ಕೆಫೆಯಲ್ಲಿ ಪತ್ನಿಯನ್ನು 'ಸುಂದರಿ' ಎಂದು ಕರೆದ ಸಿಬ್ಬಂದಿ ಮೇಲೆ ಪತಿಯೊಬ್ಬ ಕೋಪಗೊಂಡ ಘಟನೆ ವೈರಲ್ ಆಗಿದೆ. ಈ ಘಟನೆ ಅಮೆರಿಕದಲ್ಲಿ ನಡೆದಿದ್ದು, ನೆಟ್ಟಿಗರು ಪತಿಯ ನಡವಳಿಕೆಯನ್ನು ಟೀಕಿಸಿದ್ದಾರೆ.
ಒಬ್ರು ನೋಡೋದಕ್ಕೆ ಚೆಂದ ಕಾಣಿಸಿದ್ರೆ ಅವರನ್ನು ತುಂಬಾ ಜನ ಇಷ್ಟಪಡ್ತಾರೆ. ಕೊನೆಗೆ ಉಳಿಯುವುದು ಚೆಂದಕ್ಕಿಂತಲೂ ಗುಣವೇ ಆದರೂ ಜನ ಮೊದಲಿಗೆ ಆಕರ್ಷಿತರಾಗುವುದು ಸೌಂದರ್ಯದಿಂದ ಇದು ಸಾರ್ವತ್ರಿಕ ಸತ್ಯ. ಅನೇಕರು ಚಂದ ಕಾಣುವವರಿಗೆ ನೀವು ತುಂಬಾ ಚೆನ್ನಾಗಿ ಕಾಣಿಸ್ತಿದ್ದೀರಿ ಎಂದು ಕಂಪ್ಲಿಮೆಂಟ್ಸ್ ನೀಡ್ತಾರೆ. ಇದರಿಂದ ಅವರು ಖುಷಿಯಾಗುತ್ತಾರೆ. ಆದರೆ ಇಲ್ಲೊಂದು ಕಡೆ ಕೆಫೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಮಹಿಳೆಯೊಬ್ಬರಿಗೆ ಬ್ಯೂಟಿಫುಲ್ ಆಗಿದ್ದೀರಿ ಎಂದು ಹೇಳಿದ್ದಾರೆ. ಇಷ್ಟಕ್ಕೆ ಆ ಮಹಿಳೆಯ ಪತಿ ತಮ್ಮ ತಾಳ್ಮೆ ಕಳೆದುಕೊಂಡಿದ್ದು, ತನ್ನ ಪತ್ನಿಯ ಹೊಗಳಿದವನ ಮೇಲೆ ತೀವ್ರ ಕೋಪಗೊಂಡ ಗಂಡ ಆತನ ಮೇಲೆ ಅಲ್ಲೇ ಜೋರಾಗಿ ಕಿರುಚಾಡಿ ಆಕ್ರೋಶ ಹೊರ ಹಾಕಿದ್ದಾರೆ.
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಜನ ತರಹೇವಾರಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಲೋಕಲ್ ಟಾಕ್ ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದೆ. ಸ್ಥಳೀಯ ಕೆಫೆಯೊಂದರಲ್ಲಿತನ್ನ ಹೆಂಡತಿಯನ್ನು 'ಸುಂದರಿ' ಎಂದು ಕರೆದಿದ್ದಕ್ಕಾಗಿ ಒಬ್ಬ ಗ್ರಾಹಕ ಸಿಬ್ಬಂದಿ ವಿರುದ್ಧ ಸಿಟ್ಟಿಗೆದ್ದಾಗ ನಾಟಕೀಯ ದೃಶ್ಯವೊಂದು ತೆರೆದುಕೊಂಡಿತು. ಗೌರವದ ಉದ್ದೇಶದಿಂದ ನೀಡಲಾದ ಈ ಹೊಗಳಿಕೆಯು ಅನಿರೀಕ್ಷಿತ ಆಕ್ರೋಶಕ್ಕೆ ಕಾರಣವಾಯಿತು. ಆ ಗ್ರಾಹಕ, ಕೆಫೆ ನೌಕರರು ಗಡಿ ದಾಟಿದ್ದಾರೆ ಎಂದು ಆರೋಪಿಸಿದರು, ಇದು ಅಲ್ಲಿ ಊಟ ಮಾಡುತ್ತಿದ್ದ ಇತರರ ಗಮನ ಸೆಳೆಯುವ ಬಿಸಿ ವಾದಕ್ಕೆ ಕಾರಣವಾಯಿತು. ಘಟನೆಯ ವೀಡಿಯೊ ವೈರಲ್ ಆಗಿದೆ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.
ಇತ್ತ ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಕೆಫೆ ಸಿಬ್ಬಂದಿ ಪತ್ನಿಗೆ ನೀಡಿದ ಮೆಚ್ಚುಗೆ ಮಾತುಗಳಿಂದ ಆಕ್ರೋಶಗೊಂಡಿದ್ದು, ನೀವು ಏಕೆ ನನ್ನ ಹೆಂಡತಿಗೆ ಬ್ಯೂಟಿಫುಲ್ ಎಂದು ಹೇಳಿದ್ದೀರಿ ಎಂದು ಪ್ರಶ್ನೆ ಮಾಡುತ್ತಾನೆ. ಈ ವೇಳೆ ಕೆಫೆ ಸಿಬ್ಬಂದಿ ಹಾಗೆ ಹೇಳಿದ್ದು ಹೌದು ನನ್ನ ಈ ಮಾತಿಗಾಗಿ ಕ್ಷಮಿಸಿ ಎಂದು ಹೇಳುವುದನ್ನು ಕಾಣಬಹುದು. ಆದರೂ ಗಂಡ ಕೋಪ ತಣಿದಂತೆ ಕಾಣುತ್ತಿಲ್ಲ.
ಅಮೆರಿಕಾದ ಕನಸಾ ರಾಜ್ಯದಲ್ಲಿ ಈ ಘಟನೆ ನಡೆದಿದ್ದು, ವೀಡಿಯೋ ನೋಡಿದ ನೆಟ್ಟಿಗರು ಹೀಗೆ ಜಗಳವಾಡಿದ ಪತಿಯನ್ನು ಒಮ್ಮೆ ಮಾನಸಿಕ ತಜ್ಞರ ಬಳಿ ಕರೆದೊಯ್ದು ಕೌನ್ಸಿಲಿಂಗ್ ಮಾಡಿಸುವಂತೆ ಕರೆ ನೀಡಿದ್ದಾರೆ. ಈ ಗಂಡನಿಗೆ ತನ್ನ ಹೆಂಡತಿ ವಿಚಾರದಲ್ಲಿ ಆಕೆಯನ್ನು ಎಲ್ಲಿ ಕಳೆದುಕೊಳ್ಳುವೆನೋ ಎಂಬ ಅಭದ್ರತೆ ಕಾಡುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಆ ಬ್ಯೂಟಿಫುಲ್ ಹೆಂಡ್ತಿ ಪತಿಗೆ ವಿಚ್ಛೇದನ ನೀಡುವಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇಲ್ಲಿದೆ ನಿಮ್ಮ ಆರ್ಡರ್ ಬ್ಯೂಟಿಫುಲ್ , ಇಲ್ಲಿದೆ ನಿಮ್ಮ ಕಾಫಿ ಬ್ಯೂಟಿಫುಲ್ ಲೇಡಿ, ಇಂತಹ ಸೊಗಸಾದ ಪದಗಳೆಲ್ಲವೂ ಯಾರಿಗಾದರೂ ಆಹಾರ ಬಡಿಸುವಾಗ ಸಿಬ್ಬಂದಿ ಹೇಳುವ ಮೂಲಭೂತ ಶಿಷ್ಟಾಚಾರಗಳು. ಇದನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಸಭ್ಯ ಮತ್ತು ಸ್ನೇಹಪರವಾಗಿ ವರ್ತಿಸುವುದು ಎಂದು ಕರೆಯಲಾಗುತ್ತದೆ, ಈ ಮೂಲಕ ಒಬ್ಬರ ದಿನವನ್ನು ಉತ್ತಮಗೊಳಿಸಲು ಪ್ರಯತ್ನಿಸುವ ಯತ್ನ ಎಂದು ಇದನ್ನು ಕರೆಯಲಾಗುತ್ತದೆ. ಇದೇ ರೀತಿ ಪುರುಷರಿಗೆ, ನೀವುಈ ಉಡುಪಿನಲ್ಲಿ ಚೆನ್ನಾಗಿ ಕಾಣುತ್ತಿರಿ ಯಂಗ್ ಮ್ಯಾನ್ ಎಂದು ಹುಡುಗರಿಗೆ ಹೇಳಿದರೆ ಅವರು ಆತಂಕಗೊಳ್ಳುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ..
ಹಾಗೆಯೇ ಇವನೆಂಥಾ ಅಸೂಯೆ ಹೊಂದಿರುವ ಗಂಡ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಒಬ್ಬರು ಈ ಸ್ಥಿತಿಯನ್ನು ನೋಡಿದ ನಂತರ ಆಕೆಯ ಪ್ರತಿಕ್ರಿಯೆ ಹೇಗಿತ್ತು. ಯಾರಾದರೂ ಹೇಳಬಹುದೆ ಎಂದು ಒಬ್ಬರು ಕುತೂಹಲದಿಂದ ಕೇಳಿದ್ದಾರೆ. ಹಾಗೆಯೇ ಮತ್ತೊಬ್ಬರು ಈ ಸಂದರ್ಭದಲ್ಲಿ ಆಕೆ ಎಂತಹ ಬಟ್ಟೆ ಧರಿಸಿದ್ದಿರಬಹುದು ಹಾಗೂ ಆಕೆ ಹೇಗೆ ವರ್ತಿಸಿರಬಹುದು ಎಂದು ತಿಳಿಯುವುದಕ್ಕೆ ಬಯಸುತ್ತೇವೆ ಎಂದು ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.