ಚಂದ್ರನ ಸ್ಥಾನದಿಂದ ಭೂಮಿ ತಿರುಗುವಿಗೆ ವೇಗ ಹೆಚ್ಚಾಗಿದೆ. ಇದರ ಪರಿಣಾಮ ಇಂದು ಅತೀ ಚಿಕ್ಕ ದಿನವಾಗಿದೆ. ಅಂದರೆ ಅತೀ ಬೇಗನೆ ಒಂದು ದಿನ ಮುಗಿಯಲಿದೆ. ವಿಶೇಷ ಅಂದರೆ ಇನ್ನೆರಡು ದಿನವೂ ಇದೇ ರೀತಿ ಶಾರ್ಟ್ ಡೇ ದಾಖಲಾಗಲಿದೆ.

ನವದೆಹಲಿ (ಜು.09) ಬಾಹ್ಯಾಕಾಶ, ಭೂಮಂಡಲ, ಗ್ರಹಗಳ ಅಧ್ಯಯನ, ಸಂಶೋಧನೆ ನಡೆಸುವ ವಿಜ್ಞಾನಿಗಳಿಗೆ ಪ್ರತಿ ದಿನವೂ ಒಂದಲ್ಲೂ ಒಂದು ವಿಶೇಷತೆಯಿಂದ ಕೂಡಿರುತ್ತದೆ. ಆದರೆ ಸಾಮಾನ್ಯರಿಗೆ ಸೂಕ್ಷ್ಮ ಬದಲಾವಣೆಗಳು ಕಣ್ಣಿಗೆ ಕಾಣದೇ ಹೋಗಬಹುದು, ಅಥವಾ ಅನುಭವಕ್ಕೆ ಬರದೇ ಇರಬಹುದು. ಆದರೆ ಇಂದು ಒಂದು ವಿಶೇಷ ದಿನ ನಿಮ್ಮ ಅನುಭವಕ್ಕೆ ಬರಲಿದೆ. ಕಾರಣ ಇಂದು (ಜು.09) ಭೂಮಿ ಇತಿಹಾಸದಲ್ಲಿ ಬಳಿಕ ದಾಖಲಾಗುವ ಅತೀ ಚಿಕ್ಕ ದಿನ ಇದಾಗಿದೆ. ಪ್ರಮುಖವಾಗಿ ಚಂದ್ರನ ಸ್ಥಾನದಿಂದ ಭೂಮಿಯ ತಿರುಗುವಿಕೆ ಇಂದು ಹೆಚ್ಚಾಗಿದೆ. ಇದೇ ರೀತಿ ಇನ್ನೆರಡು ದಿನವೂ ಭೂಮಿಯ ತಿರುಗುವಿಕೆ ವೇಗದಲ್ಲಿ ಅತೀ ಚಿಕ್ಕ ದಿನ ದಾಖಲಾಗಲಿದೆ.

ಚಂದ್ರನ ಈಗಿನ ಸ್ಥಾನ ಭೂಮಿಯ ತಿರುಗಿವಿಕೆ ವೇಗವನ್ನು ಹೆಚ್ಚಿಸುತ್ತದೆ. ಹೀಗಾಗಿ ಅತೀ ಚಿಕ್ಕ ದಿನ ದಾಖಲಾಗುವ ದಿನ 1.3 ಮಿಲಿ ಸೆಕೆಂಡ್‌‌ನಿಂದ 1.51 ಮಿಲಿಸೆಕೆಂಡ್‌ ಕಡಿಮೆಯಾಗಲಿದೆ. ಜಾಗತಿಕ ಸಮಯ ನಿರ್ವಹಿಸುವ IERS ನಿಖರ ಸಮಯಕ್ಕಾಗಿ ಗಡಿಯಾರದಲ್ಲಿ ಹಾಗೂ ಇತರ ಸಮಯ ಸೂಚಕದಲ್ಲಿ ಇಂದು ಮಿಲಿಸೆಕೆಂಡ್ ಬದಲಾವಣೆ ಮಾಡಬೇಕಾಗುತ್ತದೆ. ಇದೇ ಮೊದಲ ಬಾರಿಗೆ ಈ ರೀತಿ ಸಂಭವಿಸುತ್ತಿದೆ.

ಜುಲೈ9 ಮಾತ್ರವಲ್ಲ, ಇನ್ನೆರು ದಿನ ಇದೆ

ಇಂದು ಭೂಮಿಯ ಇತಿಹಾಸದಲ್ಲಿ ಶಾರ್ಟ್ ಡೇ ದಾಖಲಾಗುತ್ತಿದೆ. ಆಂದರೆ ಒಟ್ಟು ದಿನ 24 ಗಂಟೆ ಆಗಿದ್ದರೆ ಇಂದು ಈ ಸಮಯ ಕಡಿತಗೊಳ್ಳುತ್ತಿದೆ. ಮಿಲಿಸೆಕೆಂಡ್ ವ್ಯತ್ಯಾಸವಾಗುತ್ತಿದೆ. ಹೀಗಾಗಿ ಚಿಕ್ಕ ದಿನವಾಗಲಿದೆ. ಇಂದು ಮಾತ್ರವಲ್ಲ, ಜುಲೈ 22 ರಂದು ಇದೇ ರೀತಿ ಚಿಕ್ಕ ದಿನ ದಾಖಲಾಗಲಿದೆ. ಇನ್ನು ಆಗಸ್ಟ್ 5 ರಂದು ಇದೇ ರೀತಿ ಚಿಕ್ಕ ದಿನ ದಾಖಲಾಗಲಿದೆ. ಇದು ಸಂಪೂರ್ಣವಾಗಿ ಚಂದ್ರನ ಸ್ಥಾನ ಹಾಗೂ ಅದರ ಸ್ಥಾನದಿಂದ ಭೂಮಿಯ ತಿರುಗುವಿಕೆಯಲ್ಲಾದ ಬದಲಾವಣೆಯಿಂದ ಆಗಿದೆ. ಈ ಕುರಿತು ಲೈವ್ ಸೈನ್ಸ್ ವರದಿ ನೀಡಿದೆ.

ಈ ಸಣ್ಣ ಬದಲಾವಣೆ ಗಮನಿಸಿದರೆ ಮಾತ್ರ ಗೋಚರವಾಗಲಿದೆ. ಈ ಚಿಕ್ಕ ದಿನದ ಬದಲಾವಣೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ಆದರೆ ಇಂತದೊಂದು ವಿಸ್ಮಯ ಘಟಿಸುತ್ತಿದೆ ಅನ್ನೋದು ದೊಡ್ಡ ವಿಚಾರ.

ಒಂದು ದಿನ 24 ಗಂಟೆ ಅಥವಾ 86,400 ಸೆಕೆಂಡ್ 

ಭೂಮಿ ತನ್ನ ಕಕ್ಷೆಯಲ್ಲಿ ತಿರುಗುತ್ತದೆ. ಈ ಮೂಲಕ ದಿನ ನಿರ್ಧರಿಸಲಾಗುತ್ತದೆ. ಅಂದರೆ ಒಂದು ದಿನ ಅಂದರೆ 24 ಗಂಟೆ ಅಥವಾ 86,400 ಸೆಕೆಂಡ್. ಸಾಮಾನ್ಯವಾಗಿ ಭೂಮಿ ತಿರುಗುವುದರಿಂದ ರಾತ್ರಿ ಬೆಳಗೆ ಆಗುತ್ತದೆ. ಭೂಮಿ ತಿರುಗುವಿಕೆಗೆ ವೇಗ ಸಾಮಾನ್ಯವಾಗಿ ಒಂದೇ ಆಗಿರುತ್ತದೆ. ಆದರೆ ಹೀಗೆ ಇರಬೇಕು, ಹೀಗೇ ಇರುತ್ತೆ ಎಂದಿಲ್ಲ. ಚಂದ್ರನ ಸ್ಥಾನ, ಸೂರ್ಯನ ಸ್ಥಾನಗಳಿಂದ ಭೂಮಿಯ ತಿರುಗುವಿಕೆ ವೇಗದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಇದೇ ಈಗ ಘಟಿಸುತ್ತಿದೆ.

19 ಗಂಟೆಯಲ್ಲಿ ದಿನ ಅಂತ್ಯವಾದ ಘಟನೆ ನಡೆದಿದೆ

1 ರಿಂದ 2 ಬಿಲಿಯನ್ ವರ್ಷಗಳ ಹಿಂದೆ ಭೂಮಿ ತಿರುಗುವಿಕೆ ವೇಗದ ಪರಿಣಾಮ ಕೇವಲ 19 ಗಂಟೆಯಲ್ಲಿ ಒಂದು ದಿನ ಅಂತ್ಯಗೊಂಡ ಉದಾಹರಣೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಂದರೆ 24 ಗಂಟೆಯ ಒಂದು ದಿನ ಕೇವಲ 19 ಗಂಟೆಯಲ್ಲಿ ಅಂತ್ಯಗೊಂಡು, ಮರು ದಿನವಾಗಿದೆ. ಇದಕ್ಕೆ ಕಾರಣ ಅಂದು ಭೂಮಿಯ ಅತೀ ಹತ್ತಿರದಲ್ಲಿ ಚಂದ್ರ ಹಾದು ಹೋಗಿದ್ದಾನೆ. ಈ ಗುರುತ್ವಾಕರ್ಷಣಾ ಬಲದಿಂದ ಭೂಮಿ ತಿರುಗುವಿಕೆ ವೇಗ ಹೆಚ್ಚಿಸಿದೆ. ಇದರ ಪರಿಣಾಮ ಅತೀ ವೇಗವಾಗಿ ದಿನ ಅಂತ್ಯಗೊಂಡಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಭೂಮಿಯಿಂದ ಚಂದ್ರ ಮತ್ತೆ ಸಹಜ ಸ್ಥಾನಕ್ಕೆ ಅಥವಾ ದೂರ ಸರಿಯುತ್ತಿದ್ದಂತೆ ಭೂಮಿಯ ತಿರುಗುವಿಕೆ ವೇಗ ಸಹಜ ಸ್ಥಿತಿಗೆ ಮರಳಲಿದೆ.