ಭೂಮಿಯು ಸಾಮಾನ್ಯಕ್ಕಿಂತ ವೇಗವಾಗಿ ತಿರುಗುತ್ತಿರುವುದರಿಂದ ಇತಿಹಾಸದಲ್ಲೇ ಅತಿ ಚಿಕ್ಕ ದಿನ ದಾಖಲಾಗಿದೆ. ಜುಲೈ 9, 22 ಮತ್ತು ಆಗಸ್ಟ್ 5 ರಂದು ಚಂದ್ರನ ಸ್ಥಾನದಿಂದಾಗಿ ಈ ವಿದ್ಯಮಾನ ಸಂಭವಿಸಿದೆ. ಈ ದಿನಗಳಲ್ಲಿ ದಿನದ ಅವಧಿ 1.3 ರಿಂದ 1.51 ಮಿಲಿಸೆಕೆಂಡ್‌ಗಳಷ್ಟು ಕಡಿಮೆಯಾಗಿದೆ.
ಭೂಮಿಯು ಸಾಮಾನ್ಯಕ್ಕಿಂತ ಅತಿ ವೇಗವಾಗಿ ತಿರುಗುತ್ತಿರುವ ಕಾರಣ ಇತಿಹಾಸದಲ್ಲೇ ಮೊದಲ ಬಾರಿಗೆ ನಿನ್ನೆ ಭೂಮಿ ಅತಿ ಚಿಕ್ಕ ದಿನವನ್ನು ದಾಖಲಿಸಿದೆ. ಇದೇ ಜು.22 ಮತ್ತು ಆ.5ರಂದೂ ಇದೇ ರೀತಿ ಅತಿ ಚಿಕ್ಕ ದಿನ ದಾಖಲಾಗಲಿದೆ.
ಜು.9, ಜು.22 ಮತ್ತು ಆ.5ರಂದು, ಚಂದ್ರನ ಸ್ಥಾನವು ಭೂಮಿಯ ತಿರುಗುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ದಿನದ ಅವಧಿಯು ಸಾಮಾನ್ಯಕ್ಕಿಂತ 1.3ರಿಂದ 1.51 ಮಿಲಿಸೆಕೆಂಡ್‌ಗಳವರೆಗೆ ಕಡಿಮೆ ಇರುತ್ತದೆ ಎಂದು ಲೈವ್ ಸೈನ್ಸ್ ವರದಿ ತಿಳಿಸಿದೆ.
ಇದನ್ನೂ ಓದಿ: Space Farming Milestone: ಅಂತರಿಕ್ಷದಲ್ಲಿ ಧಾರವಾಡದ ಹೆಸರು, ಮೆಂತ್ಯ ಬೆಳೆದ ಶುಭಾಂಶು ಶುಕ್ಲಾ!
ವಿಜ್ಞಾನಿಗಳ ಪ್ರಕಾರ, ಈ ವಿದ್ಯಮಾನಕ್ಕೆ ಚಂದ್ರನ ಸ್ಥಾನ ಕಾರಣ. ಸಾಮಾನ್ಯವಾಗಿ, ಭೂಮಿಯು ಒಂದು ಬಾರಿ ತನ್ನ ಅಕ್ಷದ ಮೇಲೆ ಸಂಪೂರ್ಣವಾಗಿ ತಿರುಗಲು ಬೇಕಾದ ಸಮಯ 24 ಗಂಟೆಗಳು.ಈ ವಿಶೇಷ ದಿನಗಳಂದು ಚಂದ್ರನ ಸ್ಥಾನವು ಸಮಭಾಜಕ ವೃತ್ತದಿಂದ ದೂರ ಸರಿದು ಭೂಮಿಯ ಧ್ರುವಗಳಿಗೆ ಹತ್ತಿರವಾಗುತ್ತದೆ. ಇದು ಭೂಮಿಯ ತಿರುಗುವಿಕೆ ಸಮಯವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಅತಿ ಚಿಕ್ಕ ದಿನ ದಾಖಲಾಗುತ್ತದೆ.