಿನಗಳ ರಜೆ ಸಿಗುವ ಕಾರಣ ಶನಿವಾರ ಹಾಗೂ ಭಾನುವಾರ ಬೆಂಗಳೂರು ಹಾಗು ಕೇರಳ ಹಾಗು ತಮಿಳುನಾಡಿನ ಪ್ರವಾಸಿಗರು ಜಿಲ್ಲೆಯತ್ತ ಹರಿದು ಬಂದಿದ್ದರು.
ಗುಂಡ್ಲುಪೇಟೆ(ಆ.14): ಎರಡನೇ ಶನಿವಾರ, ಭಾನುವಾರ ಸತತ ಎರಡು ದಿನ ವಾರದ ರಜೆ ಇದ್ದ ಕಾರಣ ಬಂಡೀಪುರದ ಸಫಾರಿಗೆ ಹಾಗೂ ಗೋಪಾಲಸ್ವಾಮಿ ಬೆಟ್ಟದಲ್ಲಿ ಪ್ರವಾಸಿಗರ ದಂಡೇ ನೆರದಿತ್ತು. ಶನಿವಾರ ಹಾಗೂ ಭಾನುವಾರ ವಾರದ ರಜೆಯ ಜೊತೆಗೆ ಆ.14 ಸೋಮವಾರ ಒಂದು ರಜೆ ಹಾಕಿದರೆ, ಆ.15ರಂದು ಸ್ವಾತಂತ್ರ್ಯ ದಿನಾಚರಣೆಯಂದು ಸರ್ಕಾರಿ ರಜೆ ಇದೆ. ಹಾಗಾಗಿ ಸತತ ನಾಲ್ಕು ದಿನಗಳ ರಜೆ ಸಿಗುವ ಕಾರಣ ಶನಿವಾರ ಹಾಗೂ ಭಾನುವಾರ ಬೆಂಗಳೂರು ಹಾಗು ಕೇರಳ ಹಾಗು ತಮಿಳುನಾಡಿನ ಪ್ರವಾಸಿಗರು ಜಿಲ್ಲೆಯತ್ತ ಹರಿದು ಬಂದಿದ್ದರು.
ಶನಿವಾರವೇ ಬಂಡೀಪುರ ಸುತ್ತ ಮುತ್ತಲಿನ ರೆಸಾರ್ಟ್ ಹಾಗೂ ಹೋಂ ಸ್ಟೇಗಳಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿದ್ದರು. ಭಾನುವಾರ ಬೆಳಗ್ಗೆ ಹಾಗೂ ಸಂಜೆ ಸಫಾರಿ ಕೇಂದ್ರದಲ್ಲಿ ಸಾವಿರಾರು ಪ್ರವಾಸಿಗರು ಆಗಮಿಸಿದ್ದರು. ಸಫಾರಿ ಕೇಂದ್ರದ ಆವರಣದಲ್ಲಿ ಕಾರುಗಳು ಸಾಲುಗಟ್ಟಿ ನಿಂತಿದ್ದವು.
ಚಾಮರಾಜನಗರ: ಆನೆ, ಹುಲಿ ಸಂಖ್ಯೆಯಲ್ಲಿ ಬಂಡೀಪುರ ನಂ.1
ಬೆಟ್ಟದಲ್ಲೂ ಭಕ್ತರು
ನಾಡಿನ ಪ್ರಸಿದ್ಧ ಗೋಪಾಲಸ್ವಾಮಿ ಬೆಟ್ಟಕ್ಕೂ ಭಾನುವಾರ ದೇವಸ್ಥಾನ ದರ್ಶನ ಪಡೆಯಲು ಭಕ್ತರು ಮುಗಿ ಬಿದ್ದಿದ್ದರು. ಬೆಟ್ಟದ ತಪ್ಪಲಿನ ಗೇಟ್ ಬಳಿ ಕಿಮಿಗಟ್ಟಲೇ ಭಕ್ತರು ಸಾಲು ಗಟ್ಟಿನಿಂತಿದ್ದರು. ಬೆಟ್ಟದ ತಪ್ಪಲಿನ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಲು ಜಾಗವಿಲ್ಲದೆ ರಸ್ತೆಯಲ್ಲಿ ಕಿ.ಮೀಗಟ್ಟಲೇ ಕಾರುಗಳು ಸಾಲುಗಟ್ಟಿನಿಂತಿದ್ದವು.
ರೆಸಾರ್ಟ್ ಹೋಟೆಲ್‌ನಲ್ಲೂ ಜನವೋ ಜನ
ಸತತ ರಜೆ ಹಿನ್ನೆಲೆ ಬಂಡೀಪುರ ಸುತ್ತಮುತ್ತಲಿನ ಖಾಸಗಿ ರೆಸಾರ್ಟ್, ಹೋಟೆಲ್ ಹಾಗೂ ಗುಂಡ್ಲುಪೇಟೆ ಹೋಟೆಲ್‌ನಲ್ಲೂ ಪ್ರವಾಸಿಗರು ಬೀಡು ಬಿಟ್ಟಿದ್ದರು. ಪಟ್ಟಣದ ಉದ್ಯಮ ಭವನ್, ಗುರುಪ್ರಸಾದ್, ಶಬರಿ ಹೋಟೆಲ್ ಹಾಗೂ ಇತರೆ ಹೋಟೆಲ್‌ಗಳಲ್ಲಿ ಬೆಳಗ್ಗೆಯಿಂದ ಸಂಜೆಯ ತನಕ ವ್ಯಾಪಾರ ಚೆನ್ನಾಗಿ ಆಗಿದೆ ಎಂದು ಉದ್ಯಮ್ ಹೋಟಲ್ ಮಾಲೀಕ ಪ್ರದೀಪ್ ನೇನೇಕಟ್ಟೆ ಹೇಳಿದರು.
ಬಂಡೀಪುರ: ರಾಜ್ಯದ ಸಂರಕ್ಷಿತ ಪ್ರದೇಶಗಳಲ್ಲಿ ಬರುವ ಪ್ರವಾಸಿಗರಿಗೆ ವಿಮೆ ಭಾಗ್ಯ!
ಒಂದೇ ದಿನ 5.10 ಲಕ್ಷ ಆದಾಯ
ತಾಲೂಕಿನ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಬೆಟ್ಟದ ತಪ್ಪಲಿನಿಂದ 17 ಕೆಎಸ್‌ಆರ್‌ಟಇಸಿ ಬಸ್ ಬಿಡಲಾಗಿದ್ದು ಭಾನುವಾರ ಒಂದೇ ದಿನ 5.10 ಲಕ್ಷ ರು.ಆದಾಯ ಬಂದಿದೆ ಎಂದು ಟ್ರಾಫಿಕ್ ನಿಯಂತ್ರಕ ವಿಜಯಕುಮಾರ್ ನೇನೇಕಟ್ಟೆ ಕನ್ನಡಪ್ರಭಕ್ಕೆ ತಿಳಿಸಿದರು.