ಕ್ಲೈಂಟ್‌ಗೆ ಬಾಯ್ತಪ್ಪಿ ಲವ್ ಯು ಎಂದ ಉದ್ಯೋಗಿ, ಮರು ದಿನ ಇಮೇಲ್ ನೋಡಿ ನಾಚಿ ನೀರಾದ

Synopsis
ಸಂಜೆಯಾಗಿದೆ, ಕೆಲಸ ಮುಗಿಯುತ್ತಾ ಬಂದಿದೆ. ಕ್ಲೈಂಟ್ ಜೊತೆ ಮಾತನಾಡುತ್ತಾ ಇನ್ನೇನು ಕರೆ ಕಟ್ ಮಾಡಬೇಕು ಅನ್ನುವಷ್ಟರಲ್ಲಿ ಉದ್ಯೋಗಿ ಒಕೆ, ಒಕೆ ಲವ್ ಯು ಎಂದಿದ್ದಾನೆ. ಅಚಾನಕ್ಕಾಗಿ ಈ ಮಾತುಗಳು ಬಂದಿದೆ. ಆದರೆ ಮರುದಿನ ಅದೇ ಕ್ಲೈಂಟ್‌ನಿಂದ ಬಂದ ಇಮೇಲ್ ನೋಡಿ ಉದ್ಯೋಗಿ ಅಚ್ಚರಿಗೊಂಡಿದ್ದಾನೆ.
ಕಚೇರಿಯಲ್ಲಿ ಉದ್ಯೋಗಿಗಳಿಂದ ಅಚಾನಕ್ಕಾಗಿ ಅಥವಾ ಕಣ್ತಪ್ಪಿನಿಂದ, ಗೊತ್ತಿಲ್ಲದೆ ಆಗುವ ಹಲವು ತಪ್ಪುಗಳು ಬಳಿಕ ಭಾರಿ ವೈರಲ್ ಆದ ಊದಾಹರಣೆಗಳಿವೆ. ಇದೀಗ ಉದ್ಯೋಗಿಯೊಬ್ಬರು ತನ್ನ ಕಂಪನಿಯ ಕ್ಲೈಂಟ್ ಜೊತೆ ಮಾತನಾಡುತ್ತಾ ಬಾಯ್ತಿಪ್ಪಿನಿಂದ ಲವ್ ಯು ಎಂದಿದ್ದಾರೆ. ಬಳಿಕ ಕರೆ ಕಟ್ ಮಾಡಿ ಮನಗೆ ಮರಳಿದ್ದಾರೆ. ಆದರೆ ಮರು ದಿನ ಅದೇ ಕ್ಲೈಂಟ್ ಕಳುಹಿಸಿದ ಇಮೇಲ್ ನೋಡಿ ಅಚ್ಚರಿ ಜೊತೆ ನಾಚಿ ನೀರಾದ ಘಟನೆ ನಡೆದಿದೆ. ಇದೀಗ ಉದ್ಯೋಗಿ ನಡೆದ ಸಂಪೂರ್ಣ ಘಟನೆಯನ್ನು ವಿವರಿಸಿದ್ದಾರೆ. ಇಷ್ಟೇ ಅಲ್ಲ ಕ್ಲೈಂಟ್ ಕಳುಹಿಸಿದ ಇಮೇಲ್ ಏನು ಅನ್ನೋದು ಬಹಿರಂಗಪಡಿಸಿದ್ದಾರೆ.
ಫೋನ್‌ನಲ್ಲಿ ಮಾಡಿದ ಸಣ್ಣ ಎಡವಟ್ಟು
ದಿನದ ಕೆಲಸ ಬಹುತೇಕ ಮುಗಿದಿತ್ತು. ಸಮಯ ಕೂಡ ಮೀರುತ್ತಾ ಬಂದಿತ್ತು. ಕ್ಲೈಂಟ್‌ಗೆ ಕರೆ ಮಾಡಿ ಕೆಲ ವಿಚಾರ ಫೈನಲ್ ಮಾಡುವ ಕೆಲಸ ಮಾತ್ರ ಬಾಕಿ ಇತ್ತು. ಹೀಗಾಗಿ ಉದ್ಯೋಗಿ ನೇರವಾಗಿ ಕ್ಲೈಂಟ್‌ಗೆ ಕರೆ ಮಾಡಿ ಮಾತನಾಡಲು ಆರಂಭಿಸಿದ್ದಾರೆ. ಕ್ಲೈಂಟ್ ಬೇಡಿಕೆ ಸೇರಿದಂತ ಹಲವು ಮಾಹಿತಿಗಳನ್ನು ಕೇಳಿದ್ದಾರೆ. ಸವಿವರವಾಗಿ ಕ್ಲೈಂಟ್ ಮಾತನಾಡಿದ್ದಾರೆ. ಈ ಕರೆ ಕೊಂಚ ಸುದೀರ್ಘವಾಗಿದೆ. ಇತ್ತ ಕಚೇರಿ ಸಮಯವೂ ಮುಗಿದಿದೆ. ಆದರೆ ಫೋನ್ ಮಾತುಕತೆ ಮಾತ್ರ ಮುಗಿದಿಲ್ಲ.
ಟ್ಯಾಕ್ಸಿ ಸೇವೆಗೆ ಹೊಸ ಕಾರು ಖರೀದಿಸಿ ಒಂದೇ ಟ್ರಿಪ್‌ನಿಂದ 59 ಸಾವಿರ ರೂ ಗಳಿಸಿದ ಚಾಲಕ
ಕ್ಲೈಂಟ್ ಜೊತೆ ಕೆಲ ಹೊತ್ತಿನ ಮಾತುಕತೆಯಲ್ಲಿ ಕ್ಲಾರಿಟಿ ಪಡೆದುಕೊಂಡ ಉದ್ಯೋಗಿ ಕೊನೆಗೆ ಕರೆ ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಫೋನ್ ಮಾತುಕತೆಯಲ್ಲಿ ಒಕೆ, ಒಕೆ, ಲವ್ ಯು ಎಂದು ಫೋನ್ ಕರೆ ಅಂತ್ಯಗೊಳಿಸಿದ್ದಾರೆ. ಪತ್ನಿಗೆ, ಕುಟುಂಬಸ್ಥರಿಗೆ ಕರೆಯಲ್ಲಿ ಹೇಳುವ ಅದೇ ದಾಟಿಯಲ್ಲಿ ಕ್ಲೈಂಟ್‌ಗೂ ಉದ್ಯೋಗಿ ಲವ್ ಯು ಎಂದಿದ್ದಾರೆ. ಆದರೆ ಇದು ಅಚಾನಕ್ಕಾಗಿ ಬಾಯ್ತಿಪ್ಪಿನಿಂದ ಆದ ಘಟನೆ. ಉದ್ಯೋಗಿಗೆ ಇದರ ಅರಿವೇ ಇಲ್ಲದೆ ಆಡಿದ ಮಾತು. ಆದರೆ ಕ್ಲೈಂಟ್‌ನಿಂದ ಪ್ರತಿರೋಧವಾಗಲಿ, ಏನು ಬಂದಿಲ್ಲ. ಹೀಗಾಗಿ ತಾನು ಹೇಳಿದ ಐ ಲವ್ ಯು ಕೇಳಿಸಿರಲ್ಲ, ಅಥವಾ ಫ್ಲೋನಲ್ಲಿ ಗೊತ್ತಾಗಿರಲ್ಲ ಎಂದು ಸಮಾಧಾನ ಮಾಡಿಕೊಂಡು ಉದ್ಯೋಗಿ ಮನೆಗೆ ತೆರಳಿದ್ದಾನೆ.
ಕ್ಲೈಂಟ್‌ನಿಂದ ಬಂತು ಇಮೇಲ್
ಮರು ದಿನ ಎಂದಿನಂತೆ ಕೆಲಸಕ್ಕೆ ಹಾಜರಾದ ಉದ್ಯೋಗಿಗೆ ಅಚ್ಚರಿ ಕಾದಿತ್ತು. ಕೆಲಸ ಆರಂಭಿಸುವ ಮೊದಲು ಇಮೇಲ್ ಚೆಕ್ ಮಾಡಿದ್ದಾನೆ. ಈ ವೇಳೆ ಹಿಂದಿನ ದಿನ ಮಾತನಾಡಿದ ಕ್ಲೈಂಟ್ ಇಮೇಲ್ ಕಳುಹಿಸಿರುವುದು ಗಮನಿಸಿದ್ದಾರೆ. ಇಮೇಲ್ ಸಬ್ಜೆಕ್ಟ್ ಲವ್ ಯು ಎಂದಿತ್ತು. ಇದನ್ನು ನೋಡಿ ಉದ್ಯೋಗಿ ಅಚ್ಚರಿಗೊಂಡಿದ್ದಾನೆ. ಇಮೇಲ್ ಒಪನ್ ಮಾಡಿ ನೋಡಿದಾಗ ಉದ್ದದ ನೋಟ್ ಬರೆಯಲಾಗಿತ್ತು.
ನಿಮ್ಮ ಐ ಲವ್ ಯು ಮಾತು
ನಿನ್ನೆ ಔದ್ಯೋಗಿಕ ಕರೆಯ ಅಂತ್ಯದಲ್ಲಿ ನೀವು ಐ ಲವ್ ಯು ಎಂದಾಗ ನಾನು ನಕ್ಕಿಲ್ಲ. ಇದು ನನಗೆ ಸಹಜ ಎನಿಸಿತ್ತು. ಇದು ನನಗೆ ಫನ್ನಿ ಎನಿಸಿತ್ತು ಕಾರಣ ಇದೇ ರೀತಿ ಹಲವು ಬಾರಿ ನಾನು ಮಾಡಿದ್ದೇನೆ. ಇವು ನಡೆಯುತ್ತದೆ. ನಿಮ್ಮ ಕುಟುಂಬದ ಮೇಲಿನ ಪ್ರೀತಿಯನ್ನು ಇದು ತೋರಿಸುತ್ತದೆ. ಹೀಗಾಗಿ ನಿಮಗೆ ಗೊತ್ತಿಲ್ಲದ ಸಹಜವಾಗಿ ಹೇಳಿದ್ದೀರಿ. ಈ ಕುರಿತು ನೀವು ಹೆಮ್ಮೆ ಪಡಬಹುದು ಎಂದು ಇಮೇಲ್ ಮೂಲಕ ಕ್ಲೈಂಟ್ ಬರೆದಿದ್ದರು. ಈ ಇಮೇಲ್ ಸಂದೇಶ ನೋಡಿ ಉದ್ಯೋಗಿ ನಾಚಿ ನೀರಾಗಿದ್ದಾರೆ. ಬಾಯ್ತಿಪ್ಪಿನಿಂದ ಆಡಿದ ಲವ್ ಯು ಇಮೇಲ್ ಮಟ್ಟಕ್ಕೆ ತಲುಪಿತು ಎಂದು ನಕ್ಕಿದ್ದಾರೆ. ಬಳಿಕ ಇಡೇ ಘಟನೆಯನ್ನು ರೆಡ್ಡಿಟ್ ಮೂಲಕ ಹಂಚಿಕೊಂಡಿದ್ದಾರೆ. ಹಲವರು ಈ ಘಟನೆಗೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ತಮ್ಮ ಕಚೇರಿಗಳಲ್ಲಿ ನಡೆದ ಘಟನೆ ಹೇಳಿಕೊಂಡಿದ್ದಾರೆ.
ಫೇಸ್‌ಬುಕ್ CEO ಮಾರ್ಕ್ ಜುಕರ್‌ಬರ್ಗ್ ತಿಂಗಳ ಸ್ಯಾಲರಿ ಕೇವಲ 85 ರೂ, ಆದರೂ ಶ್ರೀಮಂತ ಹೇಗೆ?