Asianet Suvarna News Asianet Suvarna News

ಇಷ್ಟೆಲ್ಲ ಸೌಲಭ್ಯ ನೀಡಿದ್ರೂ ಯಾರೂ ಕೆಲಸ ಮಾಡೋಲ್ಲ ಅಂತಾರೆ ಈ ದೇಶದಲ್ಲಿ!

ದೇಶ ಇರಲಿ ವಿದೇಶ ಇರಲಿ ಉತ್ತಮ ಸಂಬಳ ಸಿಗುವ ಕೆಲಸ ಸಿಕ್ಕಿದ್ರೆ ಎಲ್ಲರೂ ಸೈ ಎನ್ನುತ್ತಾರೆ. ಎಲ್ಲ ಸೌಲಭ್ಯ ನೀಡಿ, ಹೈ ಸ್ಯಾಲರಿ ನೀಡುವ ಕೆಲಸವೊಂದಕ್ಕೆ ಜಾಹೀರಾತು ಬಂದಿದೆ. ಅದ್ರ ಷರತ್ತು ಏನು, ಸಂಬಳ ಎಷ್ಟು ಎಂಬ ವಿವರ ಇಲ್ಲಿದೆ.
 

Bardsey Island Job Offers Thousand Two Hundred Rupees Per Hour Candidate Should Live And Work roo
Author
First Published Jan 6, 2024, 4:17 PM IST

ಒಳ್ಳೆಯ ಉದ್ಯೋಗ ಪಡೆಯೋದು ಎಲ್ಲರ ಉದ್ದೇಶ. ಈಗಿರುವ ಕೆಲಸಕ್ಕಿಂತ ಹೆಚ್ಚು ಸಂಬಳ ಹಾಗೂ ಸೌಲಭ್ಯ ಸಿಗುತ್ತೆ ಎಂಬುದು ಗೊತ್ತಾದ್ರೆ ಜನರು ಹೊಸ ಉದ್ಯೋಗಕ್ಕೆ ಶಿಪ್ಟ್ ಆಗ್ತಾರೆ. ಲಕ್ಷಾಂತರ ಸಂಬಳ ಬರುವ ಕೆಲಸ ಹುಡುಕುವವರ ಸಂಖ್ಯೆ ಹೆಚ್ಚಿದೆ. ಕೆಲವೇ ದಿನಗಳಲ್ಲಿ ಶ್ರೀಮಂತರಾಗ್ಬೇಕು ಎಂಬ ಕನಸಿನ ಹಿಂದೆ ಜನರು ಓಡ್ತಿದ್ದಾರೆ. ಹೆಚ್ಚು ಸಂಬಳದ ಜೊತೆ ಎಲ್ಲ ಸೌಲಭ್ಯ ನೀಡಿ, ವಿದೇಶದಲ್ಲಿ ನೆಲೆ ನಿಲ್ಲುವಂತಹ ಕೆಲಸ ಸಿಕ್ಕಿದ್ರೆ ಜನರು ಮತ್ತಷ್ಟು ಖುಷಿಯಾಗ್ತಾರೆ. ನೀವೂ ವಿದೇಶದಲ್ಲಿ ಕೆಲಸ ಮಾಡುವ ಯೋಚನೆ ಮಾಡ್ತಿದ್ದರೆ, ಕೆಲಸದ ಜೊತೆ ಐಷಾರಾಮಿ ಸೌಲಭ್ಯ ಬೇಕು ಎನ್ನುವವರಾಗಿದ್ದರೆ ಇಲ್ಲೊಂದು ಅವಕಾಶವಿದೆ. ದ್ವೀಪ ದೇಶದಲ್ಲಿ ನೀವು ಕೆಲಸ ಮಾಡಲು ಅವಕಾಶ ಸಿಕ್ತಿದೆ. ಈಗಾಗಲೇ ಈ ಕೆಲಸದ ಬಗ್ಗೆ ಜಾಹೀರಾತು ನೀಡಿ, ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ. ಯಾವ ದ್ವೀಪ ಹಾಗೂ ಯಾವ ಕೆಲಸ ಎನ್ನುವ ಬಗ್ಗೆ ನಾವಿಂದು ಮಾಹಿತಿ ನೀಡ್ತೇವೆ.

ಈ ದ್ವೀಪದಲ್ಲಿ ಕೆಲಸಕ್ಕೆ ಅವಕಾಶ : ಈಗ ನಾವು ಹೇಳ ಹೊರಟಿರುವ ದ್ವೀಪದ ಹೆಸರು ಬಾರ್ಡ್ಸೆ ದ್ವೀಪ (Bardsey Island). ಇದು ಬ್ರಿಟನ್‌ (Britain) ನ ವೇಲ್ಸ್‌ನಲ್ಲಿದೆ. ಅದರ ಮಾಲೀಕರು ಇಬ್ಬರು ವಾರ್ಡನ್ ಹುಡುಕಾಟದಲ್ಲಿದ್ದಾರೆ. ಇಲ್ಲಿ ಕೆಲಸ ಮಾಡುವ ಜನರಿಗೆ ಉತ್ತಮ ಸಂಬಳ (Salary) ನೀಡಲಾಗುತ್ತದೆ. ಪ್ರತಿ ಗಂಟೆಗೆ 11.44 ಪೌಂಡ್‌ ಅಂದರೆ ಸುಮಾರು 1200 ರೂಪಾಯಿ ಪಾವತಿ ಮಾಡಲಾಗುತ್ತದೆ.

ಅಮೆರಿಕದಲ್ಲಿ ಗಾರ್ಡ್ ಕೆಲಸ, ಬರ್ಗರ್ ಮಾರುತ್ತಿದ್ದ ವ್ಯಕ್ತಿ ಈಗ ಕೋಟ್ಯಾಧಿಪತಿ!

ಈ ಕೆಲಸಕ್ಕೆ ನೇಮಕವಾಗುವ ಜನರು ಇದೇ ದ್ವೀಪದಲ್ಲಿ ವಾಸ ಮಾಡಿ, ಕೆಲಸ ಮಾಡಬೇಕು. ಜಾಹೀರಾತಿನ ಪ್ರಕಾರ, ಉತ್ತರ ವೇಲ್ಸ್‌ನ ಲಿನ್ ಪೆನಿನ್ಸುಲಾದ ಕರಾವಳಿಯಲ್ಲಿ ಈ ಬಾರ್ಡ್ಸೆ ದ್ವೀಪವಿದೆ. ಇಲ್ಲಿ ನಿಮಗೆ ಕೆಲಸ ಸಿಕ್ಕಿದ್ರೆ  ನೀವು ಪ್ರತಿ ತಿಂಗಳು ದೋಣಿ ವಿಹಾರದ ಮಜ ಸವಿಯಬಹುದು. ಇದಲ್ಲದೆ ಅನೇಕ ಐಷಾರಾಮಿ ಪ್ರಯೋಜನಗಳನ್ನು ನೀವು ಪಡೆಯುತ್ತೀರಿ. ಇದು ದ್ವೀಪವಾದ್ರೂ ನೀವು ಹೊರ ಜಗತ್ತಿನ ಸಂಪರ್ಕ ಕಡಿತಗೊಳಿಸಬೇಕಾಗಿಲ್ಲ. ಇಂಟರ್ನೆಟ್ ಸೌಲಭ್ಯ ಕೂಡ ನಿಮಗೆ ಸಿಗುತ್ತದೆ. ಉದ್ಯೋಗಕ್ಕಾಗಿ ನೀಡಲಾದ ಜಾಹೀರಾತಿನಲ್ಲಿ ಅರ್ಜಿದಾರರು ಇಂಗ್ಲಿಷ್ ಮತ್ತು ವೆಲ್ಷ್ ಭಾಷೆಗಳನ್ನು ತಿಳಿದಿರಬೇಕು ಎಂದು ಹೇಳಲಾಗಿದೆ. ಅಲ್ಲದೆ ನಿಮಗೆ ಚಾಲನೆ ಬರ್ತಿದ್ದರೆ ನೀವು ಅರ್ಜಿ ಸಲ್ಲಿಸಬಹುದು.

ದ್ವೀಪದಲ್ಲಿದೆ ಈ ಎಲ್ಲ ಸೌಲಭ್ಯ: ಈ ದ್ವೀಪ 0.69 ಚದರ ಮೈಲಿಗಳಷ್ಟು ಹರಡಿಕೊಂಡಿದೆ. ಈ ದ್ವೀಪದಲ್ಲಿ ಕೇವಲ 11 ಜನರು ವಾಸಿಸುತ್ತಿದ್ದಾರೆ. ಇದು ಜಾದೂಗಾರ ಮೆರ್ಲಿನ್ ಅವರ ಸಮಾಧಿ ಸ್ಥಳವಾಗಿದೆ ಎಂದು ಹೇಳಲಾಗುತ್ತದೆ. ಈ ಸ್ಥಳದ ಬಗ್ಗೆ ಅನೇಕ ಕಥೆಗಳನ್ನು ನೀವು ಕೇಳಬಹುದಾಗಿದೆ.

ಇದು ಕಾಂಟ್ರೆಕ್ಟ್ ಕೆಲಸವಾಗಿದೆ. ನೀವು ಕೆಲಸಕ್ಕೆ ನೇಮಕವಾದ್ರೆ ನಿಮ್ಮ ಕೆಲಸದ ಕಾಂಟ್ರೆಕ್ಟ್ ಮಾರ್ಚ್ 1 ರಂದು ಪ್ರಾರಂಭವಾಗಿ ಅಕ್ಟೋಬರ್ 30 ರಂದು ಕೊನೆಗೊಳ್ಳುತ್ತದೆ. ಇಲ್ಲಿ ವಿದ್ಯುತ್ ಸೌಲಭ್ಯ ಕೂಡ ಇದೆ. ಸೌರಫಲಕಗಳಿಂದ ವಿದ್ಯುತ್ ಪಡೆಯಲಾಗುತ್ತದೆ. ಸೀಮಿತ ಪ್ರದೇಶದಕ್ಕೆ ಕರೆಂಟ್ ಸಿಗುತ್ತದೆ. ಫ್ರಿಜ್, ಕರೆಂಟ್, ಇಂಟರ್ನೆಟ್ ಸೌಲಭ್ಯ ಇದ್ರಿಂದ ಪಡೆಯಬಹುದು. 

Income Tax Tips: ಐಟಿಆರ್ ಸಲ್ಲಿಕೆಗೂ ಮುನ್ನ ತೆರಿಗೆ ಉಳಿತಾಯ ಹೆಚ್ಚಿಸಿಕೊಳ್ಳೋದು ಹೇಗೆ? ಇಲ್ಲಿದೆ ಟಿಪ್ಸ್

30 ಮೀಟರ್  ಎತ್ತರದ ಮತ್ತು 200 ವರ್ಷಗಳಷ್ಟು ಹಳೆಯದಾದ ಚೌಕಾಕಾರದ ಗೋಪುರವನ್ನು ಹೊಂದಿರುವ ಬ್ರಿಟನ್‌ನ ಅತಿ ಎತ್ತರದ ಲೈಟ್‌ಹೌಸ್ ಅನ್ನು ನೀವು ಈ ದ್ವೀಪದಲ್ಲಿ ಕಾಣಬಹುದು. ಈ ದ್ವೀಪವನ್ನು 1979 ರಲ್ಲಿ ಐಲ್ಯಾಂಡ್ ಟ್ರಸ್ಟ್ ಖರೀದಿಸಿತು ಮತ್ತು ಅದರ ಮಾಲೀಕತ್ವವು ಇನ್ನೂ ಟ್ರಸ್ಟ್‌ ಬಳಿ ಇದೆ. ಈ ದ್ವೀಪಕ್ಕೆ ಯುರೋಪ್ ನಲ್ಲಿ ಡಾರ್ಕ್ ಸ್ಕೈ ಅಭಯಾರಣ್ಯದ ಸ್ಥಾನ ಸಿಕ್ಕಿದೆ.
 

Follow Us:
Download App:
  • android
  • ios