userpic
user icon
0 Min read

ಆರೋಗ್ಯಪೂರ್ಣ ಚರ್ಚೆಯೇ ಪ್ರಜಾಪ್ರಭುತ್ವದ ಮೂಲಾಧಾರ; ಶಶಿ ತರೂರ್!

Lok sabha turned to notice board and Rubber stamp of Government says shashi tharoor on jaipur literature festival ckm
Shashi tharoor Jaipur Lit fest

Synopsis

ಜೈಪುರದಲ್ಲಿ ನಡೆಯುತ್ತಿರುವ ಅತೀ ದೊಡ್ಡ ಸಾಹಿತ್ಸೋತ್ಸವದಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕ ಶಶಿ ತರೂರ್ ತಮ್ಮ ಅಂಬೇಡ್ಕರ್ ಬಯೋಗ್ರಫಿ ಕುರಿತು ಮಾತನಾಡಿದ್ದಾರೆ. ಲೋಕಸಭೆಯು ಈಗ ಸರ್ಕಾರದ ನೋಟೀಸ್ ಬೋರ್ಡು ಮತ್ತು ರಬ್ಬರ್ ಸ್ಟಾಂಪ್ ಎಂದು ಕೇಂದ್ರದ ವಿರುದ್ಧವೂ ಕಿಡಿ ಕಾರಿದ್ದಾರೆ.

ಜೋಗಿ, ಕನ್ನಡಪ್ರಭ

ಜೈಪುರ(ಜ.20):  ಲೋಕಸಭೆಯು ಈಗ ಸರ್ಕಾರದ ನೋಟೀಸ್ ಬೋರ್ಡು ಮತ್ತು ರಬ್ಬರ್ ಸ್ಟಾಂಪ್ ಆಗಿದೆ. ತನ್ನ ಯೋಜನೆಗಳನ್ನು ಪ್ರಕಟಿಸುವುದು ಮತ್ತು ಅದಕ್ಕೆ ಅನುಮತಿಯನ್ನು ಪಡೆದುಕೊಳ್ಳುವುದಕ್ಕಷ್ಟೇ ಅದು ಬಳಕೆಯಾಗುತ್ತಿದೆ. ಹಿಂದೆ ನಡೆಯುತ್ತಿದ್ದಂತೆ ಚರ್ಚೆ, ವಾಗ್ವಾದ ಮತ್ತು ಸಂವಾದಗಳಿಗೆ ಅಲ್ಲಿ ಅವಕಾಶ ಇಲ್ಲ. ಪಕ್ಷಾತೀತ, ವಿವಾದಾತೀತ ಮಸೂದೆಗಳ ಕುರಿತಾದಂತೆ ವಿರೋಧ ಪಕ್ಷಗಳ ಸಲಹೆ ಸೂಚನೆಗಳನ್ನು ಪರಿಗಣಿಸಲಾಗುತ್ತಿಲ್ಲ ಎಂದು ತಿರುವಂತಪುರದ ಸಂಸದ ಶಶಿ ತರೂರ್ ವಿಷಾದಿಸಿದರು.

ಈ ಚಾಳಿ ಹೊಸದೇನಲ್ಲ. ಹಿಂದೆಯೂ ವಿರೋಧ ಪಕ್ಷಗಳು ಚರ್ಚೆಗಳು ನಡೆಯದಂತೆ ಪ್ರತಿಭಟಿಸುತ್ತಿದ್ದವು. ಧರಣಿಯ ಮೂಲಕ ಸದನದ ಚರ್ಚೆಗೆ ಅಡ್ಡಿಪಡಿಸಲಾಗುತ್ತಿತ್ತು. ಈಗ ಅದನ್ನು ಆಡಳಿತ ಪಕ್ಷವೇ ಚರ್ಚೆಗೆ ಅವಕಾಶ ಕೊಡುತ್ತಿಲ್ಲ. 1962ರ ಚೀನಾ ಯುದ್ದದ ಸಂದರ್ಭದಲ್ಲಿಯೂ ಸಂಸತ್ತಿನಲ್ಲಿ ಪ್ರಶ್ನೋತ್ತರಗಳು ನಡೆಯುತ್ತಿದ್ದವು. ಒಮ್ಮೆ ಆರೋಗ್ಯಕ್ಕೆ ಸಂಬಂಧಪಟ್ಟ ಮಸೂದೆಯನ್ನು ಪ್ರಶ್ನಿಸಿದಾಗ ಸಚಿವ ಗುಲಾಬ್ ನಬಿ ಆಜಾದ್, ಕರಡನ್ನೇ ತಿದ್ದಿಕೊಂಡು ಬರಲು ಒಪ್ಪಿದ್ದರು. ಅಂಥ ಮುಕ್ತ ವಾತಾವರಣ ಈಗಿಲ್ಲ. ಪ್ರತಿಯೊಂದನ್ನೂ ಆಡಳಿತ ಪಕ್ಷ ಪ್ರತಿಷ್ಠೆಯ ಸಂಗತಿಯನ್ನಾಗಿ ನೋಡುತ್ತಿದೆ ಎಂದು ಹೇಳಿದರು.

ಕತೆ ಹೇಳಿ ನಗಿಸಿ ನಲಿಸಿದ ಅಂತಾರಾಷ್ಟ್ರೀಯ ಅಜ್ಜಿ ಸುಧಾಮೂರ್ತಿ!

ಜೈಪುರ ಸಾಹಿತ್ಯೋತ್ಸವದ ಎರಡನೇ ದಿನವಾದ ಶುಕ್ರವಾರ ಅವರು 'ಸಸ್ಟೇನಿಂಗ್ ಡೆಮಾಕ್ರಸಿ; ನರ್ಚರಿಂಗ್ ಡೆಮಾಕ್ರಸಿ' ಗೋಷ್ಠಿಯಲ್ಲಿ ತ್ರಿಪುರ್ ದಮನ್ ಸಿಂಗ್ ಪ್ರಶ್ನೆಗಳಿಗೆ ಉತ್ತರಿಸುತ್ತಾ ಶಶಿ ತರೂರ್ ಮಾತಾಡಿದರು.

ಸತ್ಯಾಗ್ರಹ, ಧರಣಿ ಇವೆಲ್ಲವೂ ವಸಾಹತುಶಾಹಿಗಳ ವಿರುದ್ಧ ಬಳಕೆಯಾದ ಆಯುಧಗಳಾಗಿದ್ದವೇ ಹೊರತು, ಅವುಗಳನ್ನು ನಮ್ಮ ದೇಶದಲ್ಲಿ ಬಳಸುವುದು ಅಂಬೇಡ್ಕರ್ ಅವರಿಗೂ ಒಪ್ಪಿಗೆಯಿರಲಿಲ್ಲ. ಸದನದಲ್ಲಿ ಅರ್ಥಪೂರ್ಣವಾದ ಚರ್ಚೆ ನಡೆಯಬೇಕು ಎಂಬುದು ಅವರ ಅಭಿಮತವಾಗಿತ್ತು. ನೆಹರೂ ಕೂಡ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದ್ದರು ಎಂದು ಶಶಿ ತರೂರ್ ವಿವರಿಸಿದರು.ನಮ್ಮ ಸಮಸ್ಯೆಗಳನ್ನು ಸರ್ಕಾರದ ಮೂಲಕವೇ ಬಗೆಹರಿಸಿಕೊಳ್ಳಬೇಕು. ಅದಕ್ಕೆ ಸೂಕ್ತ ಒತ್ತಡ ತರಬೇಕು. ಅದರ ಬದಲು ವ್ಯರ್ಥ ಹೋರಾಟ ನಡೆಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಉದಾಹರಣೆಗೆ ಅಣ್ಣಾ ಹಜಾರೆಯ ಹೋರಾಟ ಬಲವಾಗಿತ್ತು, ಆದರೆ ಅದರಿಂದಾಗಿ ಒಂದೇ ಒಂದು ಯೋಜನೆಯೂ ಜಾರಿಗೆ ಬರಲಿಲ್ಲ ಎಂದು ಶಶಿ ಹೇಳಿದರು.

ಆಳುವ ವರ್ಗವನ್ನು ಮತ್ತಷ್ಟು ಬಲಪಡಿಸುವ ಪುರೋಹಿತಶಾಹಿ ರಚನೆ ಪುಣ್ಯಕೋಟಿ ಕಥೆ; ಜೋಗಿ ವಿಮರ್ಶೆ

Latest Videos