ಅರ್ಜೆಂಟಾಗಿ ವಿಡಿಯೋ ಮೀಟಿಂಗ್ ಕರೆದ ಕಂಪನಿ ಬಾಸ್, ನಮ್ಮಲ್ಲಿ ಕಾಸಿಲ್ವಮ್ಮಾ ಎಂದು ಒಂದೇ ಮಾತು ಹೇಳಿ ಕಂಪನಿಯ 19 ಉದ್ಯೋಗಿಗಳನ್ನು ಕಿತ್ತು ಹಾಕಿದ ಘಟನೆ ನಡೆದಿದೆ.
ನವದೆಹಲಿ (ಜು.09) ದೈತ್ಯ ಟೆಕ್ ಕಂಪನಿಗಳು ಉದ್ಯೋಗ ಕಡಿತ ನಡುವೆ ಇದೀಗ ಸ್ಟಾರ್ಟ್ ಅಪ್ ಕಂಪನಿಯ ಉದ್ಯೋಗ ಕಡಿತ ಭಾರಿ ಚರ್ಚೆಯಾಗುತ್ತಿದೆ. ಕಾರಣ ತುರ್ತಾಗಿ ಮೀಟಿಂಗ್ ಕರೆದ ಸ್ಟಾರ್ಟ್ ಕಂಪನಿ ಬಾಸ್, ಎಲ್ಲರಲ್ಲೂ ಗಂಭೀರ ವಿಚಾರ ಹಂಚಿಕೊಳ್ಳಬೇಕು ಎಂದು ಮಾತು ಆರಂಭಿಸಿದ್ದಾರೆ. ಬಳಿಕ ಆಡಿದ್ದು ಮಾತು, 19 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಮೀಟಿಂಗ್ ಆರಂಭದಲ್ಲೇ ನಮ್ಮ ಕಂಪನಿಯಲ್ಲಿ ಕಾಸಿಲ್ಲ ಎಂದು ಇದ್ದ 19 ಉದ್ಯೋಗ ಕಡಿತಗೊಳಿಸಿದ ಘಟನೆ ನಡೆದಿದೆ. ಸ್ಟಾರ್ಟ್ಅಪ್ ಕಂಪನಿಯ ಈ ನಡೆ ಭಾರಿ ಆಕ್ರೋಶ ಹಾಗೂ ಚರ್ಚೆಗೆ ಗ್ರಾಸವಾಗಿದೆ.
ಏಕಾಏಕಿ ಬಾಗಿಲು ಮುಚ್ಚಿದ ಕಂಪನಿ
ಯಾವುದೇ ಸೂಚನೆ, ನೋಟಿಸ್ ಏನೂ ಇಲ್ಲದ ಕಂಪನಿ ಒಂದೇ ಒಂದು ವಿಡಿಯೋ ಕಾಲ್ ಮೀಟಿಂಗ್‌ನಲ್ಲೇ ಉದ್ಯೋಗ ಕಡಿತ ಮಾಡಿ ಕಂಪನಿ ಮುಚ್ಚಿದ ಘಟನೆ ಕುರಿತು ಉದ್ಯೋಗಿಯೊಬ್ಬರು ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಸ್ಟಾರ್ಟ್ಅಪ್ ಕಂಪನಿ, ದಿಢೀರ್ ಬಾಗಿಲು ಮುಚ್ಚಿ, ಎಲ್ಲಾ 19 ಉದ್ಯೋಗಿಗಳನ್ನು ತೆಗದು ಹಾಕಲಾಗಿದೆ ಎಂದು ಉದ್ಯೋಗಿಗಳು ಅಳಲು ತೋಡಿಕೊಂಡಿದ್ದಾರೆ.
ತುರ್ತು ವೀಡಿಯೋ ಮೀಟಿಂಗ್ ಇಮೇಲ್
ಅಂದು ಎಂದಿನಂತೆ ಎಲ್ಲರೂ ಕಚೇರಿಗೆ ತೆರಳಿ ಕೆಲಸ ಆರಂಭಿಸಿದ್ದರು. ಎಂದಿನಂತೆ ಮತ್ತೊಂದು ದಿನ ಅದಾಗಿತ್ತು. ಕೆಲಸ ಚುರುಕಿನಿಂದ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ಕಂಪನಿ ಸಿಇಒನಿಂದ ಇಮೇಲ್ ಎಲ್ಲಾ ಉದ್ಯೋಗಿಗಳ ಖಾತೆಗೆ ರವಾನೆಯಾಗಿತ್ತು. ತುರ್ತಾಗಿ ವಿಡಿಯೋ ಮೀಟಿಂಗ್ ಕರೆಯಲಾಗಿದೆ ಎಂಬ ಸಂದೇಶ ಅದರಲ್ಲಿತ್ತು. ಜೊತೆಗೆ ವಿಡಿಯೋ ಮೀಟಿಂಗ್ ಲಿಂಕ್ ಹಾಕಲಾಗಿತ್ತು. ಈ ರೀತಿಯ ಮೀಟಿಂಗ ಇರಲಿಲ್ಲ. ಟೀಮ್ ಲೀಟರ್, ಮ್ಯಾನೇಜರ್ ಸೇರಿದಂತೆ ಹಲವರು ಪ್ರತಿ ದಿನ,ವಾರದಲ್ಲಿ ಮೀಟಿಂಗ್ ಮಾಡುತ್ತಾರೆ. ಆದರೆ ಸಿಇಒ ಈ ರೀತಿ ಎಲ್ಲಾ ಉದ್ಯೋಗಿಗಳಿಗೆ ಇನ್ನು ಅರ್ಧ ಗಂಟೆಯಲ್ಲಿ ಮೀಟಿಂಗ್ ಎಂದರೆ ಏನು ಎಂದರು ಎಲ್ಲರೂ ಅಚ್ಚರಿಗೊಂಡಿದ್ದಾರೆ.
ಕಂಪನಿ ವಿಸ್ತರಣೆ ಮಾಡುವ ಸಾಧ್ಯತೆ ಹೆಚ್ಚು. ಮತ್ತೊಂದು ಉದ್ಯಮಕ್ಕೆ ಕಾಲಿಡುವ ಸಾಧ್ಯತೆ ಹೀಗೆ ಉದ್ಯೋಗಿಗಳು ಒಂದೊಂದು ಕಾರಣಗಳನ್ನು ಚರ್ಚೆ ಮಾಡಲು ಆರರಂಭಿಸಿದ್ದರು. ಅಷ್ಟರಲ್ಲೇ ಮೀಟಿಂಗ್ ಆರಂಭಗೊಂಡಿತ್ತು. ಎಲ್ಲರು ಖುಷಿ ಸುದ್ದಿಗೆ ಕಾಯುತ್ತಿದ್ದರೆ, ಕಂಪನಿ ಸಿಇಒ ಮಾತು ಉದ್ಯೋಗಿಗಳಿಗೆ ಆಘಾತ ನೀಡಿದೆ. ಕಂಪನಿ ತೀವ್ರ ನಷ್ಟದಲ್ಲಿದೆ. ಈ ತಿಂಗಳು ವೇತನ ನೀಡಲು ಹಣವಿಲ್ಲ. ಕಂಪನಿಯ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಹೀಗಾಗಿ ಉದ್ಯೋಗ ಕಡಿತ ಮಾಡುತ್ತಿದ್ದೇವೆ ಎಂದಿದ್ದಾರೆ.
19ಕ್ಕೆ 19 ಮಂದಿ ಬೀದಿಗೆ
ಬಾಸ್ ಮಾತುಗಳನ್ನು ಕೇಳಿಸಿಕೊಂಡ ಉದ್ಯೋಗಿಗಳು ತಮ್ಮ ತಮ್ಮ ಪರ್ಫಾಮೆನ್ಸ್ ನೆನೆಪಿಸಿಕೊಂಡಿದ್ದಾರೆ. ಕೆಲವರು ಏನೇ ಮಾಡಿದರೂ ತಾನು ಸೇಫ್, ಆದರೆ ಉದ್ಯೋಗ ಕಡಿತದಲ್ಲಿ ಕೆಲಸ ಕಳೆದುಕೊಳ್ಳುವವರು ಯಾರು ಅನ್ನೋ ಆತಂಕ ಮುಖದಲ್ಲಿ ಕಾಣುತ್ತಿದ್ದಂತೆ ಬಾಸ್ ಮಾತು ಮುಂದುವರಿಸಿದ್ದಾರೆ. ಕಂಪನಿಯಲ್ಲಿ ಇದ್ದದ್ದು ಒಟ್ಟು 19 ಮಂದಿ. ಕಂಪನಿ ಸಂಪೂರ್ಣ ನಷ್ಟದಲ್ಲಿರುವ ಕಾರಣ ಸ್ಟಾರ್ಟ್ಅಪ್ ಕಂಪನಿ ಬಾಗಿಲು ಮುಚ್ಚುತ್ತಿದೆ ಎಂದಿದ್ದಾರೆ. ಇಲ್ಲಿಗೆ ಕಂಪನಿಯಲ್ಲಿದ್ದ 19 ಮಂದಿ ಒಂದು ವಿಡಿಯೋ ಕಾಲ್ ನಡುವೆ ಬೀದಿ ಬಿದ್ದಿದ್ದರು.
ಯಾವುದೇ ಸೂಚನೆ ಇಲ್ಲದೆ ಕಂಪನಿ ಬಂದ್
ಕಂಪನಿ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ ಅನ್ನೋ ಮಾಹಿತಿ ಯಾರಿಗೂ ತಿಳಿದೇ ಇಲ್ಲ. ಕಂಪನಿ ಈ ಕುರಿತು ಯಾವುದೇ ಸೂಚನೆ ನೀಡಿಲ್ಲ. ಕಂಪನಿ ನಷ್ಟದಲ್ಲಿದೆ ಸರಿ, ಆದರೆ ಮೊದಲೇ ತಿಳಿಸಿದ್ದರೆ ನಾವು ಬೇರೆ ಕಡೆ ಪ್ರಯತ್ನ ಮಾಡುತ್ತಿದ್ದೇವು. ಯಾವ ಸೂಚನೆ ಇಲ್ಲ, ದಿಢೀರ್ ಕಂಪನಿ ಬಾಗಿಲು ಹಾಕಿದರೆ ಈಗ ನಾವೇನು ಮಾಡುವುದು, ನಮ್ಮ ಪ್ರೊಫೈಲ್‌ನಲ್ಲಿ ಬಾಗಿಲು ಮುಚ್ಚಿದ ಕಂಪನಿಯಲ್ಲಿ 6 ತಿಂಗಳು, 1 ವರ್ಷ ಕೆಲಸ ಎಂದು ನಮೂದಿಸರೆ ನಮಗೆ ಹೊಸ ಕೆಲಸ ಕೊಡುವವರು ಯಾರು ಎಂದು ಉದ್ಯೋಗಿಗಳು ರೆಡ್ಡಿಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಬೇರೆ ಕೆಲಸ ಹುಡುಕಲು ನಾನು ಸಹಾಯ ಮಾಡುತ್ತೇನೆ ಎಂದು ಸಿಇಒ ಹೇಳಿದ್ದಾರೆ. ಆದರೆ ಎಷ್ಟ ಜನಕ್ಕೆ ಸಿಇಒ ಕಲಸಕ್ಕೆ ನೆರವಾಗಬಲ್ಲರು, ಎಷ್ಟು ಜನಕ್ಕೆ ಕೆಲಸ ಸಿಗಲಿದೆ. ಒಂದಿಬ್ಬರು, ಹೆಚ್ಚೆಂದರೆ ಐದು ಮಂದಿ. ಇನ್ನುಳಿದ ಮಂದಿ ಕೆಲಸವಿಲ್ಲದೆ ಅಲೆದಾಡಬೇಕಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ.