Asianet Suvarna News Asianet Suvarna News

ಹೆಂಡ್ತಿ ಮಗಳನ್ನು ನೋಡಿ ಮಗುವಿನಂತೆ ಅತ್ತ ಸಂದೇಶ್‌ಖಾಲಿ ಗಲಭೆ ಪ್ರಕರಣದ ಆರೋಪಿ ಶೇಖ್ ಶಹಜಾಹಾನ್

 ಇಡಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿತನಾಗಿರುವ ಸಂದೇಶ್‌ಖಾಲಿ ಗಲಭೆ ಪ್ರಕರಣದ ಆರೋಪಿ ಟಿಎಂಸಿಯ ಉಚ್ಚಾಟಿತ ನಾಯಕ ಶೇಖ್ ಶಹಾಜಹಾನ್ ಹೆಂಡ್ತಿ ಮಗಳನ್ನು ನೋಡಿ ಬಿಕ್ಕಿ  ಬಿಕ್ಕಿ ಅತ್ತಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

West Bengal Sandeshkhali riots case Sheikh Shahjahan cried like a child after seeing daughter and wife akb
Author
First Published Apr 24, 2024, 2:58 PM IST

ಕೋಲ್ಕತ್ತಾ: ಇಡಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿತನಾಗಿರುವ ಸಂದೇಶ್‌ಖಾಲಿ ಗಲಭೆ ಪ್ರಕರಣದ ಆರೋಪಿ ಟಿಎಂಸಿಯ ಉಚ್ಚಾಟಿತ ನಾಯಕ ಶೇಖ್ ಶಹಾಜಹಾನ್ ಹೆಂಡ್ತಿ ಮಗಳನ್ನು ನೋಡಿ ಬಿಕ್ಕಿ  ಬಿಕ್ಕಿ ಅತ್ತಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಇಡಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬೇಕಾಗಿದ್ದ ಶೇಖ್ ಶಹಜಾಹಾನ್ 55 ದಿನಗಳ ತಲೆ ತಪ್ಪಿಸಿಕೊಂಡು ತಿರುಗಾಡಿದ್ದು,  ಕಳೆದ ಫೆಬ್ರವರಿ 29 ರಂದು ಕೋಲ್ಕತ್ತಾ ಪೊಲೀಸರು ಕಡೆಗೂ ಆತನನ್ನು ಬಂಧಿಸಿದ್ದರು. ಪ್ರಸ್ತುತ ಶಹಜಾಹಾನ್ ಸಿಬಿಐ ಕಸ್ಟಡಿಯಲ್ಲಿ ಇದ್ದು, ಬಶಿರ್‌ಹತ್ ವಿಭಾಗೀಯ ನ್ಯಾ

ಸಂದೇಶ್‌ಖಾಲಿ ಕೇಸ್‌, ಶಹಜಹಾನ್‌ನನ್ನು ಸಿಬಿಐಗೆ ಒಪ್ಪಿಸಲು ನಿರಾಕರಿಸಿದ ಪಶ್ಚಿಮ ಬಂಗಾಳ ಸರ್ಕಾರ!

ಪ್ರಾರಂಭದಲ್ಲಿ ಸಿಐಡಿ ಈ ಪ್ರಕರಣದ ವಿಚಾರಣೆ ನಡೆಸುತ್ತಿತ್ತು. ಆದರೆ ನಂತರದಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಈಗ ಸಿಬಿಐ ಪ್ರಕರಣದ ವಿಚಾರಣೆ ನಡೆಸುತ್ತಿದೆ. 

ಬಹುಕೋಟಿ ಮೊತ್ತದ ಅಕ್ರಮ ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ  ಜನವರಿ 5 ರಂದು ಶಹಜಹಾನ್ ಶೇಕ್ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿಗೆ ತೆರಳಿದಾಗ  ಅಲ್ಲಿ ಅಧಿಕಾರಿಗಳ ಮೇಲೆ ಈತನ ಬೆಂಬಲಿಗರ ಗುಂಪೊಂದು ದಾಳಿ ನಡೆಸಿತ್ತು. ಈ ಜನವರಿ 5ರ ಘಟನೆಯ ನಂತರ ಶಹಜಾಹಾನ್ ವಿರುದ್ಧ ಗ್ರಾಮದ ಜನ ನಡೆಸಿದ ಪ್ರತಿಭಟನೆ ಹಿಂಸಾರೂಪ ತಾಳಿದ್ದಲ್ಲದೇ ಕೆಲ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವನ್ನು ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದಾದ ನಂತರ ಶಹಜಾಹಾನ್ ತಲೆ ಮರೆಸಿಕೊಂಡಿದ್ದ. 

ಈಗ ಈ ಪ್ರಕರಣದ ಆರೋಪಿ ಶಹಜಾಹಾನ್ ಹೆಂಡ್ತಿ ಮಗಳನ್ನು ನೋಡಿ ಅಳ್ತಿರುವ ವೀಡಿಯೋ ವೈರಲ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟಿಎಂಸಿಯ ಉಚ್ಚಾಟಿತ ನಾಯಕನ ಬಗ್ಗೆ ವ್ಯಂಗ್ಯವಾಡಿದ್ದಾರೆ. ಮಮತಾ ಬ್ಯಾನರ್ಜಿಯವರ ಬೂಸ್ಟರ್ ಬಾಯ್ ಶಹಜಾಹಾನ್ ಸಮಾಧಾನಗೊಳ್ಳದ ಮಗುವಿನಂತೆ ಅಳುತ್ತಿದ್ದಾರೆ ಎಂದು ಛೇಡಿಸಿದ್ದಾರೆ.  ವೈರಲ್ ಆಗಿರುವ ವೀಡಿಯೋದಲ್ಲಿ ಶೇಖ್ ಶಹಜಾಹಾನ್ ಪೊಲೀಸ್ ವ್ಯಾನ್‌ನಲ್ಲಿ ಕುಳಿತು ಅಳುತ್ತಿರುವುದು ಕಾಣಿಸುತ್ತಿದೆ. 

ಹೈಕೋರ್ಟ್ ಸೂಚನೆ ಬೆನ್ನಲ್ಲೇ ಎಚ್ಚೆತ್ತ ಬಂಗಾಳ ಸರ್ಕಾರ, 56 ದಿನ ಬಳಿಕ ಶಹಜಹಾನ್ ಬಂಧನ!

ಶೇಖ್ ಶಹಜಹಾನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ₹ 12.78 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿರುವುದಾಗಿ ಇಡಿ ಈಗಾಗಲೇ ತಿಳಿಸಿದೆ.

 

Follow Us:
Download App:
  • android
  • ios