ಭಯೋತ್ಪಾದನೆಗೆ ಧರ್ಮವಿಲ್ಲ ಎಂದು ಟೀಕೆಗೆ ಗುರಿಯಾದ ಮಿಲೇನಿಯರ್ ತಾನ್ಯಾ ಮಿತ್ತಲ್ ಯಾರು?
ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ ಎಂದು ಹೇಳಿ ತೀವ್ರ ಟೀಕೆಗೆ ಗುರಿಯಾದ ಸೋಶಿಯಲ್ ಮೀಡಿಯಾ ಇನ್’ಫ್ಲ್ಯೂಯೆನ್ಸರ್ ತಾನ್ಯಾ ಮಿತ್ತಲ್ ಯಾರು?

ಪಹಲ್ಗಾಮ್ ಭಯೋತ್ಪಾದಕರ (Pahalgam Terror Attack) ದಾಳಿಯ ಬಳಿಕ ಸೋಶಿಯಲ್ ಮೀಡಿಯಾ ಪೂರ್ತಿಯಾಗಿ ಪರ ವಿರೋಧ ಚರ್ಚೆಗಳು ಎದ್ದು ಕಾಣುತ್ತಿದ್ದವು. ಈ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾ ಇನ್’ಫ್ಲ್ಯೂಯೆನ್ಸರ್ ಆಗಿರುವ ತಾನ್ಯಾ ಮಿತ್ತಲ್ ಹೇಳಿಕೆ ಕೂಡ ವೈರಲ್ ಆಗಿತ್ತು.

ಮಂಗಳವಾರ ದಕ್ಷಿಣ ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ, ತಾನ್ಯಾ ಮಿತ್ತಲ್ (Tanya Mittal) "ಈ ವಿಷಯದ ಬಗ್ಗೆ ಏನನ್ನಾದರೂ ಹೇಳುವುದು ನಿರ್ಣಾಯಕ ಮತ್ತು ಸೂಕ್ಷ್ಮವಾಗಿದೆ. ಮಾಧ್ಯಮಗಳಲ್ಲಿ, ಭಯೋತ್ಪಾದಕರು ಮತ್ತು ಭಯೋತ್ಪಾದನೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಮತ್ತೊಂದೆಡೆ, ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ ಎಂದು ನಾನು ಭಾವಿಸುತ್ತೇನೆ." ಎಂದಿದ್ದರು.
तान्या मित्तल
ತನ್ನ ಸ್ನೇಹಿತರನ್ನು ಶ್ರೀನಗರಕ್ಕೆ ಕರೆತಂದ ಸ್ಥಳೀಯ ಕಾಶ್ಮೀರಿ ಜನರು ಅವರಿಗೆ ಸಹಾಯ ಮಾಡಿದರು ಎಂದು ಅವರು ಹೇಳಿದರು. ಇದು ನಾವೆಲ್ಲರೂ ಸೂಕ್ಷ್ಮವಾಗಿ ಯೋಚಿಸಬೇಕಾದ ಸಮಯ... ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ (terror has no religion). ಭಾರತಕ್ಕೆ ಒಂದೇ ಧರ್ಮವಿದೆ, ಅದು ಭಾರತೀಯ. ನಾವೆಲ್ಲರೂ ಭಾರತೀಯರು ಮತ್ತು ಇದರಲ್ಲಿ ನಾವು ಒಟ್ಟಾಗಿದ್ದೇವೆ" ಎಂದು ಅವರು ಹೇಳಿದರು.
तान्या मित्तल
ಅವರ ಹೇಳಿಕೆಗಳು ಸಾಮಾಜಿಕ ಮಾಧ್ಯಮದ ಕೆಲವು ವಿಭಾಗಗಳಲ್ಲಿ ಆಕ್ರೋಶಕ್ಕೆ ಕಾರಣವಾಯಿತು, ಹಲವರು ಅವರನ್ನು ಬಹಿಷ್ಕರಿಸಬೇಕೆಂದು ಕರೆ ನೀಡಿದರು. ಕೆಲವರು ತಾನ್ಯಾ ಮಧ್ಯಪ್ರದೇಶ ಪ್ರವಾಸೋದ್ಯಮ (tourism) ಇಲಾಖೆಗೆ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಸಹ ಹೇಳಿಕೆ ನೀಡಿದ್ದರು.
ಇದರ ನಂತರ, ಪ್ರವಾಸೋದ್ಯಮ ಇಲಾಖೆ ಸ್ಪಷ್ಟನೆ ನೀಡಿ ತಾನ್ಯಾ ಮಿತ್ತಲ್ ಅವರು ಮಧ್ಯಪ್ರದೇಶ ಪ್ರವಾಸೋದ್ಯಮದೊಂದಿಗೆ ಯಾವುದೇ ವಿಷ್ಯದಲ್ಲಿ ಸಂಬಂಧ ಹೊಂದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ ಎಂದು ಅಧಿಕೃತ ಹೇಳಿಕೆ ನೀಡಿತ್ತು.
ಯಾರು ಈ ತಾನ್ಯಾ ಮಿತ್ತಲ್. ಈಕೆ ಸೋಶಿಯಲ್ ಮೀಡಿಯಾ ಇನ್’ಫ್ಲ್ಯುಯೆನ್ಸರ್ (social media influencer). ಈಕೆಗೆ ಇನ್’ಸ್ಟಾಗ್ರಾಂನಲ್ಲಿ ಬರೋಬ್ಬರಿ 1.8 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇಲ್ಲಿವರೆಗೆ ಈಕೆ 4188 ಸ್ಟೋರಿ ಪೋಸ್ಟ್ ಮಾಡಿದ್ದು, ಈಕೆಗೆ ಸಿಕ್ಕಾಪಟ್ಟೆ ಅಭಿಮಾನಿಗಳು ಇದ್ದಾರೆ.
ಸನಾತನ ಧರ್ಮದ ಬಗ್ಗೆ ಹೆಚ್ಚಾಗಿ ಮಾತನಾಡುವ ಈಕೆ, ತಮ್ಮ ಫ್ಯಾಷನ್ ನಿಂದ ಕೂಡ ಜನಪ್ರಿಯತೆ ಪಡೆದಿದ್ದಾರೆ. ಈಕೆ ಮಿಸ್ ಏಶಿಯಾ 2018 ಆಗಿದ್ದು, ಇಲ್ಲಿವರೆಗೆ 400 ಕ್ಕೂ ಹೆಚ್ಚು ಅವಾರ್ಡ್ಸ್ ಬಂದಿವೆ ಅನ್ನೋದನ್ನು ಆಕೆ ಬರೆದುಕೊಂಡಿದ್ದಾರೆ. ಅಲ್ಲದೇ ಈಕೆ ಸಣ್ಣ ವಯಸ್ಸಿನ ಮಿಲೇನಿಯರ್ ಆಗಿದ್ದು, ಎಂಟರ್’ಪ್ರಿನ್ಯೂರ್, ಮಾಡೆಲ್ ಕೂಡ ಹೌದು.
ತಾನ್ಯಾ ಮಿತ್ತಲ್ ಅವರಲ್ಲಿ ಆಳವಾದ ಮಹತ್ವಾಕಾಂಕ್ಷೆ, ಸೃಜನಶೀಲತೆ ಮತ್ತು ಪರಿಶ್ರಮವಿತ್ತು, ಇದು ಕೇವಲ 19 ವರ್ಷ ವಯಸ್ಸಿನಲ್ಲಿಯೇ ತಮ್ಮ ಉದ್ಯಮಶೀಲ ಪ್ರಯಾಣವನ್ನು ಪ್ರಾರಂಭಿಸಲು ಪ್ರೇರೇಪಿಸಿತು. ಈಕೆ ತಮ್ಮ ಬ್ರ್ಯಾಂಡ್, ಹ್ಯಾಂಡ್ಮೇಡ್ ಲವ್ ಎನ್ನುವ ಯಶಸ್ವಿ ಹ್ಯಾಂಡ್ಬ್ಯಾಗ್ ಮತ್ತು ಹ್ಯಾಂಡ್ಕಫ್ ವ್ಯವಹಾರವನ್ನು ಪ್ರಾರಂಭಿಸಿದರು. ವರದಿಗಳ ಪ್ರಕಾರ, ತಾನ್ಯಾ ತಮ್ಮ ವ್ಯವಹಾರವನ್ನು ಕೇವಲ 500 ರೂ.ಗಳೊಂದಿಗೆ ಪ್ರಾರಂಭಿಸಿದರು. ಇದೀಗ ಕೋಟ್ಯಾಂತರ ರೂಪಾಯಿಗಳ ಒಡತಿ.