Early Signs Of Kidney Problems:ನೆನಪಿಡಿ ಮೂತ್ರಪಿಂಡದ ಕಾಯಿಲೆಯನ್ನು "ಸೈಲೆಂಟ್ ಕಿಲ್ಲರ್" ಎಂದು ಹೇಳುತ್ತಾರೆ ವೈದ್ಯರು. ಏಕೆಂದರೆ ಲಕ್ಷಣಗಳು ಕಾಣಿಸಿಕೊಳ್ಳುವ ಹೊತ್ತಿಗೆ ಅದು ತುಂಬಾ ತಡವಾಗಿರುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಕ್ಯಾನ್ಸರ್‌ನಂತೆ ಕಿಡ್ನಿ ಸಮಸ್ಯೆಯೂ ಹೆಚ್ಚಾಗುತ್ತಿದ್ದು, ವಯಸ್ಸಾದವರಲ್ಲಿ ಮಾತ್ರವಲ್ಲದೆ ಕಿರಿಯ ವಯಸ್ಸಿನವರು ಸಹ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂದಿನ ಒತ್ತಡದ ಜೀವನ, ಅನಿಯಮಿತ ಆಹಾರ ಪದ್ಧತಿ ನಮ್ಮ ದೇಹದ ಅನೇಕ ಭಾಗಗಳ ಮೇಲೆ ಪರಿಣಾಮ ಬೀರಿದ್ದು ಕಿಡ್ನಿಗಳು (ಮೂತ್ರಪಿಂಡಗಳು) ಸಹ ಇದರಿಂದ ತೊಂದರೆಗೊಳಗಾಗಿವೆ. 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿಯೂ ಸಹ ಈ ಸಮಸ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ.
ಎಲ್ಲರಿಗೂ ಗೊತ್ತಿರುವ ಹಾಗೆ ಕಿಡ್ನಿಗಳು ನಮ್ಮ ದೇಹದ ನೈಸರ್ಗಿಕ ಶೋಧಕಗಳಾಗಿವೆ. ಇವು ರಕ್ತವನ್ನು ಸ್ವಚ್ಛಗೊಳಿಸುತ್ತವೆ ಮತ್ತು ದೇಹದಿಂದ ಟಾಕ್ಸಿನ್ ಮತ್ತು ಹೆಚ್ಚುವರಿ ನೀರನ್ನು ತೆಗೆದುಹಾಕುತ್ತವೆ. ರಕ್ತದೊತ್ತಡವನ್ನು ನಿಯಂತ್ರಿಸಲು ಆರೋಗ್ಯಕರ ಮೂತ್ರಪಿಂಡಗಳು ಸಹ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇದರರ್ಥ ಕಿಡ್ನಿಯಲ್ಲಿ ಯಾವುದೇ ಸಮಸ್ಯೆ ಇದ್ದರೆ ಅದು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಭಾರತದಲ್ಲಿ ಕಿಡ್ನಿ ವೈಫಲ್ಯಕ್ಕೆ ಎರಡು ದೊಡ್ಡ ಕಾರಣಗಳಿವೆ. ಅಧಿಕ ರಕ್ತದೊತ್ತಡ ಮತ್ತು ಅಧಿಕ ಸಕ್ಕರೆಯಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಡಯಾಬಿಟೀಸ್ ಮೂತ್ರಪಿಂಡದ ನರಗಳನ್ನು ಹಾನಿಗೊಳಿಸುತ್ತದೆ ಮತ್ತು ಅಧಿಕ ರಕ್ತದೊತ್ತಡವು ಮೂತ್ರಪಿಂಡದ ಫಿಲ್ಟರ್ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ.
ಮೂತ್ರಪಿಂಡದ ಸಮಸ್ಯೆ ಹೆಚ್ಚಾಗಲು ಕಾರಣವೇನು?
ನಮ್ಮ ದೈನಂದಿನ ದಿನಚರಿಯಲ್ಲಿನ ಅನೇಕ ಕೆಟ್ಟ ಅಭ್ಯಾಸಗಳು ಮೂತ್ರಪಿಂಡದ ಸಮಸ್ಯೆಗಳನ್ನು ಅಂದರೆ ಕಿಡ್ನಿ ಸಮಸ್ಯೆಯನ್ನು ಹೆಚ್ಚಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು. ಒಂದು ವೇಳೆ ನೀವು ತಜ್ಞರ ಸಲಹೆಯಿಲ್ಲದೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ನೋವು ನಿವಾರಕಗಳನ್ನು ಸೇವಿಸಿದರೆ ಅದು ಮೂತ್ರಪಿಂಡದ ಕೋಶಗಳಿಗೆ ಹಾನಿ ಮಾಡುತ್ತದೆ. ಕಡಿಮೆ ನೀರು ಕುಡಿಯುವುದು, ಹೆಚ್ಚು ಉಪ್ಪು ಮತ್ತು ಸಂಸ್ಕರಿಸಿದ ಆಹಾರವನ್ನು ಸೇವಿಸುವುದರಿಂದ ಸಹ ಮೂತ್ರಪಿಂಡದ ಸಮಸ್ಯೆಗಳು ಹೆಚ್ಚಾಗುತ್ತವೆ.
ಮೂತ್ರಪಿಂಡ ವೈಫಲ್ಯದ ಆರಂಭಿಕ ಲಕ್ಷಣಗಳಿವು
ಎಲ್ಲಾ ಅಂಗಾಂಗಳಂತೆಯೇ ಕಿಡ್ನಿ ಆರೋಗ್ಯದ ಬಗ್ಗೆಯೂ ಗಮನ ಹರಿಸುವುದು ಮುಖ್ಯ. ಹಾಗೆಯೇ ಮೂತ್ರಪಿಂಡ ವೈಫಲ್ಯದ ಆರಂಭಿಕ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳುವುದು ಸಹ ಮುಖ್ಯ ಎಂದು ವೈದ್ಯರು ಹೇಳುತ್ತಾರೆ. ಅದನ್ನು ಸಮಯಕ್ಕೆ ಸರಿಯಾಗಿ ಗುರುತಿಸಿ ಚಿಕಿತ್ಸೆ ನೀಡಿದರೆ ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು.
* ಆಗಾಗ್ಗೆ ಅಥವಾ ಅಪರೂಪದ ಮೂತ್ರ ವಿಸರ್ಜನೆ
* ಮುಖ, ಪಾದಗಳು ಅಥವಾ ಕಣಕಾಲುಗಳಲ್ಲಿ ಆಗಾಗ್ಗೆ ಊತ
* ಯಾವಾಗಲೂ ದಣಿದ ಅನುಭವ
* ರಾತ್ರಿಯಲ್ಲಿ ಮೂತ್ರ ವಿಸರ್ಜಿಸಲು ಆಗಾಗ್ಗೆ ಎದ್ದೇಳುವುದು. ಮೂತ್ರದಲ್ಲಿ ನೊರೆ ಅಥವಾ ರಕ್ತ.
* ವಾಕರಿಕೆ, ವಾಂತಿ, ಅಥವಾ ಹಸಿವಿನ ನಷ್ಟ
* ಚರ್ಮದ ತುರಿಕೆ ಅಥವಾ ಸ್ನಾಯು ಸೆಳೆತ
ನೆನಪಿಡಿ ಮೂತ್ರಪಿಂಡದ ಕಾಯಿಲೆಯನ್ನು "ಸೈಲೆಂಟ್ ಕಿಲ್ಲರ್" ಎಂದು ಹೇಳುತ್ತಾರೆ ವೈದ್ಯರು. ಏಕೆಂದರೆ ಲಕ್ಷಣಗಳು ಕಾಣಿಸಿಕೊಳ್ಳುವ ಹೊತ್ತಿಗೆ ಅದು ತುಂಬಾ ತಡವಾಗಿರುತ್ತದೆ. ಆದ್ದರಿಂದ, ಅದರ ಕಾರಣಗಳು, ಲಕ್ಷಣಗಳು ಮತ್ತು ತಡೆಗಟ್ಟುವ ವಿಧಾನಗಳನ್ನು ತಿಳಿದುಕೊಳ್ಳುವುದು ಮತ್ತು ಸಮಯಕ್ಕೆ ಸರಿಯಾಗಿ ಕ್ರಮ ತೆಗೆದುಕೊಳ್ಳುವುದು ಮುಖ್ಯ. ಚಿಕ್ಕ ವಯಸ್ಸಿನಿಂದಲೇ ಕೆಲವು ವಿಷಯಗಳನ್ನು ನೋಡಿಕೊಳ್ಳುವ ಮೂಲಕ ನೀವು ನಿಮ್ಮ ಮೂತ್ರಪಿಂಡಗಳನ್ನು ಆರೋಗ್ಯವಾಗಿಡಬಹುದು.
ನಿಮ್ಮ ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು ದಿನಕ್ಕೆ 2-3 ಲೀಟರ್ ನೀರು ಕುಡಿಯಿರಿ. ಇದರ ಹೊರತಾಗಿ, ಉಪ್ಪು ಮತ್ತು ಸಂಸ್ಕರಿಸಿದ ಆಹಾರದ ಸೇವನೆಯನ್ನು ಕಡಿಮೆ ಮಾಡಿ. ಮಧುಮೇಹ ಮತ್ತು ಬಿಪಿಯನ್ನು ನಿಯಂತ್ರಣದಲ್ಲಿಡುವುದು, ದೈಹಿಕವಾಗಿ ಸಕ್ರಿಯರಾಗಿರುವುದು ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು ಸಹ ಮುಖ್ಯವಾಗಿದೆ.
ಗಮನಿಸಿ: ಈ ಲೇಖನವನ್ನು ವೈದ್ಯರ ಸಲಹೆ ಮತ್ತು ವೈದ್ಯಕೀಯ ವರದಿಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ.