Actor Yash Mother Pushpa: ನಟ ಯಶ್‌ ಹಾಗೂ ದೀಪಿಕಾ ದಾಸ್‌ ಅವರು ಸಂಬಂಧಿಕರು. ಆದರೆ ಈ ವಿಷಯವನ್ನು ಇವರಿಬ್ಬರು ಹೇಳಿಕೊಳ್ಳೋದಿಲ್ಲ. ಈ ಬಗ್ಗೆ ಯಶ್‌ ತಾಯಿ ಪುಷ್ಪ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ. 

ʼರಾಕಿಂಗ್‌ ಸ್ಟಾರ್ʼ‌ ಯಶ್‌ ಹಾಗೂ ದೀಪಿಕಾ ದಾಸ್‌ ಕಸಿನ್ಸ್‌ ಎನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಯಶ್ ತಾಯಿ ಹಾಗೂ ದೀಪಿಕಾ ದಾಸ್‌ ತಾಯಿ ಇಬ್ಬರೂ ಒಡಹುಟ್ಟಿದ ಸಹೋದರಿಯರು. ಆದರೆ ಯಶ್‌ ಮನೆಯ ಕಾರ್ಯಕ್ರಮಗಳಲ್ಲಿ ದೀಪಿಕಾ ದಾಸ್‌ ಆಗಲೀ, ದೀಪಿಕಾ ದಾಸ್‌ ಮನೆಯ ಕಾರ್ಯಕ್ರಮದಲ್ಲಿ ಯಶ್‌ ಆಗಲೀ ಇರೋದಿಲ್ಲ. ಅಷ್ಟೇ ಅಲ್ಲದೆ ಸಿನಿಮಾ ವಿಚಾರದಲ್ಲಿಯೂ ಅಷ್ಟಾಗಿ ಬೆಂಬಲ ಕೊಟ್ಟಂತಿಲ್ಲ. ಹೀಗಾಗಿ ಇವರ ಮಧ್ಯೆ ಏನಾದರೂ ಸಮಸ್ಯೆ ಇದೆಯಾ ಎಂಬ ಪ್ರಶ್ನೆ ಬಂದಿತ್ತು. ಈ ಬಗ್ಗೆ ಯಶ್‌ ತಾಯಿ ಪುಷ್ಪ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಪುಷ್ಪ ಏನು ಹೇಳಿದರು?

ಪುಷ್ಪ ಅವರು ಮಾತನಾಡಿ, “ಚಿಕ್ಕ ಹುಡುಗಿಯಿಂದಿನಿಂದಲೂ ದೀಪಿಕಾ ದಾಸ್‌ಗೆ ನನ್ನನ್ನು ಕಂಡರೆ, ಯಶ್‌ ನೋಡಿದರೆ ಭಯ. ಅವಳಿಗೆ ದೊಡ್ಡಮ್ಮನನ್ನು ಕಂಡರೆ ಸಿಕ್ಕಾಪಟ್ಟೆ ಭಯ. ಫೋನ್‌ ಮಾಡಿದರೂ ಅವಳು ಎರಡು ನಿಮಿಷ ಮಾತಾಡ್ತಾಳೆ. ಜಗಳ ಆಡುವಂತದ್ದು ಏನೂ ಇಲ್ಲ. ನಾವು ಹೇಳಿದಂಗೆ ಅವರು ಕೇಳಿದಾಗ, ನಾವು ಯಾಕೆ ಜಗಳ ಆಡ್ತೀವಿ? ದೀಪಿಕಾ ದಾಸ್‌ ಹಾಗೂ ನಾವು ಜಗಳ ಆಡ್ತೀವಿ ಅಂದ್ರೆ ಅವಳ ಕರಿಯರ್‌ಗೆ ಎಫೆಕ್ಟ್‌ ಆಗುತ್ತದೆ” ಎಂದಿದ್ದಾರೆ.

ದೀಪಿಕಾ ದಾಸ್‌ ಏನು ಹೇಳಿದರು?

ಈ ಹಿಂದೆ ಈ ವಿಷಯದ ಬಗ್ಗೆ ಮಾತನಾಡಿದ್ದ ದೀಪಿಕಾ ದಾಸ್‌ ಅವರು “ನಮ್ಮ ಕುಟುಂಬಗಳ ಮಧ್ಯೆ ಜಗಳ ಅಂಥ ಏನೂ ಇಲ್ಲ. ನನಗೆ ನಮ್ಮಿಬ್ಬರ ವೃತ್ತಿಯನ್ನು ಡಿಫರೆಂಟ್‌ ಆಗಿಟ್ಟುಕೊಳ್ತೀವಿ. ನಮ್ಮಿಬ್ಬರಿಗೂ ಪರಸ್ಪರ ಗೌರವವಿದೆ. ನಾವು ಎಲ್ಲಿಯೂ ಅಣ್ಣ, ತಂಗಿ ಹೇಳೋದಿಲ್ಲ, ಹೇಳೋಕೆ ಇಷ್ಟವೂ ಇಲ್ಲ. ನಮ್ಮ ಸಂಬಂಧದ ಬಗ್ಗೆ ನಾನು ಎಲ್ಲಿಯೂ ಈ ರೀತಿ ಮಾತನಾಡಿಲ್ಲ, ಈಗಲೂ ಅದನ್ನೇ ಕಂಟಿನ್ಯೂ ಮಾಡುವೆ. ನಾನು ಚೆನ್ನಾಗಿ ಕೆಲಸ ಮಾಡಿದಾಗ ಹೊಗಳ್ತಾರೆ, ಅದನ್ನು ಸಾರ್ವಜನಿಕವಾಗಿ ಹೇಳಿಕೊಳ್ಳೋಕೆ ಇಷ್ಟವೂ ಇಲ್ಲ. ಅದನ್ನು ಬಿಟ್ಟರೆ ಬೇರೆ ಏನೂ ಇಲ್ಲ” ಎಂದು ದೀಪಿಕಾ ಹೇಳಿದ್ದಾರೆ.

ಖಾಸಗಿ ಬದುಕು ಖಾಸಗಿಯಾಗಿರಬೇಕು!

“ನಮ್ಮಿಂದ ಏನಾದರೂ ಒಳ್ಳೆಯದಾದರೆ ಜನರು ತಗೊಳ್ಳೋದುಂಟು, ಅದೇ ನೆಗೆಟಿವ್‌ ಆದರೆ ಸಮಸ್ಯೆ ಆಗುವುದು. ಹೀಗಾಗಿ ನಮ್ಮ ಲೈಫ್‌ನಲ್ಲಿ ಏನಾದರೂ ಒಳ್ಳೆಯದಾಗೋವರೆಗೂ ಕಾಯಬೇಕು, ಅಲ್ಲಿವರೆಗೆ ನನ್ನ ಖಾಸಗಿ ಬದುಕನ್ನು ಖಾಸಗಿಯಾಗಿಟ್ಟುಕೊಳ್ಳಲು ಇಷ್ಟಪಡ್ತೀನಿ” ಎಂದು ನಟಿ ದೀಪಿಕಾ ದಾಸ್‌ ಅವರು ಹೇಳಿದ್ದಾರೆ.

ಯಶ್‌ ಅವರನ್ನು ತುಂಬ ಹೊಗಳ್ತೀನಿ!

“ನಾವು ಮೊದಲು ಹಾಸನದಲ್ಲಿದ್ದೆವು, ಯಶ್‌ ಕುಟುಂಬವು ಮೈಸೂರಿನಲ್ಲಿತ್ತು. ಚಿಕ್ಕ ವಯಸ್ಸಿನಲ್ಲಿ ಅಪರೂಪಕ್ಕೆ ಎರಡು ಕುಟುಂಬಗಳು ಭೇಟಿ ಆಗುತ್ತಿದ್ದರು. ಯಶ್‌ ಅಣ್ಣ ನನಗೆ ಯಾವಾಗಲೂ ಸ್ಪೂರ್ತಿ ಇದ್ದಂತೆ.‌ ಜನರು ಇಂದು ಯಶ್‌ರನ್ನು ಎಷ್ಟು ಹೊಗಳ್ತಾರೋ ಅದಕ್ಕಿಂತ ಜಾಸ್ತಿ ನಾನು ಹೊಗಳುವೆ. ಯಶ್‌ ಇಂದು ನಮ್ಮ ದೇಶ ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ. ಯಶ್‌ ಇರುವ ಚಿತ್ರರಂಗದಲ್ಲಿ ನಾನು ಇರೋದು ಕೂಡ ತುಂಬ ಖುಷಿಯಿದೆ. ಯಶ್‌ ಅವರಿಗೆ ಇನ್ನಷ್ಟು ಒಳ್ಳೆಯದಾಗಲಿ” ಎಂದು ದೀಪಿಕಾ ದಾಸ್‌ ಹೇಳಿದ್ದಾರೆ.