ಸೌಂದರ್ಯದ ಗಣಿ ರಾಧಿಕಾ ಪಂಡಿತ್ ಗೆ ಫ್ಯಾನ್ಸ್ ಕೇಳ್ತಿರೋದು ಒಂದೇ ಪ್ರಶ್ನೆ

Synopsis
ಸೌಂದರ್ಯಕ್ಕೆ ಇನ್ನೊಂದು ಹೆಸರೇ ರಾಧಿಕಾ ಪಂಡಿತ್. ನಲವತ್ತರ ಗಡಿ ದಾಟಿದ್ರೂ ಬ್ಯೂಟಿ ಕಾಯ್ದುಕೊಂಡಿರುವ ರಾಧಿಕಾಗೆ ಫ್ಯಾನ್ಸ್ ಇಟ್ಟ ಬೇಡಿಕೆ ಏನು?
ಸ್ಯಾಂಡಲ್ವುಡ್ ನಟಿ (Sandalwood actress), ರಾಕಿ ಭಾಯ್ ಯಶ್ (Rocky Bhai Yash) ಪತ್ನಿ, ರಾಧಿಕಾ ಪಂಡಿತ್ (Radhika Pandit) ಸಿನಿಮಾದಿಂದ ದೂರವಾಗಿ ತುಂಬಾ ವರ್ಷ ಕಳೆದಿದೆ. ಜಾಹೀರಾತಿನಲ್ಲಿ ಮಾತ್ರ ಕಾಣಿಸಿಕೊಳ್ತಿರುವ ರಾಧಿಕಾ, ಜಾಹೀರಾತಿನ ಮೂಲಕವೇ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಕಾಣಿಸಿಕೊಂಡಿರುವ ರಾಧಿಕಾ ಪಂಡಿತ್ ಮತ್ತೆ ಎಲ್ಲರನ್ನು ಬೆರಗಾಗಿಸಿದ್ದಾರೆ. ಸೀರೆಯಲ್ಲಿ ಮಿಂಚಿರುವ ರಾಧಿಕಾ ನೋಡೋಕೆ ಎರಡು ಕಣ್ಣು ಸಾಲೋದಿಲ್ಲ. ಮಾರ್ಚ್ ಏಳರಂದು ನಲವತ್ತೊಂದನೇ ವರ್ಷಕ್ಕೆ ಕಾಲಿಟ್ಟಿರುವ ರಾಧಿಕಾ ನೋಡಿದ್ರೆ ಅವರ ವಯಸ್ಸು ನಲವತ್ತರ ಗಡಿ ದಾಟಿದೆ ಅನ್ನೋಕೆ ಸಾಧ್ಯವೇ ಇಲ್ಲ. ರಾಧಿಕಾ ಇನ್ನೂ ಹದಿನೆಂಟು ವರ್ಷದ ಯುವತಿಯಂತೆ ಕಾಣ್ತಿದ್ದಾರೆ.
ಮೊಗ್ಗಿನ ಮನಸ್ಸು (Moggina Manasu) ಸಿನಿಮಾದಲ್ಲಿ ರಾಧಿಕಾ ಹೇಗಿದ್ರೋ ಅದೇ ಸೌಂದರ್ಯವನ್ನು ಈಗ್ಲೂ ಉಳಿಸಿಕೊಂಡಿದ್ದಾರೆ. ಮದುವೆಯಾಗಿ ಎರಡು ಮಕ್ಕಳಾದ್ಮೇಲೆ ಫಿಟ್ನೆಸ್ ಗೆ ಎಷ್ಟೇ ಇಂಪಾರ್ಟೆಂಟ್ ನೀಡಿದ್ರೂ ಮೊದಲಿನ ಹೊಳಪು, ಫಿಟ್ನೆಸ್ ಬರೋದು ತುಂಬಾ ಕಷ್ಟ. ಆದ್ರೆ ರಾಧಿಕಾ ಪಂಡಿತ್ ಸೌಂದರ್ಯ, ಯುವತಿಯರನ್ನು ನಾಚಿಸುವಂತಿದೆ. ರಾಧಿಕಾ ಪಂಡಿತ್, ಸೀರೆಯಲ್ಲೇ ಹೆಚ್ಚಾಗಿ ಕಾಣಿಸಿಕೊಳ್ತಾರೆ. ಕರ್ನಾಟಕದ ಅತ್ತಿಗೆ ಎಂದೇ ಹೆಚ್ಚು ಪ್ರಸಿದ್ಧಿ ಪಡೆದಿರುವ ರಾಧಿಕಾ, ಸ್ಯಾಂಡಲ್ ವುಡ್ ಸಿಂಡ್ರೆಲಾ ಎಂದೇ ಹೆಸರು ಪಡೆದಿದ್ದಾರೆ.
ಮದುವೆಯಾಗಿ ಇಬ್ಬರು ಮಕ್ಕಳಾದ್ಮೇಲೆ ರಾಧಿಕಾ ಕೆಲ ವರ್ಷ ಅಮ್ಮನಾಗಿ ತಮ್ಮ ಕರ್ತವ್ಯದ ಮಾಡಿದ್ರು. ಅಲ್ಲಿ ಇಲ್ಲಿ ಕಾಣಿಸಿಕೊಳ್ತಿದ್ದ ರಾಧಿಕಾ ಪಂಡಿತ್ ಈ ವರ್ಷ ಮತ್ತಷ್ಟು ಆಕ್ಟಿವ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ರಾಧಿಕಾ ಪಂಡಿತ್ ಆಕ್ಟಿವ್ ಆಗ್ತಿದ್ದಾರೆ. ರಾಧಿಕಾ ಪಂಡಿತ್ ಯಾವ್ದೇ ವಿಡಿಯೋ ಹಾಕ್ಲಿ ಇಲ್ಲ ಫೋಟೋ ಹಾಕ್ಲಿ ಅಭಿಮಾನಿಗಳು ಲೈಕ್ ಒತ್ತದೆ ಮುಂದೆ ಹೋಗೋದಿಲ್ಲ. ಕೆಲವೇ ಗಂಟೆಯಲ್ಲಿ ಲಕ್ಷಾಂತರ ಲೈಕ್ಸ್ ಪಡೆಯುವ ವಿಡಿಯೋಗಳಿಗೆ ನೂರಾರು ಕಮೆಂಟ್ ಬರುತ್ತೆ. ಬಹುತೇಕ ಬಳಕೆದಾರರು ಕೇಳುವ ಒಂದೇ ಒಂದು ಪ್ರಶ್ನೆ ಅಂದ್ರೆ ರಾಧಿಕಾ ಪಂಡಿತ್ ಸಿನಿಮಾ ಯಾವಾಗ ಮಾಡ್ತಾರೆ ಅಂತ.
RCB ಆಟಗಾರನ ಫ್ಯಾನಾ ಅಲ್ಲ ಗರ್ಲ್‌ಫ್ರೆಂಡಾ: ನಟಿ ಧನ್ಯ ರಾಮ್‌ಕುಮಾರ್ ಫೋಟೋ ಸಖತ್ ವೈರಲ್
ಆರಂಭದಿಂದಲೂ ರಾಧಿಕಾ ಪಂಡಿತ್ ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳು ಭಿನ್ನವಾಗಿರುತ್ತವೆ. ಹನ್ನೊಂದು ವರ್ಷದಲ್ಲಿ, ಇಪ್ಪತ್ತೊಂದು ಸಿನಿಮಾದಲ್ಲಿ ನಟಿಸಿರುವ ರಾಧಿಕಾ ಪಂಡಿತ್, ಆಕ್ಟಿಂಗ್, ಕಥೆ, ಬ್ಯುಟಿ ಎಲ್ಲದ್ರಲ್ಲೂ ಫಸ್ಟ್ ರ್ಯಾಂಕ್ ಪಡೆದಿದ್ದಾರೆ. ಮದುವೆಯಾದ್ಮೇಲೆ ಇಬ್ಬರು ಮಕ್ಕಳ ಕಾರಣಕ್ಕೆ ರಾಧಿಕಾ ಬ್ಯುಸಿಯಿದ್ರು ಅಂತ ಫ್ಯಾನ್ಸ್ ಕೂಡ ಸುಮ್ಮನಿದ್ರು. ಆದ್ರೀಗ ರಾಧಿಕಾ ಬಿಡುವಂತೆ ಕಾಣ್ತಿಲ್ಲ. ಆದಷ್ಟು ಬೇಗ ಒಂದು ಸಿನಿಮಾ ಮಾಡಿ, ಬೆಳ್ಳಿ ತೆರೆ ಮೇಲೆ ನಿಮ್ಮನ್ನು ನೋಡುವ ಆಸೆ ನಮಗಿದೆ ಅಂತ ಅಭಿಮಾನಿಗಳು ಬೇಡಿಕೆ ಇಡ್ತಾನೆ ಇದ್ದಾರೆ.
ಅಮ್ಮನ ನೆನಪುಗಳನ್ನು ಬಿಚ್ಚಿಟ್ಟು ‘ಧಿಕ್ಕಾರ ನಿನಗೆ ದೇವರೇ’ ಎಂದ ವಿಜಯ್ ರಾಘವೇಂದ್ರ ಪುತ್ರ
ಸದಾ ನಗು ಮುಖದಲ್ಲಿರುವ ರಾಧಿಕಾ ಪಂಡಿತ್, ತಮ್ಮ ಮುಂದಿನ ಸಿನಿಮಾ ಯಾವ್ದು, ಸಿನಿಮಾದಲ್ಲಿ ನಟಿಸ್ತಾರಾ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ನೀಡಿಲ್ಲ. ಆದಷ್ಟು ಬೇಗ ರಾಧಿಕಾ ಗುಡ್ ನ್ಯೂಸ್ ನೀಡ್ತಾರೆ, ನೀಡ್ಲಿ ಎನ್ನುವ ಆಸೆಯಲ್ಲಿ ಫ್ಯಾನ್ಸ್ ಇದ್ದಾರೆ. ರಾಧಿಕಾ ಮೊದಲು ಯಶ್ ಜೊತೆ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದರು. ಮೊಗ್ಗಿನ ಮನಸ್ಸು ಅವರ ಮೊದಲ ಸಿನಿಮಾ. ಆದಿ ಲಕ್ಷ್ಮಿ ಪುರಾಣ ಸಿನಿಮಾ ನಂತ್ರ ರಾಧಿಕಾ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಧಿಕಾ ತಮ್ಮ ಬ್ಯುಟಿ ಸಿಕ್ರೇಟ್ ಬಿಚ್ಚಿಟ್ಟಿದ್ದರು. ತಮ್ಮ ನಗು, ಈ ವಯಸ್ಸಿನಲ್ಲೂ ಇಷ್ಟೊಂದು ಸುಂದರವಾಗಿರಲು ಕಾರಣ ಯಶ್ ಎಂದಿದ್ದರು. ಮಕ್ಕಳ ಬಗ್ಗೆಯೂ ಮಾತನಾಡಿದ್ದ ರಾಧಿಕಾ, ಅಪ್ಪ ಅಂದ್ರೆ ಮಕ್ಕಳಿಗೆ ಪ್ರೀತಿ. ಅಮ್ಮನಾದ ನಾನು ಸ್ವಲ್ಪ ಸ್ಟ್ರಿಕ್ಟ್. ಇದು ಅನಿವಾರ್ಯ ಎಂದಿದ್ದರು.