Income Tax Tips: ಐಟಿಆರ್ ಸಲ್ಲಿಕೆಗೂ ಮುನ್ನ ತೆರಿಗೆ ಉಳಿತಾಯ ಹೆಚ್ಚಿಸಿಕೊಳ್ಳೋದು ಹೇಗೆ? ಇಲ್ಲಿದೆ ಟಿಪ್ಸ್
2024ನೇ ಸಾಲಿನ ಐಟಿಆರ್ ಸಲ್ಲಿಕೆಗೆ ಮಾರ್ಚ್ 31 ಅಂತಿಮ ಗಡುವು. ಹೀಗಿರುವಾಗ ತೆರಿಗೆ ಉಳಿತಾಯದ ಬಗ್ಗೆ ಈಗಲೇ ಸೂಕ್ತ ಯೋಜನೆ ರೂಪಿಸೋದು ಅಗತ್ಯ. ಹಾಗಾದ್ರೆ ಹೆಚ್ಚಿನ ತೆರಿಗೆ ಉಳಿತಾಯ ಮಾಡೋದು ಹೇಗೆ?
Business Desk: 2023-2024ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಲು ಮಾರ್ಚ್ 31 ಅಂತಿಮ ಗಡುವು ಅನ್ನೋದು ಎಲ್ಲರಿಗೂ ತಿಳಿದಿದೆ. ಹಾಗಂತ ಐಟಿಆರ್ ಸಲ್ಲಿಕೆಗೆ ಇನ್ನೂ ಸಮಯವಿದೆ ಎಂದು ತೆರಿಗೆ ಪ್ಲ್ಯಾನಿಂಗ್ ಬಗ್ಗೆ ಯೋಚಿಸದೆ ಸುಮ್ಮನಿರಲು ಸಾಧ್ಯವಿಲ್ಲ. ತೆರಿಗೆ ಉಳಿತಾಯದ ಬಗ್ಗೆ ಈಗಲೇ ಲೆಕ್ಕಾಚಾರ ಪ್ರಾರಂಭಿಸೋದು ಅಗತ್ಯ. ಕೊನೆಯ ಕ್ಷಣದಲ್ಲಿ ಈ ಬಗ್ಗೆ ಯೋಚಿಸೋದಕ್ಕಿಂತ ಮೊದಲೇ ಸೂಕ್ತ ಸಿದ್ಧತೆ ನಡೆಸೋದು ಉತ್ತಮ. ಬಹುತೇಕ ಜನರು ಕೊನೆಯ ಕ್ಷಣದಲ್ಲಿ ಅಂದ್ರೆ ಐಟಿಆರ್ ಸಲ್ಲಿಕೆ ಮಾಡುವಾಗ ಈ ಬಗ್ಗೆ ಯೋಚಿಸುತ್ತಾರೆ. ಇದು ಸರಿಯಲ್ಲ. ಹೀಗೆ ಮಾಡೋದ್ರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಕೂಡ. ಹಾಗಾಗಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡೋರು ಒಂದಿಷ್ಟು ಎಚ್ಚರಿಕೆ ಕ್ರಮಗಳನ್ನು ಅನುಸರಿಸೋದು ಅಗತ್ಯ. ಹಾಗಾದ್ರೆ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡುವ ಮುನ್ನ ಉಳಿತಾಯವನ್ನು ಹೆಚ್ಚಿಸಿಕೊಳ್ಳೋದು ಹೇಗೆ? ಯಾವೆಲ್ಲ ಟಿಪ್ಸ್ ಪಾಲಿಸಬೇಕು? ಇಲ್ಲಿದೆ ನೋಡಿ.
*ಸಮಯಕ್ಕೆ ಸರಿಯಾಗಿ ಐಟಿಆರ್ ಸಲ್ಲಿಕೆ ಮಾಡಿ
ಆದಾಯ ತೆರಿಗೆ ಉಳಿತಾಯ ಮಾಡಲು ಸಮಯಕ್ಕೆ ಸರಿಯಾಗಿ ಐಟಿಆರ್ ಸಲ್ಲಿಕೆ ಮಾಡೋದು ಕೂಡ ಮುಖ್ಯ. ಐಟಿಆರ್ ಸಲ್ಲಿಕೆ ಮಾಡಲು ಅಂತಿಮ ದಿನದ ತನಕ ಕಾಯುವ ಬದಲು ಮೊದಲೇ ಮಾಡಿ ಮುಗಿಸಿ. ಇದ್ರಿಂದ ಕೊನೆಯ ಕ್ಷಣದ ಗಡಿಬಿಡಿ ತಪ್ಪಿಸಬಹುದು. ಈಗ ಆದಾಯ ತೆರಿಗೆ ಇಲಾಖೆಯ ಪೋರ್ಟಲ್ ನಲ್ಲಿ ಐಟಿಆರ್ ಸಲ್ಲಿಕೆ ಮಾಡುವ ಕಾರಣ ಕೊನೆಯ ಕ್ಷಣದಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹೀಗಾಗಿ ಕೊನೆಯ ಕ್ಷಣದ ತನಕ ಕಾಯದೆ ಬೇಗ ಐಟಿಆರ್ ಸಲ್ಲಿಕೆ ಮಾಡೋದು ಉತ್ತಮ. ಈ ವಿಚಾರದ ಬಗ್ಗೆ ಆದಾಯ ತೆರಿಗೆ ಇಲಾಖೆ ಕೂಡ ಹೆಚ್ಚಿನ ಒತ್ತು ನೀಡುತ್ತಿರುತ್ತದೆ.
ITRನಲ್ಲಿ ಸಮರ್ಪಕ ಮಾಹಿತಿ ದಾಖಲಿಸದ ತೆರಿಗೆದಾರರು ತಕ್ಷಣ ಪ್ರತಿಕ್ರಿಯಿಸಿ: ಐಟಿ ಇಲಾಖೆ ಮನವಿ
* ಇ-ಮೇಲ್ ಗಳ ಬಗ್ಗೆ ಎಚ್ಚರ
ಇನ್ನು ನಿಮ್ಮ ಇ-ಮೇಲ್ ಗೆ ಬರುವ ಕೆಲವು ಮೇಲ್ ಗಳ ಬಗ್ಗೆ ಕೂಡ ಎಚ್ಚರಿಕೆ ವಹಿಸೋದು ಅಗತ್ಯ. ಒಟಿಪಿ, ಪಾಸ್ ವರ್ಡ್ ಅಥವಾ ಇತರ ಸೂಕ್ಷ್ಮ ಮಾಹಿತಿಗಳನ್ನು ನೀಡುವಂತೆ ಇ-ಮೇಲ್ ಅಥವಾ ಫೋನ್ ಕರೆ ಬಂದರೆ ಅದಕ್ಕೆ ಪ್ರತಿಕ್ರಿಯಸಬೇಡಿ. ಆದಾಯ ತೆರಿಗೆ ಇಲಾಖೆ ತೆರಿಗೆದಾರರ ಬಳಿ ಎಂದಿಗೂ ಇಂಥ ಮಾಹಿತಿಗಳನ್ನು ಕೇಳೋದಿಲ್ಲ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಕೂಡ ತೆರಿಗೆದಾರರಿಗೆ ಎಚ್ಚರಿಕೆ ನೀಡಿದೆ. ಇಂಥ ಮೇಲ್ ಗಳಿಗೆ ಪ್ರತಿಕ್ರಿಯಿಸದಂತೆ ಸಲಹೆ ನೀಡಿದೆ ಕೂಡ. ಇದು ವಂಚಕರು ತೆರಿಗೆದಾರರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಲು ಅನುಸರಿಸುವ ಮಾರ್ಗಗಳಲ್ಲಿ ಒಂದಾಗಿದೆ.
*ಬ್ಯಾಂಕ್ ಉಳಿತಾಯ ಖಾತೆ ಬಡ್ಡಿದರಕ್ಕೂ ಇದೆ ತೆರಿಗೆ
ಇನ್ನು ಬ್ಯಾಂಕ್ ಉಳಿತಾಯ ಖಾತೆಯಲ್ಲಿನ ಹಣಕ್ಕೆ ಗಳಿಸಿದ ಬಡ್ಡಿ ಮೇಲೆ ಕೂಡ ತೆರಿಗೆ ವಿಧಿಸಲಾಗುತ್ತದೆ. ಎಲ್ಲ ಉಳಿತಾಯ ಖಾತೆಗಳ ಬಡ್ಡಿದರ 10,000ರೂ. ದಾಟಿದ್ದರೆ ಆಗ ಅದಕ್ಕೆ ತೆರಿಗೆ ವಿಧಿಸಲಾಗುತ್ತದೆ. ಇಷ್ಟು ಬಡ್ಡಿ ಆದಾಯ ಹೊಂದಿದ್ದರೆ ಆ ಬಗ್ಗೆ ತೆರಿಗೆದಾರರು ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ (ಐಟಿಆರ್) ಮಾಹಿತಿ ನೀಡೋದು ಅಗತ್ಯ.
*ಮನೆ ಬಾಡಿಗೆ ಮೇಲೆ ಟಿಡಿಎಸ್
ಇನ್ನು ಪ್ರತಿ ತಿಂಗಳ ಮನೆ ಬಾಡಿಗೆ 50,000ರೂ. ದಾಟಿದ್ದರೆ ಆಗಶೇ.5ರಷ್ಟು ಟಿಡಿಎಸ್ ಕಡಿತ ಮಾಡಲಾಗುತ್ತದೆ. ಆದರೆ, ನೆನಪಿಡಿ ಮನೆ ಮಾಲೀಕ ಟಿಡಿಎಸ್ ಕ್ರೆಡಿಟ್ ಪಡೆಯುತ್ತಾರೆ. ಬಾಡಿಗೆದಾರ ಇದನ್ನು ತನ್ನ ತೆರಿಗೆ ಜವಾಬ್ದಾರಿಯಲ್ಲಿ ಸೇರಿಸುವಂತಿಲ್ಲ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಈಗಿನಿಂದಲೇ ಅವಕಾಶ: ಫಾರಂ ಬಿಡುಗಡೆ ಮಾಡಿದ ತೆರಿಗೆ ಇಲಾಖೆ
*ತೆರಿಗೆ ಉಳಿತಾಯ ಹೆಚ್ಚಿಸಿಕೊಳ್ಳೋದು ಹೇಗೆ?
ತೆರಿಗೆ ಉಳಿತಾಯ ಹೆಚ್ಚಿಸಲು ತೆರಿಗೆದಾರರು ವಿವಿಧ ತೆರಿಗೆ ಉಳಿತಾಯ ಯೋಜನೆಗಳಾದ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ ಎಸ್ ಸಿ), ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ ಪಿಎಸ್ ) ಹಾಗೂ ಇಕ್ವಿಟಿ ಲಿಂಕ್ಡ್ ಉಳಿತಾಯ ಯೋಜನೆಗಳಲ್ಲಿ (ಇಎಲ್ ಎಸ್ ಎಸ್) ಹೂಡಿಕೆ ಮಾಡಬೇಕು.