Asianet Suvarna News Asianet Suvarna News

Breaking: ಕೋವಿಶೀಲ್ಡ್‌ ಲಸಿಕೆಯಿಂದ ಅಡ್ಡಪರಿಣಾಮ ಒಪ್ಪಿಕೊಂಡ ಆಸ್ಟ್ರಾಜೆನಿಕಾ ಕಂಪನಿ!


ಕೋವಿಶೀಲ್ಡ್‌ ಬ್ರ್ಯಾಂಡ್‌ ನೇಮ್‌ನಲ್ಲಿ ಕೋವಿಡ್‌-19 ಲಸಿಕೆಯನ್ನು ಮಾರಾಟ ಮಾಡಿದ್ದ ಆಸ್ಟ್ರಾಜೆನಿಕಾ ಕಂಪನಿ, ಈ ಲಸಿಕೆಯಿಂದ ಬಹಳ ಅಪರೂಪದ ಅಡ್ಡಪರಿಣಾಮಗಳು ಉಂಟಾಗುತ್ತದೆ ಎಂದು ತಿಳಿಸಿದೆ.

AstraZeneca Who Sold Covishield and Vaxzevria Covid vaccine admit cause rare side effects san
Author
First Published Apr 29, 2024, 7:27 PM IST

ನವದೆಹಲಿ (ಏ.29): ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಕೋವಿಶೀಲ್ಡ್‌ ಕೋವಿಡ್‌-19 ಲಸಿಕೆ ಮಾರಾಟ ಮಾಡಿದದ್ದ ಆಸ್ಟ್ರಾಜೆನಿಕಾ ಕಂಪನಿ ತನ್ನ ಕೋವಿಡ್‌ ಲಸಿಕೆಯಿಂದ ಅಪರೂಪದ ಅಡ್ಡಪರಿಣಾಮಗಳು ಉಂಟಾಗುತ್ತದೆ ಎಂದು ತಿಳಿಸಿದೆ. ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವ ದಾಖಲೆಗಳಲ್ಲಿ ಈ ವಿವರವನ್ನು ಆಸ್ಟ್ರಾಜೆನಿಕಾ ಕಂಪನಿ ಒಪ್ಪಿಕೊಂಡಿದೆ. ಆಕ್ಸ್‌ಫರ್ಡ್-ಆಸ್ಟ್ರಾಜೆನೆಕಾ ಕಂಪನಿ ಕೋವಿಡ್ ಲಸಿಕೆಯನ್ನು ಕೋವಿಶೀಲ್ಡ್ ಮತ್ತು ವ್ಯಾಕ್ಸ್‌ಜೆವ್ರಿಯಾ ಎಂಬ ಬ್ರಾಂಡ್‌ಗಳ ಅಡಿಯಲ್ಲಿ ಜಾಗತಿಕವಾಗಿ ಮಾರಾಟ ಮಾಡಿತ್ತು. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಲಸಿಕೆಯಿಂದ ಉಂಟಾಗುವ ಗಂಭೀರವಾದ ಗಾಯಗಳು ಮತ್ತು ಸಾವುಗಳನ್ನು ಆರೋಪಿಸಿ ಔಷಧೀಯ ಕಂಪನಿಯು ಕ್ಲಾಸ್-ಆಕ್ಷನ್ ಮೊಕದ್ದಮೆಯನ್ನು ಎದುರಿಸುತ್ತಿದೆ. ಅಸ್ಟ್ರಾಜೆನೆಕಾ ಲಸಿಕೆ ಅಡ್ಡ ಪರಿಣಾಮಗಳು ವಿನಾಶಕಾರಿ ಪರಿಣಾಮಗಳನ್ನು ಬೀರಿವೆ ಎಂದು ಹಲವಾರು ಕುಟುಂಬಗಳು ನ್ಯಾಯಾಲಯದ ದೂರಿನ ಮೂಲಕ ಆರೋಪಿಸಿವೆ.

ಕಂಪನಿ ತನ್ನ ಲಸಿಕೆಯ ಅಡ್ಡಪರಿಣಾಮ ಒಪ್ಪಿಕೊಂಡಿರುವ ಕಾರಣ ಪ್ರಸ್ತುತ ನಡೆಯುತ್ತಿರುವ ಕಾನೂನು ಹೋರಾಟದಲ್ಲಿ ಇದು ಪ್ರಮುಖ ತಿರುವು ಎನ್ನಲಾಗಿದೆ. ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದ ಸಂಭಾವ್ಯ ಅಪಾಯಗಳನ್ನು ಇದು ಎತ್ತಿ ತೋರಿಸಿದೆ.

ಏಪ್ರಿಲ್ 2021 ರಲ್ಲಿ ಅಸ್ಟ್ರಾಜೆನೆಕಾ ಲಸಿಕೆಯನ್ನು ಪಡೆದ ನಂತರ ಶಾಶ್ವತವಾಗಿ ಮೆದುಳಿಗೆ ಸಂಬಂಧಪಟ್ಟ ಕಾಯಿಲೆ ಎದುರಿಸಿದ ಜೇಮೀ ಸ್ಕಾಟ್ ಅವರು ಮೊಕದ್ದಮೆಯನ್ನು ಪ್ರಾರಂಭಿಸಿದರು. ಅವರ ಪ್ರಕರಣವು ಥ್ರಂಬೋಸಿಸ್ ವಿತ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಎಂದು ಕರೆಯಲ್ಪಡುವ ಅಪರೂಪದ ಅಡ್ಡ ಪರಿಣಾಮದ ತೀವ್ರ ಪರಿಣಾಮವನ್ನು ತೋರಿಸುತ್ತದೆ, ಇದು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ಪ್ಲೇಟ್‌ಲೆಟ್ ಸಮಸ್ಯೆಗಳಿಂದ ಗುರುತಿಸಿಕೊಂಡಿದೆ.

ಕೋವಿಡ್‌ ಲಸಿಕೆಯಿಂದ್ಲೇ ಹೆಚ್ಚಾಗ್ತಿದ್ಯಾ ಹೃದಯಾಘಾತ? ಅಧ್ಯಯನ ವರದಿ ಹೇಳಿದ್ದೀಗೆ..

ಇಂಗ್ಲೆಂಡ್‌ ಹೈಕೋರ್ಟ್‌ಗೆ ಸಲ್ಲಿಸಿದ ಕಾನೂನು ದಾಖಲೆಗಳಲ್ಲಿ, ಅಸ್ಟ್ರಾಜೆನೆಕಾ ತನ್ನ ಲಸಿಕೆ "ಅಪರೂಪದ ಸಂದರ್ಭಗಳಲ್ಲಿ ಟಿಟಿಎಸ್‌ಗೆ ಕಾರಣವಾಗಬಹುದು" ಎಂದು ಒಪ್ಪಿಕೊಂಡಿದೆ. ಹಾಗೇನಾದರೂ ಕೆಲವು ಪ್ರಕರಣಗಳಲ್ಲಿ ವ್ಯಕ್ತಿಯ ಅನಾರೋಗ್ಯ ಹಾಗೂ ಸಾವಿಗೆ ಕಂಪನಿಯ ಲಸಿಕೆ ಕಾರಣ ಎಂದಾದಲ್ಲಿ ದೊಡ್ಡ ಮಟ್ಟದ ಪರಿಹಾರ ಹಣವನ್ನು ಕಂಪನಿ ಪಾವತಿ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಲಿದೆ. 
ಅಸ್ಟ್ರಾಜೆನೆಕಾದ ಸೈಡ್‌ ಎಫೆಕ್ಟ್ಸ್‌ ಒಪ್ಪಿಕೊಂಡ ಹೊರತಾಗಿಯೂ, ತನ್ನ ಲಿಸಿಕೆ ಈಗಲೂ ಕೋವಿಡ್‌ಗೆ ಪರಿಣಾಮಕಾರಿ ಎಂದು ಹೇಳಿರುವುದು ಕಂಪನಿ ಕೂಡ ಕಾನೂನು ಹೋರಾಟಕ್ಕೆ ಮುಂದಾಗುವ ಸಾಧ್ಯತೆ ಇದೆ. ಭಾರತದಲ್ಲಿ ಸೀರಮ್‌ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾ, ಆಸ್ಟ್ರಾಜೆನಿಕಾ ಜೊತೆ ಮಾಡಿಕೊಂಡ ಒಪ್ಪಂದದ ಬಳಿಕ ಕೋವಿಶೀಲ್ಡ್‌ ಲಸಿಕೆಯನ್ನು ಮಾರಾಟ ಮಾಡಿತ್ತು.

Vaccine ಒಮಿಕ್ರಾನ್ ಉಪತಳಿ ವಿರುದ್ಧ ಕೋವಿಶೀಲ್ಡ್‌ ಲಸಿಕೆ ಪರಿಣಾಮಕಾರಿ ಅಲ್ಲ, ಅಧ್ಯಯನ ವರದಿ ತಂದ ಆತಂಕ!

Follow Us:
Download App:
  • android
  • ios