Asianet Suvarna News Asianet Suvarna News

ಎದುರಾಳಿ ಬಗ್ಗೆ ಯೋಚನೆ ಮಾಡೊಲ್ಲ, ಮೋದಿ ಅಲೆ ಬಗ್ಗೆ ನನಗೆ ಗೊತ್ತಿಲ್ಲ: ಗೀತಾ ಶಿವರಾಜ್‌ಕುಮಾರ್

ಗೀತಾ ಶಿವರಾಜ್‌ಕುಮಾರ್ ವೀಕ್ ಕ್ಯಾಂಡಿಡೇಟ್ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನ್ಯಾಕೆ ವೀಕ್ ಕ್ಯಾಂಡಿಡೇಟ್ ಆಗ್ತೇನೆ. ಅವರಿಗೆ ನನ್ನ ಸ್ಪರ್ಧೆಯಿಂದಲೇ ಹೆದರಿಕೆಯಾಗಿದೆ. ಅದಕ್ಕೆ ನನ್ನ ವೀಕ್ ಕ್ಯಾಂಡಿಡೇಟ್ ಎನ್ನುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ ತಿರುಗೇಟು ನೀಡಿದರು.

Lok sabha election 2024 Press conference by shivamogga congress candidate Geeta shivarajkumar rav
Author
First Published Apr 14, 2024, 11:53 AM IST

ಶಿವಮೊಗ್ಗ (ಏ.14): ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ನಡೆಸಿದ್ದೇವೆ. 2014ರ ಚುನಾವಣೆಗೂ ಈ ಬಾರಿಯ ಚುನಾವಣೆಗೆ ತುಂಬಾ ವ್ಯತ್ಯಾಸವಿದೆ. ಕಳೆದ ಬಾರಿ ಜೆಡಿಎಸ್ ನಿಂದ ಸ್ಪರ್ಧೆ ಮಾಡಿದ್ದು ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದೇನೆ. ಕಳೆದ ಬಾರಿಗಿಂತ ಈ ಬಾರಿ ಮತದಾರರ ಒಲವು ನಮ್ಮ ಕಡೆ ಹೆಚ್ಚಾಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ ಹೇಳಿದರು.

ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕ್ಷೇತ್ರದಾದ್ಯಂತ ಸಂಚಾರ ನಡೆಸಿದಾಗ ಕುಡಿಯುವ ನೀರಿನ ಸಮಸ್ಯೆ ವಿದ್ಯುತ್ ಸಮಸ್ಯೆ ಬರಗಾಲ ಮೊದಲಾದ ಸಮಸ್ಯೆಗಳ ಬಗ್ಗೆ ಜನರು ಅಳಲು ತೋಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚು ಸಮಯ ಇರುತ್ತೇನೆ. ನನ್ನ ಮಕ್ಕಳು ದೊಡ್ಡವರಾದ ಹಿನ್ನೆಲೆಯಲ್ಲಿ ನನಗೆ ಯಾವ ಸಮಸ್ಯೆಯೂ ಇಲ್ಲ. ಶಿವಮೊಗ್ಗ ಮತ್ತು ಸೊರಬದ ಕುಬಟೂರಿನಲ್ಲಿ ನನಗೆ ಮನೆ ಇದೆ.  ಜಿಲ್ಲೆಯಲ್ಲಿ ಬಗರು ಹುಕುಂ ಹಕ್ಕು ಪತ್ರದ ಸಮಸ್ಯೆ ಇದೆ. ಇದನ್ನು ನನ್ನ ಸಹೋದರ ಮಧು ಬಂಗಾರಪ್ಪ ಜೊತೆಗೂಡಿ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.

ಸಿಎಂ ಸಿದ್ದರಾಮಯ್ಯ ಭೇಟಿ ಬೆನ್ನಲ್ಲೇ ಇಂದು ತರಾತುರಿಯಲ್ಲಿ ಶ್ರೀನಿವಾಸಪ್ರಸಾದ್ ಭೇಟಿಗೆ ಮುಂದಾದ ಯಡಿಯೂರಪ್ಪ!

ಕ್ಷೇತ್ರದಲ್ಲಿ ಮೋದಿಯ ಆಲೆ, ಈ ರೀತಿಯ ಅಲೆಯ ಬಗ್ಗೆ ಗೊತ್ತಿಲ್ಲ ನಮ್ಮ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಹಾಲಿ ಸಂಸದರ ಪ್ರೋಗ್ರೆಸ್ ರಿಪೋರ್ಟ್ ನೋಡಿದ್ದೇನೆ. ಅದರಲ್ಲಿ ಎಲ್ಲವೂ ನಿಜವಿಲ್ಲ. ನನ್ನ ಎದುರಾಳಿ ಯಾರು ಎಂದು ಯೋಚನೆ ಮಾಡುವುದಿಲ್ಲ . ನಮಗೆ ಕೆಲವೊಮ್ಮೆ ನೇರ ಸ್ಪರ್ಧೆ ಇದ್ದರೆ ಕೆಲವೊಮ್ಮೆ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ. ಈಶ್ವರಪ್ಪನವರ ಸ್ಪರ್ಧೆಯಿಂದ ನಮಗೆ ಲಾಭ ನಷ್ಟದ ಪ್ರಶ್ನೆ ಇಲ್ಲ ಎಂದರು.

ರಾಜಕೀಯಕ್ಕೆ ಅತ್ತಿಗೆ ಗೀತಾ ಶಿವರಾಜ್‌ಕುಮಾರ್‌, ಏನ್‌ ಹೇಳಿದ್ರು ಪುನೀತ್‌ ರಾಜ್‌ಕುಮಾರ್‌!

ಗೀತಾ ಶಿವರಾಜ್‌ಕುಮಾರ್ ವೀಕ್ ಕ್ಯಾಂಡಿಡೇಟ್ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನ್ಯಾಕೆ ವೀಕ್ ಕ್ಯಾಂಡಿಡೇಟ್ ಆಗ್ತೇನೆ. ಅವರಿಗೆ ನನ್ನ ಸ್ಪರ್ಧೆಯಿಂದಲೇ ಹೆದರಿಕೆಯಾಗಿದೆ. ಅದಕ್ಕೆ ನನ್ನ ವೀಕ್ ಕ್ಯಾಂಡಿಡೇಟ್ ಎನ್ನುತ್ತಿದ್ದಾರೆ. ನಾನು ನಾಳೆಯೇ ನಾಮಪತ್ರ ಸಲ್ಲಿಸುತ್ತಿದ್ದೇನೆ. ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಮಧು ಬಂಗಾರಪ್ಪ, ಶಿವರಾಜಕುಮಾರ್ ಜೊತೆಗಿರುತ್ತಾರೆ. ಹಲವು ಸಿನಿಮ ನಟರು ನಮ್ಮ ಪರವಾಗಿ ಚುನಾವಣಾ ಪ್ರಚಾರಕ್ಕೆ ಬರಲಿದ್ದಾರೆ ಎಂದರು.

Follow Us:
Download App:
  • android
  • ios